30 ಪವನ್ ಚಿನ್ನಾಭರಣ 4 ಲಕ್ಷ ರೂ. ಕಳವು ನಡೆದ ಮನೆಯ ಸೊಸೆ ಸಾಲಿಗ್ರಾಮದಲ್ಲಿ ಮೃತಪಟ್ಟ ಘಟನೆ ಕೊಲೆಯೆಂದು ಸಾಬೀತು: ಗೆಳೆಯ ಸೆರೆ
ಕಣ್ಣೂರು: ಇತ್ತೀಚೆಗೆ 30 ಪವನ್ ಚಿನ್ನಾಭರಣ, 4 ಲಕ್ಷ ರೂ. ಕಳವು ಹೋದ ಮನೆಯ ಸೊಸೆಯನ್ನು ಕರ್ನಾ ಟಕದ ಸಾಲಿಗ್ರಾಮದ ವಸತಿಗೃಹದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದ್ದು, ಇದು ಕೊಲೆ ಕೃತ್ಯವೆಂದು ಪೊಲೀಸರು ತಿಳಿಸಿದ್ದಾರೆ. ಕಲ್ಯಾಟ್ ಚುಂಗಸ್ತಾನಂ ನಿವಾಸಿ ಎ.ಪಿ. ಸುಭಾಷ್‌ರ ಪತ್ನಿ ದರ್ಶಿತ (22) ಕೊಲೆಗೀಡಾಗಿರುವುದು. ಜೊತೆಗಿದ್ದ ಗೆಳೆಯ ಕರ್ನಾಟಕ ಪಿರಿಯಾಪಟ್ಟಣ ನಿವಾಸಿ ಸಿದ್ಧರಾಜು (22)ನನ್ನು ಸಾಲಿಗ್ರಾಮದಿಂದ ಪೊಲೀಸರು ಬಂಧಿಸಿದ್ದಾರೆ. ವಸತಿಗೃಹದಲ್ಲಿ ದರ್ಶಿತ ಹಾಗೂ ಸಿದ್ಧರಾಜು ಮಧ್ಯೆ ವಾಗ್ವಾದವುಂಟಾಗಿದ್ದು, ಸಿದ್ಧರಾಜು ದರ್ಶಿತಳ ಬಾಯಿಗೆ ಇಲೆಕ್ಟ್ರಿಕ್ ಡಿಟಾನೇಟರ್ ತುರುಕಿಸಿ …