ಬಸ್ ಪ್ರಯಾಣ ವೇಳೆ ಯುವತಿಯ ಬ್ಯಾಗ್‌ನಿಂದ 50 ಸಾವಿರ ರೂ. ಕಳವು

ಕುಂಬಳೆ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಬ್ಯಾಗ್‌ನಿಂದ 50 ಸಾವಿರ ರೂ.ಗಿಂತಲೂ ಹೆಚ್ಚು ಮೊತ್ತ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಬಂದ್ಯೋಡು ಅಡ್ಕ ಒಳಾಕ್ ರೋಡ್‌ನ ಬಶೀರ್ ಎಂಬವರ ಪತ್ನಿ ನೌಶೀದರ ಬ್ಯಾಗ್‌ನಿಂದ ಹಣ ಕಳವಿಗೀಡಾಗಿದೆ. ಈ ಬಗ್ಗೆ ಅವರು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.  ನೌಶೀದ ನಿನ್ನೆ ಸಂಜೆ 4.15ಕ್ಕೆ  ಬಂದ್ಯೋಡಿನಿಂದ ಕರ್ನಾಟಕ ರಾಜ್ಯ ಸಾರಿಗೆ ಬಸ್‌ನಲ್ಲಿ  ಕುಂಬಳೆಗೆ  ತೆರಳಿದ್ದರು.   ಕುಂಬಳೆಯಿಂದ ಮನೆಗೆ ಮರಳಿದ ಬಳಿಕ ವ್ಯಾನಿಟಿ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿದ್ದ …

ಎಸ್‌ಐಆರ್ ಡಿ. 18ರ ತನಕ ವಿಸ್ತರಣೆ: ಕೇರಳದಲ್ಲಿ 20 ಲಕ್ಷದಷ್ಟು ಮತದಾರರು ನಾಪತ್ತೆ

ಕಾಸರಗೋಡು: ಕೇರಳದಲ್ಲಿ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕ್ರಮ ಮುಂದುವರಿಯುತತಿರುವಂತೆಯೇ ರಾಜ್ಯದ ಮತದಾರ ಯಾದಿಯಲ್ಲಿ ಹೆಸರು ಒಳಗೊಂಡಿರುವವರ ಪೈಕಿ 20,29,703 ಮಂದಿಯನ್ನು ಪತ್ತೆಹಚ್ಚಲು ಈತನಕ ಸಾಧ್ಯವಾಗಲಿಲ್ಲ ವೆಂದು ಕೇರಳದ ಮುಖ್ಯ ಚುನಾವಣಾ ಆಯೋಗ ತಿಳಿಸಿದೆ. ಎಸ್‌ಐಆರ್‌ಗಾಗಿ ಮತದಾರರಿಗೆ ಎನ್ಯುಮರೇಶನ್ ಫಾರ್ಮ್ ವಿತರಣೆ ಈಗ ಮುಂದುವರಿಯುತ್ತಿರುವಂ ತೆಯೇ ಅದರಲ್ಲಿ 20,29,703 ರಷ್ಟು ಮತದಾರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಅದರಿಂದಾಗಿ ಅವರಿಗೆ ಎನ್ಯುಮರೇಶನ್ ಫಾರ್ಮ್ ವಿತರಿಸಲು ಸಾಧ್ಯವಾಗಿಲ್ಲವೆಂದು ಚುನಾವಣಾ ಆಯೋಗ ತಿಳಿಸಿದೆ.  ಇವರಲ್ಲಿ ನಿಧನ ಹೊಂದಿದವರು. ಊರಲ್ಲಿಲ್ಲದವರು, ವಾಸಸ್ಥಳ …

ಕಳವುಗೈದ ಕಾರನ್ನು ನಂಬ್ರ ಪ್ಲೇಟ್ ಬದಲಿಸಿ ಮಾರಾಟ: 1.40 ಲಕ್ಷ ರೂ. ಓರ್ವ ಆರೋಪಿಯ ಮನೆಯಿಂದ ಪತ್ತೆ

