ಜನಸ್ಪಂದನ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಮೇಲೆ ಹಲ್ಲೆ: ಓರ್ವ ವಶ

ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಅವರ ನಿವಾಸದಲ್ಲಿ ಇಂದು ಬೆಳಿಗ್ಗೆ ನಡೆದ ಜನ್ ಸುನಾಯಿ (ಜನಸ್ಪಂದನ) ಕಾರ್ಯಕ್ರಮ ಸಂದರ್ಭದಲ್ಲಿ ವ್ಯಕ್ತಿಯೋರ್ವ ಅವರ ಕೆನ್ನೆಗೆ ಹೊಡೆದ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿ ೩೦ರ ಹರೆಯದ ಯುವಕನೋರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.  ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಈ ಯುವಕ ಮುಖ್ಯಮಂ ತ್ರಿಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ಅವರ ಕೆನ್ನೆಗೆ ಹೊಡೆದಿದ್ದಾನೆನ್ನ ಲಾಗಿದೆ. ಆರೋಪಿಯು ಮೊದಲು ಮುಖ್ಯಮಂತ್ರಿಗೆ ದಾಖಲೆಪತ್ರ ಗಳನ್ನು ಹಸ್ತಾಂತರಿಸಿ ನಂತರ ಕಿರು ಚಲು ಆರಂಭಿಸಿ ಕೆನ್ನೆಗೆ …

ಕಾರಿನಲ್ಲಿ ಸಾಗಿಸುತ್ತಿದ್ದ 480 ಪ್ಯಾಕೆಟ್ ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಮಂಜೇಶ್ವರ: ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರದಲ್ಲಿ ಅಧಿಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಆಲ್ಟೋ ಕಾರಿನಲ್ಲಿ  ಸಾಗಿಸುತ್ತಿದ್ದ 480 ಪ್ಯಾಕೆಟ್ (86.4 ಲೀಟರ್) ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕಾಸರಗೋಡು ಬೆದ್ರಡ್ಕ ನಿವಾಸಿ ಸುರೇಶ್ ಕುಮಾರ್ ಬಿ.ಪಿ. ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಮಾಲು ಸಾಗಿಸಲು ಬಳಸಲಾಗಿದ್ದ  ವಾಹನವನ್ನೂ ಅಬಕಾರಿ ತಂಡ   ವಶಕ್ಕೆ ತೆಗೆದುಕೊಂಡಿದೆ. ಸರ್ಕಲ್ ಎಕ್ಸೈಸ್ ಇನ್ಸ್‌ಪೆಕ್ಟರ್ ಶಿಜಿಲ್ ಕುಮಾರ್‌ರ ನೇತೃತ್ವದಲ್ಲಿ ಎಕ್ಸೈಸ್ ಇನ್ಸ್‌ಪೆಕ್ಟರ್ ಜಿನು ಜೇಮ್ಸ್,  ಪ್ರಿವೆಂಟೀವ್ ಆಫೀಸರ್‌ಗಳಾದ ಜಿಜಿನ್ …

ಮದ್ಯ ವಶ: ಮಹಿಳೆ ವಿರುದ್ಧ ಕೇಸು

ಕಾಸರಗೋಡು: 2.16 ಲೀಟರ್ (180 ಎಂಎಲ್‌ನ 12 ಪ್ಯಾಕೆಟ್) ಕರ್ನಾಟಕ ಮದ್ಯ ಕೈವಶವಿರಿಸಿದ ಆರೋಪದಂತೆ ಮಹಿಳೆಯರ ವಿರುದ್ಧ ಅಬಕಾರಿ ತಂಡ ಪ್ರಕರಣ ದಾಖಲಿಸಿ ಮಾಲು ವಶಪಡಿಸಿಕೊಂಡಿದೆ. ಉಳಿಯತ್ತಡ್ಕದ ಮಿನಿ ಎಂಬಾಕೆಯ ವಿರುದ್ಧ ಈ ಪ್ರಕರಣ ದಾಖಲಿಸಿಕೊಳ್ಳ ಲಾಗಿದೆ. ಉಳಿಯತ್ತಡ್ಕದಲ್ಲಿ ಕಾಸರ ಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಇನ್ಸ್‌ಪೆಕ್ಟರ್ ವಿಷ್ಣುಪ್ರಕಾಶ್‌ರ ನೇತೃತ್ವದ ಅಬಕಾರಿ  ಅಬಕಾರಿ ತಂಡ ಉಳಿಯ ತ್ತಡ್ಕದಲ್ಲಿ ನಿನ್ನೆ ಈ ಕಾರ್ಯಾಚರಣೆ ನಡೆಸಿದೆ. ಈ ಮಹಿಳೆಯ ಹೆಸರಲ್ಲಿ ಇತರ ಅಬಕಾರಿ ಪ್ರಕರಣಗಳೂ ಇವೆ ಎಂದು ಅಬಕಾರಿ ಅಧಿಕಾರಿಗಳು …

