ಮೂರುಬಾರಿ ತಲ್ಲಾಖ್ ನುಡಿದು ವಿವಾಹ ಸಂಬಂಧದಿಂದ ಹಿಂಜರಿತ; ಪತಿ ವಿರುದ್ಧ  ಕೇಸು

ಮುಳ್ಳೇರಿಯ:  ಹೆಚ್ಚುವರಿ ಚಿನ್ನಾಭರಣ ಚಿನ್ನಾಭರಣ ನೀಡದ ದ್ವೇಷದಿಂದ ಪತ್ನಿಗೆ ಮೂರುಬಾರಿ ತಲಾಖ್ ನುಡಿದು ವಿವಾಹ ಸಂಬಂ ಧದಿಂದ ಹಿಂಜರಿದ ಬಗ್ಗೆ ದೂರಲಾ ಗಿದೆ. ಇದರಂತೆ ಯುವತಿ ನೀಡಿದ ದೂರಿನ ಮೇರೆಗೆ ಆದೂರು ಪೊಲೀ ಸರು ಕೇಸು ದಾಖಲಿಸಿಕೊಂಡಿದ್ದಾರೆ. ದೇಲಂಪಾಡಿಯ ಎಚ್. ರಾಶಿದ (22) ನೀಡಿದ ದೂರಿನಂತೆ  ಪತಿ ಕುಂಬ್ಡಾಜೆ ಬೆಳಿಂಜದ  ಬಾಡಿಗೆ ಮನೆಯಲ್ಲಿ ವಾಸಿಸುವ ಇಬ್ರಾಹಿಂ ಬಾದುಶ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಇಬ್ರಾಹಿಂ ಬಾದುಶ ಈಶ್ವರಮಂಗಲ ಕಾವು ನಿವಾಸಿಯಾಗಿದ್ದಾನೆ. 2018 ಮೇ 18ರಂದು  ಇಬ್ರಾಹಿಂ ಬಾದುಶ …

ಐತಿಹಾಸಿಕ ಮಸೂದೆ ಇಂದು ಸಂಸತ್‌ನಲ್ಲಿ ಮಂಡನೆ: ಪ್ರಧಾನಿ, ಮುಖ್ಯಮಂತ್ರಿ, ಸಚಿವರು ಬಂಧನವಾದಲ್ಲಿ ಹುದ್ದೆಯಿಂದ ವಜಾ

ನವದೆಹಲಿ: ಗಂಭೀರ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು ಮತ್ತು ಸಚಿ ವರುಗಳು (ಕೇಂದ್ರಾಡಳಿತ ಪ್ರದೇಶಗಳೂ ಸೇರಿ) ಬಂಧಿಸಲ್ಪಟ್ಟಲ್ಲಿ ಅವರನ್ನು ಪದಚ್ಯುತಿಗೊಳಿಸುವ ಮಸೂದೆಯನ್ನು  ಇಂದು ಲೋಕಸಭೆಯಲ್ಲಿ ಕಂದ್ರ ಗೃಹ ಸಚಿವ ಅಮಿತ್ ಷಾ ಮಂಡಿಸಲಿದ್ದಾರೆ. ಇದರ ಜೊತೆಗೆ ಸಂವಿಧಾನದ (130ನೇ ತಿದ್ದುಪಡಿ) ಮಸೂದೆ-೨೦೨೫, ಕೇಂದ್ರಾ ಡಳಿತ ಸರಕಾರ (ತಿದ್ದುಪಡಿ) ಮಸೂದೆ ಮತ್ತು ಜಮ್ಮು ಕಾಶ್ಮೀರ ಪುನರ್ ರಚನೆ (ತಿದ್ದುಪಡಿ) ಮಸೂದೆ 2025ಗಳನ್ನೂ ಗೃಹ ಸಚಿವರು ಲೋಕಸಭೆಯಲ್ಲಿ ಇಂದು ಮಂಡಿಸಲಿದ್ದಾರೆ.  ಆಡಳಿತದಲ್ಲಿ ಹೊಣೆಗಾರಿಕೆ ಯನ್ನು ಸರಿಯಾದ ರೀತಿಯಲ್ಲಿ …

ಅಶ್ಲೀಲ ವೀಡಿಯೋ ತೋರಿಸಿ ಬಾಲಕಿಗೆ ಕಿರುಕುಳ: ಆರೋಪಿಗೆ 77 ವರ್ಷ ಕಠಿಣ ಸಜೆ

ಕಾಸರಗೋಡು: ಅಶ್ಲೀಲ ವೀಡಿಯೋ ತೋರಿಸಿ ಪ್ರಾಯಪೂರ್ತಿ ಯಾಗದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ 77 ವರ್ಷಕಠಿಣ ಸಜೆ ಹಾಗೂ 2,09,000 ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಮುಳಿಯಾರು ಮಲ್ಲ ನಿವಾಸಿ ಕೊಳಂಕೋಡ್ ಹೌಸ್‌ನ ಕೆ. ಸುಕುಮಾರನ್ (45) ಎಂಬಾತನಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಿ.ಎಂ. ಸುರೇಶ್ ಈ ಶಿಕ್ಷೆ ವಿಧಿಸಿದ್ದಾರೆ. ಆರೋಪಿ ದಂಡ ಪಾವತಿಸದಿದ್ದಲ್ಲಿ 2 ವರ್ಷ ಹಾಗೂ 7 ತಿಂಗಳು ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ. ೨೦೨೩ ಜೂನ್ ೨೫ರಂದು …

ಮಮ್ಮುಟ್ಟಿ ಸಂಪೂರ್ಣ ಗುಣಮುಖ

ತಿರುವನಂತಪುರ: ಹಲವು ತಿಂಗಳುಗಳಿಂದ ಸಿನಿಮಾ ರಂಗದಿಂದ ದೂರವಿದ್ದ ಖ್ಯಾತ ನಟ ಮಮ್ಮುಟ್ಟಿ ಮತ್ತೆ ರಂಗಕ್ಕೆ  ಮರಳಿದ್ದಾರೆ. ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಇವರು ಈಗ ಸಂಪೂರ್ಣ ಗುಣಮುಖರಾ ಗಿದ್ದು ಸಿನಿಮಾ ರಂಗದಲ್ಲಿ ಸಕ್ರಿಯ ರಾಗುವುದಾಗಿ ಅವರ ಸಹಚರನಾದ ಆಂಟೋ ಜೋಸೆಫ್ ಜೊರ್ಜ್ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ.  ಅಸೌಖ್ಯದ ಸಮಯ ದಲ್ಲಿ ಅವರ ಚೇತರಿಕೆಗಾಗಿ ಪ್ರಾರ್ಥಿ ಸಿದ ಅಭಿಮಾನಿಗಳು, ಸಾರ್ವಜನಿ ಕರಿಗೆ  ಕೃತಜ್ಞತೆ ಸಲ್ಲಿಸಿ ಅವರು ಪೋಸ್ಟ್ ಹಾಕಿದ್ದರು.

ಶಾಲಾ ವಿದ್ಯಾರ್ಥಿಗೆ ಬೀದಿ ನಾಯಿ ಕಡಿತ

ಮಂಜೇಶ್ವರ: ಮನೆಯಿಂದ ಮದ್ರಸಕ್ಕೆ ತೆರಳುತ್ತಿದ್ದ ಒಂಭತ್ತರ ಹರೆಯದ ಬಾಲಕನಿಗೆ ಬೀದಿ ನಾಯಿ ಕಡಿದು ಗಾಯಗೊಳಿಸಿದ ಘಟನೆ ನಡೆದಿದೆ. ಮಂಜೇಶ್ವರ ಪಾಂಡ್ಯಾರ ನಿವಾಸಿ ಅಬ್ದುಲ್ ರಾಶಿದ್‌ರ ಪುತ್ರ  ಅಬೂ ಬಕರ್ ರಫಾನ್  ಎಂಬಾತ ನಾಯಿ ಕಡಿತದಿಂದ ಗಾಯಗೊಂಡಿದ್ದಾನೆ. ಕಾಲಿಗೆ ಗಾಯಗೊಂಡ ಬಾಲಕನನ್ನು ಕಾಸರಗೋಡು ಜನರಲ್ ಆಸತ್ರೆ ಯಲ್ಲಿ  ದಾಖಲಿಸಲಾಗಿದೆ. ಮಂಜೇಶ್ವರ ಇನ್ಫೆಂಟ್ ಜೀಸಸ್ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿಯಾಗಿರುವ ಬಾಲಕ ನಿನ್ನೆ ಸಂಜೆ ಶಾಲೆಬಿಟ್ಟು ಮನೆಗೆ ತಲುಪಿ  ಬಳಿಕ ಮದ್ರಸಕ್ಕೆ ತೆರಳಿದ್ದನು. ಈ ವೇಳೆ ರಸ್ತೆಯಲ್ಲಿದ್ದ ಬೀದಿ ನಾಯಿ …

ಜನಸ್ಪಂದನ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಮೇಲೆ ಹಲ್ಲೆ: ಓರ್ವ ವಶ

ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಅವರ ನಿವಾಸದಲ್ಲಿ ಇಂದು ಬೆಳಿಗ್ಗೆ ನಡೆದ ಜನ್ ಸುನಾಯಿ (ಜನಸ್ಪಂದನ) ಕಾರ್ಯಕ್ರಮ ಸಂದರ್ಭದಲ್ಲಿ ವ್ಯಕ್ತಿಯೋರ್ವ ಅವರ ಕೆನ್ನೆಗೆ ಹೊಡೆದ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿ ೩೦ರ ಹರೆಯದ ಯುವಕನೋರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.  ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಈ ಯುವಕ ಮುಖ್ಯಮಂ ತ್ರಿಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ಅವರ ಕೆನ್ನೆಗೆ ಹೊಡೆದಿದ್ದಾನೆನ್ನ ಲಾಗಿದೆ. ಆರೋಪಿಯು ಮೊದಲು ಮುಖ್ಯಮಂತ್ರಿಗೆ ದಾಖಲೆಪತ್ರ ಗಳನ್ನು ಹಸ್ತಾಂತರಿಸಿ ನಂತರ ಕಿರು ಚಲು ಆರಂಭಿಸಿ ಕೆನ್ನೆಗೆ …

ಕಾರಿನಲ್ಲಿ ಸಾಗಿಸುತ್ತಿದ್ದ 480 ಪ್ಯಾಕೆಟ್ ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಮಂಜೇಶ್ವರ: ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರದಲ್ಲಿ ಅಧಿಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಆಲ್ಟೋ ಕಾರಿನಲ್ಲಿ  ಸಾಗಿಸುತ್ತಿದ್ದ 480 ಪ್ಯಾಕೆಟ್ (86.4 ಲೀಟರ್) ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕಾಸರಗೋಡು ಬೆದ್ರಡ್ಕ ನಿವಾಸಿ ಸುರೇಶ್ ಕುಮಾರ್ ಬಿ.ಪಿ. ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಮಾಲು ಸಾಗಿಸಲು ಬಳಸಲಾಗಿದ್ದ  ವಾಹನವನ್ನೂ ಅಬಕಾರಿ ತಂಡ   ವಶಕ್ಕೆ ತೆಗೆದುಕೊಂಡಿದೆ. ಸರ್ಕಲ್ ಎಕ್ಸೈಸ್ ಇನ್ಸ್‌ಪೆಕ್ಟರ್ ಶಿಜಿಲ್ ಕುಮಾರ್‌ರ ನೇತೃತ್ವದಲ್ಲಿ ಎಕ್ಸೈಸ್ ಇನ್ಸ್‌ಪೆಕ್ಟರ್ ಜಿನು ಜೇಮ್ಸ್,  ಪ್ರಿವೆಂಟೀವ್ ಆಫೀಸರ್‌ಗಳಾದ ಜಿಜಿನ್ …

ಮದ್ಯ ವಶ: ಮಹಿಳೆ ವಿರುದ್ಧ ಕೇಸು

ಕಾಸರಗೋಡು: 2.16 ಲೀಟರ್ (180 ಎಂಎಲ್‌ನ 12 ಪ್ಯಾಕೆಟ್) ಕರ್ನಾಟಕ ಮದ್ಯ ಕೈವಶವಿರಿಸಿದ ಆರೋಪದಂತೆ ಮಹಿಳೆಯರ ವಿರುದ್ಧ ಅಬಕಾರಿ ತಂಡ ಪ್ರಕರಣ ದಾಖಲಿಸಿ ಮಾಲು ವಶಪಡಿಸಿಕೊಂಡಿದೆ. ಉಳಿಯತ್ತಡ್ಕದ ಮಿನಿ ಎಂಬಾಕೆಯ ವಿರುದ್ಧ ಈ ಪ್ರಕರಣ ದಾಖಲಿಸಿಕೊಳ್ಳ ಲಾಗಿದೆ. ಉಳಿಯತ್ತಡ್ಕದಲ್ಲಿ ಕಾಸರ ಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಇನ್ಸ್‌ಪೆಕ್ಟರ್ ವಿಷ್ಣುಪ್ರಕಾಶ್‌ರ ನೇತೃತ್ವದ ಅಬಕಾರಿ  ಅಬಕಾರಿ ತಂಡ ಉಳಿಯ ತ್ತಡ್ಕದಲ್ಲಿ ನಿನ್ನೆ ಈ ಕಾರ್ಯಾಚರಣೆ ನಡೆಸಿದೆ. ಈ ಮಹಿಳೆಯ ಹೆಸರಲ್ಲಿ ಇತರ ಅಬಕಾರಿ ಪ್ರಕರಣಗಳೂ ಇವೆ ಎಂದು ಅಬಕಾರಿ ಅಧಿಕಾರಿಗಳು …

ಮನೆಯೊಳಗೆ ಪತ್ತೆಯಾದ ಪ್ರಾಚ್ಯವಸ್ತುಗಳಿಗೆ ಪೊಲೀಸ್ ಕಾವಲು; 24ರಂದು ಪರಿಶೀಲನೆ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟಿಕುಳಂನಲ್ಲಿ  ಮುಚ್ಚುಗಡೆಗೊಳಿಸಿದ ಮನೆಯೊಳಗೆ ಪತ್ತೆಯಾದ ಪ್ರಾಚ್ಯ ವಸ್ತುಗಳಿಗೆ ಪೊಲೀಸ್ ಕಾವಲು ಏರ್ಪಡಿಸಲಾಗಿದೆ. ಆರ್ಕಿ ಯೋಲಜಿಕಲ್ ಸರ್ವೇಯ ತೃಶೂರು ವಲಯ ಅಧಿಕಾರಿಗಳ ನಿರ್ದೇಶದಂತೆ ಪೊಲೀಸರು ಬಿಗು ಕಾವಲು ಏರ್ಪಡಿಸಿದ್ದಾರೆ. ಆರ್ಕಿಯೋಲಜಿಕಲ್ ಇಲಾಖೆ ಅಧಿಕಾರಗಳು ಈ ತಿಂಗಳ 24ರಂದು ತಲುಪಿ ಪ್ರಾಚ್ಯ ವಸ್ತುಗಳನ್ನು ಪರಿಶೀಲಿಸಲಿದ್ದಾರೆ. ಅದುವರೆಗೆ ಇವುಗಳು ಪೊಲೀಸರ ಕಾವಲಿನಲ್ಲಿರಲಿದೆ. ಬೇಕಲ ಪೊಲೀಸ್ ಠಾಣೆಯಿಂದ  ಕೂಗಳತೆ ದೂರದಲ್ಲೇ ಜನವಾಸವಿಲ್ಲದ ಮನೆಯಲ್ಲಿ ಪ್ರಾಚ್ಯವಸ್ತುಗಳು ಮೊನ್ನೆ ಸಂಜೆ ಪತ್ತೆಯಾಗಿದೆ. ಗುಪ್ತ ಮಾಹಿತಿ ಮೇರೆಗೆ ಬೇಕಲ ಪೊಲೀಸ್ …

ಜಾನುವಾರು ಸಾಕಣೆ ಕೇಂದ್ರದಿಂದ ಸಾಮಗ್ರಿ ಕಳವು: 5 ಮಂದಿ ಸೆರೆ

ಕಾಸರಗೋಡು: ಜಾನುವಾರು ಸಾಕಣೆ ಕೇಂದ್ರದಿಂದ 1.25 ಲಕ್ಷ ರೂಪಾಯಿ ಮೌಲ್ಯದ ಯಂತ್ರಗಳು ಹಾಗೂ ಮೋಟಾರ್‌ಗಳನ್ನು ಕಳವುಗೈದು ಮಾರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೈದಕ್ಕಾಡ್ ನಿವಾಸಿ ಪ್ರಶಾಂತ್ (35), ಮಲ್ಲಕ್ಕರ ನಿವಾಸಿ ರಾಕೇಶ್ (35), ಪಿಲಿಕ್ಕೋಡ್ ಕೊದೋಳಿಯ ವಿ.ವಿ. ಸುರೇಶ್, ಸಿ.ಎಚ್. ಪ್ರಶಾಂತ್ (42), ಪಿಲಿಕೋಡ್ ಮಡಿವಯಲ್‌ನ ನಿತಿನ್ ಯಾನೆ ರಾಜೇಶ್ (36) ಎಂಬಿವರು ಚಂದೇರ ಎಸ್‌ಐ ಸತೀಶ್ ನೇತೃದ ಪೊಲೀಸ್‌ರ ತಂಡ ಬಂಧಿಸಿದೆ. ಕಾಲಿಕ್ಕಡವ್ ಕರಕ್ಕೇರು ಎಂಬಲ್ಲಿನ ರಾಮನ್ ಎಂಬವರ ಪುತ್ರ …