ವೈಭವದಿಂದ ಸಮಾಪ್ತಿಗೊಂಡ ಕಾಳ್ಯಂಗಾಡು ಬ್ರಹ್ಮಕಲಶೋತ್ಸವ

ಕೂಡ್ಲು: ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಮಾಪ್ತಿಗೊಂಡಿತು. ಗಣಪತಿಹೋಮ, ಕವಾಟೋದ್ಘಾಟನೆ, ಮಹಾಪೂಜೆ ನಡೆಯಿತು. ತಂತ್ರಿ ಶ್ರೀಕೃಷ್ಣ ಗುರೂಜಿ ಕುಕ್ಕಾಜೆ ನೇತೃತ್ವ ವಹಿಸಿದರು. ಮೊಕ್ತೇಸರ ಅಚ್ಯುತ ಕಾಳ್ಯಂಗಾಡು, ಧರ್ಮದರ್ಶಿ ನಾರಾಯಣ ಕಾಳ್ಯಂಗಾಡು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಸಲಹಾ ಸಮಿತಿಯ ರಘು ಮೀಪುಗುರಿ, ಭಾಸ್ಕರ ಕಾಳ್ಯಂಗಾಡು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲು, ಕಾರ್ಯದರ್ಶಿಗಳಾದ ರಂಜಿತ್ ಮನ್ನಿಪ್ಪಾಡಿ, ಗೋವಿಂದ ನಾಯ್ಕ್ ಕಾಳ್ಯಂಗಾಡು, ಕೋಶಾಧಿಕಾರಿ ಶಾಂತ ಕುಮಾರ್ ಮುಂಡ್ಯತ್ತಡ್ಕ, ಜೊತೆ ಕೋಶಾಧಿಕಾರಿ ಪುನಿತ್ ಕೆಮ್ಮಣ್ಣು, …

ಬನಕ್ಕೆ ಉಚಿತವಾಗಿ ಸ್ಥಳ ನೀಡಿ ಪ್ರಾಮಾಣಿಕತೆ ಮೆರೆದ ಕೊಡ್ಯಮ್ಮೆಯ ಜಲೀಲ್: ಅಭಿನಂದನೆ

ಕುಂಬಳೆ: ಕುಂಬಳೆ ಪಂಚಾಯತ್‌ನ ಕೊಡ್ಯಮ್ಮೆ ಜಮಾಅತ್  ಕಮಿಟಿ ಸದಸ್ಯನೂ, ಯು.ಎಚ್. ಕ್ಲಬ್‌ನ ಅಧ್ಯಕ್ಷನಾದ ಕೊಡ್ಯಮ್ಮೆಯ ಪಳ್ಳತ್ತಿಮಾರ್ ಮೂಸ ಅವರ ಪುತ್ರ ಜಲೀಲ್ ಕೊಡ್ಯಮ್ಮೆ ತನ್ನ ಹೆಸರಲ್ಲಿರುವ ೭ಸೆಂಟ್ಸ್ ಸ್ಥಳವನ್ನು ಹಿತ್ತಿಲಿಗೆ ಸೇರಿಕೊಂಡಿರುವ ಬನಕ್ಕಾಗಿ  ಉಚಿತವಾಗಿ ನೀಡಿದ್ದಾರೆ. ಜಲೀಲ್ ರ ಪ್ರಾಮಾಣಿಕತೆಯನ್ನು ಬನ ಸಮಿತಿ ಹಾಗೂ ನಾಗರಿಕರು ಅಭಿನಂದಿಸಿದ್ದಾರೆ. ಬನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಾಧಿಕಾರಿಗಳಾದ ದಾಸ್ ಹಾಗೂ ಕುಟುಂಬ  ಗೌರವಿಸಿದರೂ ಬನ ಸಮಿತಿ ಸದಸ್ಯರು ಜಲೀಲ್‌ರಿಗೆ ಪಾರಿತೋಷಕ ನೀಡಿದರು. ನಾಡಿನಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಜೀವ ಕಾರುಣ್ಯ ಚಟುವಟಿಕೆಗಳಲ್ಲಿ ಜಲೀಲ್ …

