ಧರ್ಮಸ್ಥಳ ಕ್ಷೇತ್ರ ಭಕ್ತವೃಂದ ನೇತೃತ್ವದಲ್ಲಿ ನಗರದಲ್ಲಿ ಪಂಜಿನ ಮೆರವಣಿಗೆ

ಕಾಸರಗೋಡು: ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆಯುತ್ತಿರುವ ವಿಧ್ವಂ ಸಕ ಚಟುವಟಿಕೆಗಳ ವಿರುದ್ಧವಾಗಿ ಧರ್ಮಸ್ಥಳ ಕ್ಷೇತ್ರ ಭಕ್ತವೃಂದ, ಕಾಸರಗೋಡು ಇವರ ನೇತೃತ್ವದಲ್ಲಿ ನಿನ್ನೆ ಸಂಜೆ ಕಾಸರಗೋಡು ನಗರದಲ್ಲಿ ಪಂಜಿನ ಮೆರವಣಿಗೆ ಜರುಗಿತು.ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಿಂದ ಪ್ರಾರಂಭವಾಗಿ ಪ್ರಮುಖ ಬೀದಿಗಳ ಮೂಲಕ ಸಾಗಿದಾಗ ನೂರಾರು ಭಕ್ತರು, ಯುವಕರು ಹಾಗೂ ಸಾರ್ವಜನಿಕರು ದೀಪಗಳೊಂದಿಗೆ ಭಾಗವಹಿಸಿ ಸಮಗ್ರ ಏಕತೆ ಹಾಗೂ ಭಕ್ತಿ ಭಾವವನ್ನು ತೋರಿಸಿದರು.ಸಮಾರೋಪ ಸಮಾರಂಭದಲ್ಲಿ ವಿವಿಧ ಸಂಘಟನೆಗಳ ಗಣ್ಯರು ಉಪಸ್ಥಿತರಿದ್ದರು. ಹಿಂದು ಐಕ್ಯ ವೇದಿಯ ಜಿಲ್ಲಾಧ್ಯಕ್ಷ ಎಸ್. ಪಿ. ಶಾಜಿ, …

ನ್ಯಾಯಾಲಯದ ಪರಿಗಣನೆಯಲ್ಲಿರುವ ಪ್ರಕರಣದಲ್ಲಿ ದೂರುದಾರನನ್ನು ಠಾಣೆಗೆ ಕರೆಸಿ ಅವಹೇಳನ, ಬೆದರಿಕೆ: ಮುಖ್ಯಮಂತ್ರಿಗೆ ದೂರು

ಕುಂಬಳೆ: ದೂರುದಾರನನ್ನು ಠಾಣೆಗೆ ಕರೆಸಿ ಪ್ರತಿ ದೂರುದಾರನ ಮುಂದೆ ಇನ್ಸ್‌ಪೆಕ್ಟರ್ ಆಕ್ಷೇಪಿಸಿ ಬೆದರಿಸಿರುವು ದಾಗಿ ಖ್ಯಾತ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತನಾದ ಬಿ. ವಿಕ್ರಮ್ ಪೈ ಮುಖ್ಯಮಂತ್ರಿ, ಡಿಜಿಪಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಜಿಲೆನ್ಸ್ ಡಿವೈಎಸ್‌ಪಿ, ಕುಂಬಳೆ ಠಾಣೆ ಇನ್ಸ್‌ಪೆಕ್ಟರ್ ಎಂಬಿ ವರಿಗೆ ದೂರು ನೀಡಿದ್ದಾರೆ. ರಾಜ್ಯದ ಕಾನೂನು ವ್ಯವಸ್ಥೆಯನ್ನು ಸಾಮಾನ್ಯ ಜನರನ್ನು ಬೆದರಿಸುವುದಕ್ಕಿರುವ ಮಾರ್ಗವನ್ನಾಗಿ ಕಂಡುಕೊಳ್ಳುವ ಕಾನೂನುಪಾಲಕರನ್ನು  ಮಾದರಿಯಾಗಿ ಶಿಕ್ಷಿಸಬೇಕೆಂದು ದೂರಿನಲ್ಲಿ ಅವರು ಆಗ್ರಹಿಸಿದ್ದಾರೆ. ಕುಂಬಳೆ ರಘುನಾಥ ಕೃಪಾದ ಬಿ. ವಿಕ್ರಮ್ ಪೈ ಹಾಗೂ …

