ನಿವೃತ್ತ ಟ್ರಷರಿ ನೌಕರ ನಿಧನ

ಎಡನೀರು: ಕಾಸರಗೋಡು ಅಶೋಕನಗರ ನಿವಾಸಿ, ನಿವೃತ್ತ ಟ್ರಷರಿ ನೌಕರ ಮೂಲತಃ ಎಡನೀರು ಚೂರಿಮೂಲೆಯ ಈಶ್ವರ ನಾಯ್ಕ (78) ನಿಧನ ಹೊಂದಿದರು. ಮೃತರು ಪತ್ನಿ ಕೆ. ಜಯಂತಿ (ಸರಕಾರಿ ಕಾಲೇಜಿನ ನಿವೃತ್ತ ನೌಕರೆ), ಕೆ. ಶ್ರೀಜ (ವಿದ್ಯಾನಗರ ಕೆಸಿಎಂಪಿ ಸೊಸೈಟಿಯಲ್ಲಿ ಸೀನಿಯರ್ ಕ್ಲರ್ಕ್), ಅಳಿಯ ಬಿ.ಎನ್. ರಾಧಾಕೃಷ್ಣನ್ (ನೆಕ್ರಾಜೆ ಬ್ಯಾಂಕ್ ಉಪಾಧ್ಯಕ್ಷ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸುತ್ತಿರುವುದು ಕೇರಳದಲ್ಲಿ ಮಾತ್ರ- ಎಂ.ಎಲ್. ಅಶ್ವಿನಿ

ಮಧೂರು: ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸುತ್ತಿರುವುದು, ಕೇಂದ್ರ ಯೋಜನೆಗಳನ್ನು ಬುಡಮೇಲುಗೊಳಿಸು ತ್ತಿರುವುದು ಕೇರಳದಲ್ಲಿ ಮಾತ್ರವೆಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಯುವಮೋರ್ಚಾ ಯೂನಿಟ್ ರೂಪೀಕರಣದ ಅಂಗವಾಗಿ ಮಧೂರು ಪಂಚಾಯತ್‌ನ ಕೇಳುಗುಡ್ಡೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಂಗಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೇಂದ್ರ ಸರಕಾರದೊಂದಿಗಿರುವ ಅಭಿಪ್ರಾಯ ಭಿನ್ನತೆಯಿಂದಾಗಿ ಜನರಿಗೆ ಉಪಕಾರಪ್ರದವಾಗುವ ಹಲವಾರು ಯೋಜನೆಗಳು, ಅಭಿವೃದ್ಧಿ ಯೋಜನೆಗಳನ್ನು ಮೊಟಕುಗೊಳಿಸಲು ಯತ್ನ ನಡೆಯುತ್ತಿದೆ. ಪಿಣರಾಯಿ ವಿಜಯನ್ ಸರಕಾರದ 10 ವರ್ಷದ ಆಡಳಿತ ಕೇರಳವನ್ನು ದೊಡ್ಡ ಸಾಲದ ಕೂಪಕ್ಕೆ ತಳ್ಳಿದೆ …

ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ: ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ ಇಂದು ಮುಳ್ಳೇರಿಯದಲ್ಲಿ

ಮುಳ್ಳೇರಿಯ: ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಸ್ವಾಗತ ಸಮಿತಿ ಕಚೇರಿಯ ಉದ್ಘಾಟನೆ ಇಂದು ಅಪರಾಹ್ನ ೩ ಗಂಟೆಗೆ  ಮುಳ್ಳೇ ರಿಯ ಜಿವಿಎಚ್ ಎಸ್‌ಎಸ್‌ನ ಹೈಸ್ಕೂಲ್ ವಿಭಾಗದಲ್ಲಿ ನಡೆಯಲಿದೆ. ಜಿಲ್ಲಾ ಪಂಚಾಯತ್  ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಸರಿತಾ ಉದ್ಘಾಟಿಸುವರು. ಉದ್ಯಮಿ ಎ.ಜಿ. ಗಣೇಶ್ ಶೆಟ್ಟಿ ಮಲ್ಲಾವರ ಅತಿಥಿಯಾಗಿ ರುವರು. ಕಲೋತ್ಸವದಂ ಗವಾಗಿ ಆಯ್ಕೆಯಾದ ಲಾಂಛನವನ್ನು ಸ್ವಾಗತ ಸಮಿತಿ ಗೌರವಾಧ್ಯಕ್ಷ  ನ್ಯಾಯವಾದಿ ಗೋಪಾಲಕೃಷ್ಣ ಬಿಡುಗಡೆಗೊಳಿ ಸುವರು.  ನವಂಬರ್ 11ರಿಂದ 15ರ ವರೆಗೆ  ಮುಳ್ಳೇರಿಯ ಜಿವಿಎಚ್‌ಎಸ್ ಎಸ್‌ನಲ್ಲಿ ಕುಂಬಳೆ ಉಪಜಿಲ್ಲಾ …

