ಉಸಿರಾಟ ತೊಂದರೆ ಯುವಕ ಮೃತ್ಯು

ಕುಂಬಳೆ: ಉಸಿರಾಟ ತೊಂ ದರೆಯಿಂದ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಮೂಲತಃ ಕರ್ನಾಟಕದ ಮಂಡ್ಯ ನಿವಾಸಿಯೂ ಕಳೆದ ಹಲವು ವರ್ಷಗಳಿಂದ ಕೂಡ್ಲು ಕಾಂತಿಕೆರೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಶಿವಣ್ಣ-ಪುಷ್ಪ ದಂಪತಿಯ ಏಕೈಕ ಪುತ್ರ ಸತೀಶ (28) ಮೃತಪಟ್ಟ ಯುವಕ. ಇವರು ಕೂಲಿ ಕಾರ್ಮಿ ಕನಾಗಿದ್ದರು. ಹಲವು ಕಾಲದಿಂದ ಇವರಿಗೆ ಉಸಿರಾಟ ತೊಂದರೆ ಕಾಣಿಸುತ್ತಿತ್ತೆನ್ನಲಾಗಿದೆ. ನಿನ್ನೆ ರಾತ್ರಿ ಅಸೌಖ್ಯ ಉಲ್ಭಣಗೊಂಡಿದ್ದು, ಕೂಡಲೇ ಜನರಲ್ ಆಸತ್ರೆಗೆ ತಲುಪಿಸಿದರೂ ಜೀವರಕ್ಷಿಸ ಲಾಗಲಿಲ್ಲ. ಮೃತರು ತಂದೆ,ತಾಯಿ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಚಿನ್ನದ ಬೆಲೆ ಪವನ್‌ಗೆ 77,000 ದತ್ತ

ಕಾಸರಗೋಡು: ಚಿನ್ನದ ಬೆಲೆ ದಾಖಲೆಯ ಏರಿಕೆ ಮತ್ತೆ ಮುಂದುವರಿದಿದೆ. ನಿನ್ನೆಗಿಂತ ಇಂದು ಒಂದು ಪವನ್ ಚಿನ್ನಕ್ಕೆ ಏಕಾಏಕಿ 1200 ರೂ. ಹೆಚ್ಚಳವುಂಟಾಗಿದೆ. ಈ ಮೂಲಕ ಇಂದು ಒಂದು ಪವನ್‌ಗೆ 76,960 ರೂ.ಗೇರಿದೆ. ಗ್ರಾಂಗೆ 9620 ರೂ. ನಿನ್ನೆ ಒಂದು ಪವನ್ ಚಿನ್ನಕ್ಕೆ 75,760 ರೂಪಾಯಿಗಳಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಮೌಲ್ಯ ಏರಿಕೆಯೇ ಭಾರತದಲ್ಲೂ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆಯೆನ್ನಲಾಗುತ್ತಿದೆ. ಇದು ಗ್ರಾಹಕರಿಗೆ ತೀವ್ರ ಹೊಡೆತವುಂಟುಮಾಡಿದೆ.

25.92 ಲೀಟರ್ ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಕಾಸರಗೋಡು: ನಗರದ ಕರಂದ ಕ್ಕಾಡ್‌ನಲ್ಲಿ ಕಾಸರಗೋಡು ರೇಂಜ್ ಎಕ್ಸೈಸ್ ಇನ್ಸ್‌ಪೆಕ್ಟರ್ ಸೂರಜ್ ಎನ್.ರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 25.92 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕೂಡ್ಲು ಉಜಿರೆಕೆರೆ ಬೆದ್ರಡ್ಕ ಹೌಸ್‌ನ ಮನೋಜ್ ಕುಮಾರ್ ವಿ.ಎನ್.(40) ಎಂಬಾತ ನನ್ನು ಬಂಧಿಸಿ ಪ್ರಕರಣ ದಾಖಲಿಸಲಾ ಗಿದೆ. ಆರೋಪಿಯನ್ನು  ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ವಿನೋದನ್ ಕೆ.ವಿ. ಪ್ರಿವೆಂಟಿವ್ ಆಫೀಸರ್ ಉಣ್ಣಿಕೃಷ್ಣನ್ ಕೆ, ಸಿವಿಲ್ …

