ಸಿಪಿಎಂ ಮುಟ್ಟತ್ತೋಡಿ ಮಾಜಿ ಬ್ರಾಂಚ್ ಕಾರ್ಯದರ್ಶಿ ನಿಧನ

ಕಾಸರಗೋಡು: ಸಿಪಿಎಂ ಮುಟ್ಟತ್ತೋಡಿ ಮಾಜಿ ಬ್ರಾಂಚ್ ಕಾರ್ಯದರ್ಶಿ ಬಶೀರ್ (86) ನಿಧನ ಹೊಂದಿದರು. ಮೃತರು ಮಕ್ಕಳಾದ ಅಬ್ದುಲ್ಲ, ಅಬ್ದುಲ್ ರಹಿಮಾನ್, ಅಬೂಬಕ್ಕರ್, ಇಬ್ರಾಹಿಂ, ಇಲ್ಯಾಸ್, ಸುಹರ, ಬುಶ್ರ, ಅಳಿಯ ಸಮೀರ್, ಸೊಸೆಯಂದಿರಾದ ರಹ್ಮತ್ ಬೀವಿ, ಫಾತಿಮತ್ ಸುಹರ, ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಶೋಚನೀಯಗೊಂಡ ತಿಂಬರ- ಕುಬಣೂರು ರಸ್ತೆ ದುರಸ್ತಿಗೆ ಒತ್ತಾಯ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ತಿಂಬರ-ಕುಬಣೂರು ಒಳ ರಸ್ತೆ ಹದಗೆಟ್ಟು ಶೋಚನೀಯಾವಸ್ಥೆಗೆ ತಲುಪಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ದುರಸ್ತಿಗೆ ಊರವರು ಆಗ್ರಹಿಸಿದ್ದಾರೆ. ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದೇ ರಸ್ತೆ ಶೋಚನೀಯಗೊಳ್ಳಲು ಕಾರಣವೆಂದು ಸ್ಥಳೀಯರು ತಿಳಿಸಿದ್ದಾರೆ. ಪ್ರತಾಪನಗರ, ಬೀಟಿಗದ್ದೆ ಸಹಿತ ಪರಿಸರ ಪ್ರದೇಶದ ನಾಗರಿಕರು, ಕುಬಣೂರು ಶಾಲಾ ಮಕ್ಕಳು, ಕ್ಷೇತ್ರ, ಮಸೀದಿ ಸಹಿತ ವಿವಿಧ ಕೆಲಸಗಳಿಗೆ ತೆರಳಲು ಹತ್ತಿರದ ರಸ್ತೆ ಇದಾಗಿದೆ. ಈಗ ರಸ್ತೆಯಲ್ಲಿ ಹೊಂಡ ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ರಸ್ತೆ …

ಪುತ್ತಿಗೆ ಡಿವಿಶನ್ ಎಡರಂಗ ಅಭ್ಯರ್ಥಿ ಪರ್ಯಟನೆ ಆರಂಭ

ಪುತ್ತಿಗೆ: ಜಿಲ್ಲಾ ಪಂಚಾಯತ್ ಪುತ್ತಿಗೆ ಡಿವಿಶನ್‌ನ ಎಡರಂಗದ  ಅಭ್ಯರ್ಥಿಯ ಪರ್ಯಟನೆಯನ್ನು ಬಾಡೂರಿನಲ್ಲಿ ಶಾಸಕ ಸಿ.ಎಚ್. ಕುಂಞಂಬು ಉದ್ಘಾಟಿಸಿದರು. ಕೆ.ಎ. ಮೊಹಮ್ಮದ್ ಹನೀಫ್, ಪಿ. ರಘುದೇವನ್, ಶಿವಪ್ಪ ರೈ, ಶಂಕರ ರೈ, ವಿಠಲ ರೈ, ಬಶೀರ್ ಕೊಟ್ಟೂಡಲ್, ಅಬ್ದುಲ್ ಹಕೀಂ, ತಾಜುದ್ದೀನ್ ಮೊಗ್ರಾಲ್, ಡಿ.ಎನ್. ರಾಧಾಕೃಷ್ಣನ್, ಅನಿತಾ ಬಾಡೂರು, ಸಂತೋಷ್ ಕುಮಾರ್ ಮಾತನಾಡಿದರು. ಬಾಡೂರಿನಿಂದ ಆರಂಭಿಸಿದ ಜಾಥಾ ಕಣ್ಣೂರಿನಲ್ಲಿ ಸಮಾಪ್ತಿಗೊಂಡಿದೆ. ಸಮಾರೋಪವನ್ನು ಸಿಪಿಎಂ ಕುಂಬಳೆ ಏರಿಯಾ ಕಾರ್ಯದರ್ಶಿ ಸಿ.ಎ. ಸುಬೈರ್ ಉದ್ಘಾಟಿಸಿದರು.

