ಕೃಷಿಕ ಸಂಘದಿಂದ ಹೊಸಂಗಡಿಯಲ್ಲಿ ಪ್ರತಿಭಟನೆ

ಮಂಜೇಶ್ವರ: ಅಮೆರಿಕದೊಂ ದಿಗಿನ ಒಪ್ಪಂದವನ್ನು ಭಾರತ ಹಿಂತೆಗೆಯಬೇಕೆAದು ಒತ್ತಾಯಿಸಿ, ಅಮೆರಿಕ ಅಧ್ಯಕ್ಷ ಮತ್ತು ಭಾರತದ ಪ್ರಧಾನಿ ವಿರುದ್ಧ ಎಡರಂಗ ಕೃಷಿಕ ಸಂಘಟನೆಗಳ ನೇತೃತ್ವ ದಲ್ಲಿ ಹೊಸಂಗಡಿ ಪೇಟೆಯಲ್ಲಿ ಮೆರವಣಿಗೆ ನಡೆಸಲಾಯಿತು. ಮಂಜೇಶ್ವರ ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ ಅಧ್ಯಕ್ಷತೆ ವಹಿಸಿದರು. ಕಿಸಾನ್ ಸಭಾ ಜಿಲ್ಲಾ ಕಾರ್ಯ ದರ್ಶಿ ಕೆ. ಕುಂಞಕಣ್ಣನ್ ಉದ್ಘಾಟಿಸಿ ಮಾತನಾಡಿದರು. ಸಿ. ಪಿ. ಐ ನೇತಾರ ಜಯರಾಮ ಬಲ್ಲಂ ಗುಡೇಲು ಸ್ವಾಗತಿಸಿ, ನೇತಾರರಾದ ಕೆ. ಕಮಲಾಕ್ಷ, ಎಂ.ರಾಮಚAದ್ರ,  ಪ್ರಶಾಂತ್ ಕನಿಲ, ಅಹ್ಮದ್ ಹುಸೇನ್  ಮಾಸ್ಟರ್, ಬಿ.ಎಂ. ಕರುಣಾಕರ …

ಯು.ಪಿ. ಕುಣಿಕುಳ್ಳಾಯರು ಸದಾ ಸ್ಮರಣೀಯರು-ಸಂಸ್ಮರಣಾ ಕಾರ್ಯಕ್ರಮದಲ್ಲಿ ಮುರಳೀಧರ ಬಳ್ಳಕ್ಕುರಾಯ

ಕಾಸರಗೋಡು :ಮಾಜಿ ಶಾಸಕ, ಕನ್ನಡ ಹೋರಾಟಗಾರ, ನ್ಯಾಯವಾದಿ ದಿ| ಯು.ಪಿ ಕುಣಿಕುಳ್ಳಾಯರ ಸಂಸ್ಮರಣಾ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕಾಸರಗೋಡಿನ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು.ಕರ್ನಾಟಕ ಸಮಿತಿ ಅಧ್ಯಕ್ಷ, ನ್ಯಾಯವಾದಿ ಕೆ. ಮುರಳೀಧರ ಬಳ್ಳಕ್ಕುರಾಯ ಸಂಸ್ಮರಣಾ ಭಾಷಣ ಮಾಡಿದರು. ಕಾಸರಗೋಡಿನಲ್ಲಿ ಕನ್ನಡದ ಸವಲತ್ತುಗಳನ್ನು ಉಳಿಸುವುದಕ್ಕಾಗಿ ಕನ್ನಡದ ಹಿತರಕ್ಷಣೆಗಾಗಿ ಕುಣಿಕುಳ್ಳಾಯರು ಅವಿರತವಾಗಿ ಶ್ರಮಿಸಿದವರು. ಕನ್ನಡಕ್ಕೆ, ಕನ್ನಡಿಗರಿಗೆ ಅನ್ಯಾಯವಾದಾಗ ಸಂಬAಧಪಟ್ಟವರಿಗೆ ನೂರಾರು ಮನವಿ ಸಲ್ಲಿಸಿ, ನ್ಯಾಯಾಲಯದ ಮೆಟ್ಟಲೇರಿ ನ್ಯಾಯ ದೊರಕಿಸಿಕೊಟ್ಟವರು ಎಂದು ಅವರು ಹೇಳಿದರು. …

