ರಸ್ತೆಯಲ್ಲಿ ಉಪೇಕ್ಷಿಸುತ್ತಿರುವ ತ್ಯಾಜ್ಯ ರಾಶಿ:  ನಾಯಿಗಳ ಉಪಟಳದಿಂದ ಸಮಸ್ಯೆ

ಉಪ್ಪಳ: ವಿವಿಧೆಡೆಗಳಿಂದ ತ್ಯಾಜ್ಯವನ್ನು ತಂದು ರಸ್ತೆ ಬದಿ ಉಪೇಕ್ಷಿಸುತ್ತಿರುವುದು ವ್ಯಾಪಕಗೊಂಡಿದ್ದು, ಇದರ ದುರ್ವಾಸನೆಯಿಂದ  ಸ್ಥಳೀಯರಿಗೆ ಹಾಗೂ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿದೆ. ಕೈಕಂಬ-ಬಾಯಾರು ರಸ್ತೆಯ ಬೇಕೂರು ವಿದ್ಯಾತ್ ಸಬ್‌ಸ್ಟೇಶನ್ ಪರಿಸರದ ರಸ್ತೆಯಲ್ಲಿ ಕಳೆದ ಹಲವು ತಿಂಗಳುಗಳಿಂದ ಪ್ಲಾಸ್ಟಿಕ್ ಚೀಲದಲ್ಲಿ ಪ್ಲಾಸ್ಟಿಕ್ ಸಹಿತ ಆಹಾರ ತ್ಯಾಜ್ಯವನ್ನು ಉಪೇಕ್ಷಿಸುತ್ತಿರುವುದಾಗಿ ದೂರಲಾಗಿದೆ. ಇದರಿಂದ ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಮಾತ್ರವಲ್ಲ ತ್ಯಾಜ್ಯವನ್ನು ತಿನ್ನಲು ನಾಯಿಗಳು ಗುಂಪು ಸೇರುತ್ತಿರುವುದರಿಂದ ನಡೆದು ಹೋಗುವ ಶಾಲಾ ವಿದ್ಯಾರ್ಥಿಗಳ ಸಹಿತ ಮಕ್ಕಳು, ಮಹಿಳೆಯರು ಆತಂಕಗೊಂಡಿದ್ದಾರೆ.  ನಾಯಿಗಳು …

ಜಿಲ್ಲೆಯ ಅರಣ್ಯ ಗಡಿ ಪ್ರದೇಶಗಳಲ್ಲಿ ಸೌರ ವಿದ್ಯುತ್ ಚಾಲಿತ ಬೇಲಿ ನಿರ್ಮಾಣ ಕೆಲಸವನ್ನು ಈ ವರ್ಷದೊಳಗೆ ಪೂರ್ತೀಕರಿಸಲಾಗುವುದು- ಸಚಿವ

ಕಾಸರಗೋಡು: ಜಿಲ್ಲೆಯ ಅರಣ್ಯ  ಗಡಿ ಪ್ರದೇಶಗಳಲ್ಲಿ ಸೌರ ವಿದ್ಯುತ್ ಚಾಲಿತ ಬೇಲಿಗಳ ನಿರ್ಮಾಣ ಕೆಲಸ ವನ್ನು ಈ ವರ್ಷಗೊಳಗಾಗಿ ಪೂರ್ತೀ ಕರಿಸಿ ಆ ಮೂಲಕ ಕಾಸರ ಗೋಡನ್ನು ಸಂರಕ್ಷಿತ ಜಿಲ್ಲೆಯನ್ನಾಗಿ ಸಲಾಗುವು ದೆಂದು ಅರಣ್ಯ ಖಾತೆ ಸಚಿವ ಎ.ಕೆ. ಶಶೀಂದ್ರನ್ ತಿಳಿಸಿದ್ದಾರೆ. ಮನುಷ್ಯ ವನ್ಯಜೀವಿ ಸಂಘರ್ಷ ಸರಳೀಕರಿಸಲು ರೂಪು ನೀಡಲಾಗಿರುವ ನಿಯಂತ್ರಣ ಸಮಿತಿಯ ಜಿಲ್ಲಾ ಮಟ್ಟದ ಸಭೆಯಲ್ಲಿ ಭಾಗವಹಿಸಿ ಸಚಿವರು ಮಾತನಾಡು ತ್ತಿದ್ದರು. ಕೃಷಿ ಭೂಮಿ ಮತ್ತು ಜನವಾಸ ಕೇಂದ್ರಗಳಿಗೆ ನುಗ್ಗಿ ಉಪಟಳ ನೀಡುವ ಕಾಡು ಹಂದಿಗಳನ್ನು …

