ಕಾಸರಗೋಡು ನಗರದಲ್ಲಿ ವ್ಯಾಪಕಗೊಂಡ ಬೀದಿ ನಾಯಿಗಳು; ಜನರಲ್ ಆಸ್ಪತ್ರೆ, ಕೆಎಸ್ಆರ್ಟಿಸಿ ನಿಲ್ದಾಣಕ್ಕೆ ತಲುಪುವವರಿಗೆ ಆತಂಕ
ಕಾಸರಗೋಡು: ಕಾಸರಗೋಡು ನಗರದ ವಿವಿಧೆಡೆ ಬೀದಿ ನಾಯಿಗಳು ತುಂಬಿಕೊಂಡಿದ್ದು ಇದರಿಂದ ಜನತೆ ನಡೆದಾಡಲು ಭಯಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಹೆಚ್ಚಾಗಿ ಕಾಸರಗೋಡು ಜನರಲ್ ಆಸ್ಪತ್ರೆ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಪರಿಸರದಲ್ಲಿ ಅತೀ ಹೆಚ್ಚು ಬೀದಿನಾಯಿಗಳು ಬೀಡುಬಿಟ್ಟಿವೆ. ಇದರಿಂದ ಇಲ್ಲಿಗೆ ತಲುಪುವವರು ಭಯಪಡುತ್ತಿದ್ದಾರೆ. ನಾಯಿಗಳ ಹಿಂಡು ಜನರ ಮೇಲೆ ದಾಳಿಗೆ ಮುಂದಾಗುತ್ತಿದ್ದು ಇದರಿಂದ ನಡೆದಾಡಲು ಸಾಧ್ಯವಾಗುತ್ತಿಲ್ಲವೆಂಬ ಆರೋಪ ಕೇಳಿಬರುತ್ತಿದೆ. ದ್ವಿಚಕ್ರ ವಾಹನಗಳ ಸವಾರರ ಮೇಲೂ ನಾಯಿಗಳು ಎರಗಲು ಮುಂದಾಗುತ್ತಿವೆ. ಇದರಿಂದ ವಾಹನ ನಿಯಂತ್ರಣ ತಪ್ಪಿ ಅಪಾ ಯಕ್ಕೆಡೆಯಾಗುವ ಸ್ಥಿತಿಯೂ …