ಕಾಸರಗೋಡು: ಉಳಿಯತ್ತಡ್ಕ ಸಮೀಪದ ಇಜ್ಜತ್‌ನಗರ ಸೆಕೆಂಡ್ ಸ್ಕ್ರೀಟ್ ಮುಸ್ತಫ ಮಂಜಿಲ್‌ನ ಮೊಹಮ್ಮದ್ ಮುಸ್ತಫ ಎಂಬವರ ಮನೆಯಂಗಳದಿಂದ ಡಿಸೆಂಬರ್ 1ರಂದು ರಾತ್ರಿ ಕಳವುಗೈದ 12.8 ಲಕ್ಷ ರೂ. ಮೌಲ್ಯದ ಕಾರನ್ನು  ಈ ಪ್ರಕರಣದ ಮೂರನೇ ಆರೋಪಿ ಪಾಲಕ್ಕಾಡ್ ಜಿಲ್ಲೆಯ ಮಣ್ಣಾರ್ ಕಾಡ್ ಪುಂಜಂಕೋಡ್ ಪುದುಕುಳಂ ವೀಟಿಲ್‌ನ ಪಿ.ಕೆ. ಅಸರುದ್ದೀನ್ (36) 1.7 ಲಕ್ಷ ರೂ.ಗೆ ಇತರ ಇಬ್ಬರು ಆರೋಪಿಗಳಿಗೆ ಮಾರಾಟ ಮಾಡಿದ್ದನೆಂದು ವಿದ್ಯಾನಗರ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಅಸರುದ್ದೀನ್‌ನ ಹೊರತಾಗಿ ದೇಳಿ ಅರಮಂಗಾನ …

ಕಣಜದ ಹುಳುಗಳ ದಾಳಿಯಿಂದ  ಕ್ಷೇತ್ರ ಸ್ಥಾನಿಕ ಮೃತ್ಯು

ಕಾಸರಗೋಡು: ಕಣಜದ ಹುಳು ಗಳ ದಾಳಿಯಿಂದ ಗಂಭೀರ ಅಸ್ವಸ್ಥಗೊಂಡು  ವ್ಯಕ್ತಿಯೊಬ್ಬರು ಮೃತ ಪಟ್ಟ ಘಟನೆ ನಡೆದಿದೆ.  ನೆಲ್ಲಿಕ್ಕಾತು ರುತ್ತಿ ಕಳಗಂ ನಿಲಮಂಗಲತ್ತ್ ಭಗವತೀ ಕ್ಷೇತ್ರದ ಸ್ಥಾನಿಕ  ಕುಟ್ಟಿವಯಲ್‌ನ ಕಂಡೋತ್ತ್‌ಪುರತ್ತ್ ಕೆ.ಪಿ. ಕುಮಾರನ್ (55) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ಕ್ಷೇತ್ರದ ಪಾಟು ಉತ್ಸವದಂಗವಾಗಿ ಮನೆಗಳಿಗೆ ಸಂದರ್ಶನ ನಡೆಸಿ ಕುಟ್ಟಿವಯಲ್‌ನ ತರವಾಡಿನಲ್ಲಿ  ವಿಶ್ರಾಂತಿ  ಪಡೆಯು ತ್ತಿದ್ದರು. ಈ ವೇಳೆ ಕಣಜದ ಹುಳಗಳು ಅವರ ಮೇಲೆ ದಾಳಿ ನಡೆಸಿವೆ. ಈ ವೇಳೆ ಅವರ ಜೊತೆಗಿದ್ದವರು ಓಡಿ ಪಾರಾಗಿದ್ದಾರೆ.  ಕುಮಾರನ್ ಓಡಿ …

ಜಿಲ್ಲಾ ಪಂಚಾಯತ್ ಚುನಾವಣೆ: ಕುಂಬಳೆ ಡಿವಿಶನ್: ಲೀಗ್‌ಗೆ ಸುಲಭ ಗೆಲುವು ನೀಡದಿರಲು ಬಿಜೆಪಿ, ಸಿಪಿಎಂ ಹೋರಾಟ

ಕುಂಬಳೆ: ಕಳೆದ ಚುನಾವಣೆಯಲ್ಲಿ ಜಿಲ್ಲಾ ಪಂಚಾಯತ್‌ನ ಕುಂಬಳೆ ಡಿವಿಶನ್‌ನಲ್ಲಿ 18364 ಮತಗಳನ್ನು ಪಡೆದು ಮುಸ್ಲಿಂಲೀಗ್‌ನ ಜಮೀಲ ಸಿದ್ಧಿಕ್ ಜಯ ಗಳಿಸಿದ್ದು, ಆದರೆ ಈ ಬಾರಿ ಕುಂಬಳೆ ಡಿವಿಶನ್‌ನಲ್ಲಿ ತೀವ್ರ ಸ್ಪರ್ಧೆ ಕಂಡುಬರುತ್ತಿದೆ. ಬಿಜೆಪಿಯ ಸ್ನೇಹಲತಾ ದಿವಾಕರ್ ಕಳೆದ ಚುನಾ ವಣೆಯಲ್ಲಿ 10840, ಎಲ್‌ಡಿಎಫ್‌ನ ಶಾಲಿನಿ 10599 ಮತಗಳನ್ನು ಪಡೆದಿದ್ದರು. ಈ ಬಾರಿ ಡಿವಿಶನ್‌ನ ಜನಸಂಖ್ಯೆ 65,349 ಇದ್ದು, ಇವರಲ್ಲಿ ಯಾರಿಗೆ ಎಷ್ಟು ಮತ ಲಭಿಸಬಹು ದೆಂಬ ಲೆಕ್ಕಾಚಾರ ಆರಂಭಗೊಂಡಿದೆ. ಜಿಲ್ಲಾ ಪಂಚಾಯತ್‌ನ ಅಧ್ಯಕ್ಷರಾಗಿದ್ದ ಎ.ಜಿ.ಸಿ. ಬಷೀರ್, ಮಾಜಿ …

ಜಿಲ್ಲಾ ಪಂಚಾಯತ್ ಚುನಾವಣೆ: ಗಡಿ ಪ್ರದೇಶದ ಮಂಜೇಶ್ವರ ಡಿವಿಶನ್‌ನಲ್ಲಿ ಗೆಲ್ಲೋದು ಯಾರು?

ಮಂಜೇಶ್ವರ: ಕಳೆದ ಬಾರಿಯ ತ್ರಿಸ್ತರ ಚುನಾವಣೆಯಲ್ಲಿ ಜಿಲ್ಲಾ ಪಂಚಾಯತ್‌ನ ಮಂಜೇಶ್ವರ ಡಿವಿಶನ್‌ನಿಂದ 2384 ಮತಗಳ ಅಂತರದಲ್ಲಿ ಐಕ್ಯರಂಗದ ಗೋಲ್ಡನ್ ಅಬ್ದುಲ್ ರಹಿಮಾನ್ ಜಯಗಳಿಸಿದ ಮಂಡಲದಲ್ಲಿ ಈ ಬಾರಿ ತೀವ್ರ ಪೈಪೋಟಿ ಕಂಡು ಬರುತ್ತಿದೆ. ಕಳೆದ ಬಾರಿ ಗೋಲ್ಡನ್ ಅಬ್ದುಲ್ ರಹಿಮಾನ್ 14,998 ಮತ ಗಳಿಸಿದ್ದರೆ, ಬಿಜೆಪಿಯ ಕೆ.ಎಲ್. ಪುಷ್ಪರಾಜ್ 12,699, ಸಿಪಿಎಂನ ಸಾದಿಕ್ ಚೆರುಗೋಳಿ 11,924  ಮತಗಳಿಸಿದ್ದರು. ಜೊತೆಗೆ ಎಸ್‌ಡಿಪಿಐ ಯಿಂದ ಇಕ್ಬಾಲ್ ಹೊಸಂಗಡಿ (1692), ಪಿಡಿಪಿಯ ಸುಬೈರ್ ಪಡ್ಪು (302) ಮತ ಗಳಿಸಿದ್ದರು. ಈ ಬಾರಿ …

ಪಂಚಾಯತ್ ಚುನಾವಣೆ: ಬೆಳ್ಳೂರಿನಲ್ಲಿ ತೀವ್ರಗೊಂಡ ಪ್ರಚಾರ ಕಾವು: ಬಹುತೇಕ ವಾರ್ಡ್‌ಗಳಲ್ಲಿ ಬಿಜೆಪಿ-ಸಿಪಿಎಂ ಮಧ್ಯೆ ನೇರ ಸ್ಪರ್ಧೆ

ಮುಳ್ಳೇರಿಯ: ಜಿಲ್ಲೆಯ ಗ್ರಾಮೀಣ ಪ್ರದೇಶವಾದ ಬೆಳ್ಳೂರಿನಲ್ಲಿ ಚುನಾವಣಾ ಪ್ರಚಾರ ಕಾವು ತೀವ್ರ ಗೊಂಡಿದೆ. ಜಿಲ್ಲೆಯಲ್ಲಿ ಬಿಜೆಪಿ ಆಡ ಳಿತ ನಡೆಸುವ ಪಂಚಾಯತ್‌ಗಳಲ್ಲಿ ಬೆಳ್ಳೂರು ಕೂಡಾ ಒಳಗೊಂಡಿದೆ. ಕಳೆದ ಎರಡು ಅವಧಿಯಲ್ಲಿ ಈ ಪಂಚಾಯತ್‌ನಲ್ಲಿ ಬಿಜೆಪಿ ಆಡಳಿತ ನಡೆಸಿದ್ದು, ಈ ಬಾರಿಯ ಚುನಾವಣೆ ಯಲ್ಲೂ ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆಗೈಯ್ಯುವ ನಿರೀಕ್ಷೆಯನ್ನು ಬಿಜೆಪಿ ನೇತಾರರು ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಬಾರಿ ಈ ಪಂಚಾಯತ್‌ನಲ್ಲಿ ಒಟ್ಟು 13 ವಾರ್ಡ್‌ಗಳಿದ್ದವು. ಈ ಪೈಕಿ ಬಿಜೆಪಿ 9 ಸೀಟುಗಳನ್ನು ಗೆದ್ದುಕೊಂಡು …

ಮಂಜೇಶ್ವರದ ಅಭಿವೃದ್ಧಿಗೆ ಶಾಸಕರು ಪ್ರಯತ್ನಿಸುತ್ತಿಲ್ಲ- ವೇದವ್ಯಾಸ್ ಕಾಮತ್

ಮಂಜೇಶ್ವರ: ಮಂಜೇಶ್ವರ ಅಭಿವೃದ್ಧಿ ಹೊಂದದಿರಲು ಕಾರಣ ಯಾರು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಪ್ರಶ್ನಿಸಿದ್ದಾರೆ. ಸ್ವಾತಂತ್ರ್ಯಾ ನಂತರ ಮಂಜೇಶ್ವರದ ಜನತೆ ಎಲ್ಲಾ ಕಾರ್ಯಕ್ಕೂ ಮಂಗಳೂರನ್ನೇ ಅವಲಂಭಿಸುತ್ತಿದ್ದು, ಶಿಕ್ಷಣ, ಉದ್ಯೋಗ, ಆರೋಗ್ಯ, ಕ್ರೀಡೆ, ವ್ಯಾಪಾರ, ವ್ಯವಹಾರ ಎಲ್ಲದಕ್ಕೂ ಮಂಗಳೂರಿಗೆ ತೆರಳಬೇಕಾಗುತ್ತಿದೆ. ಮಂಜೇಶ್ವರದಿಂದ ಜಯ ಗಳಿಸುವ ಶಾಸಕರು ಮಂಜೇಶ್ವರದ ಅಭಿವೃದ್ಧಿಗೆ ಯಾಕೆ ಶ್ರಮಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದರು. ಬಿಜೆಪಿ ಮಂಜೇಶ್ವರ ಪಂಚಾಯತ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ವೇದವ್ಯಾಸ್ ಕಾಮತ್ ಮಾತನಾಡುತ್ತಿದ್ದರು. ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. …

ಮಧೂರು ಪಂ. ಎಡರಂಗ ಚುನಾವಣಾ ಸಭೆ: ಸಿಪಿಎಂ ಸೇರಿದವರಿಗೆ ಸ್ವಾಗತ

ಮಧೂರು: ಎಡರಂಗದ ಮಧೂರು ಪಂಚಾಯತ್ ಚುನಾವಣೆ ಸಭೆಯಲ್ಲಿ ವಿವಿಧ ಪಕ್ಷಗಳಿಗೆ ರಾಜೀನಾಮೆ ನೀಡಿ ಸಿಪಿಎಂಗೆ ಸೇರಿದವರಿಗೆ ಸ್ವಾಗತ ನೀಡಲಾಯಿತು. ಉಳಿಯತ್ತಡ್ಕದಲ್ಲಿ ನಡೆದ ಸಭೆಯನ್ನು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ. ರಾಜಗೋಪಾಲನ್ ಉದ್ಘಾಟಿಸಿದರು. ಕಿಶೋರ್ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ವಿ.ಪಿ.ಪಿ. ಮುಸ್ತಫ, ಟಿ.ಕೆ. ರಾಜನ್, ಬಿಜು ಉಣ್ಣಿತ್ತಾನ್, ಟಿ.ಎಂ.ಎ. ಕರೀಂ, ಹಸೈನಾರ್, ಎಂ. ಸುಮತಿ, ಕೆ. ರವೀಂದ್ರನ್, ಭುಜಂಗ ಶೆಟ್ಟಿ, ಕೆ. ಜಯಚಂದ್ರನ್ ಮಾತನಾಡಿದರು. ಎಂ.ಕೆ. ರವೀಂದ್ರನ್ ಸ್ವಾಗತಿಸಿದರು.

ಗೋಸಾಡ ಕ್ಷೇತ್ರ ಜಾತ್ರೆ: ಭರತನಾಟ್ಯ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ ಬಿಜೆಪಿ ಅಭ್ಯರ್ಥಿ

ಬದಿಯಡ್ಕ: ಗೋಸಾಡ ಶ್ರೀ ಮಹಿಷಮರ್ಧಿನಿ ಕ್ಷೇತ್ರದಲ್ಲಿ ಜಾತ್ರೆ ಮಹೋತ್ಸವದಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರು ನಡೆಸಿದ ಭರತ ನಾಟ್ಯ ಪ್ರದರ್ಶನ ಕಲಾಭಿಮಾ ನಿಗಳ ಮೆಚ್ಚುಗೆಗೆ  ಪಾತ್ರವಾಯಿತು. ಬದಿಯಡ್ಕ ಗ್ರಾಮ ಪಂಚಾ ಯತ್ ಪೆರಡಾಲ ೧೩ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ  ಸ್ಪರ್ಧಿಸುವ  ಕೆ.ಎಂ. ಅಶ್ವಿನಿಯವರು ತುಂಬಿ ತುಳುಕುತ್ತಿದ್ದ ಜನಸಾಗರದ ಮಧ್ಯೆ ಭರತನಾಟ್ಯ ಪ್ರದರ್ಶಿಸಿದ್ದು ಪ್ರೇಕ್ಷಕರು ಚಪ್ಪಾಳೆತಟ್ಟಿ ಅಭಿನಂದಿಸಿ ದರು. ಅಶ್ವಿನಿಯವರು ತನ್ನ ೧೪ನೇ ವಯಸ್ಸಿನಲ್ಲಿ ನೃತ್ಯ ಅಭ್ಯಾಸ ಆರಂಭಿಸಿ ದ್ದರು.  ಕುಂಬಳೆ ನಾಟ್ಯ ವಿದ್ಯಾನಿಲ ಯದ …