ಕಲ್ಯೋಟ್ ಅವಳಿ ಕೊಲೆ ಪ್ರಕರಣದ ಆರೋಪಿಗಳಿಗೆ ಪರೋಲ್: ಯೂತ್ ಕಾಂಗ್ರೆಸ್‌ನ ಪ್ರತಿಭಟನಾ ಮಾರ್ಚ್‌ಗೆ ಪೊಲೀಸ್ ಅನುಮತಿ ನಿರಾಕರಣೆ
ಕಾಸರಗೋಡು: ಕಲ್ಯೋಟ್ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಹಾಗೂ ಶರತ್‌ಲಾಲ್‌ರನ್ನು ಇರಿದು ಕೊಲೆಗೈದ ಪ್ರಕರಣದ ಇಬ್ಬರು ಆರೋಪಿಗಳಿಗೆ ಪರೋಲ್ ಮಂಜೂರು ಮಾಡಿದ ಸರಕಾರದ ಕ್ರಮವನ್ನು ಪ್ರತಿ ಭಟಿಸಿ ಯೂತ್ ಕಾಂಗ್ರೆಸ್ ಘೋಷಿಸಿದ್ದ ಪ್ರತಿಭಟನಾ ಮಾರ್ಚ್‌ಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಅನುಮತಿ ಲಭಿಸದಿದ್ದರೂ ಮಾರ್ಚ್ ನಡೆಸುವು ದಾಗಿ ಯೂತ್ ಕಾಂಗ್ರೆಸ್ ತಿಳಿಸಿದೆ. ಘರ್ಷಣೆ ಸಾಧ್ಯತೆ ಇದೆ ಎಂಬ ರಹಸ್ಯ ತನಿಖಾ ವಿಭಾಗದ ವರದಿಗಳ ಹಿನ್ನೆಲೆಯಲ್ಲಿ ಪೊಲೀಸರು ಭಾರೀ ಭದ್ರತೆ ಏರ್ಪಡಿಸಿದ್ದಾರೆ. ಇದರಂಗವಾಗಿ ಕಣ್ಣೂರು ಮಾಂಙಾಟ್ ಪರಂಬ್ ಪೊಲೀಸ್ ಕ್ಯಾಂಪ್‌ನಿಂದ …