ಗುರುಸ್ವಾಮಿ ನಿಧನ

ಮುಳ್ಳೇರಿಯ: ಕುಂಟಾರು ಶ್ರೀ ಅಯ್ಯಪ್ಪ ಭಜನಾ ಮಂದಿರದ ಗುರು ಸ್ವಾಮಿ, ಜಗತ್ತಾಪ್ ಮನೆತನದ ಎಲಿಕ್ಕಳ ದೇವರ ಮನೆಯ ಹಿರಿಯ ರಾದ ಯಾದವ ರಾವ್(68) ನಿನ್ನೆ ನಿಧನರಾದರು. ಅನಾರೋಗ್ಯ ತಗಲಿ ಚಿಕಿತೆ್ಸಯಲ್ಲಿ ದ್ದರು. ಆದೂರು ಗೇರು ಸಂತತಿ ತೋಟದ ಕಾರ್ಮಿಕರಾಗಿ ನಿವೃತ್ತರಾದ ಇವರು ಗಣೇಶ ವಿಗ್ರಹ ತಯಾರಿಯಲ್ಲಿ ನಿಷ್ಣಾತರೂ, ಯಕ್ಷ ಗಾನ ಕಲಾವಿದರೂ ಆಗಿದ್ದರು. 30 ಬಾರಿ ಶ್ರೀ ಶಬರಿಮಲೆ ಯಾತ್ರೆ ಕೈಗೊಂಡಿ ದ್ದರು. ಪತ್ನಿ ವಿಮಲ, ಮಕ್ಕಳಾದ ನಯನ, ಕವಿತ, ಅಳಿಯ ಗಿರಿಪ್ರಸಾದ್, ಸೊಸೆ ದಿವ್ಯಾ ಹಾಗೂ …

ಪನಯಾಲ್ ನಿವಾಸಿಯ 8 ಲಕ್ಷ ರೂ. ಲಪಟಾವಣೆ: ವೀಸಾ ವಂಚನೆ ಆರೋಪಿ ವಿರುದ್ಧ ಬೇಕಲ ಠಾಣೆಯಲ್ಲೂ ಕೇಸು

ಕಾಸರಗೋಡು: ವೀಸಾ ಭರವಸೆಯೊಡ್ಡಿ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಪ್ರಕರಣದಲ್ಲಿ ಸೆರೆಗೀಡಾದ ನೀಲೇಶ್ವರ ಚಿರಪ್ಪುರಂ ಪಾಲಕ್ಕಾಟ್‌ನ ಉಲ್ಲಾಸ್ ಕುಞಂಬು (40) ಎಂಬಾತನ ವಿರುದ್ಧ ಬೇಕಲ ಪೊಲೀಸ್ ಠಾಣೆಯಲ್ಲೂ ಕೇಸು ದಾಖಲಿಸಲಾಗಿದೆ. ಪನಯಾಲ್ ದೇವನ್‌ಪೊಡಿಚ್ಚಪ್ಪಾರದ ಎಂ. ಗೋಪ ಕುಮಾರ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಫಿನ್‌ಲ್ಯಾಂಡ್ ವೀಸಾ ನೀಡುವುದಾಗಿ ತಿಳಿಸಿ ಹಲವು ಬಾರಿಯಾಗಿ 8 ಲಕ್ಷ ರೂಪಾಯಿಗಳನ್ನು ಪಡೆದು ವಂಚಿಸಿರುವುದಾಗಿ ಗೋಪ ಕುಮಾರ್ ಆರೋಪಿಸಿದ್ದಾರೆ. 2023 ಸೆಪ್ಟಂಬರ್‌ನಿಂದ ಹಲವು ಬಾರಿಯಾಗಿ ಬ್ಯಾಂಕ್ ಖಾತೆ   ಹಾಗೂ ಗೂಗಲ್ …

