ಚೇವಾರು, ಕುಳೂರು ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಪೈವಳಿಕೆ: ಚೇವಾರು ಶ್ರೀ ಶಾರದಾ ಎಯುಪಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಜರಗಿತು. ಪಿಟಿಎ ಅಧ್ಯಕ್ಷ ಅಬ್ದುಲ್ ಅಸೀಸ್ ಚೇವಾರು ಉದ್ಘಾಟಿಸಿದರು. ಮುಖ್ಯೋಪಾಧ್ಯಾಯ ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸಿದರು. ಶಿಕ್ಷಕಿ ರಾಜೇಶ್ವರಿ ಶುಭ ಕೋರಿದರು. ಉಪಜಿಲ್ಲಾ ಮಟ್ಟದ ವಿದ್ಯಾರಂಗ, ವಿಜ್ಞಾನೋತ್ಸವ, ಕ್ರೀಡಾಕೂಟ , ಕಲೋತ್ಸವಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ, ಟ್ರೋಫಿ, ಪ್ರಶಸ್ತಿ ಪತ್ರ ವಿತರಿಸಲಾಯಿತು. ರವಿಕುಮಾರ್ ಸ್ವಾಗತಿಸಿ, ಪ್ರಸಾದ್ ರೈ ವಂದಿಸಿದರು. ರಾಜೇಶ್ವರಿ ಟೀಚರ್ ಸಿಹಿ ಹಂಚಿಸಿದರು. ಪ್ರಮೀಳಾ ಡಿ.ಎನ್., ಗೀತಾಂಜಲಿ, ಸಾತ್ವಿಕ್ ಎನ್., ಹಾರೀಸ್ ಟಿ., ಫಾಯಸ್, …

ಬಿಹಾರದಲ್ಲಿ ಎನ್.ಡಿ.ಎ ಭರ್ಜರಿ ಜಯಭೇರಿಯತ್ತ: ಮಹಾ ಪತನಗೊಂಡ ಮಹಾಘಟ್ ಬಂಧನ್

ಪಾಟ್ನಾ:  ಬಿಹಾರ ರಾಜ್ಯ  ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ ಆರಂಭಗೊಂಡಿರುವಂತೆಯೇ ಬಿಜೆಪಿ ನೇತೃತ್ವದ ಎನ್‌ಡಿಎ ಪ್ರಚಂಡ ಜಯಭೇರಿಯತ್ತ ಸಾಗತೊಡಗಿದೆ. ಆ ಮೂಲಕ ತನ್ನ ಆಡಳಿತವನ್ನು ಮತ್ತೆ ನಿರಾತಂಕವಾಗಿ  ಮುಂದುವರಿಸುವ ಸಾಧ್ಯತೆ ಹೆಚ್ಚಿದೆ.  ಒಟ್ಟು 243 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ವಿಧಾನಸಭೆಯಲ್ಲಿ ಸರಳ ಬಹುಮತ ಪಡೆಯಲು 122 ಸದಸ್ಯರ ಬಲ ಬೇಕಾಗಿದೆ. ಈತನಕ ನಡೆದ ಮತ ಎಣಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 200 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ತನ್ನ ಅಧಿಕಾರವನ್ನು ಪ್ರಚಂಡ ಬಹುಮತದೊಂದಿಗೆ …

ಕೆಲಸ ವೇಳೆ ವಿದ್ಯುತ್ ಕಂಬ ತುಂಡಾಗಿ ಬಿದ್ದು ಕೆಎಸ್‌ಇಬಿ ಗುತ್ತಿಗೆ ನೌಕರ ದಾರುಣ ಮೃತ್ಯು: ನಾಡಿನಲ್ಲಿ ಶೋಕಸಾಗರ