ಮನೆಯೊಳಗೆ ಪತ್ತೆಯಾದ ಪ್ರಾಚ್ಯವಸ್ತುಗಳಿಗೆ ಪೊಲೀಸ್ ಕಾವಲು; 24ರಂದು ಪರಿಶೀಲನೆ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟಿಕುಳಂನಲ್ಲಿ  ಮುಚ್ಚುಗಡೆಗೊಳಿಸಿದ ಮನೆಯೊಳಗೆ ಪತ್ತೆಯಾದ ಪ್ರಾಚ್ಯ ವಸ್ತುಗಳಿಗೆ ಪೊಲೀಸ್ ಕಾವಲು ಏರ್ಪಡಿಸಲಾಗಿದೆ. ಆರ್ಕಿ ಯೋಲಜಿಕಲ್ ಸರ್ವೇಯ ತೃಶೂರು ವಲಯ ಅಧಿಕಾರಿಗಳ ನಿರ್ದೇಶದಂತೆ ಪೊಲೀಸರು ಬಿಗು ಕಾವಲು ಏರ್ಪಡಿಸಿದ್ದಾರೆ. ಆರ್ಕಿಯೋಲಜಿಕಲ್ ಇಲಾಖೆ ಅಧಿಕಾರಗಳು ಈ ತಿಂಗಳ 24ರಂದು ತಲುಪಿ ಪ್ರಾಚ್ಯ ವಸ್ತುಗಳನ್ನು ಪರಿಶೀಲಿಸಲಿದ್ದಾರೆ. ಅದುವರೆಗೆ ಇವುಗಳು ಪೊಲೀಸರ ಕಾವಲಿನಲ್ಲಿರಲಿದೆ. ಬೇಕಲ ಪೊಲೀಸ್ ಠಾಣೆಯಿಂದ  ಕೂಗಳತೆ ದೂರದಲ್ಲೇ ಜನವಾಸವಿಲ್ಲದ ಮನೆಯಲ್ಲಿ ಪ್ರಾಚ್ಯವಸ್ತುಗಳು ಮೊನ್ನೆ ಸಂಜೆ ಪತ್ತೆಯಾಗಿದೆ. ಗುಪ್ತ ಮಾಹಿತಿ ಮೇರೆಗೆ ಬೇಕಲ ಪೊಲೀಸ್ …

ಜಾನುವಾರು ಸಾಕಣೆ ಕೇಂದ್ರದಿಂದ ಸಾಮಗ್ರಿ ಕಳವು: 5 ಮಂದಿ ಸೆರೆ

ಕಾಸರಗೋಡು: ಜಾನುವಾರು ಸಾಕಣೆ ಕೇಂದ್ರದಿಂದ 1.25 ಲಕ್ಷ ರೂಪಾಯಿ ಮೌಲ್ಯದ ಯಂತ್ರಗಳು ಹಾಗೂ ಮೋಟಾರ್‌ಗಳನ್ನು ಕಳವುಗೈದು ಮಾರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೈದಕ್ಕಾಡ್ ನಿವಾಸಿ ಪ್ರಶಾಂತ್ (35), ಮಲ್ಲಕ್ಕರ ನಿವಾಸಿ ರಾಕೇಶ್ (35), ಪಿಲಿಕ್ಕೋಡ್ ಕೊದೋಳಿಯ ವಿ.ವಿ. ಸುರೇಶ್, ಸಿ.ಎಚ್. ಪ್ರಶಾಂತ್ (42), ಪಿಲಿಕೋಡ್ ಮಡಿವಯಲ್‌ನ ನಿತಿನ್ ಯಾನೆ ರಾಜೇಶ್ (36) ಎಂಬಿವರು ಚಂದೇರ ಎಸ್‌ಐ ಸತೀಶ್ ನೇತೃದ ಪೊಲೀಸ್‌ರ ತಂಡ ಬಂಧಿಸಿದೆ. ಕಾಲಿಕ್ಕಡವ್ ಕರಕ್ಕೇರು ಎಂಬಲ್ಲಿನ ರಾಮನ್ ಎಂಬವರ ಪುತ್ರ …