‘ನಗ್ನ ಫೋಟೋ ನೀಡಿದರೆ ಸಿನಿಮಾದಲ್ಲಿ ಅವಕಾಶ’ ಬಾಲಕಿಗೆ ಸಂದೇಶ ಕಳುಹಿಸಿದ ವ್ಯಕ್ತಿ ಸೆರೆ

ಕಾಸರಗೋಡು: ಸಿನಿಮಾದಲ್ಲಿ ಅವಕಾಶವೊದಗಿಸುವುದಾಗಿ ತಿಳಿಸಿ ಬಾಲಕಿಯ ನಗ್ನ ಚಿತ್ರಗಳನ್ನು ಕೇಳಿದ ಯುವಕ ಸೆರೆಗೀಡಾಗಿದ್ದಾನೆ. ಕಾಸ ರಗೋಡು ಕಾಟಿಪಳ್ಳ ನಾರಾಯಣೀ ಯಂನ ಶಿಬಿನ್ (29) ಎಂಬಾತನನ್ನು ಕಲ್ಲಿಕೋಟೆ ಬೇಪೂರು ಪೊಲೀಸರು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ.  ಬೇಪೂರು ನಿವಾಸಿಯಾದ 10ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ತಾನು ಸಿನಿಮಾ ನಿರ್ದೇಶಕನೆಂದು ತಿಳಿಸಿ ಆರೋಪಿ ಸಿನಿಮಾದಲ್ಲಿ ಅಭಿನ ಯಿಸಲು ಅವಕಾಶ ಒದಗಿಸುವು ದಾಗಿಯೂ ಅದಕ್ಕಾಗಿ ನಗ್ನ ಫೋಟೋಗಳನ್ನು ನೀಡುವಂತೆ ತಿಳಿಸಿ ಬಾಲಕಿಗೆ ಫೋನ್ ಕರೆ ಮಾಡಿ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದ್ದಾನೆನ್ನಲಾಗಿದೆ. ಈ ಬಗ್ಗೆ  …

ಭೂತಾನ್‌ನಿಂದ ಕಾರು ಸಾಗಾಟ : ಇ.ಡಿ. ತನಿಖೆ ಆರಂಭ ; ಹಲವರಿಗೆ ನೋಟೀಸ್

ಕೊಚ್ಚಿ: ಭೂತಾನ್‌ನಿಂದ ಕಾರುಗಳನ್ನು ಅನಧಿಕೃತವಾಗಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಎನ್‌ಫೋರ್ಸ್‌ಮೆಂಟ್ ಡೈರಕ್ಟರೇಟ್ ತನಿಖೆ ಆರಂಭಿಸಿದೆ. ರಾಜ್ಯದ 17 ಕಡೆಗಳಲ್ಲಾಗಿ ಕಸ್ಟಮ್ಸ್ ಪ್ರಿವೆಂಟಿವ್ ವಿಭಾಗ ನಡೆಸಿದ ತನಿಖೆಯ ಮುಂದುವರಿಕೆಯಾಗಿ ಇ.ಡಿ ತನಿಖೆ ನಡೆಸಲಿದೆ. ನಕಲಿ ದಾಖಲೆಪತ್ರಗಳನ್ನು ಸಲ್ಲಿಸಿ ಕಾರು ಗಳನ್ನು ಆಮದುಮಾಡಿಕೊಳ್ಳಲಾಗಿದೆ ಎಂದು ಪತ್ತೆಯಾದ ಹಿನ್ನೆಲೆಯಲ್ಲಿ ನಟ ಅಮಿತ್ ಚಕ್ಕಾಲಯ್ಕಕಲ್ ಸಹಿತ ಕೆಲವರಿಗೆ ತನಿಖಾ ತಂಡ ನೋಟೀಸ್ ಜ್ಯಾರಿಗೊಳಿಸಿದೆ. ನಟ ದುಲ್ಕರ್‌ಗೂ ನೋಟೀಸು ನೀಡಲು ನಿರ್ಧರಿಸಿರುವುದಾಗಿ ಹೇಳಲಾಗು ತ್ತಿದೆ. ನಕಲಿ ದಾಖಲೆ ಪತ್ರಗಳನ್ನು ಸಲ್ಲಿಸಿ ಭಾರತಕ್ಕೆ ವಾಹನಗಳನ್ನು ತಲುಪಿಸಿದ …