ಎಡನೀರು ಮಠದಲ್ಲಿ ಮಹಾ ಶ್ರೀಚಕ್ರ ನವಾವರಣ ಪೂಜೆ

ಎಡನೀರು: ಎಡನೀರು ಮಠದಲ್ಲಿ ನಿನ್ನೆ ಅಪರಾಹ್ನ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಇವರ ಉಪಸ್ಥಿತಿ ಯಲ್ಲಿ ಬ್ರಹ್ಮಶ್ರೀ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿಯವರಿಂದ ಮಹಾ ಶ್ರೀಚಕ್ರ ನವಾವರಣ ಪೂಜೆ ಜರಗಿತು. ಈ ವೇಳೆ ವಿದುಷಿ ಎನ್.ಜೆ. ನಂದಿನಿ ಮತ್ತು ಬಳಗದವರಿಂದ ನವಾವರಣ ಕೃತಿ ಆಲಾಪನೆ ಜರಗಿತು. ವಯಲಿನ್‌ನಲ್ಲಿ ವಿದ್ವಾನ್ ವಿಠಲರಾಮಮೂರ್ತಿ ಚೆನ್ನೈ, ಮೃದಂಗದಲ್ಲಿ ಆನೂರು ಅನಂತಕೃಷ್ಣ ಶರ್ಮ ಬೆಂಗಳೂರು, ಮೋರ್ಸಿಂಗ್‌ನಲ್ಲಿ ಪಯ್ಯನ್ನೂರು ಗೋವಿಂದ ಪ್ರಸಾದ್ ಸಹಕರಿಸಿದರು.

ಸೀತಾಂಗೋಳಿಯಲ್ಲಿ ಯುವಕನ ಕೊಲೆ : ಬಂಧಿತ ಆರೋಪಿಗೆ ರಿಮಾಂಡ್

ಕುಂಬಳೆ: ಬಾಪಾಲಿಪೊನ ಕುಂಟಿಕಾನ ನಿವಾಸಿಯಾದ  ಸಫಾಹಿದ್  ಯಾನೆ ಶಫಾಯತ್ (35) ಎಂಬವರನ್ನು ತಲೆಗೆ ಹೊಡೆದು ಕೊಲೆಗೈದ ಪ್ರಕರಣದಲ್ಲಿ ಸೆರೆಗೀಡಾದ ಕುಂಬಳೆ ನಾಯ್ಕಾಪು ಕೋಟೆಕಾರಿನ ಶ್ರೀನಿವಾಸ (39) ಎಂಬಾತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಇದೇ ವೇಳೆ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿಯುತ್ತಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.  ಘಟನೆಗೆ ಸಂಬಂಧಿಸಿ  ಸೀತಾಂಗೋಳಿಯ ವಿವಿಧೆಡೆಗಳ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾ ಗುತ್ತಿದೆ. ಈ ಪ್ರಕರಣದಲ್ಲಿ ಬೇರೆ ಯಾರಾದರೂ ಶಾಮೀಲಾಗಿದ್ದಾ ರೆಯೇ ಎಂದು ತಿಳಿಯಲು ತನಿಖೆ ಮುಂದುವರಿಸಲಾಗಿದೆಯೆಂದು  ಪೊಲೀಸರು ತಿಳಿಸಿದ್ದಾರೆ. …

ಕೋಟೆಕಾರಿನಲ್ಲಿ ಯುವಕನ ಮೃತದೇಹ ಪತ್ತೆ: ತಲೆಯ ರಕ್ತಸ್ರಾವ ಸಾವಿಗೆ ಕಾರಣವೆಂದು ಮರಣೋತ್ತರ ವರದಿ

ಕುಂಬಳೆ: ಕೋಟೆಕಾರಿನಲ್ಲಿ ಕಾಂಗ್ರೆಸ್ ಮಂಡಲ ಅಧ್ಯಕ್ಷ ರವಿ ಪೂಜಾರಿಯವರ ಸಹೋದರ ಮೈದಾನ ಸಮೀಪ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿರುವುದು ತಲೆಯ ರಕ್ತಸ್ರಾವದ ಹಿನ್ನೆಲೆಯಲ್ಲಿ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಸಾವಿನಲ್ಲಿನ ನಿಗೂಢತೆ  ಇಲ್ಲದಾಗಿದೆ ಎಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಬೆಳಿಗ್ಗೆ ಕೋಟೆಕಾರಿನ ಸುನಿಲ್ ಕುಮಾರ್ (40)ರನ್ನು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು. ಪೈಂಟಿಂಗ್ ಕಾರ್ಮಿಕನಾದ ಸುನಿಲ್ ಕುಮಾರ್ ಮಂಗಳವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ತಲುಪಿರಲಿಲ್ಲ. ಈ ಮಧ್ಯೆ ಮೃತದೇಹದ ಮೂಗಿನಿಂದ ರಕ್ತ ಹರಿಯುತ್ತಿದ್ದ …