ಉಳಿಯತ್ತಡ್ಕದಲ್ಲಿ ಯುಡಿಎಫ್ ಚುನಾವಣಾ ಪ್ರಚಾರ

ಉಳಿಯತ್ತಡ್ಕ: ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ  ಜಿಲ್ಲಾ ಪಂಚಾಯತ್‌ನ ಸಿವಿಲ್ ಸ್ಟೇಷನ್ ಡಿವಿಶನ್‌ನಿಂದ ಸ್ಪರ್ಧಿಸುವ ಐಕ್ಯರಂಗದ ಅಭ್ಯರ್ಥಿ ಟಿ.ಬಿ. ಶಫೀಕ್‌ರ ಚುನಾವಣೆ ಪ್ರಚಾರ ಉಳಿಯತ್ತಡ್ಕದಲ್ಲಿ ನಡೆಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ, ಸಂಸದ ಶಾಫಿ ಪರಂಬಿಲ್ ಉದ್ಘಾಟಿಸಿದರು. ಚೆಂಗಳ ಡಿವಿಶನ್ ವ್ಯಾಪ್ತಿಯ ಬ್ಲೋಕ್ ಪಂಚಾಯತ್, ಗ್ರಾಮ ಪಂಚಾಯತ್ ಅಭ್ಯರ್ಥಿಗಳು ಉಪಸ್ಥಿತರಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ. ನೀಲಕಂಠನ್, ಹಕೀಂ ಕುನ್ನಿಲ್, ಯೂತ್ ಲೀಗ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಫಿರೋಸ್, ಯೂತ್ ಕಾಂಗ್ರೆಸ್ ಕರ್ನಾಟಕ ಮಾಜಿ ರಾಜ್ಯ ಅಧ್ಯಕ್ಷ ಹಾರಿಸ್ ನಾಲಪ್ಪಾಡ್, …

ರಾಷ್ಟ್ರೀಯ ಕ್ಷೀರ ದಿನ : ಮಿಲ್ಮಾದಿಂದ ವಿವಿಧ ಕಾರ್ಯಕ್ರಮ

ಕಾಸರಗೋಡು: ರಾಷ್ಟ್ರೀಯ ಕ್ಷೀರದಿನದಂಗವಾಗಿ ಮಿಲ್ಮಾದ ಕಾಸರ ಗೋಡು ಡೈರಿ  ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಯಿತು. ಚೆಂಗಳ ಪಂಚಾಯತ್‌ನ ಕುಟುಂಬಶ್ರೀ ಸದಸ್ಯರಿಗೆ ಹಾಗೂ ಚಾಯೋತ್ ಜಿಎಚ್‌ಎಸ್‌ಎಸ್‌ನ ಸ್ಕೌಟ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ, ಮಂಗಲ್ಪಾಡಿ ಪಂಚಾಯತ್‌ನ ಸಿಡಿಎಸ್ ಸದಸ್ಯರಿಗೆ  ತಿಳುವಳಿಕೆ ತರಗತಿ ಹಮ್ಮಿಕೊಳ್ಳಲಾಯಿತು. ಡೈರಿ ಮೆನೇಜರ್ ಸ್ವೀಟಿ ವರ್ಗೀಸ್ ಉದ್ಘಾಟಿಸಿದರು. ಜಿಲ್ಲೆಯ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗಾಗಿ ನಡೆಸಿದ ಜಲ ಛಾಯೆ ಸ್ಪರ್ಧೆಯಲ್ಲಿ ಎಂ. ಸ್ವಪ್ನಾ ಸುರೇಶ್ (ಬೇತೂರುಪಾರ ಶಾಲೆ), ವರುಣ ಮೋಹನ್ (ಚಟ್ಟಂಚಾಲ್ ಶಾಲೆ), ಕೆ. ದೇವಾನಂದ (ಉದುಮ …