ನಷ್ಟ ಪರಿಹಾರ ನೀಡದೆ ರಾಷ್ಟ್ರೀಯ ಹೆದ್ದಾರಿಗಾಗಿ ಮನೆ ವಶ ಜಿಲ್ಲಾಧಿಕಾರಿಯಿಂದ ಸ್ಪಷ್ಟೀಕರಣ ಕೇಳಿದ ಮಾನವಹಕ್ಕು ಆಯೋಗ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ನಷ್ಟ ಪರಿಹಾರ ನೀಡದೆ ಅಥವಾ ಪುನರ್ವಸತಿ ಖಚಿತಪಡಿಸದೆ ಸ್ಥಳ ವಶಪಡಿಸಲಾಗಿದೆ ಎಂಬ ದೂರಿನಂತೆ ಕಾಸರಗೋಡು ಜಿಲ್ಲಾಧಿಕಾರಿ ಎರಡು ವಾರದೊಳಗೆ ಸ್ಪಷ್ಟೀಕರಣ ನೀಡುವಂತೆ ತಿಳಿಸಿ ಮಾನವ ಹಕ್ಕು ಆಯೋಗ ಜ್ಯುಡೀಶ್ಯಲ್ ಸದಸ್ಯ ಕೆ. ಬೈಜುನಾಥ್ ನಿರ್ದೇಶಿಸಿದ್ದಾರೆ. ಚೆಂಗಳ ತೆಕ್ಕಿಲ್‌ಫೆರಿ ನಿವಾಸಿಗಳಾದ ಸಿ.ಎಂ. ಮಿಸ್ರಿಯ, ಕೆ. ಕೌಲತ್ ಎಂಬಿವರು ಸಲ್ಲಿಸಿದ ದೂರಿನಲ್ಲಿ ಆಯೋಗ ಈ ನಿರ್ದೇಶ ಹೊರಡಿಸಿದೆ. ಹೈಕೋರ್ಟ್‌ನ ಆದೇಶವನ್ನು ಪರಿಗಣಿಸದೆ 2025 ಮಾರ್ಚ್ 22ರಂದು ಸ್ಪೆಷಲ್ ಡೆಪ್ಯುಟಿ ಕಲೆಕ್ಟರ್‌ರ ನೇತೃತ್ವದಲ್ಲಿ ಮನೆಗೆ ತಲುಪಿದ …

ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗುಚಿಬಿದ್ದ ಸರಕುಲಾರಿ

ಕಾಸರಗೋಡು: ನಿರ್ಮಾಣ ಕಾಮಗಾರಿ ನಡೆಯುತ್ತಿರುವ ತೆಕ್ಕಿಲ್‌ಫೆರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಣ್ಣೂರು ಭಾಗದಿಂದ ಮಂಗಳೂರಿ ನತ್ತ ಸಾಗುತ್ತಿದ್ದ ಸರಕು ಲಾರಿಯೊಂದು ನಿಯಂತ್ರಣ ತಪ್ಪಿಮಗುಚಿ ಬಿದ್ದ ಘಟನೆ ನಿನ್ನೆ ರಾತ್ರಿ ನಡೆದಿದೆ. ಈ ಅಪಘಾ ತದಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯಉಂಟಾಗಿಲ್ಲ. ಇದೇ ಜಾಗದಲ್ಲಿ ಕಳೆದ ಗುರುವಾರ ಸರಣಿ ವಾಹನ ಅಪಘಾತ ನಡೆದಿತ್ತು. ಸರಕು ಲಾರಿಯೊಂದು ಖಾಸಗಿ ಬಸ್ಸಿನ  ಹಿಂದುಗಡೆ ಢಿಕ್ಕಿ ಹೊಡೆದು 19 ಮಂದಿ ಪ್ರಯಾಣಿ ಕರು ಗಾಯಗೊಂಡಿದ್ದರು. ಮಾತ್ರವಲ್ಲದೆ ಢಿಕ್ಕಿಯ ಆಘಾತದಿಂದ ಬಸ್‌ನ ಎದುರುಗಡೆ ಇದ್ದ ಇನ್ನೊಂದು ಸರಕು …

