ಪೊಲೀಸ್‌ನ ಪತ್ನಿ ಕಿಚ್ಚಿರಿಸಿದ ವೃದ್ಧೆ ಮೃತ್ಯು:ಆರೋಪಿ ಸೆರೆ

ಪತ್ತನಂತಿಟ್ಟ: ಪೊಲೀಸ್‌ನ ಪತ್ನಿ ಬೆಂಕಿ ಹಚ್ಚಿದ ಆಶಾ ಕಾರ್ಯಕರ್ತೆ ಮೃತಪಟ್ಟರು. ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಪತ್ತನಂತಿಟ್ಟ ಕೇಳ್ಪಾಯೂರ್ ನಿವಾಸಿ ಲತಾ ಕುಮಾರಿ (61) ಮೃತಪಟ್ಟವರು. ಕೋಟ್ಟಯಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆಯಲ್ಲಿರುವಾಗ ನಿನ್ನೆ ರಾತ್ರಿ ಮರಣ ಸಂಭವಿಸಿದೆ. ಅಕ್ಟೋಬರ್ 9ರಂದು ಘಟನೆ ನಡೆದಿದೆ. ಕಳವು ಯತ್ನವನ್ನು ತಡೆಯುತ್ತಿದ್ದ ಮಧ್ಯೆ ತಮಗೆ ಬೆಂಕಿ ತಗಲಿದೆಯೆಂದು ಚಿಕಿತ್ಸೆ ವೇಳೆ ಲತಾ ಕುಮಾರಿ ತಿಳಿಸಿದ್ದರು. ಸಮೀಪದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಪೊಲೀಸ್‌ನ ಪತ್ನಿ ಸುಮಯ್ಯ ಮನೆಗೆ ಅತಿಕ್ರಮಿಸಿ ನುಗ್ಗಿ ಕಿಚ್ಚಿರಿಸಿರುವುದಾಗಿ  ಲತಾ ಕುಮಾರಿ ಹೇಳಿಕೆ ನೀಡಿದ್ದಾರೆ. …

ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ: ಇಡುಕ್ಕಿಯಲ್ಲಿ ಮಹಾಪ್ರವಾಹ, ಭೂಕುಸಿತ

ತಿರುವನಂತಪುರ: ಮುಂಗಾರುಮಳೆ ಬಳಿಕ ರಾಜ್ಯದಲ್ಲಿ ಸ್ವಾತಿ ಮಳೆ ಸುರಿಯಲಾರಂಭಿಸಿರು ವಂತೆಯೇ  ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆಯೆಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ ವೇಳೆ ಇಡುಕ್ಕಿ ಜಿಲ್ಲೆಯಲ್ಲಿ ನಿನ್ನೆಯಿಂದ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದು ಇದರಿಂದ  ಜಿಲ್ಲೆಯ ಕಟ್ಟಪನ, ಕುಳಂದಪ್ಪಾರೆ ಯಲ್ಲಿ ಇಂದು ಮುಂಜಾನೆ ಭಯಂಕರ ಸದ್ದಿ ನೊಂದಿಗೆ ಭಾರೀ  ಭೂಕುಸಿತವುಂ ಟಾಗಿದೆ. ಮಾತ್ರವಲ್ಲ ಈ ಪ್ರದೇಶದ ಹಲವು ರಸ್ತೆಗಳು ಮತ್ತು ಕೃಷಿ ತೋಟಗಳು ಭಾರೀ ಪ್ರವಾಹದಿಂದಾಗಿ ನೀರಿನಲ್ಲಿ ಕೊಚ್ಚಿ …

ಪಾಕಿಸ್ತಾನದಿಂದ ವೈಮಾನಿಕ ದಾಳಿ: ಅಫ್ಘಾನಿಸ್ತಾನದ ಮೂವರು ಕ್ರಿಕೆಟಿಗರು ಸೇರಿ 10 ಸಾವು

ಕಾಬೂಲ್: ಕದನ ವಿರಾಮ ಉಲ್ಲಂಘಿಸಿ ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದ್ದು, ಅದರಲ್ಲಿ ಅಫ್ಘಾನಿಸ್ತಾನದ ಮೂವರು ಕ್ರಿಕೆಟ್ ಆಟಗಾರರು ಸೇರಿ ಹತ್ತು ಮಂದಿ ಪ್ರಾಣ ಕಳೆದುಕೊಂಡಿ ದ್ದಾರೆ. 12 ಮಂದಿ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದ ಅರ್ಗುನ್ ಮತ್ತು  ಬರ್ಮಲ್ ಜಿಲ್ಲೆಗಳಲ್ಲಿ ಪಾಕಿಸ್ತಾನ  ಈ ವೈಮಾನಿಕ ದಾಳಿ ನಡೆಸಿದೆ. ಈ ದಾಳಿ ನಮ್ಮ ಮೂವರು ಆಟಗಾರರು ಸೇರಿದಂತೆ 12 ಮಂದಿಯ ಪ್ರಾಣ ಅಪಹರಿಸಿದೆ. ಇದು ಹೇಡಿತನದ ದಾಳಿಯಾಗಿದೆ. ವೀರ ಕ್ರಿಕೆಟಿಗರ ಸಾವು ನಮಗೆ ಅಪಾರ ನೋವು …

ಶಬರಿಮಲೆ ದೇಗುಲದ ನೂತನ ಮುಖ್ಯ ಅರ್ಚಕರಾಗಿ ಇ.ಡಿ. ಪ್ರಸಾದ್ ಆಯ್ಕೆ

ಶಬರಿಮಲೆ: ಶಬರಿಮಲೆ ದೇಗುಲದ ಹೊಸ ಮುಖ್ಯ ಅರ್ಚಕರನ್ನಾಗಿ ತೃಶೂರು ಚಾಲಕುಡಿ ನಿವಾಸಿ ಎರನ್ನೂರು ಮನಯಿಲ್‌ನ ಇ.ಡಿ. ಪ್ರಸಾದ್‌ರನ್ನು ಆರಿಸಲಾಗಿದೆ. ಮಾಲಿಗಪುರಂ ಕ್ಷೇತ್ರದ ಪ್ರಧಾನ ಅರ್ಚಕರಾಗಿ ಕೊಲ್ಲಂ ಕುಟ್ಟಿಕಡ ನಿವಾಸಿ ಎಂ.ಜಿ. ಮನು ನಂಬೂದಿರಿ ಆಯ್ಕೆಗೊಂಡಿದ್ದಾರೆ. ಅದೃಷ್ಟ ಚೀಟಿ ಎತ್ತುವ ಮೂಲಕ ಈ ಇಬ್ಬರನ್ನು ಆರಿಸಲಾಗಿದೆ.  ಶಬರಿಮಲೆ ದೇಗುಲದ ಅರ್ಚಕ ಸ್ಥಾನಕ್ಕಾಗಿ ಅಂತಿಮ ಹಂತ ಪಟ್ಟಿಯಲ್ಲಿ 14 ಮಂದಿಯ ಹೆಸರು ಒಳಗೊಂಡಿತ್ತು. ಆ ಪೈಕಿ ಡ್ರಾ ಎತ್ತುವ ಮೂಲಕ ಈ ಇಬ್ಬರು ಹೊಸ ಅರ್ಚಕರನ್ನು ಆರಿಸಲಾಗಿದೆ. ಶಬರಿಮಲೆ ದೇಗುಲದ …

ಪ್ಲಾಂಟೇಶನ್ ಕಾರ್ಪರೇಶನ್ ಮಾಜಿ ನೌಕರ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಬೋವಿಕ್ಕಾನ: ರಾತ್ರಿ ಆಹಾರ ಸೇವಿಸಿ ನಿದ್ರಿಸಿದ್ದ ವ್ಯಕ್ತಿ ಬೆಳಿಗ್ಗೆ ನಾಪತ್ತೆಯಾಗಿದ್ದು, ಶೋಧ ನಡೆಸಿದಾಗ ಬಾವಿಯಲ್ಲಿ ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೋವಿಕ್ಕಾನ ಮುಪ್ಪತ್ತಿಯಾರ್ ಎಂಬಲ್ಲಿನ ಎಂ. ಚೋಯಿ (73) ಮೃತ ವ್ಯಕ್ತಿ. ಇವರು ಮುಳಿ ಯಾರು ಪ್ಲಾಂಟೇಶನ್ ಕಾರ್ಪರೇಶನ್‌ನಲ್ಲಿ ದೀರ್ಘ ಕಾಲ ನೌಕರನಾಗಿದ್ದರು. ನಿನ್ನೆ ಬೆಳಿಗ್ಗೆ ಇವರು ಮನೆಯಿಂದ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಶೋಧ ನಡೆಸಿದಾಗ ಮೃತದೇಹ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎಂ. ಸತೀಶನ್ ನೇತೃತ್ವದ ಅಗ್ನಿಶಾಮಕದಳ ಮೃತದೇಹವನ್ನು ಮೇಲಕ್ಕೆತ್ತಿದೆ. ಚೋಯಿ …

ಸಹಪಾಠಿಯ ಮನೆಗೆ ಬಂದು 36 ಪವನ್ ಚಿನ್ನಾಭರಣದೊಂದಿಗೆ ಪರಾರಿಯಾದ ಯುವತಿ ಸೆರೆ

ಕಲ್ಲಿಕೋಟೆ: ಸಹಪಾಠಿಯ ಮನೆಗೆ ಅತಿಥಿಯಾಗಿ ಬಂದು ೩೬ ಪವನ್ ಚಿನ್ನಾಭರಣದೊಂದಿಗೆ ಪರಾರಿಯಾದ ಆಂಧ್ರ ನಿವಾಸಿಯಾದ ಯುವತಿ ಮುಂಬೈಯಲ್ಲಿ ಸೆರೆಗೀಡಾಗಿದ್ದಾಳೆ.  ವಿಜಯವಾಡ ನಿವಾಸಿಯಾದ ತೊಟ್ಟಾಬಾನು ಸೌಜನ್ಯ (24) ಎಂಬಾಕೆಯನ್ನು ಫರೋಕ್ ಎಸ್‌ಪಿ ಎ.ಎಂ. ಸಿದ್ದಿಕ್ ನೇತೃತ್ವದ ತಂಡ ಹಾಗೂ ಬೇಪೂರ್ ಪೊಲೀಸರು ಸೇರಿ ಸೆರೆ ಹಿಡಿದಿದ್ದಾರೆ. ಸೆರೆಗೀಡಾದ ಸೌಜನ್ಯ ಬೇಪೂರ್ ನಿವಾಸಿಯಾದ ಗಾಯತ್ರಿಯ ಸಹಪಾಠಿಯಾ ಗಿದ್ದಾಳೆ.  ಇವರು ಬೆಂಗಳೂರಿನ ಕಾಲೇಜೊಂದರಲ್ಲಿ ಒಂದೇ ತರಗತಿಯಲ್ಲಿ ಸ್ನಾತಕೋತ್ತರ ಕೋರ್ಸ್ ಕಲಿಯುತ್ತಿದ್ದರು. ಜುಲೈ 17ರಂದು ಸೌಜನ್ಯ ಬೇಪೂರಿನ ಗಾಯತ್ರಿಯ ಮನೆಗೆ ಬಂದಿದ್ದಳು. ಮೂರು …

ರೋಗಾಣು ನಾಶಗೊಳಿಸಲು ವಾಟರ್ ಅಥೋರಿಟಿಯ ಟ್ಯಾಂಕ್‌ನಿಂದ ನೀರು ತೆರವು: ಕುಂಬಳೆ ಪೇಟೆ ಪರಿಸರ ಜಲಾವೃತ

ಕುಂಬಳೆ: ರೋಗಾಣುಗಳನ್ನು ನಾಶಗೊಳಿಸುವ ಉದ್ದೇಶದಿಂದ ಕುಂಬಳೆಯಲ್ಲಿ ವಾಟರ್ ಅಥೋರಿಟಿ ನೌಕರರು ಕುಡಿಯುವ ನೀರು ಟ್ಯಾಂಕ್ ತೆರೆದ ಹಿನ್ನೆಲೆಯಲ್ಲಿ ಕುಂಬಳೆ ಪೇಟೆಯ ವಿವಿಧೆಡೆ ನೀರು ತುಂಬಿಕೊಂಡಿತು. ಕುಂಬಳೆ ಪೊಲೀಸ್ ಠಾಣೆ ಪರಿಸರದ ಮೂಲಕ ಹರಿದ ನೀರು ಶ್ರೀ ಗೋಪಾಲಕೃಷ್ಣ ಕ್ಷೇತ್ರವರೆಗೆ ತಲುಪಿದೆ. ಪರಿಸರದ ಮನೆಗಳಿಗೂ ನೀರು ನುಗ್ಗುವ ಸ್ಥಿತಿ ಕಂಡು ಬಂತೆಂದು ದೂರಲಾಗಿದೆ. ಈ ಬಗ್ಗೆ ವಾಟರ್ ಅಥೋರಿಟಿ ನೌಕರರೊಂದಿಗೆ ಕಾಂಗ್ರೆಸ್ ನೇತಾರ ಲಕ್ಷ್ಮಣ ಪ್ರಭು ವಿಚಾರಿಸಿದಾಗ ಇದು ಅಕಸ್ಮಾತ್ ಸಂಭವಿಸಿದ ಘಟನೆಯಾ ಗಿದೆ. ಇನ್ನು ಮುಂದೆ ಇದುಂಟಾಗ …

ಅನಂತಪುರ ಉದ್ದಿಮೆ ಪಾರ್ಕ್‌ನಿಂದ ತ್ಯಾಜ್ಯ ನೀರು ಜನವಾಸ ಕೇಂದ್ರಕ್ಕೆ: ಮತ್ತೆ ಸಮಸ್ಯೆ ಸೃಷ್ಟಿ

ಕುಂಬಳೆ: ಅನಂತಪುರ ಉದ್ದಿಮೆ ಪಾರ್ಕ್‌ನ ಕೋಳಿ ಮಾಂಸ ಸಂಸ್ಕರಣಾ ಪ್ಲಾಂಟ್‌ನಿಂದ ತ್ಯಾಜ್ಯ ನೀರು ಹೊರಕ್ಕೆ ಹರಿದು ಹೋಗುತ್ತಿರುವುದರಿಂದ ಮತ್ತೆ ಸಮಸ್ಯೆ ಸೃಷ್ಟಿಯಾಗಿದೆ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ. ಪ್ಲಾಂಟ್‌ನಿಂದ ಹರಿಯುವ ತ್ಯಾಜ್ಯ ನೀರು ಸಮೀಪದ ಬಾವಿಗಳ ಸಹಿತ ಕುಡಿಯುವ ನೀರಿನ ಮೂಲಗಳಲ್ಲಿ ಹರಡುತ್ತಿದೆ. ಕಾಮನಬೈಲು ಎಸ್‌ಟಿ ಕಾಲನಿ, ಅಂಗನವಾಡಿ ಪರಿಸರದ ಮೂಲಕ ತ್ಯಾಜ್ಯ ನೀರು ಹರಿಯುತ್ತಿದ್ದು, ಅದರಿಂದ ಅಸಹನೀಯ ದುರ್ನಾತವೂ ಬೀರುತ್ತಿದೆ. ಇದು ಮಾರಕ ರೋಗಗಳಿಗೆ ಕಾರಣವಾಗಬಹುದೆಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪರಿಸರ ಮಾಲಿನ್ಯದಿಂದಾಗಿ ನಾಡಿನಲ್ಲಿ ರೋಗಭೀತಿ ಸೃಷ್ಟಿಯಾಗುತ್ತಿರುವಾಗಲೇ …

ಕೃಷಿಕ ನಿಧನ

ಬದಿಯಡ್ಕ: ಪೆರಡಾಲ ಸೇತುವೆ ಸಮೀಪ ನಿವಾಸಿ, ಕೃಷಿಕ ಮಡಿಪ್ಪು ಗಣಪತಿ ಭಟ್ (88) ಎಡೆಕ್ಕಾನ ಹಳ್ಳಕೋಡ್ಲು ಪುತ್ರಿಯ ಮನೆಯಲ್ಲಿ ನಿಧನರಾದರು.ಮೃತರು ಪತ್ನಿ ಗೌರಿ, ಮಕ್ಕಳಾದ ರಮಾದೇವಿ, ಪ್ರೇಮಲತಾ, ಕೃಷ್ಣವೇಣಿ, ಗೌರಿಪ್ರಭಾ ಹಾಗೂ ಅಳಿಯಂದಿರಾದ ಶ್ರೀನಿವಾಸ ಭಟ್ ಕಮ್ಮಜೆ, ಗೋವಿಂದ ಭಟ್ ಎಡೆಕ್ಕಾನ ಹಳ್ಳಕೋಡ್ಲು, ಭೀಮ ಉಪಾಧ್ಯಾಯ ಅಡಿಕೆಹಿತ್ತಿಲು, ಸುಬ್ರಹ್ಮಣ್ಯ ಭಟ್ ಮುಗುಳ್ತಿಮೂಲೆ ಹಾಗೂ ಸಹೋದರಿ ಸವಿತಾ ಸರ‍್ಯಂಬೈಲು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಕುಂಬಳೆ ಪಂ. ಕಚೇರಿಯ ಕಟ್ಟಡ ಉದ್ಘಾಟನೆ : ಬಿಜೆಪಿ, ಸಿಪಿಎಂನ ಇಬ್ಬರು ಸದಸ್ಯರು ಗೈರು

ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್ ಕಚೇರಿಗೆ ಸಂಬಂಧಪಟ್ಟ ಕಟ್ಟಡದ ಉದ್ಘಾಟನೆಯನ್ನು ಶಾಸಕ ಎಕೆಎಂ ಅಶ್ರಫ್ ನಿರ್ವಹಿಸಿದರು. ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ ಸ್ಮಾರಕ ಕಟ್ಟಡದ ಉದ್ಘಾಟನೆ ನಿನ್ನೆ ನಡೆದಿದೆ. ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರಾ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎ. ರಹ್ಮಾನ್, ಸಬೂರ, ನಸೀಮ, ಪಂಚಾಯತ್ ಸದಸ್ಯ ರಾದ ಯೂಸಫ್ ಉಳುವಾರು, ಅನ್ವರ್ ಆರಿಕ್ಕಾಡಿ, ರವಿರಾಜ್ ತುಮ್ಮ, ರಸಿಯ, ತಾಹಿರಾ ಜಿ. ಶಂಸೀರ್, ಸಿ.ಎಂ. ಮುಹಮ್ಮದ್, ಕೌಲತ್ ಬೀವಿ, ಮಂಜುನಾಥ …