ತಿರುವನಂತಪುರದಲ್ಲಿ ಅನುರಣಿಸಲಿದೆ ಕನ್ನಡ ಕಲರವ: ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ 23ರಂದು

ಕಾಸರಗೋಡು: ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ, ಭಾರತ್ ಭವನ್ ತಿರುವನಂತಪುರ ಕೇರಳ ಸರಕಾರ ಇದರ ಆಶ್ರಯದಲ್ಲಿ ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ ಹಾಗೂ ಕೃತಿ ಬಿಡುಗಡೆ ಈ ತಿಂಗಳ 23ರಂದು ಬೆಳಿಗ್ಗೆ 9ರಿಂದ ತಿರುವನಂತಪುರ ತೈಕಾಡ್ ಪೌಂಡ್ ಕಾಲನಿ ಸಿ.ವಿ. ರಾಮನ್ ಪಿಳ್ಳೆ ರಸ್ತೆಯಲ್ಲಿರುವ ಭಾರತ್ ಭವನದಲ್ಲಿ ನಡೆಯಲಿದೆ. 9ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 10ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಆಹಾರ ಮತ್ತು  ನಾಗರಿಕ ಸರಬರಾಜು ಇಲಾಖೆ ಸಚಿವ ಜಿ.ಆರ್. ಅನಿಲ್ ಉದ್ಘಾಟಿಸುವರು. ಕರ್ನಾಟಕ …

ಶ್ರೀ ಕ್ಷೇತ್ರ ಧರ್ಮಸ್ಥಳ ಬಗ್ಗೆ ಅಪಪ್ರಚಾರದ ಹಿಂದೆ ಕಮ್ಯೂನಿಸ್ಟರು- ಹಿಂದೂ ಐಕ್ಯವೇದಿ ಆರೋಪ

ಕಾಸರಗೋಡು: ಹಿಂದುಗಳ ಪವಿತ್ರ ಆರಾಧನಾ ಕೇಂದ್ರವಾದ ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಕಮ್ಯುನಿಸ್ಟರು ಮತ್ತು ಇಸ್ಲಾಂ ಮತೀಯ ಸಂಘಟನೆಗಳು ಸುಳ್ಳು ಕತೆಗಳನ್ನು ಕಟ್ಟಿ ನಿರಂತರ ಅಪ ಪ್ರಚಾರ ನಡೆಸುತ್ತಿರುವುದು ಅಕ್ಷಮ್ಯ ಅಪರಾಧವೆಂದು ಹಿಂದೂ ಐಕ್ಯವೇದಿ ಮಂಜೇಶ್ವರ ತಾಲೂಕು ಸಮಿತಿ ಖಂಡಿಸಿದೆ. ಜೈನಧರ್ಮ ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಕೇರಳದ ಯೂಟ್ಯೂಬರ್‌ಗಳಲ್ಲಿ ಕೆಲವರು ನಿರಂತರವಾಗಿ ಧರ್ಮಸ್ಥಳದ ಬಗ್ಗೆ ಅಪ ಪ್ರಚಾರ ನಡೆಸುತ್ತಿದೆ ಎಂದು ಆಪಾದಿಸಿದೆ. ಕೇರಳದಲ್ಲಿ ಅಲ್ಪ ಸಂಖ್ಯಾತರು ನಡೆಸುವ ಡಿವೈನ್ ಧ್ಯಾನಕೇಂದ್ರದಲ್ಲಿ ನೂರಾರು ಜನರು ಅನುಮಾನಾಸ್ಪದವಾಗಿ ಅಸಹಜ ಸಾವು …

ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ಬಟ್ಟೆಬರೆ, ದಾಖಲೆ ಪತ್ರ ನಾಶ

ಬಾಯಾರು: ಬಾಯಾರು ಬಳಿಯ ತಲೆಂಗಳ ಬೀರ್ನಕೋಡಿ ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಉಂಟಾಗಿ ಬಟ್ಟೆ ಬರೆ ಸಹಿತ ದಾಖಲೆ ಪತ್ರ ಉರಿದು ನಾಶಗೊಂಡಿದೆ. ಕುಂಟುAಬ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದೆ. ಪೈವಳಿಕೆ ಪಂಚಾಯತ್‌ನ ಬೀರ್ನಕೋಡಿಯಲ್ಲಿ ವಾಸವಾಗಿರುವ ಚೋಮ ಎಂಬವರ ಮನೆಯಲ್ಲಿ ಮಂಗಳವಾರ ಮುಂಜಾನೆ 4.30ರ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಕೊಠಡಿಯಲ್ಲಿ ಬೆಂಕಿ ಉರಿಯುತ್ತಿರುವುದು ಮನೆಯವರ ಗಮನಕ್ಕೆ ಬಂದಿದೆ. ಕೂಡಲೇ ಚೋಮ, ಇವರ ಪತ್ನಿ ಪುಷ್ಪ, ಮಗ ಸತೀಶ, ಸೊಸೆ ಹರಿಣಾಕ್ಷಿ ಹಾಗೂ ಮೊಮ್ಮಕ್ಕಳು ಹೊರಗೆ ಓಡಿ ಹೋಗಿ …

