ಕುಂಬಳೆ ಪಂ.: ಐದು ವರ್ಷದ ಐಕ್ಯರಂಗದ ಸಾಧನೆ ಎಂದರೆ ಭ್ರಷ್ಟಾಚಾರ, ದುರ್ವಾಸನೆಯಿಂದ ಪೇಟೆಗೆ ಪ್ರವೇಶಿಸಲು ಸಾಧ್ಯವಾಗದಿರುವುದು-ಸಿ.ಎ. ಸುಬೈರ್

ಕುಂಬಳೆ: ಐಕ್ಯರಂಗದ 5 ವರ್ಷದ ಆಡಳಿತದಿಂದ ಸ್ಥಳೀಯರಿಗೆ ಕುಂಬಳೆ ಪೇಟೆಗೆ ಪ್ರವೇಶಿಸಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆಯೆಂದು ಸಿಪಿಎಂ ಏರಿಯಾ  ಕಾರ್ಯದರ್ಶಿ ಸಿ.ಎ. ಸುಬೈರ್ ಆರೋಪಿಸಿದರು. ಕುಂಬಳೆ ಪೇಟೆಯಲ್ಲಿ ನಾಲ್ಕು  ಬಸ್ ತಂಗುದಾಣ ಕೇಂದ್ರಗಳನ್ನು ಸ್ಥಾಪಿಸಿ 39 ಲಕ್ಷ ರೂ.ಸ್ವಂತ ಜೇಬಿಗಿಳಿಸಿರುವುದಕ್ಕೆ ಪುರಾವೆ ಪೇಟೆಯ ಹೃದಯ ಭಾಗದಲ್ಲಿ ಮೂಕ ಸಾಕ್ಷಿಯಾಗಿ ನಿಂತಿದೆ. ಸಾವಿರ ಸ್ಕ್ವಾರ್ ಫೀಟ್ ವಿಸ್ತೀರ್ಣವಿರುವ ‘ಟೇಕ್ ಎ ಬ್ರೇಕ್’ನ ಹೆಸರಲ್ಲಿ 39 ಲಕ್ಷ ಗುಳುಂಕರಿಸಲಾಗಿದೆ. ಈ ಕಟ್ಟಡದಲ್ಲಿ ನೀರಿಲ್ಲ, ವಿದ್ಯುತ್ ಇಲ್ಲ. ಈ ಎರಡೂ ಕಟ್ಟಡಗಳ …

ಹಳಸಿದ ಆಹಾರ ವಿತರಣೆ ಆರೋಪ : ರೈಲುಗಳಲ್ಲಿ ಅಧಿಕಾರಿಗಳಿಂದ ತಪಾಸಣೆ

ಕಾಸರಗೋಡು: ರೈಲುಗಳಲ್ಲಿ ಹಳಸಿದ ಆಹಾರ ವಸ್ತುಗಳನ್ನು ವಿತರಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಆರ್‌ಪಿಎಫ್, ರೈಲ್ವೇ ಪೊಲೀಸ್ ಸಂಯುಕ್ತವಾಗಿ ರೈಲುಗಳಲ್ಲಿ ತಪಾಸಣೆ ಆರಂಭಿಸಿದೆ. ಕೊಂಕಣ ಮೂಲಕ ಬರುವ ರಾಜಧಾನಿ ಎಕ್ಸ್‌ಪ್ರೆಸ್ ಸಹಿತ ರೈಲುಗಳಲ್ಲಿ ನಿನ್ನೆ ತಪಾಸಣೆ ನಡೆಸಲಾಗಿದೆ. ಕ್ಯಾಂಟೀನ್‌ಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ. ವಂದೇ ಭಾರತ್ ರೈಲಿಗೆ ಬೆಳಿಗ್ಗೆ ಆಹಾರ ಪೂರೈಸುವ ಐಆರ್‌ಸಿಟಿಸಿ ಕ್ಯಾಂಟೀನ್ ಸಹಿತ ಸಂಸ್ಥೆಗಳಲ್ಲೂ ತಪಾಸಣೆ ನಡೆಸಲಾಗಿದೆ. ಆದರೆ ಹಳಸಿದ ಆಹಾರ ಪತ್ತೆಹಚ್ಚಲಾಗಲಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೇ ಪೊಲೀಸ್ ಎಸ್.ಎಚ್.ಒ. ಎಂ. ರೆಜಿಕುಮಾರ್, ಆರ್‌ಪಿಎಫ್ ಎಸ್ ವಿನೋದ್, …

ನಡೆದಾಡಲಾಗದ ಯುವಕನಿಗೆ ವಿದ್ಯುತ್‌ಗಾಲಿ ಕುರ್ಚಿ ನೀಡಿ ನೆರವಾದ ಜಿಲ್ಲಾ ಪಂಚಾಯತ್:47 ವರ್ಷಗಳಿಂದ ಮನೆಯ ಹೊರಗಿನ ಪ್ರಕೃತಿ ಸೌಂದರ್ಯ ವೀಕ್ಷಣೆ ಭಾಗ್ಯ ಪಡೆದ ಹನೀಫ

ಕುಂಬಳೆ: ನಡೆದಾಡಲಾಗದೆ 47 ವರ್ಷಗಳ ಕಾಲ ಮನೆಯೊಳಗೆ  ಜೀವನ ಸಾಗಿಸಬೇಕಾಗಿದ್ದ ಯುವಕನಿಗೆ ಜಿಲ್ಲಾ ಪಂಚಾಯತ್ ವಿದ್ಯುತ್ ಗಾಲಿ ಕುರ್ಚಿ ನೀಡಿದ್ದು, ಇದರಿಂದ ಮನೆಯ ಹೊರಗಿನ ಪ್ರಕೃತಿ ಸೌಂದರ್ಯ ವೀಕ್ಷಿಸುವ ಭಾಗ್ಯ ಅವರಿಗೆ ಲಭಿಸಿದೆ. ಕುಂಬಳೆ ಕೊಯಿಪ್ಪಾಡಿ ಕೋಟಿ ಹೌಸ್‌ನ ಅಬೂಬಕರ್‌ರ ಪುತ್ರ ಹನೀಫ (49) ಇದೀಗ ಗಾಲಿ ಕುರ್ಚಿ ಮೂಲಕ ಮನೆಯ ಹೊರಗೆ ಸಂಚರಿಸುತ್ತಿದ್ದಾರೆ. ಜನಿಸಿ ಎರಡು ವರ್ಷವಾಗುತ್ತಲೇ ಹನೀಫರಿಗೆ ಜ್ವರ ಬಾಧಿಸಿತ್ತೆನ್ನಲಾಗಿದೆ. ಅನಂತರ ಅವರು ನಡೆದಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಇದಕ್ಕಿರುವ ಚಿಕಿತ್ಸೆ ನಡೆಸಿದರೂ   ಫಲಕಾರಿಯಾಗಲಿಲ್ಲ. ಇದರಿಂದ  …

ಮತದಾರ ಪಟ್ಟಿ: ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧ ನ್ಯಾಯಾಲಯ ಸಮೀಪಿಸಲು ಸರ್ವಪಕ್ಷ ಸಭೆ ತೀರ್ಮಾನ; ವಿರೋಧಿಸಿದ ಬಿಜೆಪಿ

ತಿರುವನಂತಪುರ: ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್) ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಪಿಣರಾಯಿ ವಿಜಯನ್‌ರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸರ್ವಪಕ್ಷ ಸಭೆ ತೀರ್ಮಾನಿಸಿದೆ. ಪ್ರಸ್ತುತ ಸಭೆಯಲ್ಲಿ ಭಾಗವಹಿಸಿದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಹೊರತಾಗಿ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ ಆಡಳಿತ ಮತ್ತು ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇಂತಹ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕೆಂದು ಸಭೆಯಲ್ಲಿ ಭಾಗವಹಿಸಿದ ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್ …

ಮಂಜೇಶ್ವರ ಕಾನೂನು ಅಧ್ಯಯನ ಕೇಂದ್ರಕ್ಕೆ ಶಾಸಕರ ನಿಧಿ ಉಪಯೋಗಿಸಿ ನಿರ್ಮಿಸಿದ ಕಟ್ಟಡ ಉದ್ಘಾಟನೆ

ಮಂಜೇಶ್ವರ: ಕಣ್ಣೂರು ವಿವಿಯ ಮಂಜೇಶ್ವರ ಕ್ಯಾಂಪಸ್‌ನಲ್ಲಿರುವ  ಸ್ಕೂಲ್ ಆಫ್  ಸ್ಟಡೀಸ್‌ಗಾಗಿ ನಿರ್ಮಿಸಿದ ಕಟ್ಟಡವನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು.ಶಾಸಕರ ವಿಧಾನಸಭಾ ಮಂಡಲ ಆಸ್ತಿ ಅಭಿವೃದ್ಧಿ ಸ್ಕೀಂನಲ್ಲಿ ಒಳಪಡಿಸಿ ೫೧ ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಮೂರು ವರ್ಷದ ಎಲ್‌ಎಲ್‌ಬಿ, ಎಲ್ ಎಲ್‌ಎಂ ಎಂಬೀ ಕೋರ್ಸ್‌ಗಳಿಗೆ ೧೦೦ರಷ್ಟು ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿರುವ ಜಿಲ್ಲೆಯ ಮೊದಲ ಕಾನೂನು ತರಬೇತಿ ಕೇಂದ್ರವಾಗಿದೆ ಇದು.  ಈ ಸಂಸ್ಥೆಯ ಅಭಿವೃದ್ಧಿಗೆ ಕೈಜೋಡಿಸುವುದಾಗಿ, ಅಗತ್ಯದ ಮೊತ್ತ ಲಭ್ಯಗೊಳಿಸುವುದಾಗಿ ಸಂಸದರು ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.ಶಾಸಕ ಎಕೆಎಂ …

ಸ್ಥಳೀಯಾಡಳಿತ ಚುನಾವಣೆ ಅಧ್ಯಕ್ಷರ ಮೀಸಲಾತಿ ನಿರ್ಣಯ

ಕಾಸರಗೋಡು:  ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಸಾರ್ವತ್ರಿಕ ಚುನಾವಣೆಗಾಗಿ ತ್ರಿಸ್ತರ ಪಂಚಾಯತ್‌ಗಳ ಅಧ್ಯಕ್ಷರ ಮೀಸಲಾತಿ ಸಂಬಂಧಿಸಿ ತೀರ್ಮಾನ ಉಂಟಾಗಿದೆ. ರಾಜ್ಯ ಚುನಾವಣಾ ಆಯೋಗ ಈ ಬಗೆಗಿರುವ ವಿಜ್ಞಾಪನೆಯನ್ನು ಪ್ರಕಟಿಸಿದೆ. ಜಿಲ್ಲೆಯಲ್ಲಿ ೬ ಬ್ಲೋಕ್ ಪಂಚಾಯತ್‌ಗಳಲ್ಲಿ  2 ಪಂಚಾಯತ್‌ಗಳು ಮಹಿಳಾ ಮೀಸಲಾತಿ ಹಾಗೂ ಒಂದು ಬ್ಲೋಕ್ ಪರಿಶಿಷ್ಟ ಪಂಗಡ ಮಹಿಳಾ ಮೀಸಲಾತಿಯಾಗಿ ನಿಗದಿಪಡಿಸಲಾಗಿದೆ. ಪರಪ್ಪ ಪರಿಶಿಷ್ಟ ಪಂಗಡ ಮಹಿಳಾ ಮೀಸಲಾತಿ ಬ್ಲಾಕ್  ಪಂಚಾಯತ್ ಆಗಿದೆ. ಕಾಞಂಗಾಡ್, ನೀಲೇಶ್ವರ ಮಹಿಳಾ ಮೀಸಲಾತಿ ಬ್ಲೋಕ್ ಪಂಚಾಯತ್‌ಗಳಾಗಿಯೂ ನಿಗದಿಪಡಿಸಲಾಗಿದೆ. ಕಾಸರಗೋಡು ಜಿಲ್ಲೆಯ ಮೂರು ನಗರಸಭೆಗಳಲ್ಲಿ ಒಂದು …

ಎನ್ಯುಮರೇಶನ್ ಫಾರ್ಮ್ ಕನ್ನಡದಲ್ಲಿ ನೀಡಲು ಸಿಪಿಎಂ ಮನವಿ

ಮಂಜೇಶ್ವರ: ಕನ್ನಡ ಭಾಷೆಯಲ್ಲಿ ಎನ್ಯುಮರೇಶನ್ ಫಾರ್ಮ್ ನೀಡದಿರುವುದು ಕೇಂದ್ರ ಚುನಾವಣಾ ಆಯೋಗ ಭಾಷಾ ಅಲ್ಪಸಂಖ್ಯಾತರ ಮೇಲೆ ನಡೆಸಿದ ದ್ರೋಹವೆಂದು ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಆರೋಪಿಸಿದೆ. ಮಂಜೇಶ್ವರ ಮಂಡಲದಲ್ಲಿ ಮಲೆಯಾಳ ಭಾಷೆಯ ಫಾರ್ಮ್ ಭರ್ತಿಗೊಳಿಸಲು ಕನ್ನಡಿಗರಿಗೆ ಸಾಧ್ಯವಾಗುತ್ತಿಲ್ಲ. ಈಬಗ್ಗೆ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿಗೆ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಮನವಿ ನೀಡಿ ಕನ್ನಡಿಗರಿಗೆ ಕನ್ನಡದಲ್ಲಿ ಫಾರ್ಮ್ ನೀಡಬೇಕು ಮತ್ತು ೨೦೦೨ರ ಮತದಾರರ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಕನ್ನಡದಲ್ಲಿ ಪ್ರಕಟಿಸುವಂತೆ ಒತ್ತಾಯಿಸಿದೆ.

ಎಸ್‌ಐಆರ್ ಪರಿಷ್ಕರಣೆ: ಕನ್ನಡ ಭಾಷೆಯಲ್ಲೂ  ಫಾರ್ಮ್ ವಿತರಣೆಗೆ ಅನುಕೂಲ ತೀರ್ಮಾನ ಉಂಟಾಗಲಿದೆ-ಬಿಜೆಪಿ

ಕಾಸರಗೋಡು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಮತದಾರರ ಯಾದಿಯ  ಪ್ರತ್ಯೇಕ ಪರಿಷ್ಕರಣೆ ಆರಂಭಿಸಿರುವಂತೆ ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ಎನ್ಯುಮರೇಶನ್, ಫಾರ್ಮ್ 6 ಸಹಿತ ಎಲ್ಲಾ ಅರ್ಜಿ ಫಾರ್ಮ್‌ಗಳು, ಸೂಚನೆಗಳನ್ನು ಕನ್ನಡ ಭಾಷೆಯಲ್ಲೂ ಲಭ್ಯಗೊಳಿ ಬೇಕೆಂಬ ಬೇಡಿಕೆಯೊಂದಿಗೆ ಚುನಾವಣಾ ಆಯೋಗವನ್ನು ಸಮೀಪಿಸಿರುವು ದಾಗಿಯೂ, ಅನುಕೂಲ ತೀರ್ಮಾನ ಉಂಟಾಗ ಬಹುದೆಂದು ಸಂಬಂಧ ಪಟ್ಟ ಅಧಿಕಾರಿಗಳಿಂದ ಖಚಿತತೆ ಲಭಿಸಿದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಮತದಾರರ ಯಾದಿ ಸಹಿತ ಕನ್ನಡ, ಮಲೆಯಾಳ ಭಾಷೆಗಳಲ್ಲಿ ಲಭ್ಯಗೊಳಿಸಬೇಕೆಂದು ರಾಷ್ಟ್ರೀಯ ಚುನಾವಣಾ ಆಯೋಗದ …

ರಾಷ್ಟ್ರೀಯ ತೈಕೋಂಡಾದಲ್ಲಿ ಕಾಸರಗೋಡಿನ ವಿದ್ಯಾರ್ಥಿನಿಗೆ ಚಿನ್ನದ ಪದಕ

ಕಾಸರಗೋಡು: ಅಕ್ಟೋಬರ್ 28ರಿಂದ ನವಂಬರ್ 2ರ ವರೆಗೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಜ್ಯೂನಿಯರ್ ತೈಕೋಂಡಾ ಚಾಂಪ್ಯನ್‌ಶಿಪ್‌ನಲ್ಲಿ ವಿದ್ಯಾನಗರ ಪಡುವಡ್ಕದ ಎ.ಎಂ. ಫಾತಿಮಳಿಗೆ ಚಿನ್ನದ ಪದಕ ಲಭಿಸಿದೆ. ಈ ಬಾರಿ ಕೇರಳ ತೈಕೋಂಡಾ ತಂಡಕ್ಕೆ ಸಮಗ್ರ ಪ್ರಶಸ್ತಿ ಲಭಿಸಿರುತ್ತದೆ. ತೈಕೋಂಡಾ ದಲ್ಲಿ ರಾಜ್ಯಮಟ್ಟದಲ್ಲಿ ನಿರಂತರ ೬ನೇ ಬಾರಿ ಚಿನ್ನದ ಪದಕ ಗೆಲ್ಲುವ ಮೂಲಕ ಫಾತಿಮ ಈ ಬಾರಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ದ್ದಳು. ರಾಜ್ಯದಲ್ಲಿ ಚಿನ್ನದ ಪದಕ ಗಳಿ ಸಿದ ಮೊದಲ ಎರಡು ಬಾರಿಯೂ ಕೊರೋನ ರೋಗ …

ನಿಷೇಧಿತ ಉತ್ಪನ್ನಗಳನ್ನು ಬಚ್ಚಿಟ್ಟ, ತ್ಯಾಜ್ಯ ಉಪೇಕ್ಷಿಸಿದ  ವ್ಯಕ್ತಿಗಳಿಗೆ ದಂಡ

ಕಾಸರಗೋಡು: ತ್ಯಾಜ್ಯ ಸಂಸ್ಕರಣೆಗೆ ಸಂಬಂಧಿಸಿ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ನಡೆಸಿದ ತಪಾಸಣೆಯಲ್ಲಿ ವಿವಿಧ ಕಾನೂನು ಉಲ್ಲಂಘನೆಗಳಿಗೆ ದಂಡ ಹೇರಲಾಗಿದೆ. ನಿಷೇಧಿತ ಒಂದು ಬಾರಿ ಉಪಯೋಗಿಸುವ ಪ್ಲಾಸ್ಟಿಕ್‌ಗಳನ್ನು ಗೋದಾಮಿನಲ್ಲಿ ಬಚ್ಚಿಟ್ಟಿರುವ ಕುಂಬಳೆ ಆರಿಕ್ಕಾಡಿಯ ಹೈಪರ್ ಮಾರ್ಕೆಟ್ ಮಾಲಕನಿಗೆ 10 ಸಾವಿರ ರೂ. ದಂಡ ಹೇರಿ ಉತ್ಪನ್ನಗಳನ್ನು ವಶಪಡಿಸಲಾಗಿದೆ. ಮೊಗ್ರಾಲ್ ಹೊಳೆ ಸಮೀಪದ ರಸ್ತೆ ಬದಿ ರಾಶಿ ಹಾಕಿರುವ ತ್ಯಾಜ್ಯಗಳಿಂದ ಲಭಿಸಿದ  ಪುರಾವೆ ಪ್ರಕಾರ ಹೈಪರ್ ಮಾರ್ಕೆಟ್, ಕಾಸರಗೋಡು ರೆಸ್ಟೋರೆಂಟ್ ಮಾಲಕರಿಗೆ 7 ಸಾವಿರ ರೂ. ದಂಡ ಹೇರಲಾಗಿದೆ. ಹೋಟೆ …