ಯುವತಿಗೆ ಲೈಂಗಿಕ ಕಿರುಕುಳ ನೀಡಿ ಗರ್ಭಪಾತ: ಕೇಸು ದಾಖಲಿಸಿಕೊಂಡ ಬೆನ್ನಲ್ಲೇ ತಲೆಮರೆಸಿಕೊಂಡ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್

ತಿರುವನಂತಪುರ: ತಿರುವನಂತಪುರ ನಿವಾಸಿಯಾಗಿರುವ ಯುವತಿಗೆ  ಮದುವೆ ಭರವಸೆಯೊಡ್ಡಿ ಲೈಂಗಿಕ ಕಿರುಕುಳ ನೀಡಿದ ಪರಿಣಾಮ ಗರ್ಭಿಣಿಯಾದ ಆಕೆಯನ್ನು ಗರ್ಭಛಿದ್ರಗೊಳಪಡಿಸಿರುವುದಾಗಿ ಆರೋಪಿಸಿ ನೀಡಿದ ದೂರಿನಂತೆ ಯೂತ್ ಕಾಂಗ್ರೆಸ್ ಮಾಜಿ ರಾಜ್ಯ ಅಧ್ಯಕ್ಷರೂ, ಪಾಲಕ್ಕಾಡ್ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿರುವ  ರಾಹುಲ್ ಮಾಂಕೂಟತ್ತಿಲ್ (36) ವಿರುದ್ಧ ತಿರುವನಂತಪುರ ನೆಡುಮಂ ಙಾಡ್ ವಲಿಯಮಲ ಪೊಲೀಸರು ಜಾಮೀನುರಹಿತ ಕೇಸುದಾಖಲಿಸಿ ಕೊಂಡಿದ್ದಾರೆ. ಬಿಎನ್‌ಎಸ್‌ನ ಸೆಕ್ಷನ್ 89ರ ಪ್ರಕಾರ ಈ ಪ್ರಕರಣ ದಾಖಲಿಸಲಾಗಿದ್ದು, ಇದು 10 ವರ್ಷ ಸಜೆ ಲಭಿಸುವ ಅಪರಾಧಕೃತ್ಯವಾಗಿದೆ. ಇದರ ಹೊರತಾಗಿ ಗರ್ಭಛಿದ್ರ ಗೊಳಿಸಲು …

ಹಿರಿಯ ವ್ಯಾಪಾರಿ ಶಂಭು ಹೆಬ್ಬಾರ್ ನಿಧನ

ಸೀತಾಂಗೋಳಿ: ಸೀತಾಂ ಗೋಳಿ ಪೇಟೆಯ  ಹಿರಿಯ ವ್ಯಾಪಾರಿ  ಶಂಭು ಹೆಬ್ಬಾರ್ (63) ಸ್ವ-ಗೃಹದಲ್ಲಿ ನಿಧನಹೊಂದಿದರು. ಸೀತಾಂ ಗೋಳಿ ನಿವಾಸಿಯಾದ ಇವರು ಹಲವು ವರ್ಷಗಳ ಕಾಲ ಸೀತಾಂ ಗೋಳಿ ಪೇಟೆಯಲ್ಲಿ ವ್ಯಾಪಾರಿ ಯಾಗಿದ್ದರು. ಬಳಿಕ ಅಸೌಖ್ಯ ಬಾಧಿಸಿದ ಹಿನ್ನೆಲೆ ಯಲ್ಲಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಮೃತರು ಪತ್ನಿ ದೇವಕಿ, ಮಕ್ಕ ಳಾದ ಶರತ್, ಕಾರ್ತಿಕ್, ಪ್ರತೀಕ್ಷ, ಸಹೋದರರಾದ ಸುಬ್ರ ಹ್ಮಣ್ಯ, ರಾಮಕೃಷ್ಣ, ಮಹಾದೇವ, ಸಹೋ ದರಿ ಕಾವೇರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ

ಪತ್ನಿ ಮೃತಪಟ್ಟ 20ನೇ ದಿನ ಪತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಪತ್ನಿ ಮೃತಪಟ್ಟ 20ನೇ ದಿನ ಪತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮಂಜೇಶ್ವರ ಬಡಾಜೆ ಮಜಳಿಕೆ ನಿವಾಸಿ ಮಾಧವ (68) ಎಂಬವರು  ಸಾವಿಗೀಡಾದ ವ್ಯಕ್ತಿ. ನಿನ್ನೆ ರಾತ್ರಿ 7.30ರ ವೇಳೆ ಮನೆಯ ಬೆಡ್‌ರೂಂನ ಕಿಟಿಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಇವರು ಪತ್ತೆಯಾಗಿದ್ದರು.  ಕೂಡಲೇ ಸಹೋದರರು ಮಾಧವ ರನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮಾಧವರ ಪತ್ನಿ ಉಷಾ ನವಂಬರ್ 7ರಂದು ಹೃದಯಾ ಘಾತದಿಂದ ನಿಧನಹೊಂದಿದ್ದರು. ಅನಂತರ ಇವರು ಮನೆಯಲ್ಲಿ …

