ಹಾನಿಗೊಂಡ ಕೆಪಿಆರ್ ರಾವ್ ರಸ್ತೆ :ಮಳೆಗೆ ಮುಂಚಿತ ದುರಸ್ತಿಗೆ ಆಗ್ರಹ

ಕಾಸರಗೋಡು: ಕಳೆದ ವರ್ಷದ ತೀವ್ರ ಮಳೆಗೆ ರಸ್ತೆಯ ಒಂದು ಭಾಗವೇ ನಾಶವಾದ ಸ್ಥಿತಿಯಲ್ಲಿರುವ  ಕೆ.ಪಿ.ಆರ್ ರಾವ್ ರಸ್ತೆಯ ದುರವಸ್ಥೆಗೆ ಇನ್ನೂ ಪರಿಹಾರವಾಗಿಲ್ಲ. ಮಳೆಗೆ ಮುಂಚಿತವೇ ರಸ್ತೆ ಹಾನಿಯಾಗಲು ಆರಂಭಿಸಿದ್ದರೂ ಮಳೆಗೆ ಪೂರ್ಣ ನಾಶವಾಗಿದೆ. ಹಾನಿಗೊಂಡ ರಸ್ತೆಯ ಒಂದು ಬದಿ ವಾಹನಗಳನ್ನು ನಿಲ್ಲಿಸುವುದರಿಂದಾಗಿ ವ್ಯಾಪಾರಿಗಳ ಸಮಸ್ಯೆ ಹೆಚ್ಚಿದೆ. ಈ ಪ್ರದೇಶದಲ್ಲಿ ಟೆಲಿಕಾಂ ಕಚೇರಿ, ಸಿನಿಮಾ ಟಾಕೀಸ್ ಸಹಿತ ಹಲವು ಸಂಸ್ಥೆಗಳಿದ್ದು,ದಟ್ಟಣೆ ರಸ್ತೆ ಇದಾಗಿದೆ. ಮಳೆ ಆರಂಭಕ್ಕೂ ಮುಂಚಿತ ಈ ರಸ್ತೆಯ ಪ್ರಧಾನ ಅಂಚೆ ಕಚೇರಿಯಿಂದ ಕೆಎಸ್‌ಆರ್‌ಟಿಸಿ ನಿಲ್ದಾಣವರೆಗೆ ಕಾಂಕ್ರೀಟ್ …

ಹಿರಿಯ ವ್ಯಾಪಾರಿ ನಿಧನ

ನೀರ್ಚಾಲು:  ಹಿರಿಯ ವ್ಯಾಪಾರಿಯೂ, ಕುಂಬೋಲ್ ತರವಾಡು ಸದಸ್ಯನಾದ  ನೀರ್ಚಾಲು ಮೇಲಿನ ಪೇಟೆಯ ಮುಹಮ್ಮದ್ ಕುಂಞಿ ಹಾಜಿ (79) ನಿಧನಹೊಂದಿದರು. ಮೃತರು ಪತ್ನಿ ಮರಿಯಮ್ಮ, ಮಕ್ಕಳಾದ ಆಸ್ಯಮ್ಮ, ಸಕೀನ, ನಸೀಮ, ಸುಹರ, ಸಫಿಯಾ, ಸಾಜಿದ, ಅಳಿಯ-ಸೊಸೆಯಂದಿ ರಾದ ಮುಹಮ್ಮದ್ (ಉಳುವಾರು), ಅಬ್ದುರಹ್ಮಾನ್ (ಚೇರಾಲ್), ಮುಹಮ್ಮದ್ (ಪೂಕಟ್ಟೆ),ಸಮದ್, ಮುಸ್ತಫ (ಕುಂಬೋಲ್), ಸಹೋದರ-ಸಹೋದರಿಯರಾದ ಅಬ್ದುಲ್ಲ ಹಾಜಿ (ನೀರ್ಚಾಲು), ಬೀಫಾತಿಮ, ಮರಿಯಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಅಳಿಯ ಮುಹ ಮ್ಮದ್ ಕುಂಞಿ (ಆರಿಕ್ಕಾಡಿ), ಸಹೋದರ ಮೊಯ್ದೀನ್ ಕುಂಞಿ, ಸಹೋದರಿ ಖದೀಜ …

