ಮಜೀರ್ಪಳ್ಳದಿಂದ ಯುವಕರ ಅಪಹರಣ: ಹೊಸಬೆಟ್ಟಿನಲ್ಲಿ ಕಳ್ಳ ಬಂದೂಕು, ಮದ್ದುಗುಂಡುಗಳು ವಶ; ಹಲವು ಪ್ರಕರಣಗಳ ಆರೋಪಿ ಸಹಿತ ಏಳು ಮಂದಿ ಬಂಧನ
ಮಂಜೇಶ್ವರ: ಕಾಪಾ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾದ ಕುಖ್ಯಾತ ಕ್ರಿಮಿನಲ್ ಸಹಿತ ಏಳು ಮಂದಿಯನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ತಂಡದ ಕೈಯಿಂದ ಬಂದೂಕು ಹಾಗೂ 5 ಮದ್ದುಗುಂಡುಗಳನ್ನು ವಶಪಡಿಸಲಾಗಿದೆ. ಅಂಗಡಿಪದವಿನ ಸೈಫುದ್ದೀನ್ ಯಾನೆ ಪೂಚ ಸೈಫುದ್ದೀನ್ (29), ಬೇಡಗಂ ಕುತ್ತಿಕ್ಕೋಲ್ ಅಳಕ್ಕಾವ್ ಹೌಸ್‌ನ ನಿತಿನ್‌ರಾಜ್ (25), ಕುತ್ತಿಕ್ಕೋಲ್ ವೆಳ್ಳಾಲ ಹೌಸ್‌ನ ಎಚ್. ರತೀಶ್ (26), ಚೆಮ್ನಾಡ್ ಕೊಂಬನಡ್ಕದ ಪ್ರವಿತ್ ಸಿ.ಆರ್ (20) ಎಂಬಿವರನ್ನು ಮಂಜೇಶ್ವರ ಠಾಣೆ ಇನ್‌ಸ್ಪೆಕ್ಟರ್ ಇ. ಅನೂಬ್ ಕುಮಾರ್ ಹಾಗೂ ತಂಡ ಕಳ್ಳಬಂದೂಕು ಪ್ರಕರಣದಲ್ಲಿ …