ಬಿಎಲ್‌ಒಗೆ ಹಲ್ಲೆಗೈಯ್ಯಲೆತ್ನ : ಸಿಪಿಎಂ ಲೋಕಲ್ ಸೆಕ್ರೆಟರಿ ಬಂಧನ

ಮುಳ್ಳೇರಿಯ: ಎಸ್‌ಐಆರ್ ಫಾರ್ಮ್ ನೀಡಿಲ್ಲವೆಂದು ಆರೋಪಿಸಿ ಬೂತ್ ಲೆವೆಲ್ ಆಫೀಸರ್‌ಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆಗೈಯ್ಯಲು ಯತ್ನಿಸಿದ  ಸಿಪಿಎಂ ಲೋಕಲ್ ಸೆಕ್ರೆಟರಿಯನ್ನು ಬಂಧಿಸಲಾಗಿದೆ. ದೇಲಂಪಾಡಿ ಪಂಚಾಯತ್  ಸ್ಥಾಯೀ ಸಮಿತಿ ಅಧ್ಯಕ್ಷನೂ ಪಾಂಡಿ ಲೋಕಲ್ ಸೆಕ್ರೆಟರಿಯಾದ  ಚಾಪೆಕ್ಕಲ್‌ನ ಎ. ಸುರೇಂದ್ರನ್ (53)ನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಪಯರಡ್ಕ ವಾರ್ಡ್‌ನ  ಬಿಎಲ್‌ಒ ಪಿ. ಅಜಿತ್ ನೀಡಿದ ದೂರಿನಂತೆ    ಸುರೇಂದ್ರನ್‌ನನ್ನು ಬಂಧಿಸಲಾಗಿದೆ. ನಿನ್ನೆ ಬೆಳಿಗ್ಗೆ 10 ಗಂಟೆಗೆ ಚಾಪೆಕ್ಕಲ್ ಕಮ್ಯುನಿಟಿ ಹಾಲ್‌ನಲ್ಲಿ  ಅಜಿತ್‌ಗೆ ಹಲ್ಲೆಗೈಯ್ಯಲೆತ್ನಿಸಿರುವುದಾಗಿ ದೂರಲಾಗಿದೆ. ಎಸ್‌ಐಆರ್ ಫಾರ್ಮ್ ಸಂಗ್ರಹಿಸಲೆಂದು  ಬಿಎಲ್‌ಒ ಅಲ್ಲಿಗೆ …

ಮನೆಗೆ ನುಗ್ಗಿ ಇರಿದ ಪ್ರಕರಣ: ಆರೋಪಿಗೆ ಸಜೆ, ಜುಲ್ಮಾನೆ

ಕಾಸರಗೋಡು: ಮನೆಗೆ ನುಗ್ಗಿ ರಬ್ಬರ್ ಟ್ಯಾಪಿಂಗ್ ಕಾರ್ಮಿಕನಿಗೆ ಇರಿದು ಗಂಭೀರ ಗಾಯಗೊಳಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ತೃತೀಯ) ಮೂರು ವರ್ಷ ಕಠಿಣ ಸಜೆ ಹಾಗೂ 3೦೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಅಡೂರು ಅತ್ತನಾಡಿ ನಿವಾಸಿ ಸುಂದರ (38) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2018 ನವಂಬರ್ 15ರಂದು ಬೆಳಿಗ್ಗೆ ಅಡೂರು ಮೈನಾಡಿಯಲ್ಲಿ ಮದ್ಯ ಕುಡಿಯಲು …