ಅಪ್ರಾಪ್ತನಿಂದ ಕಾರು ಚಲಾವಣೆ ಮಾಲಕಿ ವಿರುದ್ಧ ಕೇಸು

ಮಂಜೇಶ್ವರ: ಅಪ್ರಾಪ್ತ ಚಲಾಯಿಸುತ್ತಿದ್ದ ಕಾರನ್ನು ಪೊಲೀ ಸರು ವಶಕ್ಕೆ ತೆಗೆದು ಆರ್.ಸಿ ಮಾಲಕಿ ಮಹಿಳೆಯ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಮಧ್ಯಾಹ್ನ 12 ಗಂಟೆ ವೇಳೆ ಬೇಕೂರು ಶಾಲಾ ಬಳಿಯಲ್ಲಿ ಅಪ್ರಾಪ್ತ ಕಾರು ಚಲಾಯಿಸುತ್ತಿರುವ ಬಗ್ಗೆ ತಿಳಿದು ತಲುಪಿದ ಪೊಲೀಸರು ಕಾರನ್ನು ಚಲಾಯಿಸುತ್ತಿರುವ ಬಾಲಕನ ಬಳಿ ಲೈಸನ್ಸ್ ಕೇಳಿದಾಗ ಲೈಸನ್ಸ್ ಹೊಂದಿರಲಿಲ್ಲ ಹಾಗೂ 17 ವರ್ಷ ಪ್ರಾಯವಾಗಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕಾರನ್ನು ವಶಪಡಿಸಿ ಕೇಸು ದಾಖಲಿಸಿದ್ದಾರೆ.

ತಲಪಾಡಿಯಲ್ಲಿ ಆರು ಮಂದಿ ಸಾವಿಗೆ ಕಾರಣವಾದ ಬಸ್ ಚಾಲಕ ಸೆರೆ

ಮಂಜೇಶ್ವರ: ತಲಪ್ಪಾಡಿಯಲ್ಲಿ ಮೊನ್ನೆ ಮಧ್ಯಾಹ್ನ ಆರು ಮಂದಿಯ ಸಾವಿಗೆ ಕಾರಣವಾದ ಭೀಕರ ಬಸ್ ಅಪಘಾತಕ್ಕೆ ಸಂಬಂಧಿಸಿ ಅದರ ಚಾಲಕನನ್ನು ಮಂಜೇಶ್ವರ ಪೊಲೀ ಸರು ಬಂಧಿಸಿದ್ದಾರೆ. ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಬಾಗಲಕೋಟೆ  ಅಂಬೇಡ್ಕರ್ ನಗರದ  ನಿಜಲಿಂಗಪ್ಪ ಛಲವಾದಿ (47) ಎಂಬಾತ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ.ಈತನನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದು ಈ ವೇಳೆ ಎರಡು ವಾರಗಳ ರಿಮಾಂಡ್ ವಿಧಿಸಲಾಗಿದೆ. ಮೊನ್ನೆ ಮಧ್ಯಾಹ್ನ 1.45ರ ವೇಳೆ ತಲಪಾಡಿಯಲ್ಲಿ ಅಪಘಾತ ಸಂಭವಿಸಿತ್ತು. ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್ …