ಮುಳ್ಳೇರಿಯ: ಕೆಲಸ ವೇಳೆ ವಿದ್ಯುತ್ ಕಂಬ ತುಂಡಾಗಿ ಬಿದ್ದು ಕೆಎಸ್‌ಇಬಿಯ ಗುತ್ತಿಗೆ ನೌಕರ ಮೃತಪಟ್ಟ ದಾರುಣ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಕೆಎಸ್‌ಇಬಿ ಮುಳ್ಳೇರಿಯ ಇಲೆಕ್ಟ್ರಿಕಲ್ ಸೆಕ್ಷನ್ ನೌಕರನಾದ ಕುಂಟಾರು ಹುಣಸೆಯಡ್ಕ ನಿವಾಸಿ ಎಚ್. ಯತೀಶ (41) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ 1.30ರ ವೇಳೆ ಕಾರಡ್ಕ ಬಳಿಯ ಮೂಡಾಂಕುಳ ಎಂಬಲ್ಲಿ ದುರ್ಘಟನೆ ಸಂಭವಿಸಿದೆ. ವಿದ್ಯುತ್ ಕಂಬ ಸ್ಥಾಪಿಸಿದ ಬಳಿಕ ಮತ್ತೊಂದು ಕಂಬದಿಂದ ತಂತಿ ಎಳೆದು ಕಟ್ಟುತ್ತಿದ್ದಾಗ ದುರ್ಘಟನೆ ಉಂಟಾಗಿದೆ. ಈ ವೇಳೆ ಯತೀಶ ಕಂಬದ …

ವಿವಾಹಿತ ಯುವತಿ ಬಸ್ ಕಂಡಕ್ಟರ್‌ನೊಂದಿಗೆ ಪರಾರಿ

ಕಣ್ಣೂರು: ವಿವಾಹಿತ ಯುವತಿ  ಬಸ್ ಕಂಡಕ್ಟರ್‌ನೊಂದಿಗೆ ಪರಾರಿಯಾದ ಬಗ್ಗೆ ದೂರಲಾಗಿದೆ. ಕಣ್ಣೂರು ಬಳಿಯ ಕಣ್ಣವಂ ನೆಡುಂಪೊಯಿಲ್ ಪುಳಕುಟ್ಟಿ ನಿವಾಸಿಯಾದ ೨೪ರ ಹರೆಯದ ಯುವತಿ ನಾಪತ್ತೆಯಾಗಿದ್ದಾಳೆ. ಕಳೆದ ಬುಧವಾರ ಮಧ್ಯಾಹ್ನ 1.30ರ ವೇಳೆ ಈಕೆ ಮನೆಯಿಂದ ಹೊರಗೆ ಹೋಗಿದ್ದಳೆನ್ನಲಾಗಿದೆ. ಅನಂತರ ಮನೆಗೆ ಮರಳಿ ತಲುಪಿಲ್ಲವೆಂದು ತಿಳಿಸಿ  ಪುಳತ್ತುಂಕರ ನಿವಾಸಿಯಾದ ಪತಿ ಕಣ್ಣವಂ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ನಡೆಸಿದ ತನಿಖೆ ವೇಳೆ ಯುವತಿ ಖಾಸಗಿ ಬಸ್‌ನ ಕಂಡಕ್ಟರ್‌ನೊಂದಿಗೆ ಪರಾರಿಯಾಗಿರು ವುದಾಗಿ ತಿಳಿದು ಬಂದಿದೆ. 

ಕರಾಟೆ ಕಲಿಯಲು ಬಂದ ಬಾಲಕಿಗೆ ಕಿರುಕುಳ ಯತ್ನ: ತರಬೇತುದಾರನ ವಿರುದ್ಧ ಕೇಸು

ಹೊಸದುರ್ಗ: ಕರಾಟೆ ಕಲಿಯಲು ಬಂದ 14ರ ಹರೆಯದ ಬಾಲಕಿಗೆ ತರಬೇತುದಾರ ಕಿರುಕುಳ ನೀಡಲೆತ್ನಿಸಿದ ಬಗ್ಗೆ ದೂರಲಾಗಿದೆ. ಈ ಸಂಬಂಧ ತರಬೇತುದಾರನಾದ ಮುರಾಳ ಎಂಬಲ್ಲಿನ ಟಿ.ಕೆ. ಪ್ರಸನ್ನ ಎಂಬಾತನ ವಿರುದ್ಧ ತಳಿಪರಂಬ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ತಳಿಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಯಾದ ಬಾಲಕಿಗೆ ಈತ ಕಳೆದ ಜನವರಿ ತಿಂಗಳಲ್ಲಿ ವಳ್ಳಕ್ಕೀಲ್ ಪಾರ್ಕ್‌ನಲ್ಲಿ  ಕಿರುಕುಳ ನೀಡಲೆತ್ನಿಸಿ ರುವುದಾಗಿ ಆರೋಪಿಸಲಾಗಿದೆ.