ಹತ್ತನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ: ಸಹಪಾಠಿ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: ಹತ್ತನೇ ತರಗತಿ ವಿದ್ಯಾರ್ಥಿನಿಯೋರ್ವೆ ಗರ್ಭಿಣಿಯಾಗಿದ್ದು, ಈ ಸಂಬಂಧ ಬಾಲಕಿಯ ಸಹಪಾಠಿಯಾದ 16ರ  ಹರೆಯದ ಬಾಲಕನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಹೊಸದುರ್ಗ ಪೊಲೀಸ್ ಸಬ್ ಡಿವಿಶನ್ ವ್ಯಾಪ್ತಿಯ ನಿವಾಸಿಯಾದ ಬಾಲಕಿ ಗರ್ಭಿಣಿಯಾಗಿರುವುದಾಗಿ ಹೇಳಲಾಗುತ್ತಿದೆ.  ಅಸ್ವಸ್ಥತೆ ಕಂಡುಬಂದ ಹಿನ್ನೆಲೆಯಲ್ಲಿ ಬಾಲಕಿಯನ್ನು ವೈದ್ಯರ ಬಳಿಗೆ ಕರೆದೊಯ್ಯಲಾಗಿತ್ತು. ವೈದ್ಯರು ತಪಾಸಣೆ ನಡೆಸಿದಾಗ ಬಾಲಕಿ ಗರ್ಭಿಣಿಯಾಗಿದ್ದಾಳೆಂದು ತಿಳಿದುಬಂದಿದೆ. ಈ ಬಗ್ಗೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಇದರಂತೆ ಪೊಲೀಸರು ತನಿಖೆ ನಡೆಸಿ ಸಹಪಾಠಿ ವಿರುದ್ಧ ಕೇಸು ದಾಖಲಿಸಿದ್ದಾರೆ.

ಕೊಲೆಯತ್ನ ಪ್ರಕರಣ: ಆರೋಪಿಗೆ 12 ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ರಾಮು ರಮೇಶ್ ಚಂದ್ರಭಾನು ಅವರು ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು 12 ವರ್ಷ ಕಠಿಣ ಸಜೆ ಮತ್ತು ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಪಾಡಿ ಗ್ರಾಮದ ಎದುರ್ತೋಡು ನಿವಾಸಿ ಇ. ರಂಜಿತ್ ಅಲಿಯಾಸ್ ಬಂಗನ್ (29) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ೯ ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. …

ಮನೆಯೊಳಗೆ ಪತ್ತೆಯಾದ ಹಾವಿನ ದೇಹದಲ್ಲಿ ಚಿನ್ನದ ಉಂಗುರ

ಮುಳ್ಳೇರಿಯ: ಮನೆಯೊಳಗೆ ಪತ್ತೆಯಾದ  ಹಾವಿನ ದೇಹದಲ್ಲಿ ಚಿನ್ನದ ಉಂಗುರ ಕಂಡುಬಂದಿದ್ದು ಇದು ಆಶ್ಚರ್ಯಕ್ಕೆ ಕಾರಣವಾಗಿದೆ. ಅಡೂರು ಪದಿಕ್ಕಾಲ್ ನಿವಾಸಿ ರವಿ ಎಂಬವರ ಮನೆಯೊಳಗೆ ನಿನ್ನೆ ಬೆಳಿಗ್ಗೆ ಹಾವು ಕಂಡುಬಂದಿತ್ತು.  ಮರದಿಂದ ತಯಾರಿಸಿದ ಮೇಜಿನೊಳಗೆ ಹಾವು ಅವಿತುಕೊಂಡಿತ್ತೆನ್ನ ಲಾಗಿದೆ. ಮಕ್ಕಳು ಮೇಜು ತೆರೆಯಲೆತ್ನಿಸಿದಾಗ  ಹಾವು ಕಂಡುಬಂದಿದ್ದು, ಈ ಬಗ್ಗೆ ಮಕ್ಕಳು ಹಿರಿಯರಿಗೆ ತಿಳಿಸಿದ್ದಾರೆ. ಅದು ನಾಗರಹಾವಾಗಿ ರಬಹುದೇ ಎಂದು ಭಯಗೊಂಡ  ಮನೆಯವರು ಕೂಡಲೇ  ಫಾರೆಸ್ಟರ್ ಕೃಷ್ಣನ್ ಎಂಬವರಿಗೆ ವಿಷಯ ತಿಳಿಸಿದ್ದಾರೆ.  ಕೃಷ್ಣನ್ ಸ್ಥಳಕ್ಕೆ ತಲುಪಿ ಪರಿಶೀಲಿಸಿದಾಗ ಹಾವು ಕಂಡುಬಂದಿದ್ದು,  …

