ಕಾರಿಗೆ ಅಡ್ಡಗಟ್ಟಿ ಕೋಳಿ ವ್ಯಾಪಾರಿಯ ಚಿನ್ನದ ಸರ ಅಪಹರಿಸಿದ ಪ್ರಕರಣ: ಆರೋಪಿ ಸೆರೆ: 4 ದಿನದ ಹಿಂದೆ ಜೈಲಿನಿಂದ ಬಿಡುಗಡೆಗೊಂಡಿದ್ದ ಆರೋಪಿ

ವರ್ಕಾಡಿ: ಆಮ್ನಿ ವ್ಯಾನ್ ತಡೆದು ನಿಲ್ಲಿಸಿ ಕೋಳಿ ವ್ಯಾಪಾರಿಯ ಕುತ್ತಿಗೆಗೆ ಕತ್ತಿ ಇರಿಸಿ ಬೆದರಿಸಿ ೩ ಲಕ್ಷ ರೂ. ಮೌಲ್ಯದ ಚಿನ್ನದ ಸರ ಅಪಹರಿಸಿದ ಪ್ರಕರಣದಲ್ಲಿ ಪ್ರಧಾನ ಆರೋಪಿ ಸೆರೆಯಾಗಿದ್ದಾನೆ. ಕುಂಬಳೆ, ಬಂದ್ಯೋಡು, ಅಡ್ಕ ವೀರನಗರ, ಕೋಟೆ ಹೌಸ್ ನಿವಾಸಿ ಅಬ್ದುಲ್ ಲತೀಫ್ ಯಾನೆ ತೋಕ್ ಲತೀಫ್ (29)ನನ್ನು ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಇ. ಅನೂಬ್ ಕುಮಾರ್ ಹಾಗೂ ತಂಡ ಸೆರೆ ಹಿಡಿದಿದೆ. ಮೊರತ್ತಣೆಯಲ್ಲಿ ಶನಿವಾರ ಮಧ್ಯಾಹ್ನ 12.30ರ ವೇಳೆ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ಅರಿಬೈಲ್ …

ಪರಿಚಯಗೊಂಡ 14ರ ಹರೆಯದ ಬಾಲಕಿಯನ್ನು ಕರೆದೊಯ್ದು ಲೈಂಗಿಕ ಕಿರುಕುಳ: ಮಲಪ್ಪುರಂ ನಿವಾಸಿ ಸೆರೆ

ಕಾಸರಗೋಡು: ಪರಿಚಯಗೊಂಡ ಬಾಲಕಿಯನ್ನು ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಿದ ಮಲಪ್ಪುರಂ ನಿವಾಸಿಯಾ ಗಿರುವ ಆರೋಪಿಯನ್ನು ಕಾಸರಗೋ ಡು ಪೊಲೀಸರು ಬಂಧಿಸಿದ್ದಾರೆ. ಮಲಪ್ಪುರಂ ನಿವಾಸಿ ಹಾಗೂ ಗಲ್ಪ್ ಉದ್ಯೋಗಿ ಇಜಾಸ್ ಅಹಮ್ಮದ್ (20) ಬಂಧಿತ ಆರೋಪಿ. ಈತ ಇತ್ತೀಚೆಗೆ  ಹೊಸದುರ್ಗಕ್ಕೆ ಬಂದಿದ್ದನು. ಅಲ್ಲಿ ಆತ ಕಾಸರಗೋಡು ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ 14ರ ಹರೆಯದ ಬಾಲಕಿಯೋರ್ವಳನ್ನು ಪರಿಚಯಗೊಂಡು ಆಕೆಯ ಮೊಬೈಲ್ ನಂಬ್ರವನ್ನು ಕೇಳಿ ಪಡೆದಿದ್ದನು. ನಂತರ ಆತ ನಿರಂತರವಾಗಿ ಬಾಲಕಿಯನ್ನು ಫೋನ್‌ನಲ್ಲಿ ಸಂಪರ್ಕಿಸಿ ಪರಿಚಯ ದಿಂದ ಆಕೆಯನ್ನು ಪುಸಲಾಯಿಸಿ …

