ಕಾರಡ್ಕ ಸಂಭ್ರಮ ದ. 21ರಂದು: ಆಮಂತ್ರಣಪತ್ರಿಕೆ ಬಿಡುಗಡೆ

ಮುಳ್ಳೇರಿಯ: ಕಾರಡ್ಕ ಫೌಂಡೇಶನ್ ಟ್ರಸ್ಟ್ ಇದರ ಆಶ್ರಯದಲ್ಲಿ ದ.ಕ.ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಕೇರಳ, ಕರ್ನಾಟಕದಲ್ಲಿ ಹಲವು ಪುರಸ್ಕಾರಕ್ಕೆ ಅರ್ಹರಾದ ಯಕ್ಷಗುರು ರಾಘವ ಬಲ್ಲಾಳ್ ಕಾರಡ್ಕ ಇವರ ನೇತೃತ್ವದಲ್ಲಿ ಕಾರಡ್ಕ ಸಂಭ್ರಮ, ಸಾಧಕರಿಗೆ ಪ್ರಶಸ್ತಿ ಪ್ರದಾನ, ಶಿಷ್ಯರ ರಂಗಪ್ರವೇಶ ಕಾರ್ಯಕ್ರಮ ದ.21ರಂದು ಮುಂಡೋಳು ಕ್ಷೇತ್ರದ ಸಭಾ ಮಂಟಪದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸುವರು.ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಕೇರಳ ಕಲಾ ಮಂಡಲ ಅಸಿಸ್ಟೆಂಟ್ ಪ್ರೊಫೆಸರ್  ನೃತ್ಯ ಕಲಾವಿದ ಡಾ. ಆರ್.ಎಲ್.ವಿ. …

ಮಸ್ಕತ್-ಮಂಗಳೂರು ನೇರ ವಿಮಾನ ಸೇವೆ ಸ್ಥಗಿತ ಕರಾವಳಿ ಪ್ರದೇಶದ ಅನಿವಾಸಿ ಭಾರತೀಯರು ಸಂಕಷ್ಟದಲ್ಲಿ

ಮಂಗಳೂರು: ಮಂಗಳೂರು-ಮಸ್ಕತ್ ನೇರ ವಿಮಾನಯಾನ ಸೇವೆ ಯನ್ನು ಕಳೆದ ಮೂರು ತಿಂಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಅನಿವಾಸಿ ಭಾರತೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಾರಕ್ಕೆ ನಾಲ್ಕು ವಿಮಾನಗಳು ಈ ಮೊದಲು ನಿಯಮಿತವಾಗಿ ಸಂಚಾರ ಮಾಡುತ್ತಿದ್ದವು. ದಶಕಗಳಿಂದ ನಿರಂತರವಾಗಿ ನಡೆದಿದ್ದ ಈ ಸೇವೆ ಅಚಾನಕ್ ಸ್ಥಗಿತಗೊಂಡಿದ್ದು, ಮಸ್ಕತ್‌ನಲ್ಲಿ ನೆಲೆಸಿರುವ ಕರಾವಳಿ ಪ್ರದೇಶದ ಪ್ರಯಾಣಿಕರಿಗೆ ಸಂಕಷ್ಟ ಉಂಟುಮಾಡಿದೆ. ಗಲ್ಫ್ನ ಬಹುತೇಕ ರಾಷ್ಟ್ರಗಳಿಗೆ ನೇರ ವಿಮಾನ ಸೇವೆ ಮುಂದುವರಿದಿರುವ ಸಂದರ್ಭದಲ್ಲಿ, ಇತ್ತೀಚೆಗೆ ಕುವೈತ್ ದೇಶಕ್ಕೂ ನೇರ ವಿಮಾನ ಸೇವೆ ಆರಂಭಗೊAಡಿದೆ. ಆದರೆ ಮಸ್ಕತ್‌ನಿಂದ …