ಮಧೂರು ಮಿತ್ರ ಕಲಾವೃಂದದಿಂದ ಬಹುಭಾಷಾ ಕವಿ ಸಂಗಮ ಮೇ 2ರಂದು

ಮಧೂರು:  ಮಿತ್ರ ಕಲಾವೃಂದ  ಮಧೂರು ಇದರ ಸುವರ್ಣ ಸಂಭ್ರಮ ದಂಗವಾಗಿ  ಬಹುಭಾಷಾ ಕವಿ ಸಂಗಮ ಮೇ 2ರಂದು ಬೆಳಿಗ್ಗೆ 10ರಿಂದ ಮಧೂರು ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ. ಸಾಹಿತಿ ವಿಟ್ಲ ಅರಮನೆಯ ಸೀತಾಲಕ್ಷ್ಮಿ ವರ್ಮ ದೀಪ ಪ್ರಜ್ವಲನೆ ನಡೆಸುವರು.  ಹಿರಿಯ ಸಾವಿತಿ ವಿ.ಬಿ. ಕುಳಮರ್ವ ಅಧ್ಯಕ್ಷತೆ ವಹಿಸುವರು. ಕವಿ ರಾಧಾಕೃಷ್ಣ ಕೆ ಉಳಿಯಡತ್ತಡ್ಕ ಪ್ರಸ್ತಾವನೆ ನಡೆಸುವರು. ಚುಟುಕು ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷೆ ಅಶ್ವಿನಿ ಕೋಡಿಬೈಲು ಆಶಯ ನುಡಿಯುವರು. ಕ.ಸಾ.ಪ ಅಧ್ಯಕ್ಷ ಡಾ| …

ಅನಧಿಕೃತವಾಗಿ ವಾಸಿಸುತ್ತಿದ್ದ ಬಾಂಗ್ಲಾ ಯುವತಿಯರು ಸಹಿತ ೮ ಮಂದಿ ಸೆರೆ :ವೇಶ್ಯಾವಾಟಿಕೆ ದಂಧೆಯವರೆಂದು ಶಂಕೆ

ತಿರುವನಂತಪುರ: ಅನಧಿಕೃತ ವಾಗಿ ವಾಸ ಮಾಡುತ್ತಿದ್ದ ಇಬ್ಬರು ಬಾಂಗ್ಲಾ ಯುವತಿಯರ ಸಹಿತ ೮ ಮಂದಿಯನ್ನು ಕಳಕೂಟಂ ಕಾರ್ಯ ವಟ್ಟಂ ಮೇನಲ್ಲೂರ್‌ನ ದ್ವಿಮಹಡಿ ಮನೆಯಿಂದ ಕಳಕೂಟಂ ಪೊಲೀ ಸರು ಬಂಧಿಸಿದ್ದಾರೆ. ಬಾಂಗ್ಲಾ ನಿವಾಸಿ ಗಳಾದ ಸುಮಿ, ಇದ್ಕಾನೂನ್, ಕೊಲ್ಲಂ ನಿವಾಸಿ ಪುಷ್ಪಾ, ಕಾಟಕ್ಕಡದ ಸುದೀಪ್, ಕರ್ನಾಟಕದ ಡ್ಯಾನಿಯೇಲ್, ವರ್ಕಲ ನಿವಾಸಿ ನೌಫಿಯ, ಬೆಂಗಳೂರಿನ ಮಧುಮತಿ, ಪಶ್ಚಿಮ ಬಂಗಾಳದ ಮೌಸಮಿ ಬಸ್ವಾಳ್ ಎಂಬಿವರನ್ನು ವಶಕ್ಕೆ ಪಡೆಯಲಾಗಿದೆ. ಈ ತಂಡ ವೇಶ್ಯಾವಾಟಿಕೆ ದಂಧೆ ನಡೆಸುವವ ರಾಗಿದ್ದಾರೆಂದು ಶಂಕಿಸಲಾಗಿದೆ. ಬಾಡಿಗೆ ಮನೆಯಿಂದ ಎರಡು …

