ಲಾರಿ ಹರಿದು ಜಜ್ಜಿ ಹೋದ ಬಾಲಕಿಯ ಕಾಲಿನ ಪಾದ: ಮೈಕ್ರೋ ಸರ್ಜರಿ ಮೂಲಕ ಅಪಾಯದಿಂದ ಪಾರು ಮಾಡಿದ ಕಾಸರಗೋಡು ಆಸ್ಟರ್‌ಮಿಮ್ಸ್ ಆಸ್ಪತ್ರೆ ವೈದ್ಯರ ತಂಡ

ಕಾಸರಗೋಡು: ಶಾಲೆ ಬಿಟ್ಟು ಮನೆಗೆ ಮರಳುತ್ತಿದ್ದ ವೇಳೆ ಲಾರಿ ಚಲಿಸಿ ಕಾಲುಗಳಿಗೆ ಗಂಭೀರ ಗಾಯಗೊಂಡ 8ರ ಹರೆಯದ ಬಾಲಕಿಗೆ ಅತ್ಯಂತ ಸಾಹಸಿಕ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಪುನರ್ಜನ್ಮ ನೀಡಿ ಕಾಸರಗೋಡು ಆಸ್ಟರ್‌ಮಿಮ್ಸ್ ಆಸ್ಪತ್ರೆಯ ವೈದ್ಯರ ತಂಡ ಸಾಧನೆಗೈದಿದೆ. ಕಾಲಿನ ಮಾಂಸ ಪೂರ್ಣವಾಗಿ ಕಿತ್ತುಹೋಗಿದ್ದು, ಪ್ರಧಾನ ಎರಡು ರಕ್ತನಾಳಗಳು ಹಾಗೂ ಮೂರು ನಾಡಿಗಳು ತುಂಡರಿಸಲ್ಪಟ್ಟ ಸ್ಥಿತಿಯಲ್ಲಿ ಬಾಲಕಿಯನ್ನು ಆಸ್ಪತ್ರೆಗೆ ತಲುಪಿಸಲಾಗಿತ್ತು. ಬಾಲಕಿಗೆ ತುರ್ತು ಚಿಕಿತ್ಸೆ ನಡೆಸುವ ಅಂಗವಾಗಿ ಮೈಕ್ರೋ ವಾಸ್ಕುಲರ್ ಅನಾಸ್ತಮೋಸಿಸ್ ಎಂಬ ನೂತನ ಚಿಕಿತ್ಸಾ ರೀತಿಯ ಮೂಲಕ …

ಉದ್ಯಾವರ ತೋಟ ಸರಕಾರಿ ಶಾಲೆ, ಅಂಗನವಾಡಿ ಅಪಾಯ ಭೀತಿಯಲ್ಲಿ: ಮಕ್ಕಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರ

ಉಪ್ಪಳ: ಉದ್ಯಾವರ ತೋಟ ಸರಕಾರಿ ಮುಸ್ಲಿಂ ಎಲ್.ಪಿ ಶಾಲೆ ಹಾಗೂ ಅಂಗನವಾಡಿ ಅಪಾಯ ಭೀತಿಯಲ್ಲಿದ್ದು ಈ ಹಿನ್ನೆಲೆಯಲ್ಲಿ ಇಲ್ಲಿನ ಮಕ್ಕಳನ್ನು ಸಮೀಪದ ಮಸೀದಿಯೊಂದರ ಅಧೀನದಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಸುರಕ್ಷಿತವಲ್ಲದ ಕಟ್ಟಡದಲ್ಲಿ ಶಾಲೆ ಕಾರ್ಯಾಚರಿಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ದೂರು ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಶಿಕ್ಷಣ ಇಲಾಖೆಯಿಂದ ವರದಿ ಕೇಳಿದ್ದರು. ಇದರಂತೆ ಲಭಿಸಿದ ವರದಿಯ ಆಧಾರದಲ್ಲಿ ಶಾಲೆ ಹಾಗೂ ಅಂಗನವಾಡಿ ಮಕ್ಕಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲು ಜಿಲ್ಲಾಧಿಕಾರಿ ಕ್ರಮಕೈಗೊಂಡಿದ್ದಾರೆ. ಇದೇ ವೇಳೆ ಅಪಾಯ   ಭೀತಿಯೊಡ್ಡುವ ಕಟ್ಟಡದಲ್ಲ್ಲಿ …

ಹೊಸಂಗಡಿ ರೈಲ್ವೇ ಗೇಟ್ ಸಮೀಪ ಕೆಸರುಗದ್ದೆಯಂತಾಗಿ ಸಾರ್ವಜನಿಕರಿಗೆ ಸಮಸ್ಯೆ

ಮಂಜೇಶ್ವರ: ಹೊಸಂಗಡಿ ಪೇಟೆಯ ಸರ್ವೀಸ್ ರಸ್ತೆ ಸಮೀಪ ರೈಲ್ವೇ ಗೇಟ್ ಬಳಿ ಬಸ್ ತಂಗುದಾಣ ಹಾಗೂ ರಿಕ್ಷಾ ನಿಲ್ದಾಣ ಕೆಸರಿನಿಂದ ಶೋಚನೀಯಾವಸ್ಥೆಯಲ್ಲಿದ್ದು, ಸಾರ್ವಜನಿಕರು ಸಮಸ್ಯೆಗೀಡಾಗಿದ್ದಾರೆ. ಈ ಪರಿಸರದಲ್ಲಿ ಬೇಸಿಗೆಯಲ್ಲಿ ಪಂಚಾಯತ್‌ನಿಂದ ಮಣ್ಣು ಹಾಕಿ ಸಮತಟ್ಟುಗೊಳಿಸಲಾಗಿದೆ. ಇದರಿಂದ ರಿಕ್ಷಾ ನಿಲ್ದಾಣ ಹಾಗೂ ಪರಿಸರ ಗೂಡಂಗಡಿ ವ್ಯಾಪಾರಿಗಳಿಗೆ ನೆಮ್ಮದಿಯನ್ನುಂಟು ಮಾಡಿತ್ತು. ಆದರೆ ಈಗ ಮಳೆಗೆ ಈ ಪರಿಸರ ಪೂರ್ತಿ ಕೆಸರಿನಿಂದ ಆವೃತ್ತಿಗೊಂಡು ಸಮಸ್ಯೆ ಉಂಟಾಗಿದೆ. ನಡೆದಾಡುವ ವೇಳೆ ಚಪ್ಪಲಿ ಹೂತು ಹೋಗುವುದು, ಜಾರಿ ಬೀಳುವುದು, ಬಟ್ಟೆಯಲ್ಲಿ ಕೊಳೆ ಉಂಟಾಗುತ್ತಿರುವ ಘಟನೆಗಳು …

