ಪ್ರತಾಪನಗರದಲ್ಲಿ ದಿ| ಧನ್‌ರಾಜ್ ಹೆಸರಿನ ಶಿಲಾಫಲಕ ಸ್ಥಾಪನೆ

ಮಂಗಲ್ಪಾಡಿ: ಪ್ರತಾಪನಗರ ಜಂಕ್ಷನ್‌ಗೆ ಬಿಜೆಪಿ ಮಂಡಲ ಉಪಾಧ್ಯಕ್ಷರಾಗಿದ್ದ ದಿ| ಧನರಾಜ್ ಪ್ರತಾಪನಗರ ಇವರ ಹೆಸರನ್ನಿರಿಸಲಾ ಯಿತು. ಪ್ರತಾಪನಗರ ಫ್ರೆಂಡ್ಸ್‌ನ ನೇತೃತ್ವದಲ್ಲಿ ಶಿಲಾಫಲಕವನ್ನು ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಸ್ಥಾಪಿಸಿ ಉದ್ಘಾಟಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ, ಪಂ. ಸದಸ್ಯೆ ಸುಧಾ ಗಣೇಶ್, ಮುಖಂಡರಾದ ಚಂದ್ರಹಾಸ ಪೂಜಾರಿ, ಮೋಹನ್ ಪೂಜಾರಿ, ಗಣೇಶ್ ಪುಳಿಕುತ್ತಿ, ಜೈ ಹನುಮಾನ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಪುಳಿಕುತ್ತಿ, ಪ್ರತಾಪನಗರ ಫ್ರೆಂಡ್ಸ್‌ನ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಎಡನೀರು ಮಠಕ್ಕೆ ಬದಿಯಡ್ಕ ಪೇಟೆಯವರಿಂದ ಹಸಿರುವಾಣಿ ಸಮರ್ಪಣೆ

ಬದಿಯಡ್ಕ: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾಚಾರಣೆಯಂಗವಾಗಿ ನಿನ್ನೆ ಬದಿಯಡ್ಕದಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಿಸಲಾಯಿತು. ಬದಿಯಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ನರೇಂದ್ರ ಬಿ.ಎನ್., ಗೋಸಾಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ಅಮ್ಮಣ್ಣಾಯ, ನಾಟ್ಯ ವೈದ್ಯ ಗೋವಿಂದ ಭಟ್ ಬೇಂದ್ರೋಡು, ಪ್ರತಿಭಾ ಬದಿಯಡ್ಕ, ನಾರಾಯಣ ಮಣಿಯಾಣಿ ಚೇರ್ಕೂಡ್ಲು, ಹರೀಶ್ ಭಟ್ ಚೇರ್ಕೂಡ್ಲು, ರಂಜನ್ ಕಡಮಣ್ಣಾಯ ಪೆರಡಾಲ, ಮಹೇಶ್ ವಳಕುಂಜ ಉಪಸ್ಥಿತರಿದ್ದರು. ಸಮಿತಿ ವತಿಯಿಂದ ಪಾದ ಪೂಜೆ, ಪಾದುಕ …

ಭರತನಾಟ್ಯದಲ್ಲಿ ಡಿಸ್ಟಿಂಕ್ಷನ್

ಬದಿಯಡ್ಕ: ಕರ್ನಾಟಕ ರಾಜ್ಯ ಡಾ| ಗಂಗೂಬಾಯಿ ಹಾನಗಲ್ ಯೂನಿವರ್ಸಿಟಿ ನಡೆಸಿದ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಸಾನ್ವಿ ಡಿ. ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾಳೆ. ಪುತ್ತೂರು ಶಾರದ ಕಲಾ ಕೇಂದ್ರದ ಗುರು ವಿದ್ವಾನ್ ಸುದರ್ಶನ್ ಎಂ.ಎಲ್. ಭಟ್‌ರ ಶಿಷ್ಯೆಯಾದ ಈಕೆ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಯಾಗಿದ್ದಾಳೆ. ಈಕೆ ಕುಂಟಿಕ್ಕಾನ ಬಳಿಯ ದೇವರಮೆಟ್ಟು ನಿವಾಸಿಯೂ ಪ್ರಸ್ತುತ ಪುತ್ತೂರು ಕರ್ಮಲದಲ್ಲಿ ವಾಸಿಸುವ ಬಾಲಚಂದ್ರ ಡಿ. ಹಾಗೂ ಅನುಪಮ (ಪುತ್ತೂರು ತಾಲೂಕು ಕಚೇರಿ ಉದ್ಯೋಗಿ) ದಂಪತಿಯ ಪುತ್ರಿ.