ಜಿಲ್ಲಾ ಶಾಲಾ ಕಲೋತ್ಸವ ಮೊಗ್ರಾಲ್‌ನಲ್ಲಿ

ಕಾಸರಗೋಡು: ಕಾಸರ ಗೋಡು ಜಿಲ್ಲಾ ಶಾಲಾ ಕಲೋತ್ಸವವನ್ನು ಮೊಗ್ರಾಲ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ನವೆಂಬರ್ 24ರಿಂದ 29ರ ವರೆಗೆ ಜಿಲ್ಲಾ ಶಾಲಾ ಕಲೋತ್ಸವವನ್ನು ಕುಂಡಂಕುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಆದರೆ ಶಾಲಾ ಕಲೋತ್ಸವವನ್ನು ಕುಂಡಂಕುಳಿಯಲ್ಲಿ ನಡೆಸಿದಲ್ಲಿ ಅದು ವಿವಿಧ ರೀತಿಯ ಅನಾನುಕೂಲತೆ ಉಂಟಾಗುವ ಸಾಧ್ಯತೆ ಇದೆ ಎಂದು ಕುಂಡಂಕುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅಧಿಕೃತರು ನಂತರ ಜಿಲ್ಲಾ ಶಿಕ್ಷಣಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್‌ಗೆ ತಿಳಿಸಿದ್ದರು. …

ಕುಂಬಳೆಯ ವ್ಯಾಪಾರಿ ಮುಮ್ಮು ಹಾಜಿ ಸೀಮಾ ನಿಧನ

ಕುಂಬಳೆ: ಕುಂಬಳೆಯ ವ್ಯಾಪಾರಿ ಕುಂಟಂಗೇರಡ್ಕ ನಿವಾಸಿಯಾದ ಮಮ್ಮು ಹಾಜಿ ಸೀಮಾ (65) ನಿನ್ನೆ ಸಂಜೆ ನಿಧನ ಹೊಂದಿದರು. ಅಸೌಖ್ಯ ಬಾಧಿಸಿದ ಇವರು ಚಿಕಿತ್ಸೆಯಲ್ಲಿದ್ದರು. ಕುಂಬಳೆಯ ಸೀಮಾ ಫುಟ್‌ವೇರ್ ಅಂಗಡಿಯ ಮಾಲಕನಾಗಿದ್ದ ಇವರು ಕುಂಬಳೆ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕಾರ್ಯಕಾರಿ ಸದಸ್ಯರಾಗಿದ್ದರು. ಕುಂಬಳೆ ಬದರ್ ಜುಮಾ ಮಸೀದಿ ಅಧ್ಯಕ್ಷ, ಜೊತೆ ಕಾರ್ಯದರ್ಶಿಯಾಗಿ ಕಾರ್ಯಾಚರಿಸಿದ್ದರು. ನಿಧನಕ್ಕೆ ಕುಂಬಳೆ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಘಟಕ ಪದಾಧಿಕಾರಿಗಳು, ಕುಂಬಲೆ ಬದರ್ ಜುಮಾ ಮಸೀದಿ ಪದಾಧಿಕಾರಿಗಳು, ತಾಹ ಮಸೀದಿ ಸಮಿತಿ ಪದಾಧಿಕಾರಿಗಳು …