ಜಾಂಬ್ರಿ ಗುಹೆ ಪರಿಸರದಲ್ಲಿ ಅಪೂರ್ವವಾಗಿ ಹರಿಣ- ಸಾರಂಗ ಜೋಡಿ ಜಿಂಕೆ ಪತ್ತೆ

ಬೆಳ್ಳೂರು: ನೆಟ್ಟಣಿಗೆ  ಕ್ಷೇತ್ರಕ್ಕೆ ಸಂಬಂಧಪಟ್ಟ ಜಾಂಬ್ರಿ ಗುಹಾ ಪ್ರದೇಶ ಒಳಗೊಂಡ ಬಂಟಾಜೆ ರಕ್ಷಿತಾರಣ್ಯದ ಚೆಂಡೆತ್ತಡ್ಕ ಬಯಲಿನಲ್ಲಿ ಅತ್ಯಪೂರ್ವವಾಗಿ ಜಿಂಕೆ ಜೋಡಿ ಪತ್ತೆಯಾಗಿದೆ. ಹವ್ಯಾಸಿ ಛಾಯಾಗ್ರಾಹಕ ಪ್ರಶಾಂತ್ ಪಾಣಾಜೆ ಇದನ್ನು ಸೆರೆ ಹಿಡಿದಿದ್ದಾರೆ. ಚೆಂಡೆತ್ತಡ್ಕ ಬಯಲಿನಲ್ಲಿ ಕಾಡು ಕೋಣ, ಹಂದಿ, ಮುಳ್ಳುಹಂದಿ, ಮರಬೆಕ್ಕು, ಕಾಡುಬೆಕ್ಕು, ಮಂಗ, ಮುಜು, ಅಳಿಲು, ಚಣಿಲು, ನವಿಲು ಮಾಮೂಲಾಗಿ ಕಂಡುಬರುತ್ತಿದ್ದರೂ ಜಿಂಕೆ, ಕಡವೆ, ನರಿ ಅಪೂರ್ವವಾಗಿ ಕಂಡು ಬರುತ್ತಿದೆ. ಆದರೆ ಈಗ ಅಪೂರ್ವವಾಗಿ ಹರಿಣಿ- ಸಾರಂಗ ಜೋಡಿ ಪತ್ತೆಯಾಗಿದೆ.

ಮುಂದುವರಿದ ಮಾದಕದ್ರವ್ಯ ಬೇಟೆ: ಎಂಡಿಎಂಎ, ಹೈಬ್ರೀಡ್ ಗಾಂಜಾ ಪತ್ತೆ; ನಾಲ್ವರ ಸೆರೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ  ಗಾಂಜಾ ಇತ್ಯಾದಿ ಮಾದಕದ್ರವ್ಯ ಪತ್ತೆಗಾಗಿರುವ ಕಾರ್ಯಾಚರಣೆಯನ್ನು ಪೊಲೀಸರು ಇನ್ನಷ್ಟು ತೀವ್ರಗೊಳಿಸಿದ್ದು,  ನಿನ್ನೆ ಮೂರೆಡೆಗಳಲ್ಲಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಎಂಡಿಎಂಎ ಮತ್ತು ಹೈಬ್ರೀಡ್ ಗಾಂಜಾ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾನಗರ ಪೊಲೀಸ್ ಮತ್ತು ಎಸ್‌ಪಿಯ ಮಾದಕದ್ರವ್ಯ ವಿರುದ್ಧ ಸ್ಕ್ವಾಡ್ ಉಳಿಯತ್ತಡ್ಕಕ್ಕೆ ಸಮೀಪದ ಇಜ್ಜತ್‌ನಗರದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 6 ಗ್ರಾಂ ಎಂಡಿಎಂಎ ಮತ್ತು 6 ಗ್ರಾಂ ಹೈಬ್ರೀಡ್ ಗಾಂಜಾ ಪತ್ತೆಹಚ್ಚಿ ವಶಕ್ಕೆ ತೆಗೆದು ಕೊಂಡಿದೆ. ಇದಕ್ಕೆ ಸಂಬಂಧಿಸಿ ಉಳಿ ಯತ್ತಡ್ಕ …

ಬಸ್‌ನೊಳಗೆ ಬಿದ್ದು ಸಿಕ್ಕಿದ ಚಿನ್ನವನ್ನು ವಾರಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ನೌಕರರು

ಕುಂಬಳೆ: ಬಸ್‌ನಲ್ಲಿ ಬಿದ್ದು ಸಿಕ್ಕಿದ ಚಿನ್ನದ ಬ್ರೇಸ್‌ಲೆಟ್‌ನ್ನು ಅದರ ವಾರಸುದಾರರಿಗೆ ಹಸ್ತಾಂತರಿಸಿ ಬಸ್ ನೌಕರರು ಪ್ರಾಮಾಣಿಕತೆ ಮೆರೆದಿದ್ದಾರೆ. ನಿನ್ನೆ ಸಂಜೆ ೪ ಗಂಟೆಗೆ ಕುಂಬಳೆಯಿಂದ ಧರ್ಮತ್ತಡ್ಕಕ್ಕೆ ತೆರಳುತ್ತಿದ್ದ  ಮಹಾಲಕ್ಷ್ಮಿ ಬಸ್‌ನಲ್ಲಿ ಪ್ಲಸ್‌ಟು ವಿದ್ಯಾರ್ಥಿನಿಯಾದ ಅಲೀಮತ್ ಶಮ್ನಾ ಎಂಬಾಕೆಯ  ಒಂದು ಪವನ್ ತೂಕದ ಬ್ರೇಸ್‌ಲೆಟ್ ಕಳೆದುಹೋಗಿತ್ತು.  ನಾಯ್ಕಾಪಿನಲ್ಲಿ ಬಸ್ಸಿಳಿದು ಮನೆಗೆ ಹೋಗುತ್ತಿದ್ದಾಗ ಬ್ರೇಸ್‌ಲೆಟ್ ಕಳೆದುಹೋಗಿರುವ ಬಗ್ಗೆ ವಿದ್ಯಾರ್ಥಿನಿಯ ಅರಿವಿಗೆ ಬಂದಿದೆ. ಈ ಮಧ್ಯೆ ಬಸ್‌ನೊಳಗೆ ನೌಕರರಿಗೆ  ಬ್ರೇಸ್‌ಲೆಟ್ ಬಿದ್ದು ಸಿಕ್ಕಿತ್ತು. ಚಾಲಕ ಧರ್ಮತ್ತಡ್ಕ ಬಾಳಿಗದ ಸೋಮನಾಥ, ಕಂಡಕ್ಟರ್ ಮುಗುವಿನ …