ಮೊಗ್ರಾಲ್ ಯುನಾನಿ ಡಿಸ್ಪೆನ್ಸರಿಗೆ ಸರಕಾರದ ಆಯುಷ್ ಕಾಯಕಲ್ಪ ಪ್ರಶಸ್ತಿ ಪ್ರದಾನ

ಕುಂಬಳೆ: ಕೇರಳ ಸರಕಾರದ ಪ್ರಥಮ ಆಯುಷ್ ಕಾಯಕಲ್ಪ ಪ್ರಶಸ್ತಿ ಕುಂಬಳೆ ಪಂಚಾಯತ್‌ನ ಮೊಗ್ರಾಲ್ ಸರಕಾರಿ ಯುನಾನಿ ಡಿಸ್ಪೆನ್ಸರಿಗೆ ಲಭಿಸಿದೆ. ಆರೋಗ್ಯ ಸೇವೆಗಳಿಗೆ ಲಭಿಸಿದ ಅಂಗೀಕಾರವಿದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಆರೋಗ್ಯ ಇಲಾಖೆ ಸಚಿವೆ ವೀಣಾ ಜೋರ್ಜ್‌ರಿಂದ ಪ್ರಶಸ್ತಿಯನ್ನು ಕುಂಬಳೆ ಪಂ. ಅಧ್ಯಕ್ಷೆ ಯು.ಪಿ. ತಾಹಿರಾ ಯೂಸಫ್, ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಯುನಾನಿ ಮೆಡಿಕಲ್ ಆಫೀಸರ್ ಡಾ| ಶಕೀರಲಿ ಕೆ.ಎ, ಜಿಲ್ಲಾ ಪ್ರೋಗ್ರಾಂ ಮೆನೇಜರ್ ಡಾ| ನಿಖಿಲ್, ಜೋಸ್ ಎಂ.ಎಸ್. ಎಂಬಿವರು ಸ್ವೀಕರಿಸಿದರು.

ಇಡೀ ನಾಡನ್ನು ಬೆಚ್ಚಿ ಬೀಳಿಸಿದ ತಲಪಾಡಿ ಬಸ್ ಅಪಘಾತ:ಆರು ಮಂದಿಯ ದಾರುಣ ಸಾವಿನಿಂದ ನಾಡು ಶೋಕಸಾಗರ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ತಲಪಾಡಿಯಲ್ಲಿ ನಿನ್ನೆ ಸಂಭವಿಸಿದ ಬಸ್ ಅಪಘಾತದಲ್ಲಿ ಒಂದೇ ಕುಟುಂಬದ ಐವರ ಸಹಿತ ಆರು ಮಂದಿ ಮೃತಪಟ್ಟ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ನಿನ್ನೆ ಮಧ್ಯಾಹ್ನ 1.45 ರ ವೇಳೆ ಕರ್ನಾಟಕ ಕೆಎಸ್‌ಆರ್‌ಟಿಸಿ  ಬಸ್ ಆಟೋ ರಿಕ್ಷಾಕ್ಕೆ  ಢಿಕ್ಕಿ ಹೊಡೆದು ಈ ಭೀಕರ ಅಪಘಾತವುಂಟಾಗಿದೆ. ಆಟೋ ರಿಕ್ಷಾ ಚಾಲಕ ಕೋಟೆಕಾರು ಬಳಿಯ ಅಜ್ಜಿನಡ್ಕ ಮುಳ್ಳುಗದ್ದೆ ನಿವಾಸಿ ಹೈದರ್ ಅಲಿ (47), ಪ್ರಯಾಣಿಕರಾದ  ಅಜ್ಜಿನಡ್ಕದ ಖದೀಜ (60), ನೆಬೀಸ (52), ನೆಬೀಸರ ಅತ್ತೆ ಪರಂಗಿಪೇಟೆ ಪರಾರಿ …

ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯ ಮೃತದೇಹ ಮನೆಯೊಳಗೆ ಜೀರ್ಣಾವಸ್ಥೆಯಲ್ಲಿ ಪತ್ತೆ