ಕೊನೆಗೂ ಮೋಕ್ಷ ಕಂಡ ಮಂಜೇಶ್ವರ ಕೆಜೆಎಂ ರಸ್ತೆ : ಮಂಜೇಶ್ವರ ಶಾಸಕರ ನಿಧಿಯಿಂದ ರಸ್ತೆ ಅಭಿವೃದ್ಧಿಗೆ ಚಾಲನೆ

ಮಂಜೇಶ್ವರ: ಕಳೆದ ಹಲವು ವರ್ಷಗಳಿಂದ ಹದಗೆಟ್ಟಿದ್ದ ಮಂಜೇಶ್ವರ ಕೆಜೆಎಂ ರಸ್ತೆಗೆ ಕೊನೆಗೂ ಹೊಸ ಜೀವ ದೊರಕಿದೆ. ಶಾಸಕ ಎಕೆಎಂ ಅಶ್ರಫ್‌ರ ಅಭಿವೃದ್ಧಿ ನಿಧಿಯಿಂದ 97 ಲಕ್ಷ ರೂಪಾಯಿ ಮಂಜೂರಾಗಿದ್ದು, ನಿನ್ನೆ ಈ ಮಹತ್ವದ ರಸ್ತೆ ಕಾಮಗಾರಿಗೆ ಅಧಿಕೃತ ಚಾಲನೆ ದೊರಕಿದೆ. ಸುಮಾರು 1400 ಮೀಟರ್ ರಸ್ತೆಯಲ್ಲಿ 100 ಮೀಟರ್ ಕಾಂಕ್ರೀಟ್ ಹಾಗೂ 300 ಮೀಟರ್ ಡಾಮರೀಕರಣ ನಡೆಯಲಿದೆ. ಜೊತೆಗೆ ರಸ್ತೆಯಲ್ಲಿ ನೀರು ನಿಲ್ಲದಂತೆ ಮಾಡಲು 250 ಮೀಟರ್ ಉದ್ದದ ಚರಂಡಿ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿ ಮುಕ್ತಾಯವಾದ ಬಳಿಕ …

ನಿವೃತ್ತ ಉಪ್ಪಳ ವಿದ್ಯುತ್ ಸೆಕ್ಷನ್ ಅಧಿಕಾರಿಗೆ ಬೀಳ್ಕೊಡುಗೆ

ಉಪ್ಪಳ: ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಉಪ್ಪಳ ವಿದ್ಯುತ್ ಸೆಕ್ಷನ್ ಸಬ್ ಇಂಜಿನಿಯರ್ ಸೆಬಾಸ್ಟಿನ್‌ರಿಗೆ ಉಪ್ಪಳ ವ್ಯಾಪಾರ ಭವನದಲ್ಲಿ ನಡೆದ ಸಮಾರಂಭದಲ್ಲಿ ಬೀಳ್ಕೊಡುಗೆ ನೀಡಲಾಯಿತು. ಕಳೆದ 29 ವರ್ಷಗಳಲ್ಲಿ ಇವರು ಕಾಸರ ಗೋಡು ನೆಲ್ಲಿಕುಂಜೆ, ಪೈವಳಿಕೆ, ಉಪ್ಪಳ ಸೇರಿದಂತೆ ವಿವಿಧ ಸೆಕ್ಷನ್‌ಗಳಲ್ಲಿ ಸೇವೆ ಸಲ್ಲಿಸಿದ್ದರು. ಉಪ್ಪಳ ಸಬ್ ಅಸಿಸ್ಟೆಂಟ್ ಇಂಜಿನಿಯರ್ ಜಯನ್‌ರ ಅಧ್ಯಕ್ಷತೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭವನ್ನು ಕಾಸರಗೋಡು ಎಕ್ಸಿಕ್ಯೂಟಿವ್ ಇಂಜಿನಿಯರ್ ನಾಗರಾಜ ಭಟ್ ಉದ್ಘಾಟಿಸಿದರು. ಈ ಸಂದರ್ಭ ವಿದ್ಯುತ್ ಇಲಾಖೆ ಅಧಿಕಾರಿಗಳಾದ ನಂದ ಗೋಪಾಲ್, …

