ಎನ್ಯುಮರೇಶನ್ ಫಾರ್ಮ್ ಮಲೆಯಾಳದಲ್ಲಿ: ಕನ್ನಡಿಗರಿಗೆ ಸಮಸ್ಯೆ; ಪ್ರತಿಭಟನೆಯತ್ತ ಕನ್ನಡ ಸಂಘಟನೆಗಳು
ಕಾಸರಗೋಡು: ಚುನಾವಣೆಗೆ ಸಂಬಂಧಿಸಿ ಬಿಎಲ್‌ಒಗಳ ಮೂಲಕ ಮತದಾರರಿಗೆ ನೀಡುವ ಎನ್ಯುಮರೇಶನ್ ಫಾರ್ಮ್ ಮಲೆಯಾಳದಲ್ಲಿ ಮಾತ್ರವೇ ಮುದ್ರಣಗೊಂ ಡಿರುವುದು ಕನ್ನಡಿಗರ ಪ್ರತಿಭಟನೆಗೆ ಕಾರಣವಾಗಿದೆ. ಬಿಎಲ್‌ಒಗಳಿಗೆ ಗ್ರಾಮ ಕಚೇರಿಗಳಿಂದ ಎನ್ಯುಮರೇಶನ್ ಫಾರ್ಮ್ ವಿತರಣೆಯಾಗಿದ್ದು ಅದನ್ನು ಅವರು ಮತದಾರರ ಮನೆಗಳಿಗೆ ತಲುಪಿಸಬೇಕಾಗಿದೆ. ಆದರೆ ಎನ್ಯುಮರೇಶನ್ ಫಾರ್ಮ್ ಮಲೆಯಾಳದಲ್ಲಿ ಮಾತ್ರವೇ ಇರುವುದು ವಿವಾದಕ್ಕೆಡೆಮಾಡಿಕೊಟ್ಟಿದೆ. ಮಲೆಯಾಳ ತಿಳಿಯದ ಬಿಎಲ್‌ಒಗಳು ಹಾಗೂ ಕನ್ನಡಿಗ ರಾದ ಮತದಾರರಿಗೆ ಈ ಫಾರ್ಮ್‌ನಿಂದ ತೀವ್ರ ಸಮಸ್ಯೆ ಎದುರಾಗಿದೆ. ಮಲಯಾಳದಲ್ಲಿರುವ ಫಾರ್ಮ್ ಭರ್ತಿಗೊಳಿಸಲು ಕನ್ನಡಿಗರಾದ ಮತದಾರರು ಪರದಾಡಬೇಕಾಗಿಬರಲಿದೆ. ಫಾರ್ಮ್ ಭರ್ತಿಗೊಳಿಸುವುದು ತಪ್ಪಿದಲ್ಲಿ …
Read more “ಎನ್ಯುಮರೇಶನ್ ಫಾರ್ಮ್ ಮಲೆಯಾಳದಲ್ಲಿ: ಕನ್ನಡಿಗರಿಗೆ ಸಮಸ್ಯೆ; ಪ್ರತಿಭಟನೆಯತ್ತ ಕನ್ನಡ ಸಂಘಟನೆಗಳು”