ಆರ್‌ಎಸ್‌ಎಸ್ ಉಪ್ಪಳ ಮಂಡಲದ ವಿಜಯದಶಮಿ ಉತ್ಸವ

ಉಪ್ಪಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಉಪ್ಪಳ ಮಂಡಲ ಇದರ ಆಶ್ರಯದಲ್ಲಿ ವಿಜಯದಶಮಿ ಉತ್ಸವ ನಿನ್ನೆ ಸಂಜೆ ಪ್ರತಾಪನಗರ ಶಿವಶಕ್ತಿ ಮೈದಾನದಲ್ಲಿ ನಡೆಯಿತು. ಇದರ ಅಂಗವಾಗಿ ಕೋಡಿಬೈಲು ಯಶೋನಂದ ನಗರ ಮೈದಾನದಿಂದ ಆರಂಭಿಸಿದ ನೂರಾರು ಸ್ವಯಂಸೇವಕರು ಭಾಗವಹಿಸಿದ ಪಥಸಂಚಲನ ಕೈಕಂಬ ದಾರಿಯಾಗಿ ಪ್ರತಾಪನಗರ ಶಿವಶಕ್ತಿ ಮೈದಾನದಲ್ಲಿ ಸಮಾಪ್ತಿಗೊಂಡಿತು. ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಧನ್‌ರಾಜ್ ಎ ಸುಭಾಷ್‌ನಗರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರ. ಆರ್‌ಎಸ್‌ಎಸ್ ಕಾಸರಗೋಡು ಜಿಲ್ಲಾ ಕಾರ್ಯವಾಹ್ ಪವಿತ್ರನ್ ಬಿ ಬೌದ್ಧಿಕ್ ನೀಡಿದರು.

ಕೃಪೇಶ್ ನಾಪತ್ತೆ ತನಿಖೆ ತೀವ್ರಗೊಳಿಸಲು ಪೊಲೀಸರಲ್ಲಿ ಒಬಿಸಿ ಮೋರ್ಛಾ ಆಗ್ರಹ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ಸೋಂಕಾಲು ಪ್ರತಾಪನಗರ ದಿಂದ 13 ವರ್ಷದ ಕೃಪೇಶ್ ನಾಪತ್ತೆಯಾದ ಪ್ರಕರಣದ ತನಿಖೆ ತೀವ್ರಗೊಳಿಸಬೇಕೆಂದು ಒಬಿಸಿ ಮೋರ್ಛಾ ಆಗ್ರಹಿಸಿದೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ 12 ದಿನಗಳು ಕಳೆದರೂ ಪೊಲೀಸರಿಗೆ ಯಾವುದೇ ಮಾಹಿತಿ ಲಭಿಸಿಲ್ಲ. ತನಿಖೆ ನಿಧಾನವಾಗಿ ನಡೆಯುತ್ತಿದೆಯೆಂದು ಬಿಜೆಪಿ ಒಬಿಸಿ ಮೋರ್ಛಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಆರೋಪಿಸಿದ್ದಾರೆ.  ಕೃಪೇಶ್ ಅವರ ತಂದೆ, ತಾಯಿ ಮತ್ತು ಸಹೋದರರು  ಸಂಕಷ್ಟದಲ್ಲಿದ್ದಾರೆ. ಆದಷ್ಟು ಶೀಘ್ರ ಕೃಪೇಶ್‌ರನ್ನು ಹುಡುಕಲು ವ್ಯವಸ್ಥೆ ಮಾಡಬೇಕು ಮತ್ತು ತನಿಖೆಯನ್ನು ತೀವ್ರಗೊಳಿಸಬೇಕು. …

ಸಿಪಿಎಂ ನೇತಾರೆಯಾದ ಯುವ ನ್ಯಾಯವಾದಿಯ ಸಾವು : ಮುಂದುವರಿದ ನಿಗೂಢತೆ; ತಲೆಮರೆಸಿಕೊಂಡ ನ್ಯಾಯವಾದಿಯ ಪತ್ತೆಗಾಗಿ ಶೋಧ, ಮೊಬೈಲ್‌ಫೋನ್ ಕೇಂದ್ರ ಫಾರೆನ್ಸಿಕ್ ಲ್ಯಾಬ್‌ಗೆ