ಕುಲಾಲಸಂಘದಿಂದ ಬೃಹತ್ ರಕ್ತದಾನ ಶಿಬಿರದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಪ್ಪಳ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ, ತೂಮಿನಾಡು ಇದರ ನೇತೃತ್ವದಲ್ಲಿ, ಶ್ರೀ ಮಹಾಕಾಳಿ ಭಜನಾ ಮಂದಿರ ತೂಮಿನಾಡು, ಶ್ರೀ ಬಾಲಾಂಜನೇಯ ವ್ಯಾಯಾಮ ಶಾಲೆ ಕುಂಜತ್ತೂರು ಪದವು, ಶ್ರೀ ಶಿವಶಕ್ತಿ ಸೀತಾರಾಮ ಭಜನಾಮಂದಿರ ಕುಂಜತ್ತೂರು, ಕುಲಾಲ ಪಂಚಾಯತ್ ಶಾಖೆಗಳ ಸಹಕಾರದಲ್ಲಿ ಮತ್ತು ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆಯ ಸಹಯೋಗದಲ್ಲಿ ಡಿಸೆಂಬರ್ 7 ರಂದು ತೂಮಿನಾಡಿನ ಲ್ಲಿರುವ ಜಿಲ್ಲಾ ಕುಲಾಲ ಸಂಘದ ಸಮುದಾಯದ ಭವನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಬೃಹತ್ ರಕ್ತದಾನ ಶಿಬಿರ ಮತ್ತು ಉಚಿತ ಅರೋಗ್ಯ …

ಶಿರಿಯ ಶಾಲೆ ರಸ್ತೆ ಉದ್ಘಾಟನೆ

ಬಂದ್ಯೋಡು: ಮಂಜೇಶ್ವರ ಶಾಸಕರ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ ೭ ಲಕ್ಷ ರೂ. ವ್ಯಯಿಸಿ ನಿರ್ಮಿಸಿದ ಮಂಗಲ್ಪಾಡಿ ಪಂಚಾಯತ್‌ನ ಶಿರಿಯ ಶಾಲೆ ರಸ್ತೆ ಉದ್ಘಾಟನೆಯನ್ನು ಶಾಸಕ ಎಕೆಎಂ ಅಶ್ರಫ್ ನಿರ್ವಹಿಸಿದರು. ಮಂಗಲ್ಪಾಡಿ ಪಂ. ಸದಸ್ಯೆ ಬೀಫಾತಿಮಾ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದರು. ಮುಸ್ಲಿಂ ಲೀಗ್ ಪಂ. ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು, ಲತೀಫ್ ಅರಬಿ, ಹನೀಫ್, ಸಹೀದ್ ವಳಯಂ, ಶಾಫಿ, ಶಾಫಿ ಸಅದಿ, ಫಿರೋಸ್ ಓನಂದ, ಅಸೀಸ್, ಅಸೀಸ್ ಎಂ, ರಜಾಕ್, ನಾಸರ್ ಶಿರಿಯ ಮೊದಲಾದವರು ಮಾತನಾಡಿದರು.