ನ.1ರ ಕನ್ನಡಿಗರ ಹೋರಾಟಕ್ಕೆ ವಿವಿಧ ಸಂಘಟನೆಗಳ ಬೆಂಬಲ

ಬದಿಯಡ್ಕ: ಕರ್ನಾಟಕ ಸಮಿತಿ ಕಾಸರಗೋಡು ಇದರ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕೊಂಡು ನವಂಬರ್ 1ರಂದು ಕಾಸರಗೋಡು ಕನ್ನಡಿಗರು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸುವ ಪ್ರತಿಭಟನೆಗೆ  ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಹತ್ತು ಸಮಸ್ತರು ಪೆರಡಾಲ, ಯಕ್ಷ ವಿಹಾರಿ ಬದಿಯಡ್ಕ, ಯಕ್ಷಭಾರತಿ ನೀರ್ಚಾಲು ಎಂಬೀ ಸಂಘಟನೆಗಳು ಕನ್ನಡಿಗರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಕನ್ನಡಿಗರಿಗೆ ಸಿಗಬೇಕಾದ ನ್ಯಾಯ ಯುತ ಹಕ್ಕುಗಳೊಂದಿಗೆ ನಡೆಯುವ ಈ ಹೋರಾಟದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇ ಕೆಂದು ಸಂಘಟನೆಗಳು ಕರೆ ನೀಡಿವೆ.

ಶಬರಿಮಲೆ ದೇಗುಲದಿಂದ ಲೂಟಿ ಹೊಡೆದ ಚಿನ್ನ ಬಳ್ಳಾರಿಯಲ್ಲಿ ಪತ್ತೆ

ತಿರುವನಂತಪುರ: ಶಬರಿಮಲೆ ದೇಗುಲದಿಂದ ನಾಪತ್ತೆಯಾದ ಚಿನ್ನವನ್ನು ಕರ್ನಾಟಕದ ಬಳ್ಳಾರಿ ಯಿಂದ ತನಿಖಾ ತಂಡ (ಎಸ್‌ಐಟಿ) ಪತ್ತೆ ಹಚ್ಚಿ ವಶಪಡಿಸಿಕೊಂಡಿದೆ. ಗಟ್ಟಿ ರೂಪದಲ್ಲಿ ಚಿನ್ನವನ್ನು ಪತ್ತೆಹಚ್ಚಲಾಗಿದೆ. ಆದರೆ ಅಲ್ಲಿಂದ ಎಷ್ಟು ಪ್ರಮಾಣದ ಚಿನ್ನ ವಶಪಡಿಸಲಾಗಿದೆ ಎಂಬ ಮಾಹಿತಿಯನ್ನು ತನಿಖಾ ತಂಡ ಈತನಕ ಬಹಿರಂಗಪಡಿಸಿಲ್ಲ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಅದನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ. ಶಬರಿಮಲೆ ದೇಗುಲದ ಗರ್ಭಗುಡಿಯ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ಕವಚದ ಚಿನ್ನವನ್ನು ಪ್ರಾಯೋಜಕ ಹಾಗೂ ಈ ಪ್ರಕರಣದ ಒಂದನೇ ಆರೋಪಿಯೂ ಆಗಿರುವ ಉಣ್ಣಿಕೃಷ್ಣನ್ ಪೋತ್ತಿ ಶಬರಿಮಲೆಯಿಂದ …

