ಹೃದಯಾಘಾತ: ಮಹಿಳೆ ನಿಧನ

ಮಾರ್ಪನಡ್ಕ: ಪೊಡಿಪ್ಪಳ್ಳ ಭಂಡಾರಬೀಡು ನಿವಾಸಿ ಕೃಷ್ಣ ಬಿ.ಎಂ ಎಂಬವರ ಪತ್ನಿ ಹರಿಣಾಕ್ಷಿ (47) ನಿಧನ ಹೊಂದಿದರು. ಇವರಿಗೆ ಒಂದೂವರೆ ವರ್ಷದ ಹಿಂದೆ ಹೃದಯಾಘಾತವುಂಟಾಗಿ ಶಸ್ತ್ರಚಿಕಿತ್ಸೆ ನಡೆಸಿ ಗುಣಮುಖರಾಗಿದ್ದರು. ನಿನ್ನೆ ಅಪರಾಹ್ನ ಮತ್ತೆ ಎದೆನೋವು ಉಂಟಾಗಿದ್ದು, ಕಾಸರಗೋಡು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟರು. ಇವರು ಬಂದ್ಯೋಡು ವಳಚ್ಚಲ್ ನಿವಾಸಿ ದಿ| ನಾರಾಯಣರ ಪುತ್ರಿಯಾಗಿದ್ದಾರೆ. ತಾಯಿ ಲಕ್ಷ್ಮಿ, ಪತಿ, ಮಕ್ಕಳಾದ ಕೃಪೇಶ್, ಹರ್ಷಿಣಿ,  ಸಹೋದರ-ಸಹೋದರಿಯರಾದ ಚಂದ್ರಹಾಸ, ಯತೀಶ, ರಾಜೇಶ್, ಉಷಾ, ನಯನ, ಆಶಾ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ …

ಕುಂಬಳೆ ಪೇಟೆಯಲ್ಲಿ ಪ್ರಯೋಗಾರ್ಥ ಟ್ರಾಫಿಕ್ ಪರಿಷ್ಕರಣೆ ಸೋಮವಾರದಿಂದ ಜ್ಯಾರಿಗೆ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಸೃಷ್ಟಿಯಾ ಗುತ್ತಿರುವ ಸಾರಿಗೆ ಅಡಚಣೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನೂತನ ವ್ಯವಸ್ಥೆಗಳೊಂದಿಗೆ ಜ್ಯಾರಿಗೊಳಿಸುವ ಟ್ರಾಫಿಕ್ ಪರಿಷ್ಕರಣೆ ಸೋಮವಾರದಿಂದ ಜ್ಯಾರಿಗೆ ಬರಲಿದೆ. ಸೋಮವಾರದಿಂದ ಅಕ್ಟೋಬರ್ ೧೬ರವರೆಗೆ ಪ್ರಯೋಗಾರ್ಥವಾಗಿ ಇದು ಜ್ಯಾರಿಯಲ್ಲಿರುವುದು. ಇದು ಯಶಸ್ವಿಯಾದಲ್ಲಿ ಇದನ್ನೇ ಶಾಶ್ವತವಾಗಿ ಮುಂದುವರಿಸಲಾಗು ವುದು. ಇದೇ ವೇಳೆ ಟ್ರಾಫಿಕ್ ಪರಿಷ್ಕರಣೆಯನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಪರಿಷ್ಕರಣೆಯ ವ್ಯವಸ್ಥೆಗಳು ಈ ಕೆಳಗಿನಂತಿವೆ ಆಟೋ ಸ್ಟಾಂಡ್ ಆಗಿ ನಿರ್ಧರಿಸಲಾದ ಸ್ಥಳಗಳು: 1. ಪ್ರಕಾಶ್ ಮೆಡಿಕಲ್‌ನಿಂದ ಒಬರ್ಲೆ ಕಾಂಪ್ಲೆಕ್ಸ್ …

ಯುವಕರನ್ನು ಉದ್ಯೋಗದಾತರನ್ನಾಗಿಸಿದ್ದು ಮೋದಿ-ಎಂ.ಎಲ್. ಅಶ್ವಿನಿ

ಕಾಸರಗೋಡು: ಉದ್ಯೋಗ ಅವಕಾಶಕ್ಕಾಗಿ ವಿದೇಶಗಳಿಗೆ ವಲಸೆ ಹೋಗುತ್ತಿದ್ದ ಯುವ ಜನಾಂಗವನ್ನು ಉದ್ಯಮಿಗಳಾಗಿ, ಉದ್ಯೋಗದಾತರಾಗಿ ಮಾಡಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಬಿಜೆಪಿ ಜಿಲ್ಲಾ ಹೆಲ್ಫ್ ಡೆಸ್ಕ್‌ನ ಆಶ್ರಯದಲ್ಲಿ ಆಯೋಜಿಸಿದ ಏಕದಿನ ಉದ್ಯಮತ್ವ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.  2047ರಲ್ಲಿ ಅಭಿವೃದ್ಧಿಗೊಂಡ ಭಾರತ ಎಂಬ ಗುರಿ ಹೊಂದಲು ಆಂತರಿಕ ಉತ್ಪಾದನೆ ಹೆಚ್ಚಿಸಿ, ಸ್ವದೇಶಿ ಉತ್ಪನ್ನಗಳ ಉಪಯೋಗ ಹೆಚ್ಚಿಸಬೇಕೆಂದು ಅಶ್ವಿನಿ ಸೂಚಿಸಿದರು. ರಾಂ ಬಯೋಟೆಕ್ ಫ್ಯೂವಲ್ಸ್‌ನ ಮೆನೇಜಿಂಗ್ ಡೈರೆಕ್ಟರ್ ರಾಜೀವನ್ ಎಂ …

ಹೈನುಗಾರಿಕೆಯಲ್ಲಿ ಮಲಬಾರ್ ವಲಯದ ಉತ್ತಮ ಸಾಧನೆ-ಸಚಿವೆ ಜೆ. ಚಿಂಜುರಾಣಿ

ಕಾಸರಗೋಡು: ರಾಜ್ಯದಲ್ಲಿ ಅತ್ಯಂತ ಹೆಚ್ಚು ಹಾಲು ಉತ್ಪಾದಿಸಲ್ಪಡುವುದು ಮಲಬಾರ್ ವಲಯದಲ್ಲಾಗಿದೆ ಎಂದು ಮೃಗಸಂರಕ್ಷಣೆ, ಕ್ಷೀರ ಅಭಿವೃದ್ಧಿ ಇಲಾಖೆ ಸಚಿವೆ ಜೆ. ಚಿಂಜುರಾಣಿ ನುಡಿದರು. ಪೆರ್ಲದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ಷೀರ ಕೃಷಿಕರ ಸಂಗಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅತ್ಯಂತ ಹೆಚ್ಚು ಹಾಲು ಉತ್ಪಾದಿಸುವ ಭಾರತದಲ್ಲಿ ಕೇರಳ ದ್ವಿತೀಯ ಸ್ಥಾನದ ಲ್ಲಿದೆ. ಸಮ್ಮಿಶ್ರ ಜಾತಿಯ ದನಗಳನ್ನು ಸಾಕುವುದರಿಂದಾಗಿ ಕೇರಳದಲ್ಲಿ ಉತ್ಪಾ ದನಾ ಸಾಮರ್ಥ್ಯ ಹೆಚ್ಚಲು ಕಾರಣ ವೆಂದು ಅವರು ನುಡಿದರು. ಹಲವಾರು ಯೋಜನೆಗಳನ್ನು ಹೈನು ಕೃಷಿಕರಿಗಾಗಿ ಸರಕಾರ ಆಯೋಜಿಸಿರುವುದು. …

ಖಾಸಗಿ ಸಂಸ್ಥೆಗಳನ್ನು ಸರಕಾರದ ಸಾಧನೆಯಾಗಿ ತೋರಿಸಲು ಪಿಣರಾಯಿ ಸರಕಾರ ಯತ್ನಿಸುತ್ತಿರುವುದು ಅಪಹಾಸ್ಯಕರ- ಎಂ.ಎಲ್. ಅಶ್ವಿನಿ

ಕಾಸರಗೋಡು: ಖಾಸಗಿ ಸಂಸ್ಥೆ ಗಳನ್ನು ರಾಜ್ಯ ಸರಕಾರದ ಆಡಳಿತ ಸಾಧನೆಯಾಗಿ ತೋರಿಸಲು ಪಿಣರಾಯಿ ವಿಜಯನ್ ಸರಕಾರ ಯತ್ನಿಸುತ್ತಿರುವುದು ಅಪಹಾಸ್ಯಕರವಾ ಗಿದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಖಾಸಗಿ ಸಂಸ್ಥೆಗಳ ಮುಂದೆ ಕೆಂಪು ಧ್ವಜ ಸ್ಥಾಪಿಸಿ ರಾಜ್ಯದಲ್ಲಿ ಅಭಿವೃದ್ಧಿಗೆ ಅಡ್ಡಿ ಪಡಿಸುತ್ತಿರುವುದು ಸಿಪಿಎಂ ಹಾಗೂ ಎಡಪಕ್ಷಗಳಾಗಿವೆ ಎಂಬುವುದನ್ನು ಕೇರಳದ ಜನತೆ ಮರೆಯಲಾರರು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರ ಉದ್ಘಾಟನೆಗೆ ಸಮಯ ಕಂಡುಕೊಂಡ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಲ್ಪವೇ ದೂರದಲ್ಲಿರುವ ಉಕ್ಕಿನಡ್ಕದ ಸರಕಾರಿ ಮೆಡಿಕಲ್ …

ತನ್ನ ವಿರುದ್ಧ ಸೈಬರ್ ಆಕ್ರಮಣ ಮುಂದುವರಿಸಿದರೆ ಹಲವು ವಿಷಯ ಬಹಿರಂಗಪಡಿಸುವೆ- ರಿನಿ ಆನ್‌ಜಾರ್ಜ್

ಕೊಚ್ಚಿ: ಸಿಪಿಎಂ ಪರವೂರು ಏರಿಯಾ ಸಮಿತಿ ನಡೆಸಿದ ಮಹಿಳಾ ಪ್ರತಿರೋಧ ಸಂಗಮದಲ್ಲಿ ಭಾಗವಹಿಸಿ ರುವುದಕ್ಕೆ ವಿವರಣೆ ನೀಡಿ ನಟಿ ರಿನಿ ಆನ್ ಜಾರ್ಜ್ ರಂಗಕ್ಕಿಳಿದಿದ್ದಾರೆ. ಯಾವುದೇ ರಾಜಕೀಯ ಪಕ್ಷದವಳೆಂಬ ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲ. ನನ್ನನ್ನು ಆಹ್ವಾನಿಸಿದ ಕಾರಣ ಹೋಗಿದ್ದೇನೆ. ತನ್ನ ರಾಜಕೀಯ ನಿಲುವು ಎಂಬುದು ಮಹಿಳೆಯರ ಪರವಾಗಿದೆ. ಯಾವುದೇ ಪಕ್ಷದಲ್ಲಿ ಸದಸ್ಯೆಯಲ್ಲ ಎಂದು ಅವರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಗ್ಗೆ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ ಮಧ್ಯೆ ನಟಿ ಈ ವಿಷಯ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ತನ್ನ …

ಜೋಡುಕಲ್ಲು ಫ್ರೆಂಡ್ಸ್ ಕ್ಲಬ್‌ನಲ್ಲಿ ಉಚಿತ ವೈದ್ಯಕೀಯ ಶಿಬಿರ

ಉಪ್ಪಳ: ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು, ರೋಟರಿ ಕ್ಲಬ್ ದೇರಳಕಟ್ಟೆ, ಮಂಗಳೂರು ಹಾಗೂ ಯೇನಪೋಯ ಆಯುರ್ವೇದ ವ್ಯೆದ್ಯಕೀಯ ಶಾಲೆ ಮತ್ತು ಆಸ್ಪತ್ರೆ ಮಂಜ ನಾಡಿ, ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಆಯುರ್ವೇದ ವ್ಯೆದ್ಯಕೀಯ ಶಿಬಿರ ಜೋಡುಕಲ್ಲು ಫ್ರೆಂಡ್ಸ್ ಸಭಾಭವನ ದಲ್ಲಿ ಜರಗಿತುರೋಟರಿ ಕ್ಲಬ್ ದೇರಳಕಟ್ಟೆ ಯ ಅಧ್ಯಕ್ಷ ಅನಿತಾ ಉದ್ಘಾಟಿಸಿದರು. ಪಿ. ಡಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ವಿಶ್ವ ದಾಖಲೆ ಮಾಡಿದ ಕೂಡ್ಲು ನಿವಾಸಿ ಆಶಿತಾಳಿಗೆ ಎಸ್‌ಎನ್‌ಡಿಪಿಯಿಂದ ಗೌರವ

ಕಾಸರಗೋಡು: ಕಾಲಿನ ಬೆರಳು ಗಳಲ್ಲಿ ನಿಂತು ವಿಶ್ವ ದಾಖಲೆ ಮಾಡಿದ ಕೂಡ್ಲು ಶಾಖೆ ಕುಟುಂಬ ಸದಸ್ಯರಾದ ಅಜಿತ್ ಕುಮಾರ್-ಜಯಶ್ರೀ ದಂ ಪತಿ ಪುತ್ರಿಯಾದ ಆಶಿತಾಳನ್ನು ಎಸ್‌ಎನ್‌ಡಿಪಿ ಕಾಸರಗೋಡು ಯೂನಿ ಯನ್ ಪದಾಧಿಕಾರಿಗಳು ಮನೆಗೆ ತಲುಪಿ ಗೌರವಿಸಿದರು. ಐಎಸ್‌ಒ ಸರ್ಟಿಫೈಡ್ ಆರ್ಗನೈಸೇಶನ್ ಆದ ಕಲಾಂ ಎಂಬ ಸಂಘಟನೆ ಈ ಕ್ರೀಡಾ ವಿನೋದ ದಲ್ಲಿ ವಿಶ್ವ ದಾಖಲೆ ಗಳಿಸಿದೆ. ಮಧೂರು ಪಂ. ಅಧ್ಯಕ್ಷ ಕೆ. ಗೋಪಾ ಲಕೃಷ್ಣ ಕೂಡ್ಲು, ಎಸ್‌ಎನ್‌ಡಿಪಿ ಕಾಸರಗೋಡು ಯೂನಿಂiiನ್ ಕಾರ್ಯದರ್ಶಿ ನಾಗೇಶ್ ಪಾರೆಕಟ್ಟೆ ಜಂಟಿಯಾಗಿ ಗೌರವಿಸಿದರು.ಕೂಡ್ಲು …

ಆರೋಗ್ಯ ಸಚಿವೆ ವೀಣಾ ಜೋರ್ಜ್ ಇಂದು ಜಿಲ್ಲೆಯಲ್ಲಿ: ಉಕ್ಕಿನಡ್ಕದಲ್ಲಿ ಮೆಡಿಕಲ್ ಕಾಲೇಜು ಪ್ರವೇಶೋತ್ಸವ ಉದ್ಘಾಟನೆ

ಕಾಸರಗೋಡು:  ಕಾಸರಗೋಡು ಮೆಡಿಕಲ್ ಕಾಲೇಜು ನಿರ್ಮಾಣ ಪೂರ್ತಿಗೊಳಿಸಲು ಸರಕಾರ ೫೬ ಕೋಟಿ ರೂಪಾಯಿ ಮಂಜೂರು ಮಾಡಿರುವು ದಾಗಿ ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್  ತಿಳಿಸಿದ್ದಾರೆ.  ಇಂದು ಬೆಳಿಗ್ಗೆ ಉಕ್ಕಿನಡ್ಕದಲ್ಲಿ ಕಾಸರ ಗೋಡು ಮೆಡಿಕಲ್ ಕಾಲೇಜಿನ ಪ್ರವೇಶೋತ್ಸವ ವನ್ನು   ಉದ್ಘಾಟಿಸಿ  ಸಚಿವೆ ಮಾತನಾಡಿದರು.  ಮೆಡಿಕಲ್ ಕಾಲೇಜಿಗೆ ಅಗತ್ಯವುಳ್ಳ ಕಟ್ಟಡಗಳ ನಿರ್ಮಾಣ ಕಾಮಗಾರಿ ನಾಲ್ಕು ತಿಂಗಳೊಳಗೆ ಪೂರ್ತಿಗೊಳಿಸಲಾಗುವುದು. ಇಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣ ಪೂರ್ತಿಗೊಂಡ ತಕ್ಷಣ ಚೆರ್ಕಳದಲ್ಲಿ ರುವ ಹಾಸ್ಟೆಲ್ ಇಲ್ಲಿಗೆ ಸ್ಥಳಾಂತರಿಸುವುದಾಗಿಯೂ ಸಚಿವೆ ತಿಳಿಸಿದ್ದಾರೆ.  ಕಾರ್ಯಕ್ರಮದಲ್ಲಿ  ಶಾಸಕ …

ಶಬರಿಮಲೆ ದೇಗುಲದ ಚಿನ್ನ ನಾಪತ್ತೆಯ ಹಿಂದೆ ಭಾರೀ ನಿಗೂಢತೆ

. ಸಮಗ್ರ ವಿಜಿಲೆನ್ಸ್ ತನಿಖೆ ಆರಂಭ . 26 ವರ್ಷಗಳ ವ್ಯವಹಾರಗಳ ಬಗ್ಗೆಯೂ ತನಿಖೆ . ಪ್ರಾಯೋಜಕರು ತನಿಖಾ ವ್ಯಾಪ್ತಿಯಲ್ಲಿ ಶಬರಿಮಲೆ: ಶಬರಿಮಲೆ ದೇವ ಸ್ಥಾನದ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚದಲ್ಲಿದ್ದ ಚಿನ್ನ ನಾಪತ್ತೆಯಾಗಿರುವುದು ಭಾರೀ ನಿಗೂಢತೆಗಳಿಗೆ ದಾರಿಮಾಡಿಕೊಡು ತ್ತಿದೆ.  ಆ ಬಗ್ಗೆ ಕೇರಳ ಹೈಕೋರ್ಟ್ ನೀಡಿದ ನಿರ್ದೇಶ ಪ್ರಕಾರ ವಿಜಿಲೆನ್ಸ್ ವಿಭಾಗ ಸಮಗ್ರ ತನಿಖೆ  ಆರಂಭಿಸಿದೆ. ಇದೇ ಸಂದರ್ಭದಲ್ಲಿ ಶಬರಿಮಲೆ ದೇವಸ್ಥಾನದಲ್ಲಿ 1999ರಿಂದ 2025ರ ತನಕದ ಅವಧಿಯಲ್ಲಿ ನಡೆದ ಎಲ್ಲಾ ಚಿನ್ನದ ವ್ಯವಹಾರದ …