ನಾಮನಿರ್ದೇಶನ ಪತ್ರಿಕೆ ಮಲೆಯಾಳದಲ್ಲಿ : ಕನ್ನಡಿಗ ಅಭ್ಯರ್ಥಿಗಳಿಗೆ ಸಮಸ್ಯೆ

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸುವವರು ಸಲ್ಲಿಸುವ ನಾಮನಿರ್ದೇಶನ ಪತ್ರಿಕೆಯು ಕೇವಲ ಮಲೆಯಾಳ ಭಾಷೆಯಲ್ಲಿ ಮಾತ್ರವೇ ಮುದ್ರಣಗೊಂಡಿದೆ. ಇದರಿಂದ ಜಿಲ್ಲೆಯ ಕನ್ನಡ ಅಭ್ಯರ್ಥಿಗಳಿಗೆ ಸಮಸ್ಯೆ ಎದುರಾಗಿದೆ. ಮಲೆಯಾಳ ಓದಲು, ಬರೆಯಲು ತಿಳಿಯದ ಕನ್ನಡಿಗರಾದ ಅಭ್ಯರ್ಥಿಗಳು ನಾಮನಿರ್ದೇಶನ ಪತ್ರಿಕೆಯನ್ನು ಭರ್ತಿಗೊಳಿಸುವುದು ಹೇಗೆ ಎಂಬ ಆತಂಕ ಎದುರಾದ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ನಾಮನಿರ್ದೇಶನ ಪತ್ರಿಕೆಯಲ್ಲಿ ಹಲವು ಮಾಹಿತಿಗಳನ್ನು ದಾಖಲಿಸಬೇಕಾಗಿದೆ. ಆದರೆ ಮಲೆಯಾಳ ತಿಳಿಯದವರು ಫಾರ್ಮ್ ಭರ್ತಿಗೊಳಿಸುವ ವೇಳೆ ಎಲ್ಲಾದರೂ ಎಡವಟ್ಟಾದರೆ ಕೆಲವೊಮ್ಮೆ ನಾಮಪತ್ರ ತಿರಸ್ಕರಿಸಲ್ಪಡುವ ಸಾಧ್ಯತೆ ಇದೆ. ಅಲ್ಲದೆ ಭವಿಷ್ಯದಲ್ಲಿ …

ಟಯರ್ ಪಂಕ್ಚರ್ ಆಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗುಚಿ ಬಿದ್ದ ಲಾರಿ: ಚಾಲಕ ಪಾರು

ಕಾಸರಗೋಡು: ಕಲ್ಲಿಕೋಟೆ ಭಾಗದಿಂದ ಉಳ್ಳಾಲಕ್ಕೆ ಹೋಗುತ್ತಿದ್ದ ಮೀನು ಹೇರಿದ ಲಾರಿ ಮೊಗ್ರಾಲ್  ಪುತ್ತೂರು  ರಾಷ್ಟ್ರೀಯ ಹೆದ್ದಾರಿಯಲ್ಲಿ ಟಯರ್ ಪಂಕ್ಚರ್ ಆಗಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ನಿನ್ನೆ ರಾತ್ರಿ ೮ ಗಂಟೆಗೆ ನಡೆದಿದೆ. ಲಾರಿಮಗುಚಿಬಿದ್ದ ಪರಿಣಾಮ ಅದರಲ್ಲಿದ್ದ ಮೀನು ರಸ್ತೆಯಿಡೀ ಚೆಲ್ಲಾಪಿಲ್ಲಿಯಾಗಿ ಬಿದ್ದವು.  ಲಾರಿಯಲ್ಲಿ ಚಾಲಕ ಮಾತ್ರವೇ ಇದ್ದು ಅವರು ಅದೃಷ್ಟವಶಾತ್ ಸಂಭಾವ್ಯ ಭಾರೀ ಅನಾಹುತದಿಂದ  ಪಾರಾಗಿದ್ದಾರೆ. ವಡಗರೆ ನಿವಾಸಿ ವಿಜಿನ್ ಕುಮಾರ್ (35)  ಈ ಅಪಾಯದಿಂದ ಪಾರಾದ ಲಾರಿ ಚಾಲಕ. ಮೀನು ಲಾರಿ ಮಗುಚಿಬಿದ್ದ …

