ಕಾಸರಗೋಡು ನಗರಸಭೆಯ ಮೀಸಲಾತಿ ವಾರ್ಡ್‌ಗಳು

ಕಾಸರಗೋಡು: ಸ್ಥಳೀಯಾ ಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಗೆ ಪೂರ್ವಭಾವಿಯಾಗಿ ನಡೆದ ವಾರ್ಡ್ ಮೀಸಲಾತಿ ಕ್ರಮದಂತೆ ಕಾಸರಗೋಡು ನಗರಸಭೆಯ ವಾರ್ಡ್ಗಳ ಮೀಸಲಾತಿ ನಿರ್ಣಯ ಕ್ರಮವೂ ಪೂರ್ಣಗೊಂಡಿದೆ.ಕಾಸರಗೋಡು ನಗರಸಭೆಯ ಚಾಲಕುನ್ನು (ವಾರ್ಡ್ ನಂಬ್ರ 15) ಪರಿಶಿಷ್ಟ ಜಾತಿ ಮೀಸಲಾತಿ ವಾರ್ಡ್ ಆಗಿ ಆರಿಸಲಾಗಿದೆ. ಉಳಿದಂತೆ ಚೇರಂಗೈ ವೆಸ್ಟ್ (1), ಚೆರಂಗೈ ಈಸ್ಟ್ (2), ಕೋಟೆಕಣಿ (7), ನುಳ್ಳಿಪ್ಪಾಡಿ ನೋರ್ತ್ (8), ಅಣಂಗೂರು (10), ವಿದ್ಯಾನಗರ ನೋರ್ತ್ (11), ವಿದ್ಯಾನಗರ ಸೌತ್ (12), ಚಾಲ (14), ತುರ್ತಿ (16), ಕೊಲ್ಲಂಪಾಡಿ (17), …

ಸರ್ವೀಸ್ ರಸ್ತೆಯ ಫುಟ್‌ಪಾತ್‌ನಲ್ಲಿ ಟ್ರಾನ್ಸ್‌ಫಾರ್ಮರ್  ಸಹಿತ ಕಂಬಗಳು: ಕಾಲ್ನಡಿಗೆ ಜನರಿಗೆ ಸಮಸ್ಯೆ

ಉಪ್ಪಳ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ  ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆ ಬದಿ ಜನರ ಸಂಚಾರಕ್ಕೆ ಫುಟ್‌ಪಾತ್ ನಿರ್ಮಿಸಲಾಗಿದ್ದರೂ ಅಲ್ಲಲ್ಲಿ ಟ್ರಾನ್ಸ್ ಫಾರ್ಮರ್ ಸಹಿತ ವಿದ್ಯುತ್ ಕಂಬಗಳಿರುವುದರಿಂದಾಗಿ ಜನರ ಸಂಚಾರಕ್ಕೆ ಸಮಸ್ಯೆ ಉಂಟಾಗು ತ್ತಿರುವುದಾಗಿ ದೂರಲಾಗಿದೆ. ಕೋಟ್ಯಂತರ ಹಣ ವ್ಯಯಿಸಿ ಸ್ಥಳ ಖರೀದಿಸಿ ಹೆದ್ದಾರಿಯನ್ನು ಅಭಿವೃದ್ಧಿ ಗೊಳಿ ಸಲಾದರೂ ವಿದ್ಯುತ್‌ಕಂಬ ಸಹಿತ ಟ್ರಾನ್ಸ್ ಫಾರ್ಮರ್ ಹಾಗೂ ಕಾಲ್ನಡಿಗೆ ಮೇಲ್ಸೇತುವೆಯ ಕಂಬಗಳನ್ನು ಜನರು ನಡೆದಾಡುವ ಫುಟ್‌ಪಾತ್‌ನಲ್ಲಿಯೇ ನಿರ್ಮಾಣ ಗೊಳಿಸಿರುವುದು ಸಾರ್ವಜನಿಕರಿಗೆ ಸಂಕಷ್ಟವನ್ನುಂಟುಮಾಡಿದೆ. ಉಪ್ಪಳದಿಂದ ತಲಪಾಡಿ ಮಧ್ಯೆ ಎರಡೂ ಭಾಗದ ಸರ್ವೀಸ್ ರಸ್ತೆಯ …

ಕೆಎಸ್‌ಆರ್‌ಟಿಸಿ ಬಸ್‌ಗಳು ಪರಸ್ಪರ ಢಿಕ್ಕಿ: ಹಲವರಿಗೆ ಗಾಯ

ಹೊಸದುರ್ಗ: ಬೀಮನಡಿ ಪ್ಲಾಚಿಕರ ಎಂಬಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಪರಸ್ಪರ ಢಿಕ್ಕಿ ಹೊಡೆದು ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ನಿನ್ನೆ ಸಂಜೆ ೫ ಗಂಟೆ ವೇಳೆ ಅಪಘಾತವುಂಟಾಗಿದೆ. ಹೊಸ ದುರ್ಗಕ್ಕೆ ಬರುತ್ತಿದ್ದ ಸೂಪರ್‌ಫಾಸ್ಟ್ ಬಸ್ ಹಾಗೂ ಇರಿಟ್ಟಿಗೆ ತೆರಳುತ್ತಿದ್ದ  ಲಿಮಿಟೆಡ್ ಸ್ಟಾಪ್ ಬಸ್ ಢಿಕ್ಕಿ ಹೊಡೆ ದಿದೆ. ತಕ್ಷಣ ತಲುಪಿದ ನಾಗರಿಕರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಗೊಂಡವರನ್ನು ವೆಳ್ಳೆರಿಕುಂಡ್‌ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಯಿತು. ಓರ್ವ ಚಾಲಕ ಗಂಭೀರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಢಿಕ್ಕಿಯಿಂದ ಎರಡೂ ಬಸ್‌ಗಳ …

ಶಬರಿಮಲೆ ಕ್ಷೇತ್ರದ ಚಿನ್ನ ಕೊಳ್ಳೆ: ವೆಳ್ಳಾಪಳ್ಳಿ ನಟೇಶನ್‌ರ ಹೇಳಿಕೆ ಬ್ರಾಹ್ಮಣ ವಿರೋಧಿ- ಡಿ. ಜಯನಾರಾಯಣ

ಕಾಸರಗೋಡು: ಶಬರಿಮಲೆ ಕ್ಷೇತ್ರದ ಚಿನ್ನವನ್ನು ಕೊಳ್ಳೆಹೊಡೆದ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಎನ್‌ಡಿಪಿ ಮುಖಂಡ ವೆಳ್ಳಾಪಳ್ಳಿ ನಟೇಶನ್ ನೀಡಿರುವ ಹೇಳಿಕೆ ಬ್ರಾಹ್ಮಣ ವಿರೋಧಿ ಯಾಗಿದೆ ಎಂದು ಕಾಸರಗೋಡು ಬ್ರಾಹ್ಮಣ ಮಹಾಸಭಾದ ಸಂಚಾಲಕ ಡಿ. ಜಯನಾರಾಯಣ ತಾಯನ್ನೂರು ತಿಳಿಸಿದ್ದಾರೆ. ಕ್ಷೇತ್ರದ ಚಿನ್ನವನ್ನು ನಂಬೂದಿರಿಯವರು ಮತ್ತು ಪೋತಿಯವರು ಕೊಳ್ಳೆ ಹೊಡೆ ಯುತ್ತಿದ್ದಾರೆ ಎಂಬ ವೆಳ್ಳಾಪಳ್ಳಿಯವರ ಹೇಳಿಕೆ ದ್ವೇಷದಿಂದ ಕೂಡಿರುವುದಾಗಿದೆ. ಅವರ ಹೇಳಿಕೆಯು ತನ್ನ ಸ್ವಾರ್ಥಕ್ಕಾಗಿ ಜಾತಿಗಳೊಳಗೆ ಹಗೆತನ ಮತ್ತು ಜಗಳ ಉಂಟುಮಾಡಲು ಪ್ರಚೋ ದನೆಯಾದಂತಿದೆ.  ಅವರ ಹೇಳಿಕೆ ಅವಿವೇಕತನದ್ದಾಗಿದ್ದು, ಅತ್ಯಂತ ಬಾಲಿಷದಿಂದ ಕೂಡಿದೆ. …

ಕಿನ್ನಿಂಗಾರಿನ ವೆಂಕಪ್ಪ ಮಣಿಯವರಿಗೆ ಕೇಂದ್ರ ಬ್ಯಾಂಕ್ ಪ್ರಶಸ್ತಿ

ಬೆಳ್ಳೂರು: ಕೇರಳ ರಾಜ್ಯದ ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸಾಲಗಾರ ರೈತರಲ್ಲಿ ಅತ್ಯುತ್ತಮ ರೈತನಾಗಿ ಆಯ್ಕೆಯಾದ ಬೆಳ್ಳೂರು ಪಂ. ಕಿನ್ನಿಂಗಾರಿನ ಸಾಧಕ ರೈತ ವೆಂಕಪ್ಪಮಣಿ ಕೇಂದ್ರ ಬ್ಯಾಂಕ್ ನ 2024ರ ಕಾಸರಗೋಡು ಜಿಲ್ಲೆಯ ಅತ್ಯುತ್ತಮ ರೈತ ಪ್ರಶಸ್ತಿಗೆ ಭಾಜನರಾದರು. ತಿರುವನಂತಪುರದಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರಿಗಳಿಂದ ಅವರು ಪ್ರಶಸ್ತಿ ಸ್ವೀಕರಿಸಿದರು. 25 ಸಾವಿರ ರೂ., ಸ್ಮರಣಿಕೆ ಮತ್ತು ಪ್ರಮಾಣಪತ್ರವನ್ನು ಪ್ರಶಸ್ತಿ ಒಳಗೊಂಡಿದೆ.

ಕೇರಳದಲ್ಲಿ ಆಡಳಿತ ಬದಲಾವಣೆ ಅನಿವಾರ್ಯ- ಎಂ.ಎಲ್. ಅಶ್ವಿನಿ

ಮಂಜೇಶ್ವರ: ಕೇರಳ ಇದೀಗ ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆ ಹಾಗೂ ಅಭಿವೃದ್ಧಿ ಕುಂಠಿತಕ್ಕೆ ಪರಿಹಾರ ಕಾಣಲು  ಆಡಳಿತ ಬದಲಾವಣೆ ಅನಿವಾರ್ಯವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಬಿಜೆಪಿ ಮಂಜೇಶ್ವರ ಪಂಚಾಯತ್ ಚುನಾವಣಾ ಸಮಿತಿ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಅಧ್ಯಕ್ಷತೆ ವಹಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಕೆ. ಸತೀಶ್ಚಂದ್ರ ಭಂಡಾರಿ, ರಾಜ್ಯ ಕೌನ್ಸಿಲ್ ಸದಸ್ಯ ಹರಿಶ್ಚಂದ್ರ ನಾಯ್ಕ್, ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡ, …

ಕುಂಬಳೆ ಟ್ರಾಫಿಕ್ ಪರಿಷ್ಕಾರದಿಂದ ಸಮಸ್ಯೆ : ಪಂ. ಕಾರ್ಯದರ್ಶಿಗೆ ಸಿಪಿಎಂ ಮನವಿ

ಕುಂಬಳೆ: ಪೇಟೆಯಲ್ಲಿ ನೂತನವಾಗಿ ಆರಂಭಿಸಿದ ಟ್ರಾಫಿಕ್ ಪರಿಷ್ಕಾರದಿಂದಾಗಿ ಜನರು ಸಂಕಷ್ಟದ ಲ್ಲಿದ್ದಾರೆಂದು ಸಿಪಿಎಂ ಕುಂಬಳೆ ಲೋಕಲ್ ಸಮಿತಿ ಆರೋಪಿಸಿದೆ. ಬದಿಯಡ್ಕ ಭಾಗಕ್ಕೆ ತೆರಳುವ ಬಸ್‌ಗಳು ಜನರನ್ನು  ಇಳಿಸುವುದು, ಹತ್ತಿಸುವುದು ಕುಂಬಳೆ ಪೇಟೆಯಿಂದ ಸುಮಾರು 200 ಮೀಟರ್ ದೂರದಲ್ಲಾಗಿದೆ. ಇದರಿಂದಾಗಿ ಹಿರಿಯರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಆದುದರಿಂದ ಬಸ್ ಹತ್ತಿಸಲು, ಇಳಿಸಲು ಈ ಮೊದಲು ಇದ್ದಂತಹ ವ್ಯವಸ್ಥೆಯನ್ನು ಮುಂದುವರಿಸ ಬೇಕೆಂದು ಕುಂಬಳೆಯ ಟ್ರಾಫಿಕ್ ಪರಿಷ್ಕರಣೆಗೆ ತಜ್ಞರನ್ನು ಸೇರಿಸಿ ಸರ್ವಪಕ್ಷ ಸಭೆ ನಡೆಸಬೇಕೆಂದು  ಸಿಪಿಎಂ ಕುಂಬಳೆ ಲೋಕಲ್ ಸಮಿತಿ ಪಂಚಾಯತ್ …

ಕಾಸರಗೋಡು ಬ್ಲೋಕ್ ಕೇರಳೋತ್ಸವ 19ರಂದು ಸಮಾಪ್ತಿ

ಕುಂಬಳೆ: ಕಾಸರಗೋಡು ಬ್ಲೋಕ್ ಪಂ.ಕೇರಳೋತ್ಸವ ಆದಿತ್ಯವಾರ ಸಮಾಪ್ತಿಯಾಗಿದೆ. ಕಳೆದ ೪ರಿಂದ ಆರಂಭಗೊಂಡ ಸ್ಪರ್ಧೆಗಳು ಈಗಲೂ ಮುಂದುವರಿಯುತ್ತಿದೆ. 19ರಂದು  ಜಿಬಿಎಸ್‌ಬಿಎಸ್ ಶಾಲೆಯಲ್ಲಿ ನಡೆಯುವ ಕಲಾ ಸ್ಪರ್ಧೆಯನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು. ಬ್ಲೋಕ್ ಪಂ. ಅಧ್ಯಕ್ಷೆ ಸಿ.ಎ. ಶೈಮ ಅಧ್ಯಕ್ಷತೆ ವಹಿಸುವರು. ಸಿನಿಮಾ ನಟ,ಕಾಸರಗೋಡು ಡಿವೈಎಸ್ಪಿ ಸಿಬಿ ಥೋಮಸ್,  ಅಧ್ಯಕ್ಷೆ ತಾಹಿರ ಯೂಸುಫ್, ಕರ್ನಾಟಕ ಕಾರ್ಮಿಕ ಇಲಾಖೆ ಅಧ್ಯಕ್ಷ   ಟಿ.ಎಂ ಶಾಹಿದ್ ತೆಕ್ಕಿಲ್, ಕಲ್ಲಟ್ರ ಮಾಹಿನ್ ಹಾಜಿ, ಟಿ.ಪಿ. ರಂಜಿತ್,ಜಮೀಲ ಸಿದ್ದಿಕ್, ಜಾಸ್ಮಿನ್ ಕಬೀರ್ ಅತಿಥಿಗಳಾಗಿ ಭಾಗವಹಿಸುವರು. ಪಂ. …

ಪರಿಶಿಷ್ಟ ಜಾತಿ ವಿಭಾಗಗಳಲ್ಲಿ ಒಳಪಡುವ ಆರಾಧನಾ ಕೇಂದ್ರಗಳಿಗೆ ಆರ್ಥಿಕ ಸಹಾಯ ಒದಗಿಸಲು ಸಚಿವರಿಗೆ ದೇವಸ್ವಂ ಬೋರ್ಡ್ ಸದಸ್ಯ ಎ.ಕೆ. ಶಂಕರ ಮನವಿ

ತಿರುವನಂತಪುರA : ಕಾಸರಗೋ ಡು ಹಾಗೂ ಮಂಜೇಶ್ವರ ತಾಲೂಕುಗಳ ವಿವಿಧ ಭಾಗಗಳಲ್ಲಿ ವಾಸಿಸುವ ಪರಿಶಿಷ್ಟ ಜಾತಿ ವಿಭಾಗಗಳಲ್ಲಿ ಒಳಪಡುವ ಮುಗೇರ, ನಲಿಕೆತ್ತಾಯ, ಚಕ್ಲಿಯ ಮುಂತಾದ ವಿಭಾಗಗಳ ಖಾಸಗಿ ಕ್ಷೇತ್ರ ಹಾಗೂ ದೈವಸ್ಥಾನಗಳಿಗೆ ಅರ್ಹವಾದ ರೀತಿಯಲ್ಲಿ ಆರ್ಥಿಕ ಸಹಾಯ ಒದಗಿಸಬೇಕೆಂದು ಆಗ್ರಹಿಸಿ ಮಲಬಾರ್ ದೇವಸ್ವಂ ಬೋರ್ಡ್ ಸದಸ್ಯ ಎ ಕೆ ಶಂಕರ ಆದೂರು ಅವರು ತಿರುವನಂತಪುರದಲ್ಲಿ ಸಚಿವ ವಿ. ಎನ್. ವಾಸವನ್‌ರನ್ನು ಭೇಟಿ ಮಾಡಿ ಮನವಿ ನೀಡಿದರು. ದೇವಸ್ವಂ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ಕ್ಷೇತ್ರ …

ಶಬರಿಮಲೆ ಚಿನ್ನ ಕಳವು ಪ್ರಕರಣ: ಸೂತ್ರಧಾರ ದಿಢೀರ್ ಅಪ್ರತ್ಯಕ್ಷ

ತಿರುವಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ಮುಖ್ಯ  ಸೂತ್ರಧಾರ ಉಣ್ಣಿಕೃಷ್ಣನ್ ಪೋತ್ತಿ ದಿಢೀರ್ ಅಪ್ರತ್ಯಕ್ಷಗೊಂಡಿ ದ್ದಾನೆ. ತಿರುವನಂತಪುರದಿಂದ ಪಾಲಕ್ಕಾಡಿಗೆ ಹೋಗುವುದಾಗಿ ತಿಳಿಸಿದ ಆತ ಬಳಿಕ ಅಪ್ರತ್ಯಕ್ಷನಾಗಿದ್ದಾನೆ. ಇದೇ ವೇಳೆ ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ಆತನನ್ನು ವಶಕ್ಕೆ ತೆಗೆದು ವಿಚಾರಣೆಗೊಳಪಡಿಸುತ್ತಿರುವು ದಾಗಿಯೂ ಶಂಕಿಸಲಾಗುತ್ತಿದೆ.  ಚಿನ್ನ ಕಳವಿನ ಹೆಸರಲ್ಲಿ ಪೋತ್ತಿಗೆ  ಪ್ರಾಣ ಬೆದರಿಕೆಯುಂಟಾಗಿದೆಯೆಂಬ  ರೀತಿಯ ಪ್ರಚಾರಗಳು ಇನ್ನೊಂದೆಡೆ ನಡೆಯುತ್ತಿವೆ. ಶಬರಿಮಲೆ ದೇಗುಲದ ಚಿನ್ನ ಕದ್ದ ಪ್ರಕರಣದಲ್ಲಿ ಪೋತ್ತಿ ಒಂದನೇ ಆರೋಪಿಯಾಗಿದ್ದಾನೆ. ಆದ್ದರಿಂದ ಆತನನ್ನು ವಶಕ್ಕೆ …