ಬೇಕರಿಯಲ್ಲಿ ಬೆಂಕಿ ಅನಾಹುತ, ಲಕ್ಷಾಂತರ ರೂ. ನಷ್ಟ
ಕಾಸರಗೋಡು: ನಗರದ ಹಳೇ ಬಸ್ ನಿಲ್ದಾಣ ಪರಿಸರದಲ್ಲಿರುವ ರಾಮ್‌ದೇವ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯವೆಸಗುತ್ತಿರುವ ಲೂಮ್ಸ್ ಬೇಕರಿ ಆಂಡ್ ಕೂಲ್ ಬಾರ್‌ಗೆ ಮೊನ್ನೆ ರಾತ್ರಿ ಬೆಂಕಿ ತಗಲಿ ಅದರೊಳಗಿದ್ದ ಹೆಚ್ಚುಕಡಿಮೆ ಎಲ್ಲಾ ಸಾಮಗ್ರಿಗಳು ಬೆಂಕಿ ಗಾಹುತಿಯಾಗಿದೆ. ಮೀಟರ್ ಬೋಕ್ಸ್, ಪ್ರೀಜರ್‌ಗಳು, ಅಡುಗೆಕೊಠಡಿಯ ಸಾಮಗ್ರಿಗಳೂ ಸೇರಿದಂತೆ ಎಲ್ಲಾ ಸಾಮಗ್ರಿಗಳೂ ಬೆಂಕಿಗಾಹುತಿಯಾಗಿವೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿ ತಗಲಲು ಕಾರಣವೆನ್ನಲಾಗಿದೆ. ಅಗ್ನಿಶಾಮಕದಳ ಸಕಾಲಿಕ ರಕ್ಷಣಾ ಕಾರ್ಯಾಚರಣೆಯಿಂದಾಗಿ ಸಂಭಾವ್ಯ ಭಾರೀ ದೊಡ್ಡ ಅನಾಹುತ ತಪ್ಪಿಹೋಗಿದೆ. ಅಸಿಸ್ಟೆಂಟ್ ಸ್ಟೇಷನ್ ಮಾಸ್ಟರ್ ಆರ್. ವಿನೋದ್ ಕುಮಾರ್, ಸೀನಿಯರ್ …