ಎಣ್ಮಕಜೆ ಪಂ.ನಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮ

ಪೆರ್ಲ: ಎಣ್ಮಕಜೆ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ನಾಳೆ ನಡೆಸಲಾಗುವುದು. ಕಳೆದ 5 ವರ್ಷದಿಂದ ಪಂಚಾಯತ್ ಆಡಳಿತ ಸಮಿತಿ ನೇತೃತ್ವದಲ್ಲಿ ಹಿರಿಯರಿಗೆ ಗೌರವ, ಕಿರಿಯರಿಗೆ ಪ್ರೋತ್ಸಾಹ ಎಂಬ ಗುರಿಯಿರಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಈ ಬಾರಿಯೂ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸುವುದಾಗಿ ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್. ಈ ಬಗ್ಗೆ ನಡೆದ ಸಮಾಲೋಚನಾ ಸಭೆಯಲ್ಲಿ ತಿಳಿಸಿದ್ದಾರೆ. ಪಂಚಾಯತ್ ಉಪಾಧ್ಯಕ್ಷೆ ರಮ್ಲ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್, ಕಾರ್ಯದರ್ಶಿ ಶಾನವಾಸ್, ಸಹಾಯಕ ಕಾರ್ಯದರ್ಶಿ ಗಿರೀಶ್ …

ಪ್ರಯಾಣ ಸಂಕಷ್ಟ ಅನುಭವಿಸುವ ದೇಲಂಪಾಡಿ ಪಂಚಾಯತ್‌ನ 3 ರಸ್ತೆಗಳ ಕಾಮಗಾರಿಗೆ ಚಾಲನೆ

ದೇಲಂಪಾಡಿ: ದೇಲಂಪಾಡಿಯ ವಿವಿಧ ಪ್ರದೇಶಗಳ ಜನರು ಸಂಚಾರ ಸಂಕಷ್ಟದಿಂದ ಬಳಲುತ್ತಿರುವುದಕ್ಕೆ ಪರಿಹಾರ ಕೈಗೊಳ್ಳಲು ಪಂಚಾಯತ್ ಸಿದ್ಧವಾಗಿದೆ. ಇದರಂಗವಾಗಿ ಪಂಚಾಯತ್‌ನ ರಸ್ತೆಗಳನ್ನು ಪುನರುದ್ಧರಿಸುವ ಯೋಜನೆಯಲ್ಲಿ ಒಳಪಡಿಸಿ ೧೫ ಲಕ್ಷ ರೂ.ನಂತೆ ವೆಚ್ಚದಲ್ಲಿ ನಿರ್ಮಿಸುವ ಮೂರು ರಸ್ತೆಗಳ ಕಾಮಗಾರಿ ಉದ್ಘಾಟನೆಯನ್ನು ಇಂದು ಶಾಸಕ ಸಿ.ಎಚ್. ಕುಂಞಂಬು ನಿರ್ವಹಿಸುವರು. ಇದರೊಂದಿಗೆ ದೇಲಂಪಾಡಿಯ ವಿವಿಧ ಪ್ರದೇಶಗಳಿಗೆ, ಕುತ್ತಿಕ್ಕೋಲ್ ಪಂಚಾಯತ್‌ನ ವಿವಿಧ ಭಾಗಗಳಿಗೆ, ಅಂತಾರಾಜ್ಯ ಹೆದ್ದಾರಿಗಿರುವ ಸಂಚಾರ ಸುಲಭವಾಗಲಿದೆ. ಪರಿಶಿಷ್ಟ ಪಂಗಡದವರ ಕೇಂದ್ರವಾದ ಕಯರ್ತೋಡಿ ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಪ್ರದೇಶವಾಗಿದೆ. ಕೆಸರು, ಮಣ್ಣು ತುಂಬಿದ …

ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಅನುಜ್ಞಾಕಲಶ, ಬಾಲಾಲಯ ಪ್ರತಿಷ್ಠೆ ನಾಳೆಯಿಂದ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಅನುಜ್ಞಾಕಲಶ, ಬಾಲಾಲಯ ಪ್ರತಿಷ್ಠೆ, ಶಕ್ತಿಪಂಚಾಕ್ಷರಿ ಯಾಗ ನಾಳೆ, 16, 17ರಂದು ಜರಗಲಿದೆ. ಗರ್ಭಗುಡಿ ಹಾಗೂ ಒಳಾಂಗಣ ನವೀಕರಣ ಕೆಲಸಗಳಿಗೆ ಪೂರ್ವಭಾವಿಯಾಗಿ ಅನುಜ್ಞಾ ಕಲಶ, ಬಾಲಾಲಯ ಪ್ರತಿಷ್ಠೆ, ಶಕ್ತಿಪಂಚಾಕ್ಷರಿ ಯಾಗ ಕಾರ್ಯಕ್ರಮಗಳು ಬ್ರಹ್ಮಶ್ರೀ ರವೀಶತಂತ್ರಿ ಕುಂಟಾರು ಇವರ ನೇತೃತ್ವದಲ್ಲಿ ನಡೆಯಲಿದೆ.ನಾಳೆ ಸಂಜೆ 6ರಿಂದ ವಿವಿದ ವೈದಿಕ ಕಾರ್ಯಕ್ರಮ, 16ರಂದು ಬೆಳಗ್ಗೆ 5ರಿಂದ ಗಣಪತಿ ಹೋಮ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ತತ್ವಹೋಮ, ಸಾಯಂಕಾಲ 6ರಿಂದ ಅವಾಸ ಹೋಮ, ಕುಂಭೇಶಕರ್ಕರಿ ಪೂಜೆ, ಪರಿಕಲಶ …

ಕಾಸರಗೋಡು ನಗರದ ಬ್ಯಾಂಕ್ ರಸ್ತೆ ಶೋಚನೀಯಾವಸ್ಥೆ: ಬಿಎಂಎಸ್‌ನಿಂದ ಚಳವಳಿ

ಕಾಸರಗೋಡು:  ಕಾಸರಗೋಡು ನಗರದ ಬ್ಯಾಂಕ್ ರಸ್ತೆಯ ಶೋಚನೀ ಯಾವಸ್ಥೆಗೆ ಪರಿಹಾರ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯನೀತಿ ಅನುಸರಿಸು ತ್ತಿರುವ ಅಧಿಕಾರಿಗಳ ಕ್ರಮವನ್ನು ಪ್ರತಿಭಟಿಸಿ  ಬಿಎಂಎಸ್ ಕಾಸರಗೋಡು ವಲಯ ಸಮಿತಿ ವತಿಯಿಂದ ಇಂದು ಬೆಳಿಗ್ಗೆ ದಿಗ್ಬಂಧನ ಚಳವಳಿ ನಡೆಸಲಾಯಿತು. ಬಿಎಂಎಸ್ ಜಿಲ್ಲಾ ಕಚೇರಿ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂ ಡಿದ್ದು, ಬಳಿಕ ಏರ್‌ಲೈನ್ಸ್ ಜಂಕ್ಷನ್‌ನಲ್ಲಿ ಚಳವಳಿ ನಡೆಸಲಾಯಿತು.  ಬಿಎಂಎಸ್ ಜಿಲ್ಲಾಧ್ಯಕ್ಷ ಉಪೇಂದ್ರ ಕೋಟೆಕಣಿ ಉದ್ಘಾಟಿಸಿದರು.  ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ನೇತಾರರಾದ ದಿನೇಶ್ ಬಂಬ್ರಾಣ, ಕುಂಞಿಕಣ್ಣನ್, ಹರೀಶ್ ಕುದ್ರೆಪ್ಪಾಡಿ, ಕೇಶವ, …