ನಡೆ ಹಾದಿಯ ನೀರಿನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ರಸ್ತೆ ಬದಿಯ ಕಾಲುದಾರಿಯ ನೀರಿನಲ್ಲಿ ವ್ಯಕ್ತಿಯೋರ್ವ  ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಾಡಿ ಗ್ರಾಮದ ಕರುವಂಗೋಳು ನಿವಾಸಿ ನಾರಾಯಣ ನಾಯ್ಕ (69) ಸಾವನ್ನಪ್ಪಿದ ವ್ಯಕ್ತಿ.  ಸಾಮಗ್ರಿ ತರಲೆಂದು ಇವರು ನಿನ್ನೆ ಬೆಳಿಗ್ಗೆ ೯ ಗಂಟೆಗೆ ಮನೆಯಿಂದ ಹೊರಟಿದ್ದರು.  ತಡವಾದರೂ ಅವರು ಮನೆಗೆ ಹಿಂತಿ ರುಗಲಿಲ್ಲ. ಈಮಧ್ಯೆ ಎದುರ್ತೋಡು ಜಂಕ್ಷನ್‌ನ ಕಾಲುದಾರಿಯಲ್ಲಿ ನೀರು ಕಟ್ಟಿ ನಿಂತಿದ್ದ ಸ್ಥಳದಲ್ಲಿ ಅವರು ನಿನ್ನೆ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರ. ಆ ಬಗ್ಗೆ ನೀಡಲಾದ ಮಾಹಿತಿಯಂತೆ ವಿದ್ಯಾನಗರ ಪೊಲೀಸರು …

ಆರಿಕ್ಕಾಡಿಯಲ್ಲಿ ಸಂಚಾರ ಸ್ವಾತಂತ್ರ್ಯಕ್ಕೆ ಬೇಕಾಗಿ ಹೋರಾಟ: ಸ್ಥಳೀಯರಿಂದ ಹೆದ್ದಾರಿ ಪ್ರತಿಭಟನೆ

ಕುಂಬಳೆ: ಟೋಲ್ ಬೂತ್ ಅಪೀಲು ತಿರಸ್ಕರಿಸಿದರೂ ಆರಿಕ್ಕಾಡಿಯಲ್ಲಿ ಹೋರಾಟದ ತೀವ್ರತೆ ಕಡಿಮೆಯಾಗಿಲ್ಲ. ಸಂಚಾರ ಸ್ವಾತಂತ್ರ್ಯ ತಡೆಯುವವರ ವಿರುದ್ಧ ಆರಿಕ್ಕಾಡಿ ಹೆದ್ದಾರಿಯಲ್ಲಿ ಸ್ಥಳೀಯರು ನಿನ್ನೆ ಪ್ರತಿಭಟಿಸಿದರು. ಆರಿಕ್ಕಾಡಿ ಕಡವತ್‌ನಿಂದ ಕುಂಬಳೆ ಪೇಟೆಗೆ, ಕುಂಬಳೆ ಪೇಟೆಯಿಂದ ಆರಿಕ್ಕಾಡಿ ಕಡವತ್‌ಗೆ ತೆರಳಬೇಕಿದ್ದರೆ ಸರ್ವೀಸ್ ರಸ್ತೆ ಇಲ್ಲದಿರುವುದು ಸಮಸ್ಯೆ ಯಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅಂತಿಮ ಹಂvಕ್ಕೆ ತಲುಪಿದರೂ ಸರ್ವೀಸ್ ರಸ್ತೆ ನಿರ್ಮಿಸದಿರುವುದರ ಬಗ್ಗೆ ಸ್ಥಳೀಯರು ಪ್ರತಿಭಟಿಸಿದ್ದಾರೆ. ಹಲವು ಕಾಲದಿಂದ ಇಲ್ಲಿನವರು ಸರ್ವೀಸ್ ರಸ್ತೆಗಾಗಿ ಬೇಡಿಕೆ ಮುಂದಿಟ್ಟಿದ್ದರೂ ಇದುವರೆಗೂ ಪ್ರಯೋಜನ ಉಂಟಾಗಿಲ್ಲ. ಈ …

