ಕಾಸರಗೋಡು ನಿವಾಸಿಯನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿ 75 ಲಕ್ಷ ರೂ. ಅಪಹರಣ: ಯುವತಿ ಸಹಿತ 6 ಮಂದಿ ಸೆರೆ
ಮಂಗಳೂರು: ಕಾಸರಗೋಡು ನಿವಾಸಿಯೂ, ಮಂಗಳೂರಿನಲ್ಲಿ ವಾಸಿಸುವ ಯುವಕನನ್ನು ತಂಡವೊಂದು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿ 75 ಸಾವಿರ ರೂಪಾಯಿ ಅಪಹರಿಸಿದ ಬಳಿಕ ಆತನ ಕೈಕಾಲುಗಳನ್ನು ಕಟ್ಟಿಹಾಕಿ ಹಲ್ಲೆಗೈದು ಗಂಭೀರ ಗಾಯಗೊಳಿಸಿದ ಬಗ್ಗೆ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಯುವತಿ ಸಹಿತ 6 ಮಂದಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ನಾವುಂದ ಬಡಾಕೆರೆಯ ಅಬ್ದುಲ್ ಸವಾದ್ ಯಾನೆ ಅಚ್ಚು (28), ಗುಲ್ವಾಡಿ ಬೋಳ್ಕಟ್ಟೆಯ ಸೈಫುಲ್ಲ (38), ಹಂಗಳೂರಿನ ಮೊಹಮ್ಮದ್ ನಾಸಿರ್ ಶರೀಫ್ (38), ಮೂಡುಗೋಪಾಡಿಯ ಅಬ್ದುಲ್ ಸತ್ತಾರ್ (23), ನಾಗೋಡಿಯ ಅಬ್ದುಲ್‌ಅಜೀಜ್ (26) ಹಾಗೂ …