ಸ್ಥಳೀಯಾಡಳಿತ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ

ಕಾಸರಗೋಡು: ದಶಂಬರ್ 11ರಂದು ನಡೆಯಲಿರುವ ಸ್ಥಳೀಯಾಡಳಿತ ಚುನಾವಣೆಗೆ ಪಂಚಾಯತ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ಮೊದಲ ಹಂತದ ಯಾದಿಯನ್ನು ವಿವಿಧ ಪಂಚಾಯತ್ಗಳಲ್ಲಿ ಪ್ರಕಟಿಸಲಾಗಿದೆ. ಕಾಸರಗೋಡು ನಗರಸಭೆ, ಮಧೂರು, ಮೊಗ್ರಾಲ್ ಪುತ್ತೂರು, ಮಡಿಕೈ, ಮೀಂಜ, ವರ್ಕಾಡಿ, ಅಜಾನೂರು, ಬದಿಯಡ್ಕ, ತೃಕರಿಪುರ, ಪಡನ್ನ, ಪಿಲಿಕ್ಕೋಡ್, ಈಸ್ಟ್ ಎಳೇರಿ, ವೆಸ್ಟ್ ಎಳೇರಿ, ಕಿನಾನೂರು ಕರಿಂದಳ ಮೊದಲಾದ ಪಂಚಾಯತ್ ಹಾಗೂ ನೀಲೇಶ್ವರ ನಗರಸಭೆಗಳ ಸ್ಪರ್ಧಾಳುಗಳ ಹೆಸರನ್ನು ಪ್ರಕಟಿಸಲಾಗಿದೆ.ಮೀಂಜ ಪಂಚಾಯತ್ ಹಾಗೂ ವರ್ಕಾಡಿ ಪಂಚಾಯತ್ನಲ್ಲಿ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಪ್ರಥಮ ಹಂತದ ಯಾದಿಯನ್ನು ಬಿಜೆಪಿ …

ಕುಂಬಳೆ ಪಂಚಾಯತ್ ಸಿಪಿಎಂ ಪ್ರಚಾರ ಸಮಾವೇಶ ಇಂದು: ಅಭ್ಯರ್ಥಿಗಳ ಯಾದಿ ಪ್ರಕಟ

ಕುಂಬಳೆ: ಕಳೆದ ಐದು ದಶಕಗಳಿಂದ ಪಂಚಾಯತ್ ಆಡಳಿತ ನಡೆಸುತ್ತಿರುವ ಐಕ್ಯರಂಗದ ಆಡಳಿತ ಸಮಿತಿ ಎಲ್ಲಾ ವಲಯಗಳಲ್ಲೂ ಅಭಿವೃದ್ಧಿರಹಿತ ಕೇರಳದ ಹಿಂದುಳಿದ ಪಂಚಾಯತ್ ಆಗಿ ಕುಂಬಳೆಯನ್ನು ಬದಲಿಸಿದೆ ಎಂದು ಎಡರಂಗ ಪಂಚಾಯತ್ ಸಮಿತಿ ಪದಾಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ವಿರೋಧ ಪಕ್ಷವಾದ ಬಿಜೆಪಿ ಐಕ್ಯರಂಗದ ಭ್ರಷ್ಟಾಚಾರ ವಿಷಯದಲ್ಲಿ ಮೌನ ಪಾಲಿಸುತ್ತಿದೆ ಎಂದು ಅವರು ಆರೋಪಿಸಿದರು. ಬಸ್ ತಂಗುದಾಣ, ಬೀದಿ ಬದಿ ವಿಶ್ರಾಂತಿ ಕೇಂದ್ರ, ಹೊಯ್ಗೆ ಕಡವ್ ಎಂಬಿವುಗಳಲ್ಲಿ ಭ್ರಷ್ಟಾಚಾರ ದಿಂದ ಆಡಳಿತ ಸಮಿತಿ ನಾಚಿಕೆ ಹೊಂದಿ ಚುನಾವಣೆಯನ್ನು ಎದುರಿಸ ಲಾಗದ …