ಚುನಾವಣೆ: ಅನಧಿಕೃತ ಪ್ರಚಾರ ಬ್ಯಾನರ್, ಫ್ಲೆಕ್ಸ್ ಪತ್ತೆ : 25,000 ರೂ. ದಂಡ ಹೇರಿದ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್

ಕಾಸರಗೋಡು: ಸ್ಥಳೀಯಾ ಡಳಿತ ಸಂಸ್ಥೆಗಿರುವ ಚುನಾವಣೆಗೆ ಸಂಬಂಧಿಸಿ ವಿವಿಧ ಮುದ್ರಣ ಸಂಸ್ಥೆಗಳಿಗೆ ಜಿಲ್ಲಾ ಎನ್‌ಫೋರ್ಸ್ ಮೆಂಟ್ ತಂಡ ದಾಳಿ ನಡೆಸಿ ತಪಾಸಣೆ ನಡೆಸಿದೆ. ಅನಧಿಕೃತವಾಗಿ ಸಂಗ್ರಹಿಸಿಟ್ಟ ಮೆಟೀರಿಯಲ್‌ಗಳನ್ನು ಪತ್ತೆಹಚ್ಚಿ ಸಂಸ್ಥೆಯ ಮಾಲಕರಿಗೆ ದಂಡ ಹೇರಲಾಗಿದೆ. ಮುದ್ರಣ ಸಂಸ್ಥೆಗಳಿಂದ  ರಾಜಕೀಯ ಪಕ್ಷಗಳಿಗಾಗಿ, ಅಭ್ಯರ್ಥಿಗಳಿಗಾಗಿ ಮುದ್ರಿಸಿ ಇರಿಸಿದ್ದ ನಿಷೇಧಿತ ಪಿವಿಸಿ ಫ್ಲೆಕ್ಸ್ ಬ್ಯಾನರ್‌ಗಳನ್ನು, ಮೆಟೀರಿಯಲ್‌ಗಳನ್ನು ವಶಪಡಿಸಿ ಸಂಸ್ಥೆಯ ಮಾಲಕನಿಗೆ ೨೫,೦೦೦ ರೂ. ದಂಡ ಹೇರಲಾಗಿದೆ. ಮುದ್ರಣಕ್ಕೆ ಅನುಮತಿ ನೀಡಿದ ವಸ್ತುಗಳಲ್ಲಿಯೂ ಕ್ಯೂಆರ್ ಕೋಡ್, ರೀಸೈಕ್ಲಿಂಗ್ ಲೋಗೊ, ಸಂಸ್ಥೆಯ ವಿಳಾಸ ಮುದ್ರಿಸಲಾಗಿರಲಿಲ್ಲ. …

