ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ: ಹೈಯರ್ ಸೆಕೆಂಡರಿ ವಿಭಾಗದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಗೆ ಸಮಗ್ರ ಪ್ರಶಸ್ತಿ : ಹೈಸ್ಕೂಲ್ ವಿಭಾಗದಲ್ಲಿ ಕಾರಡ್ಕ ಶಾಲೆ ಪ್ರಥಮ
ಮುಳ್ಳೇರಿಯ: ಮುಳ್ಳೇರಿಯದಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮ ಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಚಾಂಪ್ಯನ್ ಪಟ್ಟ ಗೆದ್ದುಕೊಂಡಿದೆ. ಈ ಶಾಲೆ ಸತತ ಮೂರನೇ ಬಾರಿ ಚಾಂಪ್ಯನ್ಶಿಪ್ ಗೆದ್ದುಕೊಂಡು ಹ್ಯಾಟ್ರಿಕ್ ಸಾಧನೆಗೈದಿದೆ.ಐದು ದಿನಗಳ ಕಾಲ ನಡೆದ ಕಲೋತ್ಸವದಲ್ಲಿ 243 ಅಂಕ ಗಳಿಸಿ ಚಾಂಪ್ಯನ್ ಪಟ್ಟವನ್ನು ಕಾಟುಕುಕ್ಕೆ ಶಾಲೆ ತನ್ನದಾಗಿಸಿದೆ. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ 203 ಅಂಕಗಳಿಸಿ ದ್ವಿತೀಯ ಸ್ಥಾನ ಪಡೆದು ಕೊಂಡಿದೆ. ಗ್ರೂಪ್ ಸ್ಪರ್ಧೆಗಳಾದ ಚೆಂಡೆ …