ಪೈವಳಿಕೆ: ಎಂ.ಎಂ. ಟೈಲರ್ ನಿಧನ

ಪೈವಳಿಕೆ: ಹಲವು ವರ್ಷ ಗಳಿಂದ ಟೈಲರ್ ಆಗಿ ದುಡಿಯುತ್ತಿದ್ದ ಎಂ.ಎಂ. ಟೈಲರ್ ಎಂದೇ ಕರೆಸಿಕೊಂಡಿದ್ದ ಮಳಿವ್ ಮುಂಡಪ್ಪ ಟೈಲರ್ (68) ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ವಿಜಯ, ಮಕ್ಕಳಾದ ಮಹೇಶ್, ಸುಸ್ಮಿತಾ, ಅಳಿಯ ಗುರುರಾಜ್, ಸಹೋದರ ನಾರಾಯಣ, ಸಹೋದರಿ ಯರಾದ ಲಕ್ಷ್ಮೀ, ಲೀಲಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ ಕಾರ್ಯದರ್ಶಿ ಚಂದ್ರ ನಾಕ್ ಮಾನಿಪ್ಪಾಡಿ, ರಾಮ ಏದಾರ್, ನಬೀಸ, ರಫೀಕ್ ಬಾಯಿಕಟ್ಟೆ, ಬಾಬು ವಾದ್ಯಪಡ್ಪು, …

ಹಾನಿಗೊಂಡ ಕೆಪಿಆರ್ ರಾವ್ ರಸ್ತೆ :ಮಳೆಗೆ ಮುಂಚಿತ ದುರಸ್ತಿಗೆ ಆಗ್ರಹ

ಕಾಸರಗೋಡು: ಕಳೆದ ವರ್ಷದ ತೀವ್ರ ಮಳೆಗೆ ರಸ್ತೆಯ ಒಂದು ಭಾಗವೇ ನಾಶವಾದ ಸ್ಥಿತಿಯಲ್ಲಿರುವ  ಕೆ.ಪಿ.ಆರ್ ರಾವ್ ರಸ್ತೆಯ ದುರವಸ್ಥೆಗೆ ಇನ್ನೂ ಪರಿಹಾರವಾಗಿಲ್ಲ. ಮಳೆಗೆ ಮುಂಚಿತವೇ ರಸ್ತೆ ಹಾನಿಯಾಗಲು ಆರಂಭಿಸಿದ್ದರೂ ಮಳೆಗೆ ಪೂರ್ಣ ನಾಶವಾಗಿದೆ. ಹಾನಿಗೊಂಡ ರಸ್ತೆಯ ಒಂದು ಬದಿ ವಾಹನಗಳನ್ನು ನಿಲ್ಲಿಸುವುದರಿಂದಾಗಿ ವ್ಯಾಪಾರಿಗಳ ಸಮಸ್ಯೆ ಹೆಚ್ಚಿದೆ. ಈ ಪ್ರದೇಶದಲ್ಲಿ ಟೆಲಿಕಾಂ ಕಚೇರಿ, ಸಿನಿಮಾ ಟಾಕೀಸ್ ಸಹಿತ ಹಲವು ಸಂಸ್ಥೆಗಳಿದ್ದು,ದಟ್ಟಣೆ ರಸ್ತೆ ಇದಾಗಿದೆ. ಮಳೆ ಆರಂಭಕ್ಕೂ ಮುಂಚಿತ ಈ ರಸ್ತೆಯ ಪ್ರಧಾನ ಅಂಚೆ ಕಚೇರಿಯಿಂದ ಕೆಎಸ್‌ಆರ್‌ಟಿಸಿ ನಿಲ್ದಾಣವರೆಗೆ ಕಾಂಕ್ರೀಟ್ …