ಲೇಬರ್ ಕೋಡ್ ರದ್ದುಗೊಳಿಸಲು ಆಗ್ರಹಿಸಿ ಸಂಯುಕ್ತ ಟ್ರೇಡ್ ಯೂನಿಯನ್‌ಗಳಿಂದ ಪ್ರತಿಭಟನೆ

ಕಾಸರಗೋಡು: ಕಾರ್ಮಿಕ ವಿರುದ್ಧ ಲೇಬರ್ ಕೋಡ್‌ಗಳನ್ನು ರದ್ದುಗೊಳಿಸಬೇಕು, ಬಿಜೆಪಿ ಸರಕಾರದ ಕಾರ್ಮಿಕ ವಿರುದ್ಧ ಕ್ರಮಗಳನ್ನು ಹಿಂತೆಗೆಯಬೇಕು ಎಂಬೀ ಬೇಡಿಕೆಗಳನ್ನು ಮುಂದಿಟ್ಟು ಸಂಯುಕ್ತ ಟ್ರೇಡ್ ಯೂನಿಯನ್ ಸಮಿತಿ ಮೆರವಣಿಗೆ ಹಾಗೂ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿತ್ತು. ಕಾಸರಗೋಡು ಬಿಎಸ್‌ಎನ್‌ಎಲ್‌ನ ಮುಂಭಾಗದಲ್ಲಿ ನಡೆದ ಧರಣಿಯನ್ನು ಸಿಐಟಿಯು ರಾಜ್ಯ ಕಾರ್ಯದರ್ಶಿ ಟಿ.ಕೆ. ರಾಜನ್ ಉದ್ಘಾಟಿಸಿದರು. ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಟಿ. ಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಪಿ.ವಿ. ತಂಬಾನ್, ಕೆ. ಭಾನುಪ್ರಕಾಶ್, ಟಿ. ಪ್ರಕಾಶನ್, ವಿ.ವಿ. ಪ್ರಸನ್ನ ಕುಮಾರಿ, ಬಿಜು ಉಣ್ಣಿತ್ತಾನ್, ಶಿಜು …

ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಜಿಲ್ಲಾ ಸಮ್ಮೇಳನ ಸಮಾಪ್ತಿ

ಕಾಸರಗೋಡು: ಜಿಲ್ಲೆಯ ರಸ್ತೆಗಳ ಹಾಗೂ ಮೇಲ್ಸೇತುವೆಗಳ ಕಾಮಗಾ ರಿಗಳನ್ನು ಶೀಘ್ರವೇ ಪೂರ್ತಿಗೊಳಿಸಿ ಸಂಚಾರ ಯೋಗ್ಯಗೊಳಿಸಬೇಕೆಂದು, ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಾಪಕರು ಎಸ್‌ಎಸ್‌ಎಲ್‌ಸಿ, ಪ್ಲಸ್‌ಟು ವಿದ್ಯಾರ್ಥಿಗಳ ಫೊಟೋಗಳನ್ನು ತೆಗೆಯುವುದನ್ನು ನಿಷೇಧಿಸಬೇಕೆಂದು ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಸಮ್ಮೇಳನ ಆಗ್ರಹಿಸಿದೆ. ಮಲೆನಾಡು ವಲಯದಲ್ಲಿ ಕೃಷಿಕರಿಗೆ ಜೀವಹಾನಿ ಬೆದರಿಕೆ ಒಡ್ಡುವ ಕಾಡುಮೃಗಗಳ ಆಕ್ರಮಣದಿಂದ ರಕ್ಷಿಸುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಠರಾವು ಮೂಲಕ ಸಮ್ಮೇಳನ ಆಗ್ರಹಿಸಿದೆ. ಕಾಞಂಗಾಡ್ ವ್ಯಾಪಾರ ಭವನದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಅಸೋಸಿಯೇಶನ್ ಜಿಲ್ಲಾ ಸಮ್ಮೇಳನದಲ್ಲಿ ನಿನ್ನೆ ಪ್ರತಿನಿಧಿ ಸಮ್ಮೇಳನ …

