ತೆಂಗಿನ ಮರದಲ್ಲಿ ಸಿಲುಕಿಕೊಂಡ ಕಾರ್ಮಿಕ: ರಕ್ಷಿಸಿದ ಅಗ್ನಿಶಾಮಕದಳ
ಕಾಸರಗೋಡು: ತೆಂಗಿನಕಾಯಿ ಕೊಯ್ಯಲೆಂದು ಯಂತ್ರದ ಸಹಾಯ ದಿಂದ ಮೇಲೇರಿದ ಕಾರ್ಮಿಕ ಅಲ್ಲಿಂದ ಇಳಿಯಲು ಸಾಧ್ಯವಾಗದೆ ಅಲ್ಲೇ ಸಿಲುಕಿಕೊಂಡಿದ್ದು ನಂತರ ಅಗ್ನಿಶಾಮಕ ದಳ ಆಗಮಿಸಿ ಅವರನ್ನು ಮರದಿಂದ ಸುರಕ್ಷಿತವಾಗಿ ಕೆಳಗಿಳಿಸಿ ರಕ್ಷಿಸಿದ ಘಟನೆ ನಡೆದಿದೆ. ಉದುಮ ಸಮೀಪದ ಕುಳಕುನ್ನಿನ ಎ.ಜೆ. ರಾಜು (60) ಎಂಬವರು ನಿನ್ನೆ ಕುಳಕುನ್ನಿನ ಫೌಸಿಯಾ ಉಸ್ಮಾನ್ ಎಂಬವರ ಹಿತ್ತಿಲಲ್ಲಿರುವ ತೆಂಗಿನ ಮರಕ್ಕೆ ಯಂತ್ರದ ಸಹಾಯದಿಂದ ಹತ್ತಿ ದ್ದರು. ಆ ವೇಳೆ ಯಂತ್ರ ದಿಢೀರ ಕೈಕೊಟ್ಟಿದೆ. ಇದರಿಂದ ಮರದಿಂದ ಕೆಳಕ್ಕಿಳಿಯಲು ಸಾಧ್ಯವಾಗದೆ ಅವರು ಅಲ್ಲೇ ಸಿಲುಕಿಕೊಂಡರು. …
Read more “ತೆಂಗಿನ ಮರದಲ್ಲಿ ಸಿಲುಕಿಕೊಂಡ ಕಾರ್ಮಿಕ: ರಕ್ಷಿಸಿದ ಅಗ್ನಿಶಾಮಕದಳ”