ಕಲ್ಯೋಟ್ ಅವಳಿ ಕೊಲೆ ಪ್ರಕರಣ: ಅವಳಿ ಜೀವಾವಧಿ ಶಿಕ್ಷೆ ಲಭಿಸಿದ 4ನೇ ಆರೋಪಿಗೆ 1 ತಿಂಗಳ ಪರೋಲ್ ಮಂಜೂರು

ಕಾಸರಗೋಡು: ಪೆರಿಯ ಕಲ್ಯೋಟ್ ಅವಳಿ ಕೊಲೆ ಪ್ರಕರಣದಲ್ಲಿ ಅವಳಿ ಜೀವಾವಧಿ ಶಿಕ್ಷೆ ಲಭಿಸಿದ ನಾಲ್ಕನೇ ಆರೋಪಿಗೆ 1 ತಿಂಗಳ ಪರೋಲ್ ಮಂಜೂರು ಮಾಡಲಾಗಿದೆ. ಪೆರಿಯ ಏಚಿಲಡ್ಕ ನಿವಾಸಿ ಅನಿಲ್ ಕುಮಾರ್‌ಗೆ ಪರೋಲ್ ಮಂಜೂರು ಮಾಡಲಾಗಿದೆ. ಆಗಸ್ಟ್ 18ರಿಂದ 30 ದಿನಕ್ಕೆ ಪರೋಲ್ ಅನ್ವಯವಾಗುವುದು. ಅನಿಲ್ ಕುಮಾರ್ ಜೈಲಿನಿಂದ ಹೊರಗೆ ಬಂದಿದ್ದಾನೆ. ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸಬೇಕೆಂದು ಪ್ರತೀ ದಿನ ಬೆಳಿಗ್ಗೆ ಇನ್ಸ್‌ಪೆಕ್ಟರ್‌ರ ಮುಂದೆ ಹಾಜರಾಗಿ ಸಹಿ ಹಾಕಬೇಕೆಂಬ ವ್ಯವಸ್ಥೆಯಲ್ಲಿ ಪರೋಲ್ ಮಂಜೂರು ಮಾಡಲಾಗಿದೆ. ಬೇಕಲ ಪೊಲೀಸ್ …

ಬಡಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನವೀಕೃತ ಕಟ್ಟಡ ಉದ್ಘಾಟನೆ

ಮಂಜೇಶ್ವರ: ಪಂಚಾಯತ್ ವತಿಯಿಂದ ಬಡಾಜೆ ಶಾಲೆಗೆ ದೊರ ಕಿದ ಸುಮಾರು 10 ಲಕ್ಷ ರೂ.ನಷ್ಟು ಅನುದಾನ ಬಳಸಿ ನಿರ್ಮಿ ಸಲಾದ ಶಾಲಾ ಕಟ್ಟಡ ಮತ್ತು ಇತರ ಅಭಿವೃದ್ಧಿ ಕಾರ್ಯಗಳ ಉದ್ಘಾಟನಾ ಕಾರ್ಯ ಕ್ರಮ ಜರಗಿತು. ಪಂಚಾಯತ್ ಅಧ್ಯಕ್ಷೆ ಜೀನ್ ಲವಿನಾ ಮೊಂತೆರೋ ಉದ್ಘಾಟಿಸಿದರು. ತರಗತಿ ಕೊಠಡಿಯ ಉದ್ಘಾಟನೆಯನ್ನು ಪಂ. ಉಪಾಧ್ಯಕ್ಷ ಮೊಹಮ್ಮದ್ ಸಿದ್ದಿಕ್. ಬಿ ನಿರ್ವ ಹಿಸಿ ದರು. ಮುಖ್ಯ ಅತಿಥಿಗಳಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಯಾದವ್ ಬಡಾಜೆ, ಪಿ.ಇ.ಸಿ ಸೆಕ್ರೆಟರಿ ಶಂಕರ ನಾರಾಯಣ ಭಟ್, ರಝಾಕ್ ಕಿಟ್ಟ …