ಸಬ್ ಜೈಲ್‌ನಲ್ಲಿದ್ದ ರಿಮಾಂಡ್ ಆರೋಪಿ ಸಾವು: ನಿಗೂಢತೆ ಆರೋಪ; ಪೊಲೀಸ್ ತನಿಖೆ ಆರಂಭ

ಕಾಸರಗೋಡು:  ಕಾಸರ ಗೋಡು ಸಬ್ ಜೈಲಿನಲ್ಲಿದ್ದ ರಿಮಾಂಡ್ ಆರೋಪಿ ಮೃತಪಟ್ಟ ಘಟನೆ ನಡೆದಿದೆ.  ದೇಳಿ ಕುನ್ನುಪ್ಪಾರದ ದಿ| ಅಬ್ದುಲ್ಲ ಎಂಬವರ ಪುತ್ರ ಮುಬಶೀರ್ (29) ಮೃತಪಟ್ಟ ವ್ಯಕ್ತಿ.  ಶಾರೀರಿಕ ಅಸೌಖ್ಯದ ಹಿನ್ನೆಲೆಯಲ್ಲಿ ಇಂದು ಮುಂಜಾನೆ 5.30ರ ವೇಳೆ ಮುಬಶೀರ್‌ನನ್ನು ಜೈಲು ಅಧಿಕಾರಿಗಳು ಜನರಲ್ ಆಸ್ಪತ್ರೆಗೆ ತಲುಪಿಸಿದ್ದರು.  ಅಷ್ಟರೊಳಗೆ ಸಾವು ಸಂಭವಿಸಿದೆಯೆಂದು ಹೇಳಲಾಗುತ್ತಿದೆ. ಮೃತದೇಹವನ್ನು ಶವಾಗಾರದಲ್ಲಿರಿಸಲಾಗಿದೆ. ಗಲ್ಫ್‌ನಲ್ಲಿದ್ದ ಮುಬಶೀರ್ ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಮರಳಿ ಬಂದಿದ್ದರ. ಮೂರು ವಾರಗಳ ಹಿಂದೆ ಪೋಕ್ಸೋ ಪ್ರಕರಣದಲ್ಲಿ ವಾರಂಟ್ ಇರುವುದಾಗಿ ತಿಳಿಸಿ …

ಕರ್ನಾಟಕ ಸಾರಿಗೆ ಬಸ್‌ನಲ್ಲಿ ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತಿಸಿದ ಕಂಡಕ್ಟರ್ ವಿರೋಧಿಸಿದ ವಿದ್ಯಾರ್ಥಿನಿಯನ್ನು ದಾರಿ ಮಧ್ಯೆ ಇಳಿಸಿ ಪ್ರತೀಕಾರ

ಕುಂಬಳೆ: ಕರ್ನಾಟಕ ರಾಜ್ಯ ಸಾರಿಗೆ ಬಸ್‌ನಲ್ಲಿ ಕಂಡಕ್ಟರ್ ಕಾಲೇಜು ವಿದ್ಯಾರ್ಥಿನಿಯನ್ನು ಸ್ಪರ್ಶಿಸಿ ಅಸಭ್ಯ ರೀತಿಯಲ್ಲಿ ವರ್ತಿಸಿದ ಬಗ್ಗೆ ದೂರ ಲಾಗಿದೆ. ಕಂಡಕ್ಟರ್‌ನ ಅಸಭ್ಯ ವರ್ತನೆಯನ್ನು ಪ್ರಶ್ನಿಸಿದ ವಿದ್ಯಾರ್ಥಿ ನಿಯನ್ನು ದಾರಿ ಮಧ್ಯೆ ಇಳಿಸಿ ಬಸ್ ನೌಕರರು ಪ್ರತೀಕಾರ ತೋರಿಸಿದ್ದಾರೆ. ನಿನ್ನೆ ಬೆಳಿಗ್ಗೆ ೮.೪೫ರ ವೇಳೆ ಘಟನೆ ನಡೆದಿದೆ. ವಿದ್ಯಾರ್ಥಿನಿ ಬಂ ದ್ಯೋಡಿನಿಂದ ಪರೀಕ್ಷೆಗಾಗಿ ಮಂಗಳೂರಿನ ಕಾಲೇಜಿಗೆ ತೆರಳುತ್ತಿದ್ದಳು.  ಟಿಕೆಟ್ ನೀಡಲು  ತಲುಪಿದ ಕಂಡಕ್ಟರ್ ಆಕೆಯನ್ನು ಸ್ಪರ್ಶಿಸಿದ್ದ ನೆನ್ನಲಾಗಿದೆ. ಆತನ ವರ್ತನೆಯನ್ನು ವಿದ್ಯಾರ್ಥಿನಿ ಪ್ರಶ್ನಿಸಿದ್ದು, ಈ ವೇಳೆ ಕಂಡಕ್ಟರ್ …