ಕುಂಬಳೆ: ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಮೃತದೇಹ ಜೀರ್ಣಾವಸ್ಥೆಯಲ್ಲಿದ್ದು, ಮೂರು ದಿನಗಳ ಹಿಂದೆ ಮೃತಪಟ್ಟಿರಬ ಹುದೆಂದು ಅಂದಾಜಿಸಲಾಗಿದೆ. ಕುಬಣೂರು ಮೀನಾರ್‌ಪಂಜ ಎಂಬಲ್ಲಿನ ಈಶ್ವರ ಮೂಲ್ಯ (50) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕಳೆದ 10 ವರ್ಷಗಳಿಂದ ಇವರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರೆನ್ನ ಲಾಗಿದೆ. ಕೂಲಿ ಕಾರ್ಮಿಕನಾಗಿದ್ದರು. ಟಿವಿ ಕೇಬಲ್ ಸಂಪರ್ಕ ನೀಡುವ ವ್ಯಕ್ತಿ ಈಶ್ವರ ಮೂಲ್ಯರನ್ನು ಕೆಲಸಕ್ಕೆ ಕರೆಯಲೆಂದು ನಿನ್ನೆ ಅಲ್ಲಿಗೆ ತೆರಳಿದಾಗ ಮನೆಯ ಬಾಗಿಲು ತೆರೆದಿಟ್ಟಿತ್ತು. ಕರೆದರೂ ಯಾವುದೇ ಪ್ರತಿಕ್ರಿಯೆ ಉಂ …

ವಿದ್ಯಾರ್ಥಿನಿಗೆ ದೌರ್ಜನ್ಯ ಬಂದ್ಯೋಡು ನಿವಾಸಿ ವಿರುದ್ಧ ಪೋಕ್ಸೋ ಕೇಸು ದಾಖಲು

ಬಂದ್ಯೋಡು: 17 ವರ್ಷದ ಒಟಿಟಿ ವಿದ್ಯಾರ್ಥಿನಿಯನ್ನು ದೌರ್ಜನ್ಯಗೈದಿರುವುದಾಗಿ ದೂರಲಾಗಿದೆ. ಖಾಸಗಿ ಆಸ್ಪತ್ರೆಯ ಆಪರೇಶನ್ ಥಿಯೇಟರ್‌ನ ನೌಕರನ ವಿರುದ್ಧ ಚಂದೇರ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಬಂದ್ಯೋಡು ನಿವಾಸಿಯಾದ ಮೊಹಮ್ಮದ್ ಸಾದಿಕ್ ವಿರುದ್ಧ ಈ ಕೇಸು ದಾಖಲಿಸಲಾಗಿದೆ. ಚಂದೇರ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ನಿವಾಸಿ ಬಾಲಕಿ ಮೊಹಮ್ಮದ್ ಸಾದಿಕ್ ಕೆಲಸ ಮಾಡುವ ಖಾಸಗಿ ಆಸ್ಪತ್ರೆಯ ಒಟಿಟಿ ವಿದ್ಯಾರ್ಥಿನಿಯಾಗಿದ್ದಾಳೆ. ಘಟನೆ ನಡೆದದ್ದು ಮಂಜೇಶ್ವರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಾದ ಕಾರಣ ಚಂದೇರ ಪೊಲೀಸರು ಈ ಕೇಸನ್ನು ಮಂಜೇಶ್ವರ ಠಾಣೆಗೆ ಹಸ್ತಾಂತರಿಸಿದ್ದಾರೆ.

ಏಜೆಂಟ್‌ರ ಮೂಲಕ ಹಣ ಸಂಗ್ರಹ: ಮೋಟಾರು ವಾಹನ ಇಲಾಖೆಯ ಜಿಲ್ಲೆಯ ನಾಲ್ವರು ಅಧಿಕಾರಿಗಳ ವಿರುದ್ಧ ವಿಜಿಲೆನ್ಸ್ ಟ್ರಿಬ್ಯೂನಲ್ ತನಿಖೆ