ಕುಂಬಳೆ: ಸಿಪಿಎಂ ಲೋಕಲ್ ಕಮಿಟಿ ಸದಸ್ಯೆ, ಪ್ರಜಾಪ್ರಭುತ್ವ ಮಹಿಳಾ ಅಸೋಸಿಯೇಶನ್ ಕುಂಬಳೆ ವಿಲ್ಲೇಜ್ ಸೆಕ್ರೆಟರಿ, ಡಿವೈಎಫ್‌ಐ ವಲಯ ಅಧ್ಯಕ್ಷೆಯೂ, ಕಾಸರಗೋಡು ಬಾರ್‌ನ ಯುವ ನ್ಯಾಯವಾದಿಯೂ ಆಗಿದ್ದ ಸಿ. ರಂಜಿತ ಕುಮಾರಿ(30)ಯವರ ಸಾವಿನ ಬಗ್ಗೆ ನಿಗೂಢತೆ ಮುಂದುವರಿಯುತ್ತಿದೆ.  ಸಾವಿಗೆ ಕಾರಣವನ್ನು ಪತ್ತೆಹಚ್ಚಬೇಕೆಂದು  ಒತ್ತಾಯಿಸಿ ಸಿಪಿಎಂ ಸಹಿತ ವಿವಿಧ ಸಂಘಟನೆಗಳು  ರಂಗಕ್ಕಿಳಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಬೇರಿಕೆ ಕಡಪ್ಪುರದ ಕೃತೇಶ್ ಎಂಬವರ ಪತ್ನಿಯಾದ ರಂಜಿತ  ಮಂಗಳವಾರ  ಕುಂಬಳೆಯಲ್ಲಿರುವ ತನ್ನ ಕಚೇರಿಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮನೆಯವರು …

ತಂದೆಯ ಕಿರುಕುಳದಿಂದ: ಗರ್ಭಿಣಿಯಾದ 14ರ ಬಾಲಕಿ; ಪರಾರಿಯಾಗಲೆತ್ನಿಸಿದ ಆರೋಪಿ ಬಂಧನ

ಕಾಸರಗೋಡು: ತಂದೆಯ ನಿರಂತರ ಲೈಂಗಿಕ ಕಿರುಕುಳದಿಂದಾಗಿ 14ರ ಹರೆಯದ ಬಾಲಕಿ ಗರ್ಭಿಣಿಯಾದ ಘಟನೆ ಬೆಳಕಿಗೆ ಬಂದಿದೆ. ಮಗಳು ಗರ್ಭಿಣಿಯಾದ ವಿಷಯ ತಿಳಿಯುತ್ತಲೇ ಪಾಸ್‌ಪೋರ್ಟ್‌ನೊಂದಿಗೆ ಪರಾರಿಯಾಗಲೆತ್ನಿಸಿದ ತಂದೆಯನ್ನು ಹೊಸದುರ್ಗ ಪೊಲೀಸರು ಅತೀ ಸಾಹಸಿಕವಾಗಿ ಸೆರೆ ಹಿಡಿದು  ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಕರ್ನಾಟಕದ ಕೊಡಗು ನಿವಾಸಿಯಾದ 45ರ ಹರೆಯದ ವ್ಯಕ್ತಿ ವಿರುದ್ಧ ಕೇಸು ದಾಖಲಾಗಿದೆ. ಆರೋಪಿ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಕ್ವಾರ್ಟರ್ಸ್‌ವೊಂದರಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದನು. ಎಂಟನೇ ತರಗತಿ ವಿದ್ಯಾರ್ಥಿನಿಯಾದ ಮಗಳಿಗೆ ಇತ್ತೀಚೆಗೆ ಅಸಹನೀಯ ಸೊಂಟನೋವು ಅನುಭವಗೊಂಡುದರಿಂದ …

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: ಸಮಗ್ರ ತನಿಖೆ ಒತ್ತಾಯಿಸಿ ಪಂದಳ ಅರಮನೆ,ರಾಜಕೀಯ ಪಕ್ಷಗಳೂ ಪ್ರತ್ಯಕ್ಷ ಹೋರಾಟಕ್ಕೆ

ಪತ್ತನಂತಿಟ್ಟ: ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ಕವಚದಿಂದ ಚಿನ್ನ  ಹೇಗೆ ಮಾಯವಾಯಿತು ಎಂಬುವುದು ಈಗಲೂ ಬೇಧಿಸಲಾಗದ ನಿಗೂಢ ಪ್ರಶ್ನೆಯಾಗಿಯೇ ಮುಂದುವರಿದಿದೆ. ಉದ್ಯಮಿ ವಿಜಯ್ ಮಲ್ಯ 1998ರಲ್ಲಿ ಚಿನ್ನ ಲೇಪಿತ ದ್ವಾರಪಾಲಕ ಮೂರ್ತಿ ಕವಚವನ್ನು ಶಬರಿಮಲೆಗೆ ಕಾಣಿಕೆ ರೂಪದಲ್ಲಿ ಸಮರ್ಪಿಸಿದ್ದರು. ಆ ಕವಚ ನಿರ್ಮಿಸಲು 33 ಕಿಲೋ ಗ್ರಾಂ ಚಿನ್ನ ಉಪಯೋಗಿಸಲಾಗಿತ್ತೆಂದು ಉದ್ಯಮಿ ವಿಜಯ್ ಮಲ್ಯ ಅಂದು ನಿಯೋಜಿಸಿದ ತಜ್ಞರು ತಿಳಿಸಿದ್ದಾರೆ.  ಆ ಬಳಿಕ 2019ರಲ್ಲಿ ಆ ಕವಚ ಕೇವಲ ತಾಮ್ರವಾಗಿ ಹೇಗೆ ಬದಲಾಯಿತೆಂಬ ಪ್ರಶ್ನೆಗೆ …

ಪತ್ನಿಯನ್ನು ಕೊಂದು ಮೃತದೇಹ ಕಂದಕಕ್ಕೆಸೆದ ಪತಿ ಮೈಸೂರಿನಲ್ಲಿ ಸೆರೆ: ಜತೆಗಿದ್ದ ಇರಾನ್‌ನ ಯುವತಿ ಕಸ್ಟಡಿಗೆ

ಕೋಟಯಂ: ಅನ್ಯಸ್ತ್ರೀಯರೊಂ ದಿಗಿನ ಸಂಬಂಧವನ್ನು ಪ್ರಶ್ನಿಸಿದ ಪತ್ನಿಯನ್ನು  ಉಸಿರುಗಟ್ಟಿಸಿ ಕೊಲೆಗೈದು ಮೃತದೇ ಹವನ್ನು ಕಂದಕಕ್ಕೆಸೆದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಣಕ್ಕಾರಿ ರತ್ನಗಿರಿ ಸಮೀಪ ಕಪ್ಪಣಕ್ಕುನ್ನೇಲ್ ನಿವಾಸಿ ಜೆಸಿ ಸಾಮ್ (50) ಕೊಲೆಗೀಡಾದ  ಮಹಿಳೆ. ಈ ಪ್ರಕರಣಕ್ಕೆ ಸಂಬಂಧಿಸಿ ಪತಿ ಸಾಮ್ ಕೆ. ಜೋರ್ಜ್ (59)ನನ್ನು ಮೈಸೂರಿನಿಂದ ಬಂಧಿಸಲಾಗಿದೆ. ಈತನ ಜೊತೆಗಿದ್ದ ಇರಾನ್ ಪ್ರಜೆಯಾದ ಯುವತಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಸಾಮ್ ಕೆ. ಜೋರ್ಜ್‌ಗೆ ಹಲವು ಮಹಿಳೆಯರೊಂದಿಗೆ ಸಂಬಂಧವಿದೆ ಯೆಂದೂ ಅದನ್ನು ಪ್ರಶ್ನಿಸಿರುವುದೇ ಪತ್ನಿ ಯನ್ನು ಕೊಲೆಗೈಯ್ಯಲು ಕಾರಣವಾಗಿದೆ …

