ಪೆಟ್ರೋಲಿಯಂ, ಗ್ಯಾಸ್ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೇತನ ಹೆಚ್ಚಳ ಕೂಡಲೇ ಜ್ಯಾರಿಗೊಳಿಸಲು ಬಿಎಂಎಸ್ ಆಗ್ರಹ
ಕಾಸರಗೋಡು: ಭಾರತೀಯ ಮಜ್ದೂರು ಸಂಘದ ಪೋಷಕ ಸಂಘಟನೆಯಾದ ಪೆಟ್ರೋಲಿಯಂ ಆಂಡ್ ಗ್ಯಾಸ್ ಮಜ್ದೂರ್ ಸಂಘ್ ಜಿಲ್ಲಾ ಸಮ್ಮೇಳನದಲ್ಲಿ ಕಾರ್ಮಿಕರಿಗೆ ವೇತನ ಹೆಚ್ಚಳ ಕೂಡಲೇ ಜ್ಯಾರಿಗೊಳಿಸಬೇಕೆಂದು ಬೇಡಿಕೆ ಒಡ್ಡಲಾಯಿತು. ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರನ್ ಬಂಗಳೋತ್ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಪೆಟ್ರೋಲಿಯಂ, ಗ್ಯಾಸ್ ವಲಯದ ಲಾರಿ ಕಾರ್ಮಿಕರಿಗಾಗಿ ಪ್ರಸ್ತುತ ಇರುವ ಒಪ್ಪಂದ ಪ್ರಕಾರದ ವೇತನ ಕಾಸರಗೋಡು ಜಿಲ್ಲೆಯಲ್ಲಿ ಲಭ್ಯಗೊಳಿಸಲಾಗುತ್ತಿಲ್ಲವೆಂದು ಆರೋಪಿಸಿದರು. ಒಪ್ಪಂದ ಪ್ರಕಾರವಿರುವ ವೇತನ ಹಾಗೂ ಇತರ ಸೌಲಭ್ಯಗಳನ್ನು ಕಾರ್ಮಿಕರಿಗೆ ಶೀಘ್ರವೇ ಲಭ್ಯಗೊಳಿಸಬೇಕೆಂದು ಅವರು ಆಗ್ರಹಿಸಿದರು. ಕಂಪೆನಿಗಳು …