ಯು.ಪಿ. ಕುಣಿಕುಳ್ಳಾಯರು ಸದಾ ಸ್ಮರಣೀಯರು-ಸಂಸ್ಮರಣಾ ಕಾರ್ಯಕ್ರಮದಲ್ಲಿ ಮುರಳೀಧರ ಬಳ್ಳಕ್ಕುರಾಯ
ಕಾಸರಗೋಡು :ಮಾಜಿ ಶಾಸಕ, ಕನ್ನಡ ಹೋರಾಟಗಾರ, ನ್ಯಾಯವಾದಿ ದಿ| ಯು.ಪಿ ಕುಣಿಕುಳ್ಳಾಯರ ಸಂಸ್ಮರಣಾ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕಾಸರಗೋಡಿನ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು.ಕರ್ನಾಟಕ ಸಮಿತಿ ಅಧ್ಯಕ್ಷ, ನ್ಯಾಯವಾದಿ ಕೆ. ಮುರಳೀಧರ ಬಳ್ಳಕ್ಕುರಾಯ ಸಂಸ್ಮರಣಾ ಭಾಷಣ ಮಾಡಿದರು. ಕಾಸರಗೋಡಿನಲ್ಲಿ ಕನ್ನಡದ ಸವಲತ್ತುಗಳನ್ನು ಉಳಿಸುವುದಕ್ಕಾಗಿ ಕನ್ನಡದ ಹಿತರಕ್ಷಣೆಗಾಗಿ ಕುಣಿಕುಳ್ಳಾಯರು ಅವಿರತವಾಗಿ ಶ್ರಮಿಸಿದವರು. ಕನ್ನಡಕ್ಕೆ, ಕನ್ನಡಿಗರಿಗೆ ಅನ್ಯಾಯವಾದಾಗ ಸಂಬAಧಪಟ್ಟವರಿಗೆ ನೂರಾರು ಮನವಿ ಸಲ್ಲಿಸಿ, ನ್ಯಾಯಾಲಯದ ಮೆಟ್ಟಲೇರಿ ನ್ಯಾಯ ದೊರಕಿಸಿಕೊಟ್ಟವರು ಎಂದು ಅವರು ಹೇಳಿದರು. …
Read more “ಯು.ಪಿ. ಕುಣಿಕುಳ್ಳಾಯರು ಸದಾ ಸ್ಮರಣೀಯರು-ಸಂಸ್ಮರಣಾ ಕಾರ್ಯಕ್ರಮದಲ್ಲಿ ಮುರಳೀಧರ ಬಳ್ಳಕ್ಕುರಾಯ”