ಬಾಲಕರ ವಾಹನ ಚಾಲನೆ: ನಾಲ್ಕು ವಾಹನ ವಶ; ಹೆತ್ತವರ ವಿರುದ್ಧ ಕೇಸು

ಕುಂಬಳೆ:  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ನಿರ್ದೇಶ ಮೇರೆಗೆ ಕುಂಬಳೆಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.  ಪ್ರಾಯಪೂರ್ತಿಯಾಗದವರ ವಾಹನ ಚಾಲನೆ ಸಹಿತ ವಿವಿಧ ಕಾನೂನು ಉಲ್ಲಂಘಿಸಿ ನಡೆಯುವ ಚಟುವಟಿ ಕೆಗಳನ್ನು ತಡೆಗಟ್ಟುವುದು ಇದರ ಉದ್ದೇಶವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಇದರಂತೆ ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ  ಪ್ರಾಯಪೂರ್ತಿ ಯಾಗದ ಮಕ್ಕಳು ಚಲಾಯಿಸುತ್ತಿದ್ದ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಕ್ಕೆ ತೆಗೆಯ ಲಾಗಿದೆ.  ಈ ಸಂಬಂಧ ಮಕ್ಕಳ ಹೆತ್ತವರಾದ ಇಚ್ಲಂಗೋಡು ಪಡತ್ತೂರು ಹೌಸ್‌ನ ಆಯಿಶತ್ ಸಬೂರ (36), ಸೀತಾಂಗೋಳಿ ಮುಖಾರಿಕಂಡದ ಸುಹರಾ ಎಂ.ಎ (45), …

ಕುಂಬಳೆಯಲ್ಲಿ ಗೂಡಂಗಡಿ ವ್ಯಾಪಾರಿಗಳ ಮಧ್ಯೆ ಹೊಡೆದಾಟ: ಇಬ್ಬರ ಬಂಧನ

ಕುಂಬಳೆ: ಕುಂಬಳೆ ಪೇಟೆಯ  ಇಬ್ಬರು ಗೂಡಂಗಡಿ ವ್ಯಾಪಾರಿಗಳು ನಿನ್ನೆ ಸಂಜೆ ಪರಸ್ಪರ ಹೊಡೆದಾಡಿ ಕೊಂಡ ಘಟನೆ ನಡೆದಿದೆ.  ಈ ಸಂಬಂಧ ಆರಿಕ್ಕಾಡಿ ಕಡವತ್‌ನ ಅಬ್ದುಲ್ ಮರ್ಶಾದ್ (24), ಬಂಬ್ರಾಣದ ಸ್ವಸ್ತಿಕ್ ಶೆಟ್ಟಿ (19) ಎಂಬಿವರನ್ನು  ಎಸ್‌ಐ ಪ್ರದೀಪ್ ಕುಮಾರ್ ನೇತೃತ್ವದ ಪೊಲೀಸರು ಸೆರೆಹಿಡಿದಿದ್ದಾರೆ.  ಅಬ್ದುಲ್ ಮರ್ಶಾದ್ ಹಾಗೂ ಸ್ವಸ್ತಿಕ್ ಶೆಟ್ಟಿ ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ  ಗೂಡಂಗಡಿ ವ್ಯಾಪಾರಿಗಳಾಗಿದ್ದಾರೆ. ನಿನ್ನೆ ಸಂಜೆ ವಾಹನ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಇವರೊಳಗೆ ತರ್ಕವುಂಟಾಗಿತ್ತೆನ್ನಲಾಗಿದೆ. ಬಳಿಕ ಇದು ಪರಸ್ಪರ ಹೊಡೆದಾಟದಲ್ಲಿ ಕೊನೆಗೊಂಡಿದೆ. ವಿಷಯ ತಿಳಿದು ತಕ್ಷಣ …

ವ್ಯಕ್ತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ವ್ಯಕ್ತಿಯೊಬ್ಬರು  ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೋಳಿಯಡ್ಕ ಕುನ್ನುಪ್ಪಾರ ನಿವಾಸಿ  ದಾಮೋದರನ್ (52) ಮೃತಪಟ್ಟ ವ್ಯಕ್ತಿ.ನಿನ್ನೆ ಸಂಜೆ ಇವರ ಮನೆ ಸಮೀಪದ ಬೇರೊಬ್ಬರ ಜನವಾಸ ವಿಲ್ಲದ ಮನೆಯಲ್ಲಿ ಇವರು  ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.  ದಾಮೋದರನ್‌ರ ಓರ್ವ ಪುತ್ರ ಧನುಷ್ ಎರಡು ತಿಂಗಳ ಹಿಂದೆ ನೇಣು ಬಿಗಿದು ಸಾವಿಗೀಡಾಗಿದ್ದನು. ಇದರಿಂದ ಮನನೊಂದು ದಾಮೋ ದರನ್ ನೇಣು ಬಿಗಿದಿರಬಹುದೆಂದು ಸಂಶಯಿಸಲಾಗುತ್ತಿದೆಯೆಂದು ಸಂಬಂಧಿಕರು ತಿಳಿಸುತ್ತಿದ್ದಾರೆ. ದಿ| ಕೃಷ್ಣನ್ ಎಂಬವರ ಪುತ್ರನಾದ ದಾಮೋದರನ್ ತಾಯಿ ಕೊರಪ್ಪಾಳು, ಪತ್ನಿ ಗೀತಾ, …