ಕಾಂಗ್ರೆಸ್‌ನಿಂದ ಗೃಹ ಸಂಪರ್ಕಕ್ಕೆ ಚಾಲನೆ

ಮಂಗಲ್ಪಾಡಿ: ಕೇಂದ್ರ ಸರಕಾರ ಹಾಗೂ ಕೇರಳ ಸರಕಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿರುವ ಗೃಹ ಸಂದರ್ಶನದಂತೆ ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮವನ್ನು ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿ.ಎಂ.ಕೆ. ಉದ್ಘಾಟಿಸಿದರು. ಅಶ್ರಫ್ ಮುಟ್ಟಂ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಬು ಬಂದ್ಯೋಡು ಅಧ್ಯಕ್ಷತೆ ವಹಿಸಿದರು. ಫಾರೂಕ್ ಶಿರಿಯಾ, ರಾಜೇಶ್, ಗೀತಾ ಬಂದ್ಯೋಡು, ಮುಹಮ್ಮದ್ ಮಲಂದೂರು, ತಾಹಿರಾ, ಜಾವಿದ್, ಸಿದ್ದಿಕ್, ಶಫಿಕ್, ಬಾಬು, ಸುಂದರ, ಮೂಸ, ಇಸ್ಮಾಯಿಲ್, ಮುಹಮ್ಮದ್ ಮೇರ್ಕಳ, ಯೂಸಫ್, ಹನೀಫ್ ಉಪಸ್ಥಿತರಿದ್ದರು. ಅಶ್ರಫ್ …

ಎನ್‌ಆರ್‌ಇಜಿ ಕಾರ್ಮಿಕರಿಂದ ವಿವಿಧ ಅಂಚೆ ಕಚೇರಿಗಳಿಗೆ ಮಾರ್ಚ್

ಪೈವಳಿಕೆ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರ ಯೂನಿಯನ್ (ಎನ್‌ಆರ್‌ಇಜಿ) ಪೈವಳಿಕೆ ಪಂಚಾ ಯತ್ ಸಮಿತಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಪೈವಳಿಕೆ ಅಂಚೆ ಕಚೇರಿಗೆ ಮಾರ್ಚ್, ಧರಣಿ ನಡೆಸಲಾಯಿತು. ವರ್ಷಕ್ಕೆ 200 ದಿನದ ಕೆಲಸ ನೀಡಬೇಕು, ಭೂ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿದ ಕೇಂದ್ರ ಸರಕಾರದ ನೀತಿ ಹಿಂತೆಗೆಯಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ವಿವಿಧ ಪಂಚಾಯತ್‌ಗಳಲ್ಲಿ ಮಾರ್ಚ್, ಧರಣಿ ನಡೆಸಲಾಗಿದೆ. ಪೈವಳಿಕೆ ಪಂಚಾಯತ್‌ನಲ್ಲಿ ಸಿಐಟಿಯು ಮಂಜೇಶ್ವರ ಏರಿಯಾ ಉಪಾಧ್ಯಕ್ಷ ಚಂದ್ರ ನಾಕ್ ಮಾನಿಪ್ಪಾಡಿ ಉದ್ಘಾಟಿಸಿದರು. ಶ್ರೀನಿವಾಸ …

ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಓಣಂ ಸಂತೆ ಉದ್ಘಾಟನೆ

ವರ್ಕಾಡಿ: ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಓಣಂ ಸಂತೆ ಯನ್ನು ಬ್ಯಾಂಕ್‌ನ ಅಧ್ಯಕ್ಷ ಮೊಹ ಮ್ಮದ್ ಹನೀಫ್ ಉದ್ಘಾಟಿಸಿದರು. ಉಪಾಧ್ಯಕ್ಷ ಸತ್ಯನಾರಾಯಣ ಭಟ್, ನಿರ್ದೇಶಕರಾದ ಜಗದೀಶ್ ಚೆಂಡ್ಲ, ರಬಿಯಾ, ಸತೀಶ್ ಕೂಟತ್ತಜೆ, ಸದಸ್ಯರಾದ ಗಂಗಾಧರ ಕಳಿಯೂರು, ಕಿಶೋರ್ ಕುಮಾರ್ ನಾಯ್ಕ್ ಬಜ, ಧಾರಿಕ ಧರ್ಮನಗರ, ಅರುಂಧತಿ ಧರ್ಮನಗರ, ಸುಕುಮಾರ ನಾಯ್ಕ್, ರೋಸಲಿನ್ ಡಿ’ಸೋಜ ಭಾಗವಹಿಸಿದರು. ಬ್ಯಾಂಕ್ ಕಾರ್ಯದರ್ಶಿ ಶ್ರೀವತ್ಸ ಭಟ್ ಸ್ವಾಗತಿಸಿ, ದಯಾವತಿ ವಂದಿಸಿದರು.