ಕೊಲೆ ಪ್ರಕರಣ: ನಟ ದರ್ಶನ್ ಜಾಮೀನು ರದ್ದು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ಚಿತ್ರನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿಗೆ ನೀಡಲಾದ ಜಾಮೀನನ್ನು ಸುಪ್ರೀಂಕೋರ್ಟ್ ಇಂದು ಬೆಳಿಗ್ಗೆ ರದ್ದುಪಡಿಸಿದೆ. ಈ ಏಳು ಮಂದಿ ಆರೋಪಿಗಳಿಗೆ ಈ ಹಿಂದೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಅದರ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್ ಆರೋಪಿಗಳಿಗೆ  ಮಂಜೂರು ಮಾಡಲಾದ ಜಾಮೀನನ್ನು ರದ್ದುಪಡಿಸಲು ತೀರ್ಪು ನೀಡಿದೆ.

ಮೂತ್ರ ವಿಸರ್ಜನೆ ವೇಳೆ ರಸ್ತೆ ಬದಿಯ ಮರದ ರೆಂಬೆ ತಲೆಗೆ ಬಿದ್ದು ಲಾರಿ ಚಾಲಕ ದಾರುಣ ಮೃತ್ಯು

ಬದಿಯಡ್ಕ: ರಸ್ತೆ ಬದಿ ಲಾರಿ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಲಾರಿ ಚಾಲಕನ ತಲೆ ಮೇಲೆ ಮರದ ರೆಂಬೆ ಮುರಿದು ಬಿದ್ದು ಅವರು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ದ.ಕ ಜಿಲ್ಲೆಯ ಬಂಟ್ವಾಳ ಪೆರಾಜೆ ಕೂಡೋಲು ಎಂಬಲ್ಲಿನ ಕೆ. ಜಗದೀಶ ಗೌಡ (5೦) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ.  ನಿನ್ನೆ ಬೆಳಿಗ್ಗೆ 6.15ರ ವೇಳೆ ಪೆರ್ಲ-ಸೀತಾಂಗೋಳಿ ರಸ್ತೆಯ ಬೆದ್ರಂಪಳ್ಳದಲ್ಲಿ ಘಟನೆ ಸಂಭವಿಸಿದೆ. ಜಗದೀಶ್ ಗೌಡ ಮೂಡುಬಿದ್ರೆಯಿಂದ ಕಾಸರಗೋಡು ಭಾಗಕ್ಕೆ ಲಾರಿಯಲ್ಲಿ ಕೋಳಿ ಆಹಾರ ಸಾಗಿಸುತ್ತಿದ್ದರು. ಜತೆಗೆ ಕ್ಲೀನರ್ ಕೂಡಾ …

ಕೆಂಪುಕಲ್ಲು ಸಾಗಾಟ ಲಾರಿ-ಬೈಕ್ ಢಿಕ್ಕಿ: ವ್ಯಾಪಾರಿ ಸಹಿತ ಇಬ್ಬರಿಗೆ ಗಂಭೀರ ಗಾಯ

ಸೀತಾಂಗೋಳಿ: ಕೆಂಪುಕಲ್ಲು ಸಾಗಾಟದ ಲಾರಿ ಹಾಗೂ ಬೈಕ್ ಢಿಕ್ಕಿ ಹೊಡೆದು ವ್ಯಾಪಾರಿ ಸಹಿತ ಇಬ್ಬರು ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ. ಮಾನ್ಯ ನಿವಾಸಿಯೂ ನೀರ್ಚಾಲು ಮೇಲಿನ ಪೇಟೆಯಲ್ಲಿ  ಫ್ಯಾನ್ಸಿ ಅಂಗಡಿ ನಡೆಸುವ ಪಚ್ಚು ಯಾನೆ ಪ್ರಕಾಶ್ (36), ಚೆಡೇಕಲ್ ನಿವಾಸಿಯೂ ನೀರ್ಚಾಲಿನಲ್ಲಿ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ರತೀಶ್ (32) ಎಂಬವರು ಗಾಯಗೊಂಡಿದ್ದಾರೆ. ಇವರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ 5 ಗಂಟೆ ವೇಳೆ ಸೀತಾಂಗೋಳಿ ಪೆಟ್ರೋಲ್ ಬಂಕ್ ಸಮೀಪದ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಪ್ರಕಾಶ್ ಹಾಗೂ …