ಎಡಿಎಂ ನವೀನ್‌ಬಾಬು ಸಾವು: ತನಿಖೆ ನಡೆಸಿದ ಕಣ್ಣೂರು ಮಾಜಿ ಎಸಿಪಿ ಸಿಪಿಎಂ ಅಭ್ಯರ್ಥಿ

ಕಣ್ಣೂರು: ಕಣ್ಣೂರು ಎಡಿಎಂ ಆಗಿದ್ದ ನವೀನ್‌ಬಾಬು ಅವರ ಸಾವಿನ ಕುರಿತು ತನಿಖೆ ನಡೆಸಿದ ಮಾಜಿ ಎ.ಸಿ.ಪಿ. ಟಿ.ಕೆ. ರತ್ನಕುಮಾರ್ ಕಣ್ಣೂರಿನಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಶ್ರೀಕಂಠಪುರ ನಗರಸಭೆಯ ಕೋಟೂರು ವಾರ್ಡ್‌ನಿಂದ ಇವರನ್ನು ಕಣಕ್ಕಿಳಿಸಲು ಸಿಪಿಎಂ ನಿರ್ಧರಿಸಿದೆ. ಕಣ್ಣೂರು ರೇಂಜ್ ಐ.ಜಿ.ಯವರ ನೇತೃತ್ವದಲ್ಲಿ ಸಿಟಿ ಪೊಲೀಸ್ ಕಮಿಶನರ್ ಅಜಿತ್ ಕುಮಾರ್, ಅಸಿಸ್ಟೆಂಟ್ ಕಮಿಶನರಾಗಿದ್ದ ರತ್ನಕುಮಾರ್ ಎಂಬಿವರ ನೇತೃತ್ವದಲ್ಲಿ ನವೀನ್‌ಬಾಬು ಅವರ ಸಾವಿನ ಕುರಿತು ತನಿಖೆ ನಡೆಸಲಾಗಿತ್ತು. ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾದ ಪಿ.ಪಿ. ದಿವ್ಯಾ ಈ …

ಬೃಹತ್ ಪ್ರಮಾಣದ ವಾಶ್, ಮದ್ಯ ವಶ: ಓರ್ವನ ವಿರುದ್ಧ ಕೇಸು ದಾಖಲು

ಕಾಸರಗೋಡು: ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಸಿ.ಕೆ.ವಿ. ಸುರೇಶ್‌ರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಸಲೆಂದು ಸಿದ್ಧಪಡಿಸಿಡಲಾಗಿದ್ದ 260 ಲೀಟರ್ ಹುಳಿರಸ ಮತ್ತು 10 ಲೀಟರ್ ಕಳ್ಳಭಟ್ಟಿ ಸಾರಾಯಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮಾಲೋಂ ಗ್ರಾಮದ ಎಡಕಾನ ನಿವಾಸಿ ಸಿನೋಜ್ ಎಂ.ಬಿ. ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ಮಾಲೋಂ ಎಡಕಾನದಲ್ಲಿ ಈ ಅಬಕಾರಿ ಕಾರ್ಯಾಚರಣೆ ನಡೆದಿದೆ. …

ರಸ್ತೆ ಬದಿ ವಿಶ್ರಾಂತಿ ನಿಲ್ದಾಣ ಯೋಜನೆ: ಮಂಜೇಶ್ವರದ ಸಮಗ್ರ ಅಭಿವೃದ್ಧಿ ಗುರಿ

ಮಂಜೇಶ್ವರ: ಮಂಜೇಶ್ವರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೆರವಾಗಬಹುದಾದ ಬೃಹತ್ ಯೋಜನೆಯೊಂದಕ್ಕೆ ಚಾಲನೆ ನೀಡಲಾಗಿದೆ. ಸುಮಾರು ೩೫ ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಕಿಫ್‌ಬಿ ಸಹಾಯದೊಂದಿಗೆ ಕಾರ್ಯ ಗತಗೊಳಿಸುವ ಈ ಯೋಜನೆಗೆ ಇತ್ತೀಚೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡಿದರು.  ಸಂಯೋಜಿತ ಚೆಕ್ ಪೋಸ್ಟ್ ಗಾಗಿ ಮೀಸಲಿಟ್ಟ ಮಂಜೇಶ್ವರದ ಸ್ಥಳದಲ್ಲಿ ವಿಶ್ರಾಂತಿ ನಿಲ್ದಾಣದ ಬೃಹತ್ ಯೋಜನೆ ಜ್ಯಾರಿಗೆ ಬರಲಿದೆ. ಹೊಸಂಗಡಿ ಮತ್ತು ವಾಮಂಜೂರು ಚೆಕ್ ಪೋಸ್ಟ್ ನಡುವಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಭೂಮಿಯಲ್ಲಿ ಈ ಯೋಜನೆ ಕಾರ್ಯಗತಗೊಳ್ಳಲಿದೆ. ಓವರ್‌ಸೀಸ್ …