ಕೋಟಿಕುಳಂನಲ್ಲಿ ಪತ್ತೆಹಚ್ಚಿದ ಪ್ರಾಚ್ಯ ವಸ್ತು ಸಂಗ್ರಹದಲ್ಲಿ ವಿದೇಶಿ ವಸ್ತುಗಳು ಅಡಕವಾಗಿದೆ ಎಂದು ವರದಿ: ಜಿಲ್ಲಾಧಿಕಾರಿಯಿಂದ ಮುಂದಿನ ಕ್ರಮಕ್ಕೆ ಸಲ್ಲಿಕೆ

ಕಾಸರಗೋಡು: ಕೋಟಿಕುಳಂನಲ್ಲಿ ವ್ಯಕ್ತಿಯೋರ್ವರ ಮಾಲಕತ್ವದಲ್ಲಿರುವ ಕಟ್ಟಡಗಳಿಂದ ಪತ್ತೆಹಚ್ಚಿದ ಪ್ರಾಚ್ಯವಸ್ತು ಸಂಗ್ರಹದಲ್ಲಿ ಅಮೂಲ್ಯ ವಸ್ತುಗಳು, ವಿದೇಶದಿಂದ ತಂದ ಸಾಮಗ್ರಿಗಳು ಇದೆ ಎಂದು ಖಚಿತಪಡಿಸಲಾಗಿದೆ. ಆರ್ಕಿಯೋಲಜಿಕಲ್ ಸರ್ವೆ ಆಫ್ ಇಂಡಿಯದ ತೃಶೂರ್ ವಲಯ ಕಚೇರಿ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಈ ವಿಷಯ ಖಚಿತಪಡಿಸಲಾಗಿದೆ. ಬಂದೂಕುಗಳು, ತಲವಾರುಗಳು, ವಿವಿಧ ಪಾತ್ರೆಗಳು ಸಹಿತ ಹಲವಾರು ಸಾಮಗ್ರಿಗಳನ್ನು ದಿ| ಮುಹಮ್ಮದ್ ಕುಂಞಿಯ ಮಾಲಕತ್ವದಲ್ಲಿರುವ ಮನೆ ಹಾಗೂ ಕೊಠಡಿಯೊಂದರಿಂದ ಪತ್ತೆಹಚ್ಚಲಾಗಿತ್ತು. ಇವುಗಳಲ್ಲಿ ಕೆಲವು ಸಾಮಗ್ರಿಗಳು ವಿದೇಶ ನಿರ್ಮಿತವಾಗಿದೆ ಎಂದು, ಕೊಲ್ಲಿ ಅಥವಾ ಇತರ ದೇಶಗಳಿಂದ ಇದನ್ನು …

ಕುಂಬಳೆ: ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳ ಬಂಧನ

ಕುಂಬಳೆ: ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿ ತಲೆಮರೆಸಿಕೊಂಡ ಆರೋಪಿಗಳ ಪತ್ತೆಗಾಗಿ  ಕುಂಬಳೆ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಇದರಂತೆ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಸೂರಂಬೈಲ್ ಅಂಬೇಡ್ಕರ್ ಕಾಲನಿಯ ರಾಧಾಕೃಷ್ಣನ್, ಪೆರಿಯಡ್ಕದ ಹನೀಫ,  ಬಡಾಜೆ ಪಾರಪ್ಪಳ್ಳಿಯ ಮುಹಮ್ಮದ್ ಸಲಿಯಾರ್ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಪೈಕಿ ರಾಧಾಕೃಷ್ಣನ್ 2018ರಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ  ಆರೋಪಿಯಾಗಿದ್ದಾನೆ. ಹನೀಫ 2007ರಲ್ಲಿ ದಾಖಲಾದ ಅಬಕಾರಿ ಪ್ರಕರಣದ ಆರೋಪಿಯಾಗಿದ್ದಾನೆ. ಮುಹಮ್ಮದ್ ಸಲಿಯಾರ್ ಮನೆಯೊಂದಕ್ಕೆ ನುಗ್ಗಿ 2000 ರೂ. ಕಳವುಗೈದ ಪ್ರಕರಣದ ಆರೋಪಿಯಾಗಿದ್ದಾನೆಂದು …