ಡಿವೈಎಫ್‌ಐ ನೇತಾರ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಡಿವೈಎಫ್‌ಐ ನೇತಾರ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೇಡಗಂ ಪೋಳ ಎಂಬಲ್ಲಿನ ವಿನೀಶ್ (34) ಮೃತಪಟ್ಟ ವ್ಯಕ್ತಿ. ಇವರು ಬೀಂಬುಂಗಾಲ್ ವಲಯ ಅಧ್ಯಕ್ಷರೂ, ಕುಂಡಂಗುಳಿ ಫಾರ್ಮರ್ಸ್ ಬ್ಯಾಂಕ್ ನೌಕರನೂ ಆಗಿದ್ದರು. ಇಂದು ಬೆಳಿಗ್ಗೆ ಇವರು ಮನೆಯ ಬೆಡ್‌ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಬೇಡಡ್ಕದ ತಾಲೂಕು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಬೇಡಗಂ ಪೊಲೀಸರು ಮೃತದೇಹದ ಮಹಜರು ನಡೆಸಿದರು. ಮೃತರು ತಾಯಿ ನಿರ್ಮಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

8.64 ಲೀಟರ್ ಮದ್ಯ ಸಹಿತ ಓರ್ವ ಸೆರೆ

ಕಾಸರಗೋಡು: ಓಣಂ ಸ್ಪೆಷಲ್ ಡ್ರೈವ್‌ನಂತೆ ಕಾಸರಗೋಡು ಎಕ್ಸೈಸ್ ರೇಂಜ್ ಎಕ್ಸೈಸ್ ಇನ್‌ಸ್ಪೆಕ್ಟರ್ ಸೂರಜ್ ಎನ್ ನೇತೃತ್ವದ ಅಬಕಾರಿ ತಂಡ ಕೂಡ್ಲು ಮೀಪುಗುರಿಯಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 8.64 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಮೀಪುಗುರಿಯ ಹರೀಶ್ ಬಿ (50) ಎಂಬಾತನನ್ನು ಇದಕ್ಕೆ ಸಂಬಂಧಿಸಿ  ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಪ್ರಿವೆಂಟೀವ್ ಆಫೀಸರ್ ರಂಜಿತ್ ಕೆ.ವಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಪ್ರಶಾಂತ್ ಕುಮಾರ್, ಅಮಲ್‌ಜಿತ್ ಎಂ.ಸಿ, ಸಂಶುದ್ದೀನ್ ವಿ.ಟಿ ಮತ್ತು ಅಶ್ವತಿ ವಿ ಎಂಬವರು ಈ ಕಾರ್ಯಾಚರಣೆ …

ನಗರದ ಬಾರ್ ಬಳಿ ಯುವಕರ ಮಧ್ಯೆ ಘರ್ಷಣೆ: ಎರಡು ಕೇಸು ದಾಖಲು

ಕಾಸರಗೋಡು: ನಗರದ ನುಳ್ಳಿಪ್ಪಾಡಿಯ ಮದ್ಯ ಬಾರ್‌ಬಳಿ ಯುವಕರ ಮಧ್ಯೆ ಘರ್ಷಣೆ ನಡೆದು ಅದರಲ್ಲಿ ಓರ್ವ ಇರಿತಕ್ಕೊಳಗಾಗಿದ್ದು ಇನ್ನೋರ್ವ  ಗಾಯಗೊಂಡ ಘಟನೆ ಮೊನ್ನೆ ರಾತ್ರಿ ನಡೆದಿದೆ. ಈ ಘರ್ಷಣೆಯಲ್ಲಿ ತಿರುವನಂತಪುರ ಬಾಲರಾಮಪುರ ನಿವಾಸಿ ತೌಫೀಕ್ ಮತ್ತು ಕಾಸರಗೋಡು ನೆಲ್ಕಳ ಹೌಸ್‌ನ ರಿಜೇಶ್ ಕೆ.ಆರ್ ಎಂಬವರು ಗಾಯಗೊಂಡಿದ್ದಾರೆ. ಈ ಪೈಕಿ ತೌಫೀಕ್‌ನನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆತ ನೀಡಿದ ದೂರಿನಂತೆ  ಕಾಸರಗೋಡು ಪೊಲೀಸರು ಕೊಲೆಯತ್ನ ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ರಿಜೇಶ್ ನೀಡಿದ ದೂರಿನಂತೆ ಕಂಡಲ್ಲಿ ಗುರುತುಹಚ್ಚಲು …

