ವ್ಯಾಪಾರಿ ಕುಸಿದು ಬಿದ್ದು ಮೃತ್ಯು

ನೀರ್ಚಾಲು: ನೀರ್ಚಾಲು ಪೇಟೆಯಲ್ಲಿ ವ್ಯಾಪಾರಿಯಾಗಿರುವ ಅರುಣ್ ಕುಮಾರ್ ಬಿ (47) ಕುಸಿದುಬಿದ್ದು ಮೃತಪಟ್ಟರು. ಮುಂಡಿತ್ತಡ್ಕ ನಿವಾಸಿಯಾದ ಇವರು ನೀರ್ಚಾಲು ಬಳಿಯ ಬುರುಡಡ್ಕ ದಲ್ಲಿ ವಾಸವಾಗಿದ್ದರು. ನೀರ್ಚಾಲು ಕೆಳಗಿನ ಪೇಟೆಯಲ್ಲಿರುವ ಲಕ್ಷ್ಮಿ ಸ್ಟೋರ್‌ನ ಮಾಲಕನಾಗಿದ್ದಾರೆ. ನಿನ್ನೆ ಮನೆಯಲ್ಲಿ ಕುಸಿದು ಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ದಿ|ಐತ್ತಪ್ಪ ನಾಯ್ಕ್ ಎಂಬವರ ಪುತ್ರನಾದ ಮೃತರು ತಾಯಿ ಸಾವಿತ್ರಿ, ಪತ್ನಿ ರಾಜೇಶ್ವರಿ,ಮಕ್ಕಳಾದ ಅಮೃತ್, ಅಶ್ವಿನಿ, ಸಹೋದರರಾದ ಜಗದೀಶ್, ದಾಮೋದರ ಹಾಗೂ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾರೆ.

ರಿಕ್ಷಾ ಚಾಲಕ ಕಾರ್‌ಶೆಡ್‌ನಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಮಾಜಿ ಗಲ್ಫ್ ಉದ್ಯೋಗಿ ಹಾಗೂ ಆಟೋರಿಕ್ಷಾ ಚಾಲಕನಾಗಿದ್ದ ವ್ಯಕ್ತಿ ಮನೆಯ ಕಾರ್‌ಶೆಡ್‌ನೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾದ ಘಟನೆ ನಡೆದಿದೆ. ಮೂಲತಃ ಬೇಕಲ ಮಾಲಾಂಕುನ್ನು ನಿವಾಸಿಯೂ ಈಗ ಕೇಳುಗುಡ್ಡೆ ರಸ್ತೆಯ ಹಳೆ ಚೂರಿಯ ರೇಷ್ಮಾ ಮಂಜಿಲ್  ನಿವಾಸಿ ಎನ್. ನಸೀರ್ ಅಹಮ್ಮದ್ (59) ಸಾವನ್ನಪ್ಪಿದ ವ್ಯಕ್ತಿ. ಇವರು ಈ ಹಿಂದೆ ಗಲ್ಫ್‌ನಲ್ಲಿದ್ದರು. ನಂತರ ಊರಿಗೆ ಬಂದ ರಿಕ್ಷಾ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಮಧ್ಯೆ ಅವರಿಗೆ ಅಸೌಖ್ಯ ತಗಲಿದ್ದು, ಅದರಿಂದ ಅವರು …

ಉಳಿಯತ್ತಡ್ಕದಲ್ಲಿ ಗಲಭೆಗೆ ಯತ್ನ: 50ಮಂದಿ ವಿರುದ್ಧ ಕೇಸು

ಕಾಸರಗೋಡು: ಉಳಿಯತ್ತಡ್ಕದಲ್ಲಿ ಮಧೂರು ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗ ಗಲಭೆ ಸೃಷ್ಟಿಸಲೆತ್ನಿಸಿದ ಆರೋಪದಂತೆ   ಕಂಡರೆ ಗುರುತುಪತ್ತೆ ಹಚ್ಚಲಾಗುವ 50ಮಂದಿ ವಿರುದ್ಧ ಕಾಸರಗೋಡು ಪೊಲೀಸರು ಸ್ವಯಂ ಪ್ರೇರಿತ  ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಂತೆ ಕೋಮು ಘರ್ಷಣೆಗೆ ಯತ್ನಿಸಿದ ಸೆಕ್ಷನ್ ಪ್ರಕಾರ ಕೇಸು ದಾಖಲಿಸಲಾಗಿದೆ.  ಮಧೂರು ಪಂಚಾಯತ್ ಕಚೇರಿ ಪರಿಸರದಲ್ಲಿ ನಿನ್ನೆ ಮಧ್ಯಾಹ್ನ ಶುಚಿತ್ವ ಮಿಶನ್ ಅಭಿಯಾನ  ನಡೆಸಲಾಗಿತ್ತು. ಅದರಲ್ಲಿ ಧ್ವನಿವರ್ಧಕ ಬಳಸಿ ಶುಚಿತ್ವ ಕಾಪಾಡುವ ಬಗ್ಗೆ ಸೂಚನೆಗಳನ್ನು ನೀಡಲಾಗುತ್ತಿತ್ತು. ಈ  ವೇಳೆ ಒಂದು ತಂಡ ಅಲ್ಲಿಗೆ ಆಗಮಿಸಿ ಇದು ಬಿಜೆಪಿ  …