ಆಕ್ಸಿಲ್ ತುಂಡಾಗಿ ಮಗುಚಿದ ಮೀನು ಹೇರಿದ ಪಿಕಪ್: ಹೆದ್ದಾರಿಪೂರ್ತಿ ಮೀನು ಚೆಲ್ಲಾಪಿಲ್ಲಿ

ಮಂಜೇಶ್ವರ: ಮೀನು ಸಾಗಿಸುತ್ತಿದ್ದ ಪಿಕಪ್ ವಾಹನದ ಆಕ್ಸಿಲ್ ತುಂಡಾಗಿ ಚಕ್ರ ಬೇರ್ಪಟ್ಟು  ಸರ್ವೀಸ್ ರಸ್ತೆಗೆ ಬಿದ್ದ ಘಟನೆ ನಿನ್ನೆ ಮಧ್ಯಾಹ್ನ ಕುಂಜತ್ತೂರು ಹೆದ್ದಾರಿಯಲ್ಲಿ ಸಂಭವಿಸಿದೆ. ಆದರೆ ಅದೃಷ್ಟವಶಾತ್ ಅಪಾಯ ಸಂಭವಿಸಲಿಲ್ಲ. ಕಾಸರಗೋಡು ಭಾಗದಿಂದ ಮಂಗಳೂರು ಕಡೆಗೆ ಮೀನು ಹೇರಿಕೊಂಡು ತೆರಳುತ್ತಿದ್ದ ಪಿಕಪ್ ಕುಂಜತ್ತೂರು ಹೆದ್ದಾರಿಯಲ್ಲಿ ಸಂಚರಿಸುತ್ತಿರುವಾಗ ಅದರ ಹಿಂಬದಿಯ ಆಕ್ಸಿಲ್ ತುಂಡಾಗಿ ಚಕ್ರ ಬೇರ್ಪಟ್ಟಿದ್ದು ನಿಯಂತ್ರಣ ತಪ್ಪಿದ ವಾಹನ ಹೆದ್ದಾರಿ ಮಧ್ಯೆ ಮಗುಚಿಬಿದ್ದಿದೆ. ಈ ವೇಳೆ  ತುಂಡಾದ ಆಕ್ಸಿಲ್ ಚಕ್ರ ಸಹಿತ ಹೆದ್ದಾರಿಯ ತಡೆಗೋಡೆಯಿಂದ ಮೇಲೆ ಹಾರಿ …

ಶಬರಿಮಲೆ ದೇಗುಲದ ಚಿನ್ನ ಕಳವು: ಅಂತಾರಾಷ್ಟ್ರೀಯ ಕಳ್ಳಸಾಗಾಟಗಾರರ ಕೈವಾಡ ಶಂಕೆ ವ್ಯಕ್ತಪಡಿಸಿದ ಹೈಕೋರ್ಟ್

ಕೊಚ್ಚಿ: ಶಬರಿಮಲೆ ದೇಗುಲದ ಗರ್ಭಗುಡಿ ಬಾಗಿಲು ಮತ್ತು ಅದರ ದ್ವಾರಪಾಲಕ ಮೂರ್ತಿಗಳ ದುರಸ್ತಿ ಕೆಲಸದ ಹಿಂದೆ ಅಮೂಲ್ಯವಾದ ಪ್ರಾಚೀನ ವಸ್ತುಗಳನ್ನು ಸಾಗಿಸುವ ಅಂತಾರಾಷ್ಟ್ರೀಯ ಕಳ್ಳಸಾಗಾಟದಾರರ ಕೈವಾಡವಿದೆಯೆಂಬ ಶಂಕೆಯನ್ನು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ ವ್ಯಕ್ತಪಡಿಸಿದೆ. ಭಾರತೀಯ ವಂಶಜನಾಗಿರುವ ಅಮೆರಿಕಾದ ಪ್ರಜೆ ಹಾಗೂ ಅಂತಾರಾಷ್ಟ್ರೀಯ ವಿಗ್ರಹ ಮತ್ತು ಪ್ರಾಚೀನ ವಸ್ತುಗಳ ಕಳ್ಳಸಾಗಾಟದಾರ ಸುಭಾಶ್ ಕಪೂರ್ ನಡೆಸುತ್ತಿರುವರ  ರೀತಿಯ ಆಪರೇಶನ್ ಕಾರ್ಯಾ ಚರಣೆಯ ಸಮಾನತೆ ಶಬರಿಮಲೆ ದೇಗುಲದಲ್ಲಿ ನಡೆದ ಕಳವು ಪ್ರಕರಣವೂ ಹೊಂದಿದೆಯೆಂದು ಹೈಕೋರ್ಟ್ ಹೇಳಿದೆ. ಮಾತ್ರವಲ್ಲ ಶಬರಿಮಲೆ ದೇಗುಲದ …