ಕಾಸರಗೋಡು ಹೊಸ ಬಸ್ ನಿಲ್ದಾಣದ ಶೋಚನೀಯಾವಸ್ಥೆ ವಿರುದ್ಧ ಬಸ್ ಮಾಲಕರು, ನೌಕರರಿಂದ ಧರಣಿ

ಕಾಸರಗೋಡು: ಹೊಸ ಬಸ್ ನಿಲ್ದಾಣದ ಶೋಚನೀಯಾವಸ್ಥೆ ವಿರುದ್ಧ ಬಸ್ ಮಾಲಕರು, ನೌಕರರು ಜಂಟಿಯಾಗಿ ಮುಷ್ಕರ ಸಮಿತಿ ನೇತೃತ್ವದಲ್ಲಿ ಸಂಜೆ ಧರಣಿ ನಡೆಸಿದರು. ಸಿಐಟಿಯು ರಾಜ್ಯ ಕಾರ್ಯದರ್ಶಿ ಟಿ.ಕೆ. ರಾಜನ್ ಉದ್ಘಾಟಿಸಿದರು. ಬೀದಿ ವ್ಯಾಪಾರಿಗಳನ್ನು ಪುನರುದ್ಧರಿ ಸಲು ನಿರ್ಮಿಸಿದ ಅಂಗಡಿ ಕೊಠಡಿಗಳ ಮುಂಭಾಗದಲ್ಲಿ ಸಂರಕ್ಷಣೆ ಬೇಲಿ ನಿರ್ಮಿಸಬೇಕು, ಬಸ್‌ಗಳಿಗೆ ಪಾರ್ಕ್ ಮಾಡಲು ಅಗತ್ಯದ ಸೌಕರ್ಯ ಏರ್ಪಡಿಸಬೇಕು, ಪ್ರಯಾಣಿಕರಿಗೆ ಉಪಕಾರಪ್ರದವಾಗುವ ಇನ್‌ಫರ್ಮೇ ಶನ್ ಸೆಂಟರ್ ಪುನರ್ ಸ್ಥಾಪಿಸಬೇಕು, ಲಗೇಜ್‌ಗಳನ್ನು ಇರಿಸಲಿರುವ ಕ್ಲೋಕ್ ರೂಂ ಪುನರ್‌ಸ್ಥಾಪಿಸಬೇಕು, ಮಹಿಳೆ ಯರಿಗಿರುವ ವಿಶ್ರಾಂತಿ ಕೇಂದ್ರವನ್ನು …

ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ವಾರ್ಷಿಕ ಮಹಾಸಭೆ, ಧನ ಸಹಾಯ ವಿತರಣೆ 31ರಂದು

ಮಂಜೇಶ್ವರ: ಮಂಜೇಶ್ವರ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ವಾರ್ಷಿಕ ಮಹಾಸಭೆ ಮತ್ತು ಮೃತಪಟ್ಟ ವ್ಯಾಪಾರಿಗಳ ಕುಟುಂಬಕ್ಕೆ ಧನ ಸಹಾಯ ವಿತರಣೆ ಈ ತಿಂಗಳ 31ರಂದು ಬೆಳಿಗ್ಗೆ 10 ಗಂಟೆಗೆ ಹೊಸಂಗಡಿ ವ್ಯಾಪಾರ ಭವನದಲ್ಲಿ ನಡೆಯಲಿದೆ. ಆಶ್ರಯ ಯೋಜನೆಯಲ್ಲಿ ಮೃತಪಟ್ಟ ವ್ಯಾಪಾರಿಗಳ ಕುಟುಂಬಕ್ಕೆ 4 ಲಕ್ಷ ರೂ.ನಂತೆ ಎರಡು ಕುಟುಂಬಗಳಿಗೆ ಶಾಸಕ ಎ.ಕೆ.ಎಂ. ಅಶ್ರಫ್ ಧನ ಸಹಾಯ ವಿತರಿಸುವರು. ಎಸ್‌ಎಸ್‌ಎಲ್‌ಸಿ, ಪ್ಲಸ್ ಟು ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವ್ಯಾಪಾರಿಗಳ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು. ಅಧ್ಯಕ್ಷ …

