ಬದಿಯಡ್ಕದಲ್ಲಿ ಓಣಂ ಸಿರಿ ಕಾರ್ಯಕ್ರಮ

ಬದಿಯಡ್ಕ: ಬದಿಯಡ್ಕ ಟ್ರೇಡರ್ಸ್ ಆಶ್ರಯದಲ್ಲಿ ಓಣಂ ಸಿರಿ ಕಾರ್ಯಕ್ರಮ ನಿನ್ನೆ ಇರಾ ಸಭಾಭವನದಲ್ಲಿ ಜರಗಿತು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಬದಿಯಡ್ಕ ಘಟಕ ಅಧ್ಯಕ್ಷ ನರೇಂದ್ರ ಬಿ. ಉದ್ಘಾಟಿಸಿದರು. ಹಿರಿಯ ವ್ಯಾಪಾರಿ ಪಾಂಡುರಂಗ ಪ್ರಭು ಅಧ್ಯಕ್ಷತೆ ವಹಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಯೋಜನಾಧಿಕಾರಿ ದಿನೇಶ್ ಮುಖ್ಯ ಅತಿಥಿಯಾಗಿದ್ದರು. ಉದ್ಯಮಿ ಹರೀಶ್ ರೈ ಪುತ್ರಕಳ, ಪ್ರತಿಭೆ ಪ್ರವಿಶಾ ಪೊಡಿಪ್ಪಳ್ಳರನ್ನು ಅಭಿನಂದಿಸಲಾಯಿತು. ರಮಾನಾಥ ರೈ, ರವಿ ನವಶಕ್ತಿ, ರತ್ನಾಕರ ಒಡಂಗಲ್ಲು, ತಾರನಾಥ ರೈ, ಬ್ರಯಾನ್, ಉಮೇಶ್ ರೈ, …

ರಾಷ್ಟ್ರೀಯ ಹೆದ್ದಾರಿ ಅಪಘಾತದಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಪ್ರಕರಣ: ಸಮಗ್ರ ತನಿಖೆ ನಡೆಸಬೇಕು- ನ್ಯಾ. ಕೆ. ಶ್ರೀಕಾಂತ್

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರಿಬ್ಬರು ಮೊಗ್ರಾಲ್ ಪುತ್ತೂರು ಬಳಿ ಕ್ರೈನ್‌ನ ಬಕೆಟ್ ತುಂಡಾಗಿ ಕೆಳಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ಕಲ್ಲಿಕೋಟೆ ವಲಯ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಆಗ್ರಹಪಟ್ಟಿದ್ದಾರೆ. ನಿರ್ಮಾಣ ಕೆಲಸದಲ್ಲಿ  ಕಾರ್ಮಿಕರಿಗೆ ಅಗತ್ಯದ ಸುರಕ್ಷಾ ವ್ಯವಸ್ಥೆ ಏರ್ಪಡಿಸುವಲ್ಲಿ ಗುತ್ತಿಗೆ ಸಂಸ್ಥೆಯ ವತಿಯಿಂದ ನಿರ್ಲಕ್ಷ್ಯ ಉಂಟಾಗಿತ್ತೇ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಮಾತ್ರವಲ್ಲ ನಿರ್ಮಾಣ ಕೆಲಸದ ಮೇಲ್ನೋಟ ವಹಿಸುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ …

ಪೈವಳಿಕೆ ಪಂಚಾಯತ್ 8ನೇ ವಾರ್ಡ್ ಬಿಜೆಪಿ ಸಮಾವೇಶ

ಪೈವಳಿಕೆ: ಪಂಚಾಯತ್‌ನ 8ನೇ ವಾರ್ಡ್ ಬೆರಿಪದವು ಸಮ್ಮೇಳನವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಉದ್ಘಾಟಿಸಿದರು. ಸೌಲಭ್ಯ ವಂಚಿತ ಪೈವಳಿಕೆ ಪಂಚಾಯತ್ ಅಭಿವೃದ್ಧಿಶೂನ್ಯವಾಗಿದೆ ಎಂದು ಇದಕ್ಕೆ ಇಲ್ಲಿ ಆಡಳಿತ ನಡೆಸುತ್ತಿರುವ ಪಕ್ಷಗಳು ಕಾರಣವೆಂದು ಅವರು ದೂರಿದರು. ಬೂತ್ ಸಮಿತಿ ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., ಪಂ. ಸದಸ್ಯೆ ಜಯಲಕ್ಷ್ಮಿ ಭಟ್, ಮಂಡಲ ಸಮಿತಿ ಸದಸ್ಯ ಸುಬ್ರಹ್ಮಣ್ಯ ಭಟ್, ನೋರ್ತ್ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ರೈ …

15ರ ಹರೆಯದ ಬಾಲಕಿಯ ನಗ್ನ ಚಿತ್ರ ಪಡೆದು ಬೆದರಿಕೆಯೊಡ್ಡಿ ಕಿರುಕುಳ : ಮಹಿಳೆ ಸಹಿತ ಮೂವರ ವಿರುದ್ಧ ಕೇಸು; ಇಬ್ಬರ ಬಂಧನ

ಕಾಸರಗೋಡು: ಇನ್‌ಸ್ಟಾ ಗ್ರಾಂನಲ್ಲಿ ಪರಿಚಯಗೊಂಡ ೧೫ರ ಹರೆಯದ ಬಾಲಕಿಯನ್ನು ಎರ್ನಾಕುಳಂಗೆ ಕರೆದೊಯ್ದು ಕಿರುಕುಳ ನೀಡಿದ ಆರೋಪದಂತೆ    ಯುವತಿ ಸಹಿತ ಮೂವರ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಶೇಣಿ ನಿವಾಸಿಗಳಾದ ಜಾಸಿರ್, ಸಕೀರ್ ಎಂಬಿವರು ಬಂಧಿತ ಆರೋಪಿಗಳಾಗಿ ದ್ದಾರೆ. ಯುವತಿಯ ಬಂಧನಕ್ಕಾಗಿ ಕ್ರಮ ಕೈಗೊಳ್ಳಲಾಗಿದೆಯೆಂದು     ಪೊಲೀಸರು ತಿಳಿಸಿದ್ದಾರೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿ ಯನ್ನು ಪುಸಲಾಯಿಸಿದ ಆರೋಪಿ ಗಳು ಆಕೆಯ ನಗ್ನ ಚಿತ್ರಗಳನ್ನು ಪಡೆದು ಕೊಂಡಿದ್ದರೆನ್ನಲಾಗಿದೆ. ಬಳಿಕ ಬಾಲಕಿಗೆ …

ಕೈಕಂಬ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಅಪಘಾತ: ಮೀನಿನ ಟೆಂಪೋ ಢಿಕ್ಕಿ ಹೊಡೆದು ಮೂವರಿಗೆ ಗಂಭೀರ ಗಾಯ

ಉಪ್ಪಳ: ಇಲ್ಲಿನ ಕೈಕಂಬ ರಾಷ್ಟ್ರೀ ಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ೪ ಗಂಟೆಗೆ ಸಂಭವಿಸಿದ ವಾಹನ ಅಪ ಘಾತದಲ್ಲಿ ಮೂರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಮೀನುಸಾಗಾಟ ಟೆಂಪೋವೊಂದರ ಚಾಲಕ ತಮಿಳು ನಾಡಿನ ನಾಗರ್‌ಕೋವಿಲ್ ಎಡಲ ಕ್ಕುಡಿ ಕಪೆ ರೋಡ್‌ನ ಮೊಹಮ್ಮದ್ ರಿಯಾಸ್ (35), ಕ್ಲೀನರ್ ಆಲಪ್ಪುಳ ಪುನ್ನಪ್ರ ಮನ್ನಾಪರಬು ನಿವಾಸಿ ಎ. ರಾಜ (72) ಸಹಿತ ಮೂವರು ಗಾಯಗೊಂಡಿ ರುವುದಾಗಿ ತಿಳಿದು