ಮದ್ಯ ಸಹಿತ ಓರ್ವ ಸೆರೆ

ಕುಂಬಳೆ: ಕರ್ನಾಟಕ ನಿರ್ಮಿತ ವಿದೇಶ ಮದ್ಯ ಸಹಿತ ಓರ್ವನನ್ನು ಬಂಧಿಸಲಾಗಿದೆ. ಕುಬಣೂರು ನಿವಾಸಿ ರಮೇಶ್ (49) ಎಂಬಾತನನ್ನು ಕುಂಬಳೆ ಎಸ್‌ಐ ಶ್ರೀಜೇಶ್ ಕೆ ಬಂಧಿಸಿದ್ದಾರೆ. ಆರೋಪಿಯ ಕೈಯಿಂದ ಕರ್ನಾಟಕ ನಿರ್ಮಿತ 8 ಬಾಟ್ಲಿ ಹಾಗೂ 34 ಪ್ಯಾಕೆಟ್ ಮದ್ಯ ವಶಪಡಿಸಲಾಗಿದೆ. ಇವುಗಳನ್ನು ಚೀಲದಲ್ಲಿ ತುಂಬಿಸಿ ಆರೋಪಿ ಮಾರಾಟ ಕ್ಕಾಗಿ ಕೊಂಡೊಯ್ಯುತ್ತಿದ್ದ ವೇಳೆ ಕುಬ ಣೂರು ಶಾಂತಿಗುರಿಯಿಂದ ವಶಪಡಿಸಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ಇಬ್ಬರಿಗೆ ರಾಷ್ಟ್ರಪತಿ ಪೊಲೀಸ್ ಮೆಡಲ್

ಕಾಸರಗೋಡು: ರಾಷ್ಟ್ರಪತಿಯವರ ಪೊಲೀಸ್ ಮೆಡಲ್‌ಗೆ ಕಾಸರಗೋಡು ಜಿಲ್ಲೆಯಿಂದ ಇಬ್ಬರು ಆಯ್ಕೆಗೊಂಡಿದ್ದಾರೆ. ಮಾಜಿ ಅಡಿಶನಲ್  ಎಸ್‌ಪಿ ಹಾಗೂ ಕಣ್ಣೂರು ರಾಜ್ಯ ಕ್ರೈಂ ಬ್ರಾಂಚ್ ಎಸ್ಪಿಯಾದ  ಪಿ. ಬಾಲಕೃಷ್ಣನ್ ನಾಯರ್, ಕಲ್ಲಿಕೋಟೆ ರೂರಲ್ ಕ್ರೈಂಬ್ರಾಂಚ್ ಡಿವೈಎಸ್ಪಿ ಯು. ಪ್ರೇಮನ್ ಎಂಬವರು ಮೆಡಲ್‌ಗೆ ಅರ್ಹರಾಗಿದ್ದಾರೆ.  ಬೇಕಲ ಪಾಲಕುನ್ನು ನಿವಾಸಿಯಾದ ಪಿ. ಬಾಲಕೃಷ್ಣನ್ ನಾಯರ್ ಇತ್ತೀಚೆಗೆ ಕಣ್ಣೂರು ಕ್ರೈಂ ಬ್ರಾಂಚ್ ಎಸ್ಪಿಯಾಗಿ ಅಧಿಕಾರ  ವಹಿಸಿಕೊಂಡಿದ್ದರು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿರುವ ಯು. ಪ್ರೇಮನ್ ಕಾಞಂಗಾಡ್ ಚೆಮ್ಮಟಂವಯಲ್ ನಿವಾಸಿಯಾಗಿದ್ದಾರೆ.