ವಾಟರ್ ಅಥಾರಿಟಿಯಲ್ಲಿ ಅನಧಿಕೃತ ನೇಮಕಾತಿ ರದ್ದುಗೊಳಿಸಬೇಕು-ಬಿ.ಎಂ.ಎಸ್

ಕಾಸರಗೋಡು: ಕೇರಳ ವಾಟರ್ ಅಥಾರಿಟಿ ಕಾಸರಗೋಡು ಸೆಕ್ಷನ್ ನಲ್ಲಿ ಆಪರೇಟರ್‌ಗಳ ಜನರಲ್ ಟ್ರಾನ್ಸ್‌ಫರ್‌ನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ನಡೆಸಿದ ಅನಧಿಕೃತ ನೇಮಕಾತಿ ರದ್ದುಗೊಳಿ ಸಬೇಕೆಂದು ಒತ್ತಾಯಿಸಿ ಕೇರಳ ವಾಟರ್ ಅಥಾರಿಟಿ ಎಂಪ್ಲಾಯೀಸ್ ಸಂಘ್ (ಬಿಎಂಎಸ್) ಧರಣಿ ನಡೆಸಿತು.  ವರ್ಗಾವಣೆಗೊಂಡು ಬರುವ ನೌಕರರಿಗೆ ಮೇಜರ್ ಸ್ಕೀಮ್‌ಗಳಲ್ಲ್ಲಿ ನೇಮಕಾತಿ ನೀಡದೆ ಬಾಹ್ಯ ಒತ್ತಡಗಳಿಗೆ ಮಣಿದು ನ್ಯಾಯ ನಿಷೇಧಿಸುತ್ತಿರುವುದಾಗಿ ನೇತಾರರು ಆರೋಪಿಸಿದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಎಂಪ್ಲಾಯೀಸ್ ಸಂಘ್ ಜಿಲ್ಲಾಧ್ಯಕ್ಷ ಶಾಜಿ ಎಂ.ವಿ ಅಧಕ್ಷತೆ ವಹಿಸಿದರು.  ರಾಜ್ಯ ಉಪಾಧ್ಯಕ್ಷ …

ವಿಶ್ವ ಸಹೋದರತ್ವ ದಿನ ಪ್ರಯುಕ್ತ ರಕ್ತದಾನ ಶಿಬಿರ

ಕಾಸರಗೋಡು: ವಿಶ್ವ ಸಹೋದರತ್ವ ದಿನದ ಅಂಗವಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ಯ ವಿಶ್ವವಿದ್ಯಾಲಯ ಹಾಗೂ ಭಾರತಾಂಬಾ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆ ಬ್ಲಡ್ ಬ್ಯಾಂಕ್‌ನ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಸಲಾಯಿತು. ಅಣಂಗೂರಿ ನಲ್ಲಿರುವ ಭಾರತಾಂಬಾ ಸೇವಾ ಪ್ರತಿಷ್ಠಾನದ ಕಾರ್ಯಾಲಯದಲ್ಲಿ ನಡೆದ ಶಿಬಿರದಲ್ಲಿ ಜನರಲ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್  ಮೆಡಿಕಲ್ ಆಫೀಸರ್ ಡಾ| ಸೌಮ್ಯ ನಾಯರ್, ಕಾಸರಗೋಡು ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ವಿಜಯ ಲಕ್ಷ್ಮಿ, ಅಣಂಗೂರು ಭಾರತೀಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜಯಂತ, ಸೇವಾ ಭಾರತಿಯ …

ರಾಹುಲ್ ಮಾಕೂಟತ್ತಿಲ್ ರಾಜೀನಾಮೆ ಆಗ್ರಹಿಸಿ ಡಿಫಿ ಪ್ರತಿಭಟನೆ

ಬಂದ್ಯೋಡು: ಯೂತ್ ಕಾಂಗ್ರೆಸ್ ಮುಖಂಡನಾಗಿದ್ದ ಪಾಲಕ್ಕಾಡ್ ಶಾಸಕ ರಾಹುಲ್ ಮಾಕೂಟತ್ತಿಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಡಿವೈಎಫ್‌ಐ ಬಂದ್ಯೋಡ್‌ನಲ್ಲಿ ಪ್ರತಿಭಟನೆ ನಡೆಸಿತು. ಡಿಫಿ ಜಿಲ್ಲಾ ಜೊತೆ ಕಾರ್ಯದರ್ಶಿ ಸಾದಿಕ್ ಚೆರುಗೋಳಿ ಉದ್ಘಾಟಿಸಿದರು. ದೀಕ್ಷಿತ್ ಉಪ್ಪಳ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಬ್ಲೋಕ್ ಕಾರ್ಯದರ್ಶಿ ವಿನಯ್ ಕುಮಾರ್ ಬಾಯಾರು, ಇಕ್ಬಾಲ್ ಪೆರಿಂಗಡಿ, ಇಕ್ಬಾಲ್ ಶಿರಿಯಾ ಮಾತನಾಡಿದರು. ನೌಶಾದ್ ಹೇರೂರು ಸ್ವಾಗತಿಸಿದರು.