ಶಬರಿಮಲೆ ಚಿನ್ನ ಕಳವು ತನಿಖೆ ಹೈದರಾಬಾದ್, ಬೆಂಗಳೂರು, ತಮಿಳುನಾಡಿಗೆ ವಿಸ್ತರಣೆ

ಪಂದಳಂ: ಶಬರಿಮಲೆ ದೇಗುಲದ ಚಿನ್ನ ಕಳವುಗೈದ ಪ್ರಕರಣದ ತನಿಖೆಯನ್ನು  ವಿಶೇಷ ತನಿಖಾ ತಂಡ ಹೈದರಾಬಾದ್, ಬೆಂಗಳೂರು ಮತ್ತು ತಮಿಳುನಾಡಿಗೂ ವಿಸ್ತರಿಸಿದೆ. ಶಬರಿಮಲೆ ದೇವಸ್ಥಾನ ದೊಂದಿಗೆ ವರ್ಷಗಳಿಂದ ನಂಟು ಹೊಂದಿರುವ ಹಾಗೂ ಈ ಪ್ರಕರಣದ ಪ್ರಮುಖ ಆರೋಪಿ ಉಣ್ಣಿ ಕೃಷ್ಣನ್ ಪೋತ್ತಿಯೊಂದಿಗೆ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಹಲವು ಗಣ್ಯರು ನಿಕಟ ಸಂಪರ್ಕ ಹೊಂದಿದ್ದು, ಇದು ಭಾರೀ ನಿಗೂಢತೆಗೂ ದಾರಿಮಾಡಿ ಕೊಟ್ಟಿದ್ದು ಅದನ್ನು ಬೇಧಿಸಲು ಈ ಪ್ರಕರಣದ ತನಿಖೆಯನ್ನು ಎಸ್‌ಎಟಿ ಈ ಮೂರು ರಾಜ್ಯಗಳಿಗೂ ವಿಸ್ತರಿಸಿದೆ. ಈ ಪ್ರಕರಣದ …

ಅಮಿತ ಪ್ರಮಾಣದಲ್ಲಿ ದಾಸ್ತಾನು ಇರಿಸಿದ್ದ 8893 ಕಿಲೋ ಸುಡುಮದ್ದು ವಶ

ಕಾಸರಗೋಡು: ದೀಪಾವಳಿ ಹಬ್ಬದ ಪ್ರಯುಕ್ತ ನಿಗದಿತ ಪ್ರಮಾ ಣಕ್ಕಿಂತಲೂ ಹೆಚ್ಚು ಸುಡುಮದ್ದು ಗಳನ್ನು ದಾಸ್ತಾನು ಇರಿಸುವ ಅಂಗಡಿಗಳನ್ನು ತಪಾಸಣೆಗೊಳ ಪಡಿಸುವ ಕ್ರಮವನ್ನು ಪೊಲೀಸರು ಇನ್ನೂ  ಮುಂದುವರಿಸಿದ್ದು, ಇದರಂತೆ ಕೇಳುಗುಡ್ಡೆಯಲ್ಲಿ ಕಾರ್ಯವೆಸಗುತ್ತಿದ್ದ ಪಟಾಕಿ  ಮಾರಾಟದಂಗಡಿಗೆ ಕಾಸರಗೋಡು ಪೊಲೀಸರು ನಡೆಸಿದ ತಪಾಸಣೆಯಲ್ಲಿ  ಅಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ದಾಸ್ತಾನು ಇರಿಸಿದ್ದ 8893.745 ಕಿಲೋ ಸುಡುಮದ್ದನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಅ. ೧೯ರಂದು ಪೊಲೀಸ್ ಕಾರ್ಯಾಚರಣೆ ನಡೆದಿದೆ. ಇದಕ್ಕೆ ಸಂಬಂಧಿಸಿ ಪ್ರಸ್ತುತ  ಪಟಾಕಿ ಅಂಗಡಿ ಮಾಲಕ ಮೊಹಮ್ಮದ್ ಕುಂಞಿ  ಸಿ.ಎಚ್‌ರ ವಿರುದ್ಧ …

ಪಿಲಿಕುಂಜೆ ಶ್ರೀ ಜಗದಂಬಾ ದೇವಿ ಕ್ಷೇತ್ರದಿಂದ ಕಳವು

ಕಾಸರಗೋಡು: ಪಿಲಿಕುಂಜೆ ಶ್ರೀ ಜಗದಂಬಾ ದೇವಿ ಕ್ಷೇತ್ರದಿಂದ ಕಳವು ನಡೆದಿದೆ. ನಿನ್ನೆ ರಾತ್ರಿ ಕಳವು ನಡೆದಿರಬೇಕೆಂದು ಶಂಕಿಸಲಾಗಿದೆ. ಕ್ಷೇತ್ರದ ಸೇವಾ ಕೌಂಟರ್, ಆಫೀಸ್, ಸ್ಟೋರ್ ರೂಂ ಎಂಬಿವುಗಳ ಬೀಗ ಮುರಿದು ಸೇವಾ ಕೌಂಟರ್‌ನಿಂದ 1000 ರೂ. ಕಳವು ಗೈಯ್ಯಲಾಗಿದೆ. ಆಫೀಸ್‌ನಿಂದ ಸಿಸಿ ಟಿವಿಯ ಹಾರ್ಡ್‌ಡಿಸ್ಕ್ ಕಳವು ನಡೆಸಲಾಗಿದೆ. ಸ್ಟೋರ್ ರೂಂನಿಂದ ಮೈಕ್‌ಸೆಟ್‌ನ  ಆಂಪ್ಲಿಫಯರ್ ಕಳವು ನಡೆಸಿದ್ದರೂ ಅದನ್ನು ಉಪೇಕ್ಷಿಸಿರುವುದಾಗಿ ಪತ್ತೆ ಮಾಡಲಾಗಿದೆ. ಸಿಸಿಟಿವಿಯ ಹಾರ್ಡ್‌ಡಿಸ್ಕ್ ಕ್ಷೇತ್ರ ಆಡಳಿತ ಸಮಿತಿ ಸದಸ್ಯರು ನಡೆಸಿದ ಹುಡು ಕಾಟದಿಂದ ಬಾವಿಯಿಂದ ಪತ್ತೆ …

ಅನಂತಪುರ ಫ್ಲೈವುಡ್ ಕಾರ್ಖಾನೆಯಿಂದ ನಾಪತ್ತೆಯಾದ ಜೋಡಿ ಶೊರ್ನೂರಿನಲ್ಲಿ ಸೆರೆ

ಕುಂಬಳೆ: ಅನಂತಪುರ ಫ್ಲೈವುಡ್ ಕಾರ್ಖಾನೆಯಿಂದ ನಾಪತ್ತೆಯಾಗಿದ್ದ ಜೋಡಿಯನ್ನು ಶೊರ್ನೂರಿನಿಂದ ಅಲ್ಲಿನ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಅನಂತಪುರ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದ ಅಸ್ಸಾಂ ನಿವಾಸಿ ನೂರುಲ್ ಇಸ್ಲಾಂರ ಪತ್ನಿ ಅಜಿದ ಕಾಥೂನ್ (22) ನಾಪತ್ತೆಯಾದ ಯುವತಿಯಾಗಿದ್ದು, ಇದೇ ಕಾರ್ಖಾನೆಯಲ್ಲಿ ಕೆಲಸಕ್ಕಿದ್ದ ಅಸ್ಸಾಂ ನಿವಾಸಿಯ ಜೊತೆಯಲ್ಲಿ ಶೊರ್ನೂ ರಿನಿಂದ ಸೆರೆಹಿಡಿಯಲಾಗಿದೆ. ಪತಿ ನೂರುಲ್ ಇಸ್ಲಾಂ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿದ್ದರು. ಒಂದೂವರೆ ವರ್ಷದ ಮಗುವಿನ ಜೊತೆ ಪತ್ನಿ ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಹಲವು ಸಮಯದಿಂದ …

ನಮಾಜು ಕಳೆದು ಹಿಂತಿರುಗುತ್ತಿದ್ದ ವ್ಯಕ್ತಿಗೆ ಬೈಕ್ ಢಿಕ್ಕಿ: ಗಂಭೀರ ಗಾಯ

ಕುಂಬಳೆ: ಮಸೀದಿಯಲ್ಲಿ ನಮಾಜು  ಮಾಡಿ ಮನೆಗೆ ಹಿಂತಿರುಗುತ್ತಿದ್ದ ವ್ಯಕ್ತಿ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದಾರೆ. ಪೇರಾಲ್‌ಕಣ್ಣೂರಿನ ಅಬ್ದುಲ್ಲ (66) ಗಾಯಗೊಂಡವರು. ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಲಿಗೆ, ತಲೆಗೆ ಗಂಭೀರ ಗಾಯಗೊಂಡಿದ್ದು ಶಸ್ತ್ರ ಚಿಕಿತ್ಸೆ ನಡೆಸಲು ಡಾಕ್ಟರ್‌ಗಳು ಸೂಚಿಸಿದ್ದಾರೆ. ಗಾಯಗೊಂಡ ಬೈಕ್ ಸವಾರ ಪೇರಾಲ್‌ನ ತೇಜಸ್ (20)ನನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ 1 ಗಂಟೆ ವೇಳೆ ಪೇರಾಲ್ ನಾಟೆಕಲ್‌ನಲ್ಲಿ ಅಪಘಾತ ಸಂಭವಿಸಿದೆ. …

ಸಮಾನಾಂತರ ಲಾಟರಿ: ನಾಲ್ವರ ಸೆರೆ

ಕಾಸರಗೋಡು: ಸಮಾನಾಂತರ ಲಾಟರಿ ಟಿಕೆಟ್‌ಗಳ  ಮಾರಾಟ ಮಾಡುತ್ತಿದ್ದ ಆರೋಪದಂತೆ  ನಾಲ್ವರನ್ನು ಕಾಸರ ಗೋಡು ಪೊಲೀಸರು ಬಂಧಿಸಿದ್ದಾರೆ. ಶಿರಿಬಾಗಿಲು ಭಗವತೀ ನಗರದ ಜಿ.ಆರ್. ರಾಧಾಕೃಷ್ಣ (31), ಕೂ ಡ್ಲು  ರಾಮದಾಸನಗರದ ಅಭಿಷೇಕ್ ಕುಮಾರ್ (32), ರಾಮದಾಸನಗರ ಹೊಸಮನೆ ರಸ್ತೆ ಬಳಿಯ ಪವನ್‌ರಾಜ್ ಸಿ (25) ಮತ್ತು ಕಾಸರಗೋಡು ಕೋಟೆಕಣಿ ಕ್ರಾಸ್ ರಸ್ತೆ ಬಳಿಯ ರಾಜಾಪ್ರಸಾದ್ ಎಸ್ (36) ಎಂಬವರನ್ನು ಇದಕ್ಕೆ ಸಂಬಂಧಿಸಿ ಬಂಧಿಸಿ ಕೇಸು ದಾಖಲಿಸಲಾಗಿದೆ. ಬಂಧಿತರಿಂದ ೨೬,೪೯೦ರೂ. ನಗದು ವಶಪಡಿಸಲಾಗಿದೆ.  ಕೇರಳ ರಾಜ್ಯ ಲಾಟರಿ ಕಾನೂನಿನ ವಿರುದ್ಧ …

ಲಾರಿಯಿಂದ ಜಿಗಿದು ಪ್ರಾಣಭಯದಿಂದ ಓಟಕ್ಕಿತ್ತ ಕೋಣ ಹಾಯ್ದು ಬಾಲಕನಿಗೆ ಗಂಭೀರ

ಕಾಸರಗೋಡು: ಲಾರಿಯಲ್ಲಿ ತರಲಾಗುತ್ತಿದ್ದ ಮೂರು ಕೋಣಗಳ ಪೈಕಿ ಒಂದು ಕೋಣ ಲಾರಿಯಿಂದ ಜಿಗಿದು ಪ್ರಾಣಭಯದಿಂದ ಅತ್ತಿತ್ತ ಓಡುತ್ತಿದ್ದ ವೇಳೆ ಆಟವಾಡುತ್ತಿದ್ದ  ಬಾಲಕನ ಮೇಲೆ ಹಾಯ್ದು  ಆತ ಗಂಭೀರ ಗಾಯಗೊಂಡ ಘಟನೆ ಕೂಡ್ಲು ಕಾವುಗೋಳಿಯಲ್ಲಿ ನಡೆದಿದೆ. ಕಾವುಗೋಳಿ ಕಡಪ್ಪುರಂ ಕೃಷ್ಣ ನಿವಾಸದ  ರಾಜೇಶ್ ಎಂಬವರ ಪುತ್ರ ಆರನೇ ತರಗತಿ ವಿದ್ಯಾರ್ಥಿ ಅಧ್ವೈತ್ ಗಾಯಗೊಂಡ ಬಾಲಕ.  ಗಂಭೀರ ಗಾಯಗೊಂಡ ಆತನನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಲಾರಿಯಲ್ಲಿ   ಮೂರು ಕೋಣಗಳನ್ನು ತರುತ್ತಿದ್ದ ವೇಳೆ ನಿನ್ನೆ ರಾತ್ರಿ  ಸುಮಾರು 7.15 ರ …

17 ದಿನ ಹಿಂದೆ ಊರಿಗೆ ಬಂದು ಮರಳಿದ ತೂಮಿನಾಡು ನಿವಾಸಿ ಖತ್ತರ್‌ನಲ್ಲಿ ಆಂಬಲೆನ್ಸ್ ಢಿಕ್ಕಿ ಹೊಡೆದು ಮೃತ್ಯು

ಮಂಜೇಶ್ವರA: 17 ದಿನಗಳ ಹಿಂದೆ ಊರಿಗೆ ಬಂದು ಮರಳಿದ್ದ ಕುಂಜತ್ತೂರು ತೂಮಿನಾಡು ನಿವಾಸಿ ಖತ್ತಾರ್‌ನಲ್ಲಿ ಆಂಬುಲೆನ್ಸ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ತೂಮಿನಾಡು ಹಿಲ್ಟೋಪ್ ನಿವಾಸಿ ದಿ| ಅಬೂಬಕರ್ ಅವರ ಪುತ್ರ ಹಾರಿಸ್ (39) ಖತ್ತಾರ್‌ನಲ್ಲಿ ಆಂಬುಲೆನ್ಸ್ ಡಿಕ್ಕಿ ಹೊಡೆದು ಮೃತಪಟ್ಟವರು.ಖತ್ತಾರ್‌ನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿದ್ದರು. ವಾಹನ ಓಡಿಸುವಾಗ ಟೈರ್ ಪಂಕ್ಚರ್ ಆದ ಕಾರಣ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಟೈರ್ ಬದಲಾಯಿಸುತ್ತಿದ್ದಾಗ ಆ ದಾರಿಯಾಗಿ ಬಂದ ಆಂಬ್ಯುಲೆನ್ಸ್ ಇವರಿಗೆ ಡಿಕ್ಕಿ ಹೊಡೆದಿದೆ. ಮೃತರು ತಾಯಿ ಫಾತಿಮಾ, ಪತ್ನಿ …