ಕುಂಬಳೆ ಪಂಚಾಯತ್ ಎಸ್‌ಡಿಪಿಐ ಅಭ್ಯರ್ಥಿಗಳು

ಕುಂಬಳೆ: ಪಂಚಾಯತ್‌ನಿಂದ ಸ್ಪರ್ಧಿಸುವ ಎಸ್‌ಡಿಪಿಐ ಅಭ್ಯರ್ಥಿಗಳ ಮೊದಲ ಹಂತದ ಯಾದಿಯನ್ನು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರು ಬಿಡುಗಡೆಗೊಳಿಸಿದರು. ವಾರ್ಡ್ 1 ಕುಂಬೋಳ್‌ನಲ್ಲಿ ರುಖಿಯ ಅನ್ವರ್,  ಕಕ್ಕಳಂಕುನ್ (3)ನಲ್ಲಿ ನಾಸರ್ ಬಂಬ್ರಾಣ, ರೈಲ್ವೇ ಸ್ಟೇಷನ್ (18)- ಫಹೀಮ ನೌಷಾದ್,  ಬದ್ರಿಯಾನಗರ್ (20)- ಅನ್ವರ್ ಆರಿಕ್ಕಾಡಿ ಸ್ಪರ್ಧಿಸುವರು. ಈ ಬಗ್ಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಖಾದರ್ ಅರಫ, ಮಂಜೇಶ್ವರ ಮಂಡಲ ಕಾರ್ಯದರ್ಶಿ ಶಬೀರ್, ಕುಂಬಳೆ ಪಂ. ಕಾರ್ಯದರ್ಶಿ ಶಾನಿಫ್ ಮೊಗ್ರಾಲ್, ಕೋಶಾಧಿಕಾರಿ ನೌಶಾದ್ ಮನ್ಸೂರ್ ಭಾಗವಹಿಸಿದರು.

ಪ್ರತಾಪನಗರದಲ್ಲಿ ಭರದಿಂದ ಸಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ

ಉಪ್ಪಳ: ಸ್ಥಳೀಯಾಡಳಿತ ಚುನಾವಣೆ ಡಿ.11ರಂದು ನಡೆಯಲಿ ರುವಂತೆ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್ಗಳಲ್ಲಿ ಅಭಿವೃದ್ದಿ ಕಾಮಗಾರಿ ನಡೆಯುತ್ತಿದೆ. 7ನೇ ವಾರ್ಡ್ ಪ್ರತಾಪನಗರದಲ್ಲಿ ಹಲವಾರು ರಸ್ತೆಗಳ ಅಭಿವೃದ್ದಿ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಸೋಂಕಾಲು ಪ್ರತಾಪನಗರ ರಸ್ತೆ 73 ಮೀಟರ್ ಕಾಂಕ್ರೀಟ್, ಸಮೀಪದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣ ಹಾಗೂ ಪುಳಿಕುತ್ತಿ ಸೋಂಕಾಲು ಕ್ರಾಸ್ ರಸ್ತೆಯ 85 ಮೀಟರ್ ಐದು ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್, ಗುಳಿಗ ಬನ ಪರಿಸರದಲ್ಲಿ …