ಕಾಸರಗೋಡು:  ಡ್ರೈವಿಂಗ್ ಟೆಸ್ಟ್ ಗ್ರಾಂಡ್‌ನ ಏಜೆಂಟರ ಮೂಲಕ ಹಣ ಸಂಗ್ರಹ ಮಾಡಿರುವುದಾಗಿ ವಿಜಿಲೆನ್ಸ್ ಆಂಡ್ ಆಂಟಿ ಕರೆಕ್ಷನ್ ಬ್ಯೂರೋ ನಡೆಸಿದ ತನಿಖೆಯಲ್ಲಿ  ಪತ್ತೆಯಾದ ಹಿನ್ನೆಲೆಯಲ್ಲಿ  ಅದರ ಮುಂದಿನ ತನಿಖೆ ಎಂಬಂತೆ ಹೊಸದುರ್ಗ ಸಬ್ ಆರ್‌ಟಿಒ ಕಚೇರಿಯ  ಮೋಟಾರು ವೆಹಿಕಲ್ ಇನ್‌ಸ್ಪೆಕ್ಟರ್ ಕೆ.ವಿ. ಜಯನ್, ಅಸಿ ಸ್ಟೆಂಟ್ ಮೋಟಾರ್ ವೆಹಿಕಲ್ ಇನ್‌ಸ್ಪೆಕ್ಟರ್‌ಗಳಾದ ಶಾಜಿಲ್ ಕೆ. ರಾಜ್,  ಎಂ.ಜೆ. ಸುಧೀಶ್ ಮತ್ತು ವಿ.ಜೆ. ಶಾಜು ಎಂಬವರ ವಿರುದ್ಧ ಈ ತನಿಖೆ ಆರಂಭಿಸಲಾಗಿದೆ. ಈ ಪೈಕಿ ಶಾಜಿಲ್ ಕೆ ರಾಜ್ ಸರಕಾರಿ …

ವಾಷಿಂಗ್ ಮೆಶಿನ್‌ನಿಂದ ಬೆಂಕಿ ಎದ್ದು ಮನೆಗೆ ಭಾರೀ ನಷ್ಟ

ಕಾಸರಗೋಡು: ವಾಷಿಂಗ್ ಮೆಶಿನ್‌ನಿಂದ ಬೆಂಕಿ ಎದ್ದು ಮನೆಗೆ ಅಪಾರ ನಷ್ಟವುಂಟಾದ ಘಟನೆ ನಡೆದಿದೆ.  ಪೆರುಂಬಳ ಸಮೀಪದ ಕಕ್ಕಡಂ-ಬೇನೂರು ರಸ್ತೆ ಬಳಿ ನಿವಾಸಿ ಬೆಳ್ಳೂರು ಪಂಚಾಯತ್ ಸಿಬ್ಬಂದಿ ಅಬ್ದುಲ್ ವಾಜಿದ್ ಎಂಬವರ ಮನೆಯಲ್ಲಿ ಈ ಅನಾಹುತ ಸಂಭವಿಸಿದೆ. ಅಬ್ದುಲ್ ವಾಜೀದ್‌ರ ಪತ್ನಿ ಶಬಾನಾ ಮನೆಯ ವಾಷಿಂಗ್ ಮೆಶಿನ್‌ನಲ್ಲಿ  ಬಟ್ಟೆ ಹಾಕಿದ ಬಳಿಕ ಮನೆಯ ಕೆಳ ಅಂತಸ್ತಿನಲ್ಲಿರುವ ಅಡುಗೆ ಕೊಠಡಿಯಲ್ಲಿ ಅಡುಗೆ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಪ್ಲಾಸ್ಟಿಕ್ ಉರಿಯುವ ವಾಸನೆ ಉಂಟಾದಾಗ ಅದರಿಂದ ಸಂಶಯಗೊಂಡು ಅವರು ವಾಷಿಂಗ್ ಮೆಶಿನ್ …

ಹಿರಿಯ ಖಾಸಗಿ ಬಸ್ ನಿರ್ವಾಹಕ ನಿಧನ

ಮುಳ್ಳೇರಿಯ: ಖಾಸಗಿ ಬಸ್‌ನ ಹಿರಿಯ ನಿರ್ವಾಹಕನಾಗಿದ್ದ ಮುಳ್ಳೇರಿಯ ನಿವಾಸಿ ಶೇಖ್ ಎಂ.ಎಸ್. ಆದಂ (75) ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಹಿರಿಯ ಸಿಪಿಎಂ ಕಾರ್ಯಕರ್ತನಾಗಿದ್ದಾರೆ. ಮೃತರು ಪತ್ನಿ ರಸಿಯಬಾನು, ಮಕ್ಕಳಾದ ಶಮೀರ್, ರಶೀದ್, ಫೌಸಿಯಾಬಾನು, ನಿಲೋಫರ್, ಅಳಿಯ- ಸೊಸೆಯಂದಿರಾದ ಮೈನಾಸ್, ಶಿಬಾ, ಖಲೀಲ್, ಮಜೀದ್, ಸಹೋದರಿ ಶಕೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.