ಗೋಣಿಚೀಲದಲ್ಲಿ ಕಟ್ಟಿಟ್ಟ ಸ್ಥಿತಿಯಲ್ಲಿ ಮಹಿಳೆಯ ಅರೆ ನಗ್ನ ಮೃತದೇಹ ಪತ್ತೆ ಸಮೀಪ ಮದ್ಯದಮಲಿನಲ್ಲಿದ್ದ ವ್ಯಕ್ತಿಯನ್ನು ಕಸ್ಟಡಿಗೆ ಪಡೆದ ಪೊಲೀಸರು

ಕೊಚ್ಚಿ: ಕೋಂದುರತ್ತಿಯಲ್ಲಿ ಮನೆಗಿರುವ ದಾರಿಯಲ್ಲಿ ಗೋಣಿಚೀಲದಲ್ಲಿ ಕಟ್ಟಿಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಸ್ಥಳೀಯ ನಿವಾಸಿ ಜೋರ್ಜ್ ವಾಸಿಸುವ ಮನೆಯ ಮುಂಭಾಗದಲ್ಲಿ ಅರ್ಧ ನಗ್ನವಾದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತದೇಹದ ಸಮೀಪದಲ್ಲಿಯೇ ಜೋರ್ಜ್ ಮದ್ಯದಮಲಿನಲ್ಲಿ ಗೋಡೆಗೆ ಒರಗಿ ಕುಳಿತ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಈತನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಮೃತಪಟ್ಟ ಮಹಿಳೆಯ  ಗುರುತು ಇದುವರೆಗೆ  ಪತ್ತೆಹಚ್ಚಲಾಗಲಿಲ್ಲ. ಇಂದು ಬೆಳಿಗ್ಗೆ ೬.೩೦ರ ವೇಳೆ ನಾಡನ್ನು ಬೆಚ್ಚಿಸಿದ ಘಟನೆ ನಡೆದಿದೆ. ಬೆಳಿಗ್ಗೆ ಜೋರ್ಜ್ ಗೋಣಿ ಇದೆಯಾ ಎಂದು ಕೇಳಿಕೊಂಡು ತಲುಪಿರುವುದಾಗಿ …

ಸ್ಥಳೀಯಾಡಳಿತ ಚುನಾವಣೆ: ರಾಜ್ಯದಲ್ಲಿ 1,08,580 ನಾಮಪತ್ರ, ಜಿಲ್ಲೆಯಲ್ಲಿ 5475

ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸಲ್ಲಿಸಿದ ನಾಮಪತ್ರಗಳ ಸೂಕ್ಷ್ಮ ತಪಾಸಣೆ ಇಂದು ನಡೆಯಲಿದೆ. 14 ಜಿಲ್ಲೆಗಳಲ್ಲಾಗಿ 1,08,580 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರಗಳನ್ನು ಹಿಂತೆಗೆಯಲಿರುವ ಕೊನೆಯ ದಿನಾಂಕ ಈ ತಿಂಗಳ 24 ಆಗಿದೆ. ಸೂಕ್ಷ್ಮ ತಪಾಸಣೆ ಬಳಿಕ ಉಳಿದಿರುವ ನಾಮಪತ್ರಗಳನ್ನು ಹಿಂತೆಗೆದರೆ ಆ ಬಳಿಕ ಉಳಿದಿರುವ ನಾಮಪತ್ರಗಳು ನಿಜವಾದ ಸ್ಪರ್ಧಾ ಳುಗಳ ಸಂಖ್ಯೆಯಾಗಿದೆ. ಸಂಬAಧಪಟ್ಟ ಚುನಾವಣಾಧಿಕಾರಿಗಳು ನಾಮಪತ್ರಗಳ ಸೂಕ್ಷ್ಮ ತಪಾಸಣೆ ನಡೆಸುವರು. ಈ ವೇಳೆ ಅಭ್ಯರ್ಥಿಯ ಜೊತೆಯಲ್ಲಿ ಚುನಾವಣೆ ಏಜೆಂಟ್, ನಿರ್ದೇಶಕರು ಎಂಬಿವರ ಹೊರತು ಅಭ್ಯರ್ಥಿ ಬರೆದು ನೀಡುವ …

ಬಸ್‌ನಲ್ಲಿ ಗಾಂಜಾ ಸಹಿತ ಯುವಕ ಸೆರೆ

ಮಂಜೇಶ್ವರ:  ಗಾಂಜಾ ಸಹಿತ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿ ಸುತ್ತಿದ್ದ ಯುವಕನನ್ನು ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ ಅಧಿಕಾರಿಗಳು ಬಂಧಿಸಿದ್ದಾರೆ. ಕಾಸರಗೋಡು ಕೂಡ್ಲು ವಿಲ್ಲೇಜ್‌ನ ಬಳ್ಳಿಮೊಗರು ನಿವಾಸಿ ಗೌತಮ್ ಕೆ. (20) ಬಂಧಿತ ಯುವಕ ನಾಗಿದ್ದಾನೆ. ಮೊನ್ನೆ ಬೆಳಿಗ್ಗೆ ಮಂಗಳೂರು ಭಾಗದಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ್ನು ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸಿದಾಗ ಅದರ ಪ್ರಯಾಣಿಕನಾದ ಗೌತಮ್‌ನ ಕೈಯಿಂದ 10 ಗ್ರಾಂ ಗಾಂಜಾ ವಶಪಡಿಸಲಾಗಿದೆ. ಈ ಸಂ ಬಂಧ ಈತನನ್ನು ಬಂಧಿಸಿ ಎನ್‌ಡಿಪಿ ಎಸ್ ಕೇಸು ದಾಖಲಿಸಲಾಗಿದೆ. ಅಬಕಾರಿ …

ಜಿಲ್ಲಾ ಪಂಚಾಯತ್‌ಗೆ ಸ್ಪರ್ಧಿಸುವ ಎನ್‌ಡಿಎ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತ್‌ಗೆ ಸ್ಪರ್ಧಿಸುವ ಎನ್‌ಡಿಎ ಅಭ್ಯರ್ಥಿಗಳು ನಾಮಪತ್ರಿಕೆ ಸಲ್ಲಿಸಿದರು. ಕಲೆಕ್ಟರೇಟ್‌ಗೆ ಮೆರವಣಿಗೆಯೊಂದಿಗೆ ತಲುಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಎಂ. ವಿಜಯ ಕುಮಾರ್ ರೈ (ವರ್ಕಾಡಿ), ಮಣಿಕಂಠ ಪಟ್ಲ (ಪುತ್ತಿಗೆ), ರಾಮಪ್ಪ ಕೆ.ಪಿ (ಬದಿಯಡ್ಕ), ಬೇಬಿ ಜಿ. (ದೇಲಂಪಾಡಿ), ಮನುಲಾಲ್ ಎಂ. (ಕುತ್ತಿಕ್ಕೋಲ್), ಧನ್ಯಾ ಎಂ. (ಕಳ್ಳಾರ್), ಟಿ.ಡಿ. ಭರತನ್ (ಕಯ್ಯೂರು), ರಮಣಿ ಕೆ.ಎಸ್. (ಚಿಟ್ಟಾರಿಕಲ್), ಶೀಬಾ ಟಿ. (ಚೆರುವತ್ತೂರು), ಎ. ವೇಲಾಯುಧನ್ (ಮಡಿಕೈ), ಹೇಮಲತ (ಪೆರಿಯ), ಮಾಲತಿ (ಬೇಕಲ), ಸೌಮ್ಯಾ ಎಸ್. …

ಎಸ್‌ಐಆರ್: ಚುನಾವಣಾ ಆಯೋಗಕ್ಕೆ ಸುಪ್ರಿಂಕೋರ್ಟ್ ನೋಟೀಸ್ ಜ್ಯಾರಿ; 26ರಂದು ಅರ್ಜಿಗಳ ಪರಿಶೀಲನೆ

ತಿರುವನಂತಪುರ: ಕೇರಳದಲ್ಲಿ ಮತದಾರ ಯಾದಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಸಂಬಂಧಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರಿಂಕೋರ್ಟ್ ನೋಟೀಸ್ ಜ್ಯಾರಿಗೊಳಿಸಿದೆ. ಕೇರಳದಲ್ಲ್ಲಿ ಎಸ್‌ಐಆರ್ ಕ್ರಮವನ್ನು ಪ್ರಶ್ನಿಸಿ ಹಾಗೂ ಅದರ ವಿರುದ್ಧ ಕೇರಳ ಸರಕಾರ, ಸಿಪಿಎಂ, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ಅವುಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಸೂರ್ಯಕಾಂತ್‌ರ ನೇತೃತ್ವದ ಸುಪ್ರಿಂಕೋರ್ಟ್‌ನ ಪೀಠ ಕೊನೆಗೆ ಆ ವಿಷಯದಲ್ಲಿ ಚುನಾವಣಾ ಆಯೋಗಕ್ಕೆ ನೋಟೀಸ್ ಜ್ಯಾರಿಗೊಳಿಸಿದೆ. ಮಾತ್ರವಲ್ಲ ಅರ್ಜಿಗಳ ಮೇಲಿನ ಮುಂದಿನ …

ಜಿಲ್ಲಾ ಪಂಚಾಯತ್ ವಿವಿಧ ಡಿವಿಶನ್‌ಗಳಿಂದ  ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಕಾಸರಗೋಡು: ಕಾಸರಗೋಡು ಜಿಲ್ಲಾ ಪಂಚಾಯತ್‌ಗೆ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಿದ್ದು, ಪುತ್ತಿಗೆ ಡಿವಿಶನ್‌ನಿಂದ ಸೋಮಶೇಖರ ಜೆ.ಎಸ್, ವರ್ಕಾಡಿಯಿಂದ ಹರ್ಷಾದ್ ವರ್ಕಾಡಿ, ಪಿಲಿಕೋಡ್‌ನಿಂದ ಕರಿಂಬಿಲ್ ಕೃಷ್ಣನ್, ಉದುಮದಿಂದ ಸುಕುಮಾರಿ ಶ್ರೀಧರನ್, ಚಿತ್ತಾರಿಕ್ಕಲ್‌ನಿಂದ ವಿನ್ಸಿ ಜೈನ್, ಕಳ್ಳಾರ್‌ನಿಂದ ಸ್ಟಿಮಿ ಸ್ಟೀಫನ್, ಕಯ್ಯೂರ್‌ನಿಂದ ಸುಂದರನ್ ಸ್ಪರ್ಧಿಸುವರು. ಇವರು ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಮೂಲಕ ಕಲೆಕ್ಟರೇಟ್‌ಗೆ ತಲುಪಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್, ಐಕ್ಯರಂಗದ ಸಂಚಾಲಕ ಗೋವಿಂದನ್ ನಾಯರ್,ಸೇವಾ ದಳ ರಾಜ್ಯಾಧ್ಯಕ್ಷ ರಮೇಶನ್ ಕರುವಾಚ್ಚೇರಿ, ಪದಾಧಿಕಾರಿಗಳಾದ …

ಯುವತಿಗೆ ಕೇಬಲ್ ವಯರ್ ಉಪಯೋಗಿಸಿ ಹಲ್ಲೆ: ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೆರೆ

ಕೊಚ್ಚಿ: ಯುವತಿಯನ್ನು ಕ್ರೂರವಾಗಿ ಹಲ್ಲೆಗೈದ ಪ್ರಕರಣದಲ್ಲಿ ಯುವಮೋರ್ಚಾ ಎರ್ನಾಕುಳಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪು ಪರಮಶಿವಂ ಸೆರೆಯಾಗಿದ್ದಾನೆ. ಕೊಲೆಯತ್ನಕ್ಕೆ ಕೇಸು ದಾಖಲಿಸಲಾಗಿದೆ. ಮೊಬೈಲ್ ಚಾರ್ಜರ್ ಕೇಬಲ್ ಉಪಯೋಗಿಸಿ ಈತ ಯುವತಿಗೆ ಹಲ್ಲೆಗೈದಿದ್ದಾನೆ. ದೇಹದಲ್ಲಿ ಸಂಪೂರ್ಣ ಹಲ್ಲೆಯ ಗಾಯಗಳೊಂದಿಗೆ ಯುವತಿ ಮರಡ್ ಪೊಲೀಸ್ ಠಾಣೆಗೆ ನೇರವಾಗಿ ಹಾಜರಾಗಿ ಮಾಹಿತಿ ನೀಡಿದ್ದಾಳೆ. ಈಕೆಯ ಹೇಳಿಕೆಯನ್ನು ಪೊಲೀಸರು  ದಾಖಲಿಸಿದ್ದಾರೆ. ಕಳೆದ 5 ವರ್ಷದಿಂದ ಯುವತಿ ಹಾಗೂ ಗೋಪು ಪರಮಶಿವ ಜೊತೆಯಾಗಿ ವಾಸಿಸುತ್ತಿದ್ದರು. ಈ ಸಂದರ್ಭದಲ್ಲಿ ಈತ ಯುವತಿಗೆ ನಿರಂತರವಾಗಿ ದೈಹಿಕ ದೌರ್ಜನ್ಯಗೈಯ್ಯುತ್ತಿದ್ದನೆಂದು …