ಕುಂಬಳೆ ಸಹಕಾರಿ ಬ್ಯಾಂಕ್ ಮಾಜಿ ನಿರ್ದೇಶಕ ನಿಧನ

ಕುಂಬಳೆ:  ಕಂಚಿಕಟ್ಟೆ ರಾಂ ನಗರ ನಿವಾಸಿ ತುಕಾರಾಮ್ (66) ನಿನ್ನೆ ರಾತ್ರಿ ನಿಧನಹೊಂದಿದರು. ಕುಂಬಳೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷ, ಕುಂಬಳೆ ಸೇವಾ ಸಹಕಾರಿ   ಬ್ಯಾಂಕ್‌ನ ಮಾಜಿ ನಿರ್ದೇಶಕರೂ, ಕ್ಯಾಂಪ್ಕೋದ ನಿವೃತ್ತ ಉದ್ಯೋ ಗಿಯೂ ಆಗಿದ್ದಾರೆ. ಮೃತರು ಪತ್ನಿ ಸೌಮ್ಯ ಟೀಚರ್, ಮಗ ಕುಲ್ ದೀಪ್, ಸೊಸೆ ನಿಶ್ಮಿತಾ, ಓರ್ವ ಸಹೋದರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

13ರ ಬಾಲಕ ಚಲಾಯಿಸಿದ ಸ್ಕೂಟರ್ ಅಪಘಾತಕ್ಕೀಡಾದ ಘಟನೆ: ವ್ಯಕ್ತಿಪಲ್ಲಟ ನಡೆಸಿದ ಬಗ್ಗೆ ಯುವತಿ ವಿರುದ್ಧ ಕೇಸು

13ರ ಬಾಲಕ ಚಲಾಯಿಸಿದ ಸ್ಕೂಟರ್ ಅಪಘಾತಕ್ಕೀಡಾದ ಘಟನೆ: ವ್ಯಕ್ತಿಪಲ್ಲಟ ನಡೆಸಿದ ಬಗ್ಗೆ ಯುವತಿ ವಿರುದ್ಧ ಕೇಸು ಕಾಸರಗೋಡು: 13ರ ಬಾಲಕ ಚಲಾಯಿಸಿದ ಸ್ಕೂಟರ್ ಅಪಘಾತಕ್ಕೀ ಡಾದ ಘಟನೆಯಲ್ಲಿ ವ್ಯಕ್ತಿಪಲ್ಲಟ ನಡೆಸಿದ ಯುವತಿ ವಿರುದ್ಧ ಹೊಸದುರ್ಗ ಪೊಲೀ ಸರು ಸ್ವತಃ ಕೇಸು ದಾಖಲಿಸಿದ್ದಾರೆ. ಹೊಸದುರ್ಗ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್‌ರ ದೂರಿನಂತೆ ನ್ಯಾಯಾಲಯದಲ್ಲಿ ತಪ್ಪು ಹೇಳಿಕೆ ನೀಡಿರುವುದಕ್ಕೆ ಕಾಞಂಗಾಡ್, ವಡಗರಮುಖ್‌ನ ಹಂಸರ ಪತ್ನಿ ಪಿ. ಅನೀಸ (42)ರ ವಿರುದ್ಧ ಕೇಸು ದಾಖಲಿಸಲಾಗಿದೆ. 2024 ನವೆಂಬರ್ 17ರಂದು ಘಟನೆ …