ಸೆರೆಗೀಡಾದ ಯುವತಿಗೆ ಕಿರುಕುಳ’:  ಆತ್ಮಹತ್ಯೆಗೈದ ಸಿಐ ಬರೆದಿಟ್ಟ ಪತ್ರದಲ್ಲಿ ಮೇಲಧಿಕಾರಿ ವಿರುದ್ಧ ಗಂಭೀರ ಆರೋಪ

ಪಾಲಕ್ಕಾಡ್: ಇತ್ತೀಚೆಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಪೊಲೀಸ್ ಅಧಿಕಾರಿ ಬರೆದಿಟ್ಟ ಪತ್ರವೊಂದು ಪೊಲೀಸರಿಗೆ ಲಭಿಸಿದ್ದು, ಅದರಲ್ಲಿ ಮೇಲಧಿಕಾರಿ ಯೊಬ್ಬನ ವಿರುದ್ಧ ಗಂಭೀರ ಆರೋಪಹೊರಿಸಲಾಗಿದೆ. ಚೆರುಪುಳಶ್ಶೇರಿ ಸಿಐ ಆಗಿದ್ದ ಬಿನು ಥೋಮಸ್ ಎಂಬವರು ಬರೆದಿಟ್ಟ ಪತ್ರ ಪತ್ತೆಯಾಗಿದ್ದು ಅದರಲ್ಲಿ  ಮೇಲಧಿಕಾರಿ ಯೋರ್ವ  ಅನೈತಿಕ ದಂಧೆ  ಪ್ರಕರಣ ದಲ್ಲಿ ಸೆರೆಗೀಡಾದ ಯುವತಿಗೆ ಬೆದರಿಕೆ ಯೊಡ್ಡಿ ಕಿರುಕುಳ ನೀಡಿರುವುದಾಗಿ  ಆರೋಪಹೊರಿ ಸಲಾಗಿದೆ. ಪ್ರಸ್ತುತ ಕಲ್ಲಿಕೋಟೆ ಡಿವೈಎಸ್ಪಿಯಾಗಿರುವ ಉಮೇಶ್ ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ. ತಾಯಿ ಹಾಗೂ ಇಬ್ಬರು ಮಕ್ಕಳಿರುವ …

ಪಣಂಬೂರು ಕಡಲ ತೀರದಲ್ಲಿ ಕಳ್ಳತನ: ಬಾಲಕ ಸೆರೆ; 3.33ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಮಂಗಳೂರು: ಪಣಂಬೂರು ಕಡಲ ತೀರದಲ್ಲಿ ಕಳವುಗೈದಿದ್ದ 3.33 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಮೊಬೈಲ್ ಫೋನ್ಗಳನ್ನು ಮಂಗಳೂರು ಪೊಲೀಸರು ಪತ್ತೆಹಚ್ಚಿ ಕೃತ್ಯದಲ್ಲಿ ಭಾಗಿಯಾಗಿದ್ದ ಓರ್ವ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.ಈ ತಿಂಗಳ 24ರಂದು ಸ್ವಾತಿ ನಂದಿಪಳ್ಳಿ ತಮ್ಮ ಸ್ನೇಹಿತ ರೋಹಿತ್ ನೆಮ್ಮಲೆಟ್ಟಿ ಅವರೊಂದಿಗೆ ಪಣಂಬೂರು ಕಡಲತೀರಕ್ಕೆ ತಲುಪಿದ್ದರು. ತಮ್ಮ ಚಿನ್ನದ ಸರ (12 ಗ್ರಾಂ), ಲಾಕೆಟ್ (2 ಗ್ರಾಂ), ತಲಾ 2 ಗ್ರಾಂನ ಎರಡು ಉಂಗುರಗಳು, 4 ಗ್ರಾಂನ ಕಿವಿಯೋಲೆಗಳು, ಒಂದು ಮೊಬೈಲ್ ಫೋನ್, ರೋಹಿತ್ ಅವರ …