ಕಾರಿನಲ್ಲಿ ಸಾಗಿಸುತ್ತಿದ್ದ 25.92 ಲೀಟರ್ ಮದ್ಯ ವಶ: ಆರೋಪಿ ಪರಾರಿ

ಕಾಸರಗೋಡು: ಕೂಡ್ಲು ಸೂರ್ಲಿನಲ್ಲಿ ಕಾಸರಗೋಡು ಎಕ್ಸೈಸ್ ರೇಂಜ್ ಕಚೇರಿಯ ಪ್ರಿವೆಂಟೀವ್ ಆಫೀಸರ್ ಕೆ.ವಿ. ರಂಜನ್ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆ ಯಲ್ಲಿ ಕರ್ನಾಟಕ ರಾಜ್ಯ ನೋಂದಾ ಯಿತ ಆಲ್ಟೋ ಕಾರಿನಲ್ಲಿ ಸಾಗಿಸು ತ್ತಿದ್ದ 25.92ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಈ ವೇಳೆ  ಕಾರಿನಲ್ಲಿದ್ದ ವ್ಯಕ್ತಿ ಪರಾರಿಯಾಗಿರುವುದಾಗಿಯೂ ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು  ತಿಳಿಸಿದ್ದಾರೆ. ಓಣಂ ಸ್ಪೆಷಲ್ ಡ್ರೈವ್ ಕಾರ್ಯಾಚರಣೆಯಂತೆ ಇ.ಇ ಆಂಡ್ ಎಎನ್‌ಎಸ್‌ಎಸ್ ಕಚೇರಿ ಅಸಿಸ್ಟೆಂಟ್ ಎಕ್ಸೈಸ್ …

ಮುಂದುವರಿಯುತ್ತಿರುವ ಹಿರಿಯ ವಿದ್ಯಾರ್ಥಿಗಳ ಅಕ್ರಮ: ಆದೂರು, ಕಾಸರಗೋಡು, ಮೇಲ್ಪರಂಬ ಠಾಣೆಗಳಲ್ಲಿ ಕೇಸು ದಾಖಲು; ಹೆತ್ತವರು, ಶಾಲಾ ಅಧಿಕಾರಿಗಳು ಆತಂಕದಲ್ಲಿ

ಕಾಸರಗೋಡು: ಹಿರಿಯ ವಿದ್ಯಾರ್ಥಿಗಳ ಹಲ್ಲೆಯಿಂದ ಕಿರಿಯ ವಿದ್ಯಾರ್ಥಿಗಳಿಗೆ ಗಾಯಗೊಳ್ಳುತ್ತಿರುವ ಘಟನೆಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಿಸಿದ್ದ ಬೆನ್ನಲ್ಲೇ ಪರವನಡ್ಕದಲ್ಲೂ ಇದೇ ರೀತಿಯ ಅಕ್ರಮ ಸಂಭವಿಸಿದೆ. ಪರವನಡ್ಕದಲ್ಲಿ ಕಾರ್ಯಾಚರಿಸುವ ಚೆಮ್ಮನಾಡ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾದ ಕೋಳಿಯಡ್ಕ ನಿವಾಸಿ 15ರ ಬಾಲಕನಿಗೆ ಆಕ್ರಮಿಸಲಾಗಿದೆ. ಮಂಗಳವಾರ ಸಂಜೆ ಶಾಲೆ ಬಿಟ್ಟು ಮನೆಗೆ ತೆರಳಲೆಂದು ಬಸ್ ನಿಲ್ದಾಣಕ್ಕೆ ತಲುಪಿದಾಗ ಹಿರಿಯ ವಿದ್ಯಾರ್ಥಿಗಳ ತಂಡವೊಂದು ಆಕ್ರಮಿಸಿರುವುದಾಗಿ ವಿದ್ಯಾರ್ಥಿಯ ಸಹೋದರ ತಿಳಿಸಿದ್ದಾರೆ. ಕಣ್ಣು ಹಾಗೂ ಮುಖಕ್ಕೆ ಗಾಯಗೊಂಡ ವಿದ್ಯಾರ್ಥಿಯನ್ನು …