ಮತ ಕಳ್ಳತನ ಆರೋಪಿಸಿ ರಾಹುಲ್ ಗಾಂಧಿ ಯಾತ್ರಾ: ಬಂದ್ಯೋಡ್‌ನಲ್ಲಿ ಬೆಂಬಲ ಮೆರವಣಿಗೆ
ಬಂದ್ಯೋಡು: ಮತ ಕಳ್ಳತನ ನಡೆಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ‘ವೋಟರ್ ಅಧಿಕಾರ್ ಯಾತ್ರಾ’ದ ಸಮಾರೋಪದಂಗವಾಗಿ ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಬಂದ್ಯೋಡ್‌ನಲ್ಲಿ ಬೆಂಬಲ ಸೂಚಕ ಮೆರವಣಿಗೆ ನಡೆಯಿತು. ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಉದ್ಘಾಟಿಸಿ ಮಾತನಾಡಿ, ಅರ್ಹ ಮತದಾರರನ್ನು ಅಂತಿಮ ಮತದಾರರ ಪಟ್ಟಿಯಿಂದ ಹೊರತುಪಡಿಸಿ ವಿಪಕ್ಷಗಳ ಬಲ ಕುಗ್ಗಿಸಿ ವಾಮ ಮಾರ್ಗಗಳ ಮೂಲಕ ಆಡಳಿತ ಬಿಜೆಪಿ ನಡೆಸುತ್ತಿದ್ದು, ಇದಕ್ಕೆ ಚುನಾವಣಾ ಆಯೋಗವು ಕೈಜೋಡಿಸಿರುವುದು ವಿಪರ್ಯಾಸ ಎಂದು ನುಡಿದರು. …
Read more “ಮತ ಕಳ್ಳತನ ಆರೋಪಿಸಿ ರಾಹುಲ್ ಗಾಂಧಿ ಯಾತ್ರಾ: ಬಂದ್ಯೋಡ್‌ನಲ್ಲಿ ಬೆಂಬಲ ಮೆರವಣಿಗೆ”