ಉಸಿರಾಟ ತೊಂದರೆ: ಯುವತಿ ಮೃತ್ಯು

ಮಧೂರು: ಅಸೌಖ್ಯ ಬಾಧಿಸಿದ್ದ ಯುವತಿ ಮೃತಪಟ್ಟ ಘಟನೆ ನಡೆದಿದೆ. ಮಧೂರು ಬಳಿಯ ಅರಂತೋಡು ನಿವಾಸಿ ತಿಮೋತಿ ಕ್ರಾಸ್ತರ ಪುತ್ರಿ ಸೌಮ್ಯಪ್ರಿಯ ಕ್ರಾಸ್ತ (25) ಮೃತ ಯುವತಿ. ಈಕೆಗೆ ಅಲ್ಪಕಾಲದಿಂದ ಅಸೌಖ್ಯ ಬಾಧಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಳೆನ್ನಲಾಗಿದೆ. ಇಂದು ಮುಂಜಾನೆ 3 ಗಂಟೆ ವೇಳೆ ಉಸಿರಾಟ ತೊಂದರೆ ಅನುಭವಗೊಂಡಿದ್ದು, ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ರಕ್ಷಿಸಲಾಗಲಿಲ್ಲ. ಮೃತಳು ತಂದೆ, ತಾಯಿ ವೆಲೆನ್ಸಿಯಾ ಡಿ’ಸೋಜಾ, ಸಹೋದರ-ಸಹೋದರಿಯರಾದ ಮೆಲ್ವಿನ್ ಕ್ರಾಸ್ತ, ಹರ್ಷಿತ್ ಪವನ್ ಕ್ರಾಸ್ತ, ಸ್ವಾತಿ ಪ್ರಿಯಾಂಕ ಕ್ರಾಸ್ತ,  ಶಾಲೆನ್ ಪ್ರೀತಿ …

ಬೈಕ್ ತಡೆದು ನಿಲ್ಲಿಸಿ ಇಬ್ಬರಿಗೆ ಹಲ್ಲೆ: 4 ಮಂದಿ ವಿರುದ್ಧ ನರಹತ್ಯಾಯತ್ನ ಕೇಸು

ಬದಿಯಡ್ಕ: ಪಂಚಾಯತ್‌ನ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ ದ್ವೇಷದಿಂದ ಬೈಕ್ ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಶೇಣಿ ಪಜ್ಜಾನ ಪುಲ್ಲಾಟ್ ಹೌಸ್‌ನ ಅಜೀಶ್ ಜೋಸೆಫ್ (33)ರ ದೂರಿನಂತೆ ಜಯಂತ, ವಸಂತ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇನ್ನಿಬ್ಬರ ವಿರುದ್ಧ ಬದಿಯಡ್ಕ ಪೊಲೀಸರು ನರಹತ್ಯಾಯತ್ನ ಕೇಸು ದಾಖಲಿಸಿಕೊಂಡಿದ್ದಾರೆ.ಕಳೆದ ಮಂಗಳವಾರ ರಾತ್ರಿ 7.30ಕ್ಕೆ ಓಣಿಬಾಗಿಲು ಎಂಬಲ್ಲಿ ಘಟನೆ ನಡೆದಿದೆ. ಅಜೀಶ್ ಜೋಸೆಫ್ ಹಾಗೂ ಸ್ನೇಹಿತ ಗಣೇಶ್ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಸ್ಕೂಟರ್‌ಗಳಲ್ಲಿ ತಲುಪಿದ ನಾಲ್ಕು ಮಂದಿ ತಡೆದು …