ಬೆಳಿಂಜಗುತ್ತು ಪುನರ್ ಪ್ರತಿಷ್ಠೆ, ಧರ್ಮ ನೇಮೋತ್ಸವ

ಕುಂಬ್ಡಾಜೆ: ಬೆಳಿಂಜಗುತ್ತು ಪುನರ್ ಪ್ರತಿಷ್ಠೆ ಮತ್ತು ತರವಾಡು ಮನೆಯ ಪ್ರವೇಶೋತ್ಸವ, ಬ್ರಹ್ಮಕಲಶದಂಗವಾಗಿ ನಡೆದ ಧಾರ್ಮಿಕ ಸಭೆಯನ್ನು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಬಾಲಕೃಷ್ಣ ಆಳ್ವ ಅರಂಬೂರು ಅಧ್ಯಕ್ಷತೆ ವಹಿಸಿದರು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಧಾರ್ಮಿಕ ಭಾಷಣ ಮಾಡಿದರು. ಬಂಟರ ಸಂಘ ಜಿಲ್ಲಾಧ್ಯಕ್ಷ ನ್ಯಾಯವಾದಿ ಸುಬ್ಬಯ್ಯ ರೈ, ಕುಂಬ್ಡಾಜೆ ಪಂಚಾಯತ್ ಉಪಾಧ್ಯಕ್ಷ ರವೀಂದ್ರ ರೈ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ, ಉದ್ಯಮಿ ಹರಿಪ್ರಸಾದ್ ರೈ ಪುತ್ರಕಳ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ತರವಾಡಿಗೆ …

ಮಹಿಳಾ ಮೀಸಲಾತಿ ಮಸೂದೆ ವಿರೋಧದ ಮೂಲಕ ದ. ಭಾರತ ರಾಜ್ಯಗಳ ಜನರಿಗೆ ವಿಪಕ್ಷಗಳಿಂದ ವಂಚನೆ- ಕೆ. ರಂಜಿತ್

ಕಾಸರಗೋಡು: ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿ ಸುವ ಮೂಲಕ  ಹೆಚ್ಚು ಜನಪ್ರತಿ ನಿಧಿಗಳು ಲಭಿಸಬಹುದಾಗಿದ್ದ ದಕ್ಷಿಣ ಭಾರತದ ರಾಜ್ಯಗಳ ಜನರನ್ನು ವಂಚಿಸಲಾಗಿದೆ ಎಂದು, ಆದರೆ ಈ ಮಸೂದೆಯನ್ನು ಎಲ್ಲಾ ಕಾಲದಲ್ಲೂ ಕಾಂಗ್ರೆಸ್ ಸಹಿತದ ವಿಪಕ್ಷಗಳಿಗೆ  ತಡೆಹಿಡಿಯಲು ಸಾಧ್ಯವಿಲ್ಲವೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ನುಡಿದರು. ಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸಲು ನೇತೃತ್ವ ನೀಡಿದ ಕಾಂಗ್ರೆಸ್ ಸಹಿತ ವಿಪಕ್ಷಗಳ ವಿರುದ್ಧ ಬಿಜೆಪಿ ಜಿಲ್ಲಾ ಸಮಿತಿ ಹೊಸ ಬಸ್ ನಿಲ್ದಾಣ ಪರಿಸರ ದಲ್ಲಿ ಆಯೋಜಿಸಿದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ …

ಸೀತಾಂಗೋಳಿಯಲ್ಲಿ ಯುವಕನ ಕೊಲೆ ಆರೋಪಿ ಗಂಟೆಗಳೊಳಗೆ ಬಂಧನ

ಕುಂಬಳೆ: ಸೀತಾಂಗೋಳಿಯಲ್ಲಿ ಹಾಡಹಗಲೇ ಯುವಕನನ್ನು ತಲೆಗೆ ಹೊಡೆದು ಕೊಲೆಗೈದ ಪ್ರಕರಣದಲ್ಲಿ ಆರೋಪಿಯನ್ನು ಗಂಟೆಗಳೊಳಗೆ ಪೊಲೀಸರು ಬಂಧಿಸಿದ್ದಾರೆ. ಬಾಪಾಲಿಪೊನ ಕುಂಟಿಕಾನ ನಿವಾಸಿಯಾದ ಸಫಾಹಿದ್ ಯಾನೆ ಶಫಾಯತ್ (35) ಎಂಬವರು ಕೊಲೆಗೀಡಾದ ವ್ಯಕ್ತಿಯಾಗಿದ್ದಾರೆ. ಈ ಸಂಬಂಧ ಕುಂಬಳೆ ನಾಯ್ಕಾಪು ಕೋಟೆಕಾರ್‌ನ ಶ್ರೀನಿವಾಸ (39) ಎಂಬಾತನನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್, ಎಸ್‌ಐಗಳಾದ ಸಿ. ಸನಿತ್, ಅನಂತಕೃಷ್ಣನ್ ಆರ್. ಮೆನೋನ್ ಎಂಬಿವರು ಸೆರೆ ಹಿಡಿದಿದ್ದಾರೆ. ನಿನ್ನೆ ಮಧ್ಯಾಹ್ನ ೨.೩೦ರ ವೇಳೆ ಸೀತಾಂಗೋಳಿಯ ಬಿವರೇಜಸ್ ಮದ್ಯದಂಗಡಿ ಸಮೀಪದ ಕಟ್ಟಡದ ಹಿಂಬದಿಯಲ್ಲಿ …

ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ಮಾಜಿ ಪ್ರಧಾನ ಅರ್ಚಕ ಬೇಳ ರಾಧಾಕೃಷ್ಣ ಅಡಿಗ ನಿಧನ

ಕಾಸರಗೋಡು: ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕರಾದ ಕಾಸರಗೋಡು ಬೀಚ್ ರಸ್ತೆ ಬಿ.ಬಿ. ಆಳ್ವ ಕಂಪೌಂಡ್ ಕಾಮಧೇನು ಹೌಸ್‌ನ ಬೇಳ ರಾಧಾಕೃಷ್ಣ ಅಡಿಗ (80) ನಿನ್ನೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರು ಕಳೆದ 50 ವರ್ಷಗಳಿಗಿಂತಲೂ ಹೆಚ್ಚು ಕಾಲ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅರ್ಚಕರಾಗಿ ದ್ದರು. ಕೊರೊನಾ ಬಳಿಕ ಅವರು ಹೆಚ್ಚಾಗಿ ಸಕ್ರಿಯರಾಗಿರಲಿಲ್ಲ. ಈ ಹಿಂದೆ ಗುಮಾಸ್ತರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ತಂದೆ ದಿ| ಶಂಕರನಾರಾಯಣ ಅಡಿಗರೂ ಈ ಹಿಂದೆ ಕಾಸರಗೋಡು ಶ್ರೀ …

ಕಾಂಗ್ರೆಸ್ ನೇತಾರನ ಸಹೋದರ ಮೈದಾನಬಳಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಕಾಂಗ್ರೆಸ್ ನೇತಾರನ ಸಹೋದರ ಮೈದಾನ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಂಬಳೆ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿ ಪೂಜಾರಿಯವರ ಸಹೋದರ ಕೋಟೆಕಾರು ನಿವಾಸಿ ಸುನಿಲ್ ಕುಮಾರ್ (40) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರ ಮೃತದೇಹ ಕೋಟೆಕಾರು ಮೈದಾನ ಬಳಿ ಇಂದು ಬೆಳಿಗ್ಗೆ 7 ಗಂಟೆಗೆ ಪತ್ತೆಯಾಗಿದೆ. ವಿಷಯ ತಿಳಿದು ಸಂಬಂಧಿಕರು ಹಾಗೂ ಪೊಲೀಸರು ತಲುಪಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕವೇ ಸಾವಿಗೆ ಕಾರಣವೇನೆಂದು ಸ್ಪಷ್ಟಗೊಳ್ಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. …

ಎಟಿಎಂಗೆ ಹಣ ತುಂಬಿಸಲು ಬಂದ ವಾಹನದಿಂದ 50 ಲಕ್ಷ ರೂ. ಕಳವುಗೈದ ಇನ್ನೋರ್ವ ಆರೋಪಿ ಸೆರೆ

ಉಪ್ಪಳ: ಎಟಿಎಂಗೆ ಹಣ ತುಂಬಿಸಲು ಬಂದ ವಾಹನದಿಂದ 50 ಲಕ್ಷ ರೂಪಾಯಿ ಕಳವು ನಡೆಸಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿ ಸೆರೆಗೀಡಾಗಿದ್ದಾನೆ. ತಮಿಳುನಾಡು ತಿರುಚ್ಚಿರಾಪಳ್ಳಿ ದಿಂಡಿಗಲ್ ಮೈನ್ ರೋಡ್ ರಾಮ್‌ಜಿ ನಗರದ ಅರುಮುಗನ್ ಯಾನೆ ಕಿಟ್ಟು (55) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಮಂಜೇಶ್ವರ ಎಸ್‌ಐ ದಿನೇಶ್‌ರಾಜನ್ ನೇತೃತ್ವದ ಪೊಲೀಸರು ನಿನ್ನೆ ಛತ್ತೀಸ್‌ಘಡದಿಂದ ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ಮಂಜೇಶ್ವರ ಪೊಲೀಸ್ ಠಾಣೆಗೆ ತಲುಪಿಸಲಾಗಿದೆ. 2024 ಮಾರ್ಚ್ 27ರಂದು ಮಧ್ಯಾಹ್ನ 2 ಗಂಟೆಗೆ ಉಪ್ಪಳ ಪೇಟೆಯ ಆಕ್ಸಿಸ್ ಬ್ಯಾಂಕ್‌ನ ಎಟಿಎಂಗೆ …