ಸುಂಕ ವಿವಾದ ಮಧ್ಯೆ ಪ್ರಧಾನಿ ಮೋದಿ ಮುಂದಿನ ತಿಂಗಳು ಅಮೆರಿಕ ಭೇಟಿ

ನವದೆಹಲಿ: ಅಮೆರಿಕಾದ ಜೊತೆ ಸುಂಕದ ಸಂಘರ್ಷ ನಡೆಯುತ್ತಿರುವ ಮಧ್ಯದಲ್ಲೇ ಪ್ರಧಾನಮಂತ್ರಿ ನರೇಂದ್ರಮೋದಿ ಮುಂದಿನ ತಿಂಗಳು ಅಮೆರಿಕಾಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು  ಸಂಬಂಧಪಟ್ಟ ಮೂಲಗಳು ತಿಳಿಸಿವೆ. ವಿಶ್ವಸಂಸ್ಥೆಯ ಸಾಮಾನ್ಯಸಭೆ (ಯುಎನ್‌ಜಿಎ) ಮುಂದಿನ ತಿಂಗಳು ಅಮೆರಿಕಾದಲ್ಲಿ ನಡೆಯಲಿದ್ದು, ಅದರಲ್ಲಿ  ಪ್ರಧಾನಮಂತ್ರಿ ಮೋದಿ ಭಾಗವಹಿಸುವ ಸಾಧ್ಯತೆ ಇದೆ.  ಈ ಸಾಮಾನ್ಯ ಸಭೆಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೈನ್ ಅಧ್ಯಕ್ಷ ಝೆಲ್‌ನ್ಸ್ಕಿ ಸೇರಿದಂತೆ ಉನ್ನತ ಮಟ್ಟದ ನಾಯಕರು ಭಾಗವಹಿಸು ವರು. ಯುಎನ್‌ಜಿಎ ಶೃಂಗ ಸಭೆ ನ್ಯೂಯಾರ್ಕ್ ನಗರದಲ್ಲಿ ಸೆಪ್ಟಂಬರ್ …

ತಲಪ್ಪಾಡಿಯಲ್ಲಿ ಲಾರಿ-ಕಾರು ಢಿಕ್ಕಿ: ನಾಲ್ವರಿಗೆ ಗಾಯ

ಮಂಜೇಶ್ವರ: ಕಾರು ಹಾಗೂ ಮೀನು ಸಾಗಾಟದ ಲಾರಿ ಢಿಕ್ಕಿ ಹೊಡೆದು ನಾಲ್ಕು ಮಂದಿ   ಗಾಯಗೊಂಡ ಘಟನೆ ಮೇಲಿನ ತಲಪ್ಪಾಡಿಯಲ್ಲಿ ಸಂಭವಿಸಿದೆ. ಇಂದು ಮುಂಜಾನೆ 1 ಗಂಟೆಗೆ ಅಪಘಾತ ಸಂಭವಿಸಿರುವುದಾಗಿ ತಿಳಿದುಬಂದಿದೆ. ಕಾರಿನಲ್ಲಿದ್ದ ನಾಲ್ಕು ಮಂದಿ ಗಾಯಗೊಂಡಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆಯೆಂದು ಹೇಳಲಾಗುತ್ತಿದೆ.  ಇವರನ್ನು ಮಂಗ ಳೂರಿನ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ಗಾಯಗೊಂಡವರ ಕುರಿತು ಮಾಹಿತಿ ಲಭ್ಯವಾಗಿಲ್ಲ.   ಕಾಸರಗೋಡು ಭಾಗದಿಂದ ಮಂಗಳೂರು ಭಾಗಕ್ಕೆ ತೆರಳುತ್ತಿದ್ದ ಕಾರು ಹಾಗೂ ಎದುರಿನಿಂದ ಬರುತ್ತಿದ್ದ ಮೀನಿನ ಲಾರಿ ಪರಸ್ಪರ ಢಿಕ್ಕಿ …