ದೇವಸ್ಥಾನಗಳಲ್ಲಿ ಕಳವು ನಡೆಸಿದ ತಂಡದ ಇಬ್ಬರ ಸೆರೆ
ಕಾಸರಗೋಡು: ದೇವಸ್ಥಾನಗ ಳಲ್ಲಿ ಕಳವುಗೈದ ಪ್ರಕರಣದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ತೃಶೂರು ಆಂಬಲ್ಲೂರು ಕಳಲಿ ಹೌಸ್‌ನ ಶಿಬು ರಾಫೆಲ್ (54) ಮತ್ತು ಕಣ್ಣೂರು ಮಟ್ಟನ್ನೂರು ಕೋಳಾರಿ ಪಾಲೋಟ್‌ಪಳ್ಳಿ ಬದರ್ ಮಂಜಿಲ್‌ನ ಅಬ್ದುಲ್ ಜಲೀಲ್ (50) ಎಂಬಿವರು ಬಂಧಿತ ಆರೋಪಿಗಳು. ನೀಲೇಶ್ವರ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಎ.ವಿ. ಶ್ರೀಕುಮಾರ್‌ರ ನೇತೃತ್ವದ ಪೊಲೀಸರ ತಂಡ ಈ ಇಬ್ಬರು ಆರೋಪಿಗಳನ್ನು ತಮಿಳುನಾಡಿನ ಎರ್ವಾಡಿನಿಂದ ಸೆರೆಹಿಡಿದಿದೆ. ಕಳೆದ ಫೆಬ್ರವರಿ 21ರಂದು ರಾತ್ರಿ ನೀಲೇಶ್ವರಕ್ಕೆ ಸಮೀಪದ ಪೇರೋಲ್ ಕೊಳುಂತಿಲ್ ನಾರಾಂಕುಳಂಗರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ …