ಉದ್ಯೋಗ ಭರವಸೆ ನೀಡಿ ಯುವತಿ, ಯುವಕರು ಸೇರಿ 15ರಷ್ಟು ಮಹಿಳೆಯರಿಗೆ ವಂಚನೆ: ಕಾಸರಗೋಡಿನಲ್ಲೂ ಉದ್ಯೋಗ ವಂಚನೆ ಮಾಫಿಯ ತಂಡ ಸಕ್ರಿಯ
ಹೊಸದುರ್ಗ: ಕಣ್ಣೂರಿನ ಮಿಲಿಟರಿ ಕ್ಯಾಂಟೀನ್‌ನಲ್ಲಿ ಉದ್ಯೋಗ ಭರವಸೆ ನೀಡಿ 1 ಡಜನ್‌ಗಿಂತಲೂ ಹೆಚ್ಚು ಮಹಿಳೆಯರಿಂದ ಸರಾಸರಿ 25,000 ರೂ.ನಂತೆ ಅಪಹರಿಸಿರುವುದಾಗಿ ದೂರಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಓರ್ವ ಉನ್ನತ ಪೊಲೀಸ್ ಅಧಿಕಾರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತನಿಖೆಗಾಗಿ ನೇಮಕಗೊಳಿಸಿದ್ದಾರೆ. ಕಾಞಂಗಾಡ್‌ನ ಖಾಸಗಿ ಸಂಸ್ಥೆಯೊಂದರ ನೌಕರೆ ಅದೇ ಸಂಸ್ಥೆಯ ಇತರ ನೌಕರರಾದ ೧೫ರಷ್ಟು ಮಹಿಳೆಯರನ್ನು ಪ್ರೋತ್ಸಾಹಿಸಿ ಸಿನೋಜ್ ಎಂಬಾತನೊಂದಿಗೆ ಸೇರಿ ವಂಚನೆಗೆ ದಾರಿ ಮಾಡಿರುವುದಾಗಿ ತೃಕರಿಪುರ ಎಡಚ್ಚಾಕೈ ಮಾಚಿಕ್ಕಾಡ್ ಪರಿಸರ ನಿವಾಸಿಗಳಾದ ದೂರುದಾರರು ತಿಳಿಸಿದ್ದಾರೆ. ತೃಕರಿಪುರ ಸಮೀಪ ಪ್ರದೇಶದಲ್ಲಿರುವವರಾಗಿದ್ದಾರೆ ಈ …