ಬದಿಯಡ್ಕದಲ್ಲಿ ಜೀಪು-ಬೈಕ್ ಢಿಕ್ಕಿ: ಬಿ.ಎಂ.ಎಸ್ ಕಾರ್ಯಕರ್ತ ಮೃತ್ಯು; ಇನ್ನೋರ್ವನಿಗೆ ಗಾಯ

ಬದಿಯಡ್ಕ: ಬದಿಯಡ್ಕದಲ್ಲಿ ನಿನ್ನೆ ಸಂಜೆ ಜೀಪು-ಬೈಕ್ ಢಿಕ್ಕಿ ಹೊಡೆದು ಮಧೂರು ನಿವಾಸಿಯಾದ  ಬಿಎಂಎಸ್ ಕಾರ್ಯಕರ್ತ ಯುವಕ ಮೃತಪಟ್ಟ ದಾರುಣ ಘಟನೆ ಸಂಭ ವಿಸಿದೆ. ಅಪಘಾತದಲ್ಲಿ ಇನ್ನೋರ್ವ  ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಧೂರು ಕೋಡಿಮಜಲು ನಿವಾಸಿ ದಿ| ಕೃಷ್ಣನ್ ಎಂಬವರ ಪುತ್ರ ವಿಜಯ ಕುಮಾರ್ ಯಾನೆ ಪಮ್ಮು (38) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ.  ಇವರ ಸ್ನೇಹಿ ತನಾದ ನೀರ್ಚಾಲು ಮಧೂರು ನಿವಾಸಿಯಾದ ರಾಧಾಕೃಷ್ಣ ಎಂಬವರು ಗಾಯಗೊಂಡಿದ್ದು, ಅವರನ್ನು ಮಂಗ ಳೂರಿನ  ಆಸ್ಪತ್ರೆಯಲ್ಲಿ ದಾಖಲಿ ಸಲಾಗಿದೆ. ನಿನ್ನೆ ಸಂಜೆ …

ಜುಗಾರಿ ನಿರತ ಐದು ಮಂದಿ ಸೆರೆ

ಬದಿಯಡ್ಕ: ಜುಗಾರಿ ನಿರತ ಐದು ಮಂದಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಕೈಯಿಂದ 11,840 ರೂಪಾಯಿ ವಶಪಡಿಸಲಾಗಿದೆ. ನಾರಾಯಣಮಂಗಲ ರಾಜೀವಗಾಂಧಿ ಕಾಲನಿಯ ಸತೀಶ್ (39), ನೆಕ್ರಾಜೆ ಅರ್ಲಡ್ಕ ನಿವಾಸಿಗಳಾದ ರಮೇಶ್ (43), ಸಂತೋಷ್ (36), ರಜಿಲೇಶ್ (39), ಪೈಕದ ಸುರೇಶ್ (41) ಎಂಬಿವರು ಬಂಧಿತ ವ್ಯಕ್ತಿಗಳಾಗಿ ದ್ದಾರೆ.  ನಿನ್ನೆ ಸಂಜೆ ಪೈಕ ಅರ್ಲ ಡ್ಕದ ನೀರಿನ ಟ್ಯಾಂಕ್ ಸಮೀಪ ಇವರು ಜುಗಾರಿ ನಿರತರಾಗಿದ್ದರು. ಈ ಬಗ್ಗೆ ಮಾಹಿತಿ ಲಭಿಸಿದ ಬದಿಯಡ್ಕ ಎಸ್‌ಐ ಅಖಿಲ್ ನೇತೃತ್ವದ ಪೊಲೀಸರು ಕಾರ್ಯಾಚರಣೆ …

ಸ್ಕೂಟರ್-ಕಾರು ಢಿಕ್ಕಿ: ಸ್ಕೂಟರ್ ಸವಾರ ಮೃತ್ಯು; ಶೋಕ ಸಾಗರ

ಉಪ್ಪಳ: ಸ್ಕೂಟರ್-ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಮಂಗಲ್ಪಾಡಿ ಪ್ರತಾಪನಗರ ತಿಂಬರ ನಿವಾಸಿ ನಾರಾಯಣ ಆಚಾರ್ಯರ ಪುತ್ರ ನವೀನ್ ಆಚಾರ್ಯ (50) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಬಡಗಿ  ವೃತ್ತಿ ನಡೆಸುತ್ತಿದ್ದರು. ಶನಿವಾರ ಸಂಜೆ ಕೆಲಸ ಮುಗಿಸಿ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಆರಿಕ್ಕಾಡಿ ಸಮೀಪದ ಹೆದ್ದಾರಿಯಲ್ಲ್ಲಿ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆ ದಿದೆ. ಇದರಿಂದ ಗಂಭೀರ ಗಾಯ ಗೊಂಡ ಅವರನ್ನು ಸ್ಥಳೀಯರು ಕುಂಬಳೆ ಆಸ್ಪತ್ರೆಗೆ ಸಾಗಿಸಿ, ಬಳಿಕ …