ಹೊಸಂಗಡಿ- ಆನೆಕಲ್ಲು ಮಧ್ಯೆ ರಸ್ತೆಗೆ ಭಾಗಿಕೊಂಡಿರುವ ಮರಗಳು: ವಾಹನ ಸವಾರರಲ್ಲಿ ಭೀತಿ

ಮಂಜೇಶ್ವರ: ಹೊಸಂಗಡಿ-ಆನೆಕಲ್ಲು ಮಧ್ಯೆ ರಸ್ತೆಯ ಇಕ್ಕೆಡೆಗಳಲ್ಲಿ ಮರಗಳು ಭಾಗಿಕೊಂಡು ಮಳೆ ಗಾಳಿಗೆ ದsರಾಶಾಹಿಯಾಗುವ ಭೀತಿ ವಾಹನ ಸವಾರರನ್ನು ಕಾಡುತ್ತಿದೆ. ಮಳೆಗಾಲ ಬಂತೆAದರೆ ಈ ರಸ್ತೆಯಲ್ಲಿ ಸಂಚಾರ ಆತಂಕ ಉಂಟುಮÁಡುತ್ತಿದೆ. ಲೋ ಕೋಪಯೋಗಿ ಇಲಾಖೆಯ ಈ ರಸ್ತೆ ಕರ್ನಾಟಕವನ್ನು ಸಂಪರ್ಕಿಸುತ್ತಿದೆ. ಈ ರಸ್ತೆಯ ಹೊಸಂಗಡಿ, ಮಜೀರ್ಪಳ್ಳ ಸಹಿತ ಆನೆಕಲ್ಲು ತನಕ ವಿವಿಧ ಕಡೆಗಳಲ್ಲಿ ಅಕೇಶಿಯ ಸಹಿತ ಇತರ ಮರಗಳು ಮುರಿದು ಬೀಳುವ ಸ್ಥಿತಿಯಲ್ಲಿ ರಸ್ತೆಗೆ ಭಾಗಿಕೊಂಡು ಭೀತಿ ಸೃಷ್ಟಿಯಾಗಿದೆ. ಶಾಲಾ ವಾಹನಗಳು, ಬಸ್‌ಗಳು ಸಹಿತ ದಿನನಿತ್ಯ ನೂರಾರು ವಾಹನಗಳು …

ಎ.ಕೆ. ಬ್ರದರ್ಸ್ ಪಾಲುದಾರ ಸುಲ್ಫೀಕರ್ ನಿಧನ

ಕಾಸರಗೋಡು: ನಗರದ ಎ.ಕೆ. ಬ್ರದರ್ಸ್ ವ್ಯಾಪಾರ ಸಂಸ್ಥೆಯ ಪಾಲುದಾರ ಅಡ್ಕತ್ತಬೈಲು ನಿವಾಸಿ ಎ.ಕೆ. ಸುಲ್ಫೀಕರ್ (51) ನಿಧನ ಹೊಂದಿದರು. ಇವರ ಪತ್ನಿಯ ತಾಯಿ ಆಯಿಷಾ ದೇಳಿ ನಿವಾಸಿ ಒಂದು ದಿವಸ ಮೊದಲು ನಿಧನ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇವರು ಪತ್ನಿ ಮನೆಗೆ ತಲುಪಿದ್ದರು. ನಿನ್ನೆ ಬೆಳಿಗ್ಗೆ ಎದೆನೋವು ಕಂಡುಬಂದ ಹಿನ್ನೆಲೆಯಲ್ಲಿ ದೇಳಿಯ ಆಸ್ಪತ್ರೆಗೆ ತಲುಪಿಸಲಾಗಿತ್ತು. ಆದರೆ ಗಂಭೀರ ಸ್ಥಿತಿಯಾದ ಕಾರಣ ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ದಿ| ಎ.ಕೆ. ಹಮೀದ್- ದಿ| ಮರಿಯಾಂಬಿ ದಂಪತಿ …

ಕೊಲೆ ಸಹಿತ ಹಲವು ಪ್ರಕರಣಗಳ ಆರೋಪಿ ಇಲಿವಿಷ ಸೇವಿಸಿ ಮೃತ್ಯು

ಕುಂಬಳೆ: ಕೊಲೆ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾದ ವ್ಯಕ್ತಿ ಇಲಿ ವಿಷ ಸೇವಿಸಿ ಚಿಕಿತ್ಸೆ ಮಧ್ಯೆ ಸಾವಿಗೀಡಾದ ಘಟನೆ ನಡೆದಿದೆ. ಕಾಸರಗೋಡು ಚೌಕಿ ನಿವಾಸಿಯೂ, ಪ್ರಸ್ತುತ ಕುಂಬಳೆ ಮಾವಿನಕಟ್ಟೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಹಬೀಬ್ ಯಾನೆ ಅಭಿಲಾಷ್ (31) ಸಾವಿಗೀಡಾದ ವ್ಯಕ್ತಿಯಾಗಿದ್ದಾನೆ. ಮೂರು ದಿನಗಳ ಹಿಂದೆ  ಈತ  ಕುಂಬಳೆ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಅರೆಪ್ರಜ್ಞಾ ವಸ್ಥೆಯಲ್ಲಿ ಪತ್ತೆಯಾಗಿ ದ್ದನು.ಈ ಬಗ್ಗೆ ಲಭಿಸಿದ ಮಾಹಿತಿಯಂತೆ ಕುಂಬಳೆ ಪೊಲೀಸರು  ಅಭಿಲಾಷ್‌ನನ್ನು  ಮೊದಲು ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿದ್ದರು. ಬಳಿಕ ಸ್ಥಿತಿ ಗಂಭೀರ …

ಮಾದಕವಸ್ತು ಪ್ರಕರಣ ತಲೆಮರೆಸಿದ್ದ ಉಪ್ಪಳ ನಿವಾಸಿ ಸೆರೆ

ಉಪ್ಪಳ: ಮಾದಕವಸ್ತು ಪ್ರಕರಣದಲ್ಲಿ ಸೆರೆಗೀಡಾದ ಬಳಿಕ ಜಾಮೀನು ಪಡೆದು ಬಿಡುಗಡೆ ಗೊಂಡು ತಲೆಮರೆಸಿಕೊಂಡಿದ್ದ ಉಪ್ಪಳ ನಿವಾಸಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ಪಚ್ಲಂಪಾರೆಯ ಫಸಲ್ (31) ಸೆರೆಗೀಡಾದ ಆರೋಪಿ. 2021ರಲ್ಲಿ ಉಳ್ಳಾಲ ಪೊಲೀಸರು ಈತನನ್ನು ಮಾದಕವಸ್ತು ಪ್ರಕರಣದಲ್ಲಿ ಬಂಧಿಸಿದ್ದರು. ಅನಂತರ ಜಾಮೀನಿನಲ್ಲಿ ಬಿಡುಗಡೆಗೊಂಡ ಈತ ನ್ಯಾಯಾಲಯದಲ್ಲಿ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಈತ ಉಪ್ಪಳದ ಮನೆಗೆ ತಲುಪಿರುವ ವಿಷಯ ತಿಳಿದು ಉಳ್ಳಾಲ ಪೊಲೀಸರು ಅಲ್ಲಿಗೆ ದಾಳಿ ನಡೆಸಿ ಬಂಧಿಸಿದ್ದಾರೆ.  ಆರೋಪಿಯನ್ನು ಮಂಗಳೂರು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ …

ನಗರದ ರಾಷ್ಟ್ರೀಯ ಹೆದ್ದಾರಿ ಬದಿ ತ್ಯಾಜ್ಯಗಳಿಂದ ದುರ್ನಾತ: ನಾಗರಿಕರಿಗೆ ಸಮಸ್ಯೆ

ಕಾಸರಗೋಡು:  ನಗರದ ಕರಂದಕ್ಕಾಡು ಜಂಕ್ಷನ್‌ನ ಅಂಡರ್‌ಪಾಸ್‌ನಲ್ಲಿ  ಭಾರೀ ಪ್ರಮಾಣದಲ್ಲಿ ತ್ಯಾಜ್ಯ ತುಂಬಿ ಕೊಂಡಿದ್ದು, ಇದರಿಂದ ಸ್ಥಳೀಯರಿಗೆ ಹಾಗೂ ವಾಹನ ಪ್ರಯಾಣಿಕರಿಗೆ ದುರ್ನಾತ ಬೀರತೊಡಗಿದೆ. ರಾತ್ರಿ ಹೊತ್ತಿನಲ್ಲಿ ಈ ರಸ್ತೆಯಲ್ಲಿ ಸಂಚರಿಸುವ  ಕೆಲವು ಮಂದಿ ಆಹಾರ ತ್ಯಾಜ್ಯಗಳ ಸಹಿತ  ವಿವಿಧ ಉಪಯೋಗ ಶೂನ್ಯವಸ್ತುಗಳನ್ನು ಇಲ್ಲಿ ಎಸೆಯುತ್ತಿದ್ದಾರೆ. ಮಾತ್ರವಲ್ಲದೆ  ರಸ್ತೆ ಬದಿ ವಾಹನ ನಿಲ್ಲಿಸಿ ಮದ್ಯ ಸೇವಿಸಿ ತಿಂದುಳಿದ ಆಹಾರ ಹಾಗೂ ಬಾಟಲಿಗಳನ್ನು ಇಲ್ಲಿ ಎಸೆಯುತ್ತಿರುವುದಾಗಿ ದೂರಲಾಗಿದೆ. ತ್ಯಾಜ್ಯದ ದುರ್ನಾತದಿಂದ ಪರಿಸರ ನಿವಾಸಿಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ.  ಕೋಟ್ಯಂತರ ರೂಪಾಯಿ …

ನೀಟ್ ಪರೀಕ್ಷೆ: ಅಂಚೆಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ಕಾಸರಗೋಡು: ನೀಟ್ ಪರೀಕ್ಷೆಯಲ್ಲಿ ನಡೆದ ಅವ್ಯವಹಾರ ಹಾಗೂ ಅದರಿಂದ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆಗೈಯ್ಯಬೇಕಾಗಿ ಬಂದಿರುವುದನ್ನು ಪ್ರತಿಭಟಿಸಿ ಎಸ್‌ಎಫ್‌ಐಯ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ನಿನ್ನೆ ಕಾಸರಗೋಡು ಪ್ರಧಾನ ಅಂಚೆ ಕಚೇರಿಗೆ ಪ್ರತಿಭಟನಾ ಮಾರ್ಚ್ ನಡೆಸಿದುದಕ್ಕೆ ಸಂಬಂಧಿಸಿ ಕಾಸರಗೋಡು ಪೊಲೀಸರು ೨೦ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ರಸ್ತೆ ತಡೆ, ಸಾರ್ವಜನಿಕರಿಗೆ ಹಾಗೂ ಸಾರಿಗೆ ಸಂಚಾರಕ್ಕೆ ಅಡಚಣೆ ಸೃಷ್ಟಿಸಿದ ಆರೋಪದಂತೆ ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಎಸ್‌ಎಫ್‌ಐ ಜಿಲ್ಲಾ ಕಾರ್ಯ …

ಇಲಿವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ವಿದ್ಯಾರ್ಥಿನಿ ಮೃತ್ಯು

ಕಾಸರಗೋಡು: ಇಲಿವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಳು. ಚೆರ್ವತ್ತೂರು ಕೈದಕ್ಕಾಡ್ ಪಯ್ಯಂಗಿ  ಬಿಸ್ಮಿಲ್ಲ ರಸ್ತೆಯ ನಿವಾಸಿ ಅಬ್ದುಲ್ ರಹ್ಮಾನ್‌ರ ಪುತ್ರಿ ಮುಬಶಿರ (19) ಮೃತಪಟ್ಟ ವಿದ್ಯಾರ್ಥಿನಿ. ಈ ತಿಂಗಳ 2ರಂದು ಮನೆಯಲ್ಲಿ ಈಕೆ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ ನಿಧನ ಸಂಭವಿಸಿದೆ.  ಕೈದಕ್ಕಾಡ್ ಅಲ್‌ವರ್ದ ವುಮನ್ಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಳು.  ಮೃತಳು ತಾಯಿ ಯು.ಎಂ. ಫಾತಿಮ,ಸಹೋದರರಾದ ಫಾಯಿಸ, ರಾಶಿದ, ಸಲ್ಮಾನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ.