ಬೀಜಂತ್ತಡ್ಕದಲ್ಲಿ ಬಸ್‌ಗಳು ಢಿಕ್ಕಿ: 4 ಮಂದಿಗೆ ಗಾಯ; ಕೇಸು ದಾಖಲು

ಬದಿಯಡ್ಕ: ಇಲ್ಲಿಗೆ ಸಮೀಪದ ಬೀಜಂತಡ್ಕದಲ್ಲಿ ಎರಡು ಬಸ್‌ಗಳು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ಮೊನ್ನೆ ರಾತ್ರಿ 8 ಗಂಟೆಗೆ ಅಪಘಾತವುಂ ಟಾಗಿತ್ತು. ಕಾಸರಗೋಡು ಭಾಗಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬದಿಯಡ್ಕದತ್ತ  ತೆರಳುತ್ತಿದ್ದ ಖಾಸಗಿ ಬಸ್ ಪರಸ್ಪರ ಢಿಕ್ಕಿ  ಹೊಡೆದಿದ್ದು ಬಸ್‌ಗಳಲ್ಲಿದ್ದ ಪ್ರಯಾಣಿಕರಾದ ಸತೀಶ್ (41), ಅಬ್ದುಲ್ ರಶೀದ್ (55), ಅಬೂಬಕರ್ (50), ಮಿಶಾಲ್ (5) ಎಂಬಿವರು ಗಾಯಗೊಂಡಿ ದ್ದಾರೆ. ಇವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ರಸ್ತೆಯಲ್ಲಿ ಶೌಚಾಲಯದ ತ್ಯಾಜ್ಯ ಉಪೇಕ್ಷೆ: ಪೊಲೀಸರಿಂದ ತನಿಖೆ

ಉಪ್ಪಳ: ರಸ್ತೆಯಲ್ಲಿ ಶೌಚಾ ಲಯ ತ್ಯಾಜ್ಯವನ್ನು ಉಪೇಕ್ಷಿಸಿದ ಬಗ್ಗೆ ಲಭಿಸಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ವರ್ಕಾಡಿ ಪಂಚಾಯತ್‌ನ ಮೊರತ್ತಣೆಯಿಂದ ಅರಿಬೈಲು ಕಜೆಕೋಡಿ ತನಕದ ಲೋಕೋಪ ಯೋಗಿ ರಸ್ತೆಯಲ್ಲಿ ಶೌಚಾಲಯ ತ್ಯಾಜ್ಯವನ್ನು ಉಪೇಕ್ಷಿಸಲಾಗಿದೆ. ಮೊನ್ನೆ ರಾತ್ರಿ ವಾಹನದಲ್ಲಿ ತ್ಯಾಜ್ಯವನ್ನು ತಂದು ರಸ್ತೆಯಲ್ಲಿ ಉಪೇಕ್ಷಿಸಿರುವುದಾಗಿ ಅಂದಾಜಿಸ ಲಾಗಿದೆ.  ನಿನ್ನೆ ಬೆಳಿಗ್ಗೆ ಇದು ನಾಗರಿಕರ ಗಮನಕ್ಕೆ ಬಂದಿದೆ. ನಾಗರಿಕರು ನೀಡಿದ ಮಾಹಿತಿ ಪ್ರಕಾರ ಪಂಚಾಯತ್ ಕಾರ್ಯದರ್ಶಿ ಅಜಿತ್ ಎಚ್. ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ …

ಹೃದಯಾಘಾತದಿಂದ ಗೃಹಿಣಿ ನಿಧನ

 ಕಾಸರಗೋಡು: ಚೇರಂಗೈ ಕಡಪ್ಪುರ ತೆಕ್ಕೇವೀಡ್‌ನ ದಿ| ಟಿ.ವಿ. ಕುಂಞಿಕಣ್ಣನ್ ಎಂಬವರ ಪತ್ನಿ ಟಿ.ವಿ. ಸರೋಜಿನಿ (82) ನಿಧನಹೊಂದಿದರು. ಅಲ್ಪಕಾಲದಿಂದ ಇವರಿಗೆ ಹೃದಯ ಸಂಬಂಧ ಅಸೌಖ್ಯ ಬಾಧಿಸಿತ್ತೆನ್ನಲಾಗಿದೆ. ನಿನ್ನೆರಾತ್ರಿ ಮನೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ರಮೇಶನ್, ಚಂದ್ರಿಕ,ಸೌಮಿನಿ, ಬೇಬಿ, ಉಷಾ, ರಾಜು, ಅಭಿಲಾಶ್, ಅನೀಶ್, ಅಳಿಯ-ಸೊಸೆಯಂದಿರಾದ  ಲೇಖ, ಬಾಲಕೃಷ್ಣನ್, ಪ್ರದೀಪನ್, ವಿಶಾಲನ್, ಮಧು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವೆ ಪುತ್ರಿ ನಳಿನಿ, ಅಳಿಯ ಯಾದವ, ಸಹೋದರ ಬಾಲಕೃಷ್ಣನ್ ಎಂಬಿವರು ಈ ಹಿಂದೆ ನಿಧನಹೊಂದಿದ್ದಾರೆ.

ಗಾಂಜಾ ಸಹಿತ ಸೆರೆ

ಕುಂಬಳೆ: ಗಾಂಜಾ ಕೈವಶವಿರಿಸಿಕೊಂಡಿದ್ದ ವ್ಯಕ್ತಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಕೊಡ್ಯಮ್ಮೆ ಪೂಕಟ್ಟೆ ನಿವಾಸಿ ಅಬ್ದುಲ್ ರಹ್ಮಾನ್ (45) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನ ಕೈಯಿಂದ 25 ಗ್ರಾಂ ಗಾಂಜಾ ವಶಪಡಿಸಲಾಗಿದೆ. ನಿನ್ನೆ ಸಂಜೆ ಪೂಕಟ್ಟೆ ರೇಶನ್ ಅಂಗಡಿ ಸಮೀಪದಲ್ಲಿ ಎಸ್‌ಐ ಪ್ರದೀಪ್ ಕುಮಾರ್ ನೇತೃತ್ವದ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಸಂಶಯಾಸ್ಪದವಾಗಿ ಕಂಡು ಬಂದ ಅಬ್ದುಲ್ ರಹ್ಮಾನ್‌ನನ್ನು ತಪಾಸಣೆಗೈದಾಗ ಗಾಂಜಾ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅನಧಿಕೃತ ಮದ್ಯ, ಮಾದಕ ವಸ್ತು ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.

ಮಾಯಿಪ್ಪಾಡಿ ಡಯಟ್‌ನಲ್ಲಿ ಕೊರಗ ಸಮುದಾಯದವರಿಗೆ ಎರಡು ಸೀಟು ಮೀಸಲಿಡಲು ಸಚಿವರಿಗೆ ಮನವಿ

ಕಾಸರಗೋಡು: ಮಾಯಿಪ್ಪಾಡಿ ಯಲ್ಲಿರುವ ಕಾಸರಗೋಡು ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ಅತೀ ಹಿಂದುಳಿದ ಕೊರಗ ಜನಾಂಗದವರಿಗಾಗಿ ಎರಡು ಸೀಟು ಮೀಸಲಿಡಬೇಕೆಂದು ಆದಿವಾಸಿ ಕೊರಗ ಜನಾಂಗದ ಮುಖಂಡ ಸಂಜೀವ ಪುಳ್ಕೂರು ರಾಜ್ಯ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿಯವರಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ. ಮನವಿಯನ್ನು ಶಿಕ್ಷಣ ನಿರ್ದೇಶಕ ರಿಗೂ, ಶಾಸಕರಿಗೂ ನೀಡಿದ್ದಾರೆ. ಹಿಂದುಳಿದ ಭಾಗವಾದ ಈ ಜನಾಂಗದವರು ಎಸ್.ಟಿ. ವಿಭಾಗಕ್ಕೆ ಸೇರಿದ್ದು, ಈ ವಿಭಾಗದಲ್ಲಿ ಇತರ ಸಮುದಾಯದೊಂದಿಗೆ ಸ್ಪರ್ಧಿಸಿ ಸೀಟು ಗಿಟ್ಟಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಈ …

ಪುಸ್ತಕಪೂಜೆ: ಸೆ. 30ರಂದು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲು ಒತ್ತಾಯಿಸಿ ಬ್ರಾಹ್ಮಣ ಮಹಾಸಭಾದಿಂದ ಸರಕಾರಕ್ಕೆ ಮನವಿ

ಕಾಸರಗೋಡು: ನವರಾತ್ರಿ ಮಹೋತ್ಸವದಂಗವಾಗಿ ಈ ತಿಂಗಳ 29ರಂದು ಶಾರದಾ ಪೂಜೆಯ ಪ್ರಯುಕ್ತ ಪುಸ್ತಕ ಹಾಗೂ ಗ್ರಂಥಗಳನ್ನು ಪೂಜೆಗಾಗಿ ಇರಿಸಲಿದ್ದು, ಈ ಹಿನ್ನೆಲೆಯಲ್ಲಿ ೩೦ರಂದು ಶಿಕ್ಷಣ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆ ಘೋಷಿಸಬೇ ಕೆಂದು ಒತ್ತಾಯಿಸಿ ಕಾಸರಗೋಡು ಬ್ರಾಹ್ಮಣ ಮಹಾಸಭಾ ಸರಕಾರಕ್ಕೆ ಮನವಿ ಸಲ್ಲಿಸಿದೆ. ಸೆ. 29ರಂದು ಪುಸ್ತಕ, ಗ್ರಂಥಗಳನ್ನು ಪೂಜೆಗಿರಿಸಿದರೆ ಬಳಿಕ ಸರಸ್ವತಿ ಪೂಜೆ ಮುಗಿಯದೆ ಪುಸ್ತಕಗಳನ್ನು ಮುಟ್ಟುವುದಾಗಲೀ, ಬರವಣಿಗೆಯಲ್ಲಿ ತೊಡಗು ವುದಾಗಲೀ ಸಲ್ಲದು ಎಂಬ ರೂಢಿ ಪ್ರಾಚೀನ ಕಾಲದಿಂದಲೇ ಅನುಷ್ಠಾನದಲ್ಲಿದೆ. ಆದುದರಿಂದ ಈ ಬಾರಿ ಸೆ. 29ರಂದು …

ಅಪ್ರಾಪ್ತ ಬಾಲಕರು ಚಲಾಯಿಸುತ್ತಿದ್ದ ಸ್ಕೂಟರ್ ವಶ

ಉಪ್ಪಳ: ಪ್ರಾಯಪೂರ್ತಿ ಯಾಗದ ಇಬ್ಬರು ಬಾಲಕರು ಚಲಾಯಿಸುತ್ತಿದ್ದ ಸ್ಕೂಟರ್‌ಗಳನ್ನು ಮಂಜೇಶ್ವರ ಪೊಲೀಸರು ವಶಪಡಿಸಿ ಕೊಂಡು ಆರ್‌ಸಿ ಮಾಲಕರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ಮಧ್ಯಾಹ್ನ ಕಡಂಬಾರಿನಿಂದ ಹೊಸಂಗಡಿಗೆ ತೆರಳುವ ರಸ್ತೆಯಲ್ಲಿ ಬಾಲಕನೋರ್ವ ಚಲಾಯಿಸುತ್ತಿದ್ದ ಸ್ಕೂಟರನ್ನು ಎಸ್‌ಐ ಉಮೇಶ್ ನೇತೃತ್ವದ ಪೊಲೀಸರು ವಶಪಡಿಸಿಕೊಂ ಡಿದ್ದಾರೆ. ಅದೇ ರೀತಿ ಸಂಜೆ ಕುಂಜತ್ತೂರು ಪದವಿನಲ್ಲೂ ಬಾಲಕ ನೋರ್ವ ಚಲಾಯಿಸುತ್ತಿದ್ದ ಸ್ಕೂಟರ್ ವಶಪಡಿಸಲಾಗಿದೆ.

ಮನೆಯೊಳಗೆ ಗೋಡೆ ಕೊರೆದು ಬಚ್ಚಿಟ್ಟಿದ್ದ ಮದ್ಯ, ಹಣ ವಶ : ಪೊಲೀಸ್ ಕಾರ್ಯಾಚರಣೆ ವೇಳೆ ಆರೋಪಿ  ಪರಾರಿ

ಕುಂಬಳೆ: ಹಲವು ಅಬಕಾರಿ ಪ್ರಕರಣಗಳಲ್ಲಿ ಆರೋಪಿಯಾದ ಕುಂಬಳೆ ಕುಂಟಂಗೇರಡ್ಕ ಲಕ್ಷ್ಮಿ ನಿವಾಸ್‌ನ ಪ್ರಭಾಕರನ್ ಯಾನೆ ಅಣ್ಣಿ ಪ್ರಭಾಕರ (52)ನ ಮನೆಯಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ ಅನಧಿಕೃತವಾಗಿ ಬಚ್ಚಿಡಲಾಗಿದ್ದ ಮದ್ಯ ಪತ್ತೆಹಚ್ಚಲಾಗಿದೆ. ಮನೆಯ ಗೋಡೆ ಕೊರೆದು ಅದರೊಳಗೆ ಬಚ್ಚಿಡಲಾಗಿದ್ದ ಮದ್ಯ ಹಾಗೂ 32,970 ರೂಪಾಯಿಗಳನ್ನು ವಶಪಡಿಸಲಾಗಿದೆ. 180 ಮಿಲ್ಲಿಯ ನಾಲ್ಕು ಬಾಟ್ಲಿ ಗೋವಾ ಮದ್ಯ, 180 ಮಿಲ್ಲಿಯ 52 ಪ್ಯಾಕೆಟ್ ಕರ್ನಾಟಕ ಮದ್ಯವನ್ನು ವಶಪಡಿಸಲಾಗಿದೆ. ಮನೆಯಲ್ಲಿ ಮದ್ಯ ದಾಸ್ತಾನು ಇರಿಸಲಾಗಿದೆ ಎಂಬ ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕುಂಬಳೆ …

ಬಂಗ್ಲೆಗುಡ್ಡೆಕಾಡಿನಲ್ಲಿ ಪತ್ತೆಯಾದ ಏಳು ತಲೆಬುರುಡೆಗಳು ಗಂಡಸರದ್ದು

ಬೆಳ್ತಂಗಡಿ: ನೇತ್ರಾವತಿ ಸ್ನಾನ ಘಟ್ಟದ ಬಳಿ ಬಂಗ್ಲೆ ಗುಡ್ಡೆ ಕಾಡಿನಲ್ಲಿ  ನಡೆ ಯುತ್ತಿರುವ ಶೋಧ ವೇಳೆ  ಪತ್ತೆಹಚ್ಚ ಲಾದ ಏಳು ತಲೆಬುರುಡೆಗಳು ಕೂಡಾ ಗಂಡಸರದ್ದೇ ಆಗಿದೆಯೆಂದು ತನಿಖಾ ತಂಡ ದೃಢೀಕರಿಸಿರುವುದಾಗಿ ತಿಳಿದುಬಂದಿದೆ. ಒಂದು ತಲೆಬುರು ಡೆಗೆ ಏಳು ವರ್ಷಗಳ ಹಳಮೆ ಯಿದೆಯೆಂದೂ ಸಂಶಯಿಸಲಾಗುತ್ತಿದೆ. ಅಲ್ಲದೆ ಇದು ಏಳು ವರ್ಷಗಳ ಹಿಂದೆ ಕೊಡಗಿನಿಂದ ಕಾಣೆಯಾದ ವ್ಯಕ್ತಿಯದ್ದಾಗಿರಬಹುದೆಂದು ಅಂದಾಜಿಸಲಾಗಿದೆ. ಪತ್ತೆಹಚ್ಚಲಾದ ತಲೆಬುರುಡೆ ಹಾಗೂ ಮೂಳೆಗಳನ್ನು ರಾಸಾಯನಿಕ ತಪಾಸಣೆಗೆ ಕಳುಹಿಸಲಾಗುವುದೆಂದು ತನಿಖಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ. ಬಂಗ್ಲೆ ಗುಡ್ಡೆಯಲ್ಲಿ ಶೋಧ ಕಾರ್ಯ …

ನಿಗೂಢ ರೀತಿಯಲ್ಲಿ ತಲುಪಿದ ಕಾರು ಮೂರು ಬಾರಿ ಪೊಲೀಸ್ ಜೀಪಿಗೆ ಢಿಕ್ಕಿ ಹೊಡೆದು ಪರಾರಿ

ಕಾಸರಗೋಡು: ರಾತ್ರಿ ವೇಳೆ ಪಟ್ರೋಲಿಂಗ್ ನಡೆಸುತ್ತಿದ್ದ ಬೇಡಗಂ ಪೊಲೀಸ್ ಠಾಣೆಯ ಜೀಪಿಗೆ ಆಲ್ಟೋ ಕಾರು ಮೂರು ಬಾರಿ ಢಿಕ್ಕಿ ಹೊಡೆಸಿದ ಘಟನೆ ನಡೆದಿದೆ. ಮೂರನೇ ಬಾರಿ ಹೊಡೆದ ಢಿಕ್ಕಿಯಿಂದ ಪೊಲೀಸ್ ವಾಹನ ಮಗುಚಿ ಬಿದ್ದಿದ್ದು, ಈ ವೇಳೆ ಕಾರು ಸಹಿತ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಪೊಲೀಸ್ ಜೀಪ್ ಚಾಲಕ ರಾಕೇಶ್ ಎಂಬವರ ಕೈಗೆ ಗಾಯಗಳಾಗಿವೆ. ಢಿಕ್ಕಿ ಹೊಡೆದು ಪರಾರಿಯಾದ ಕಾರನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ನಿನ್ನೆ ರಾತ್ರಿ 11.30 ರ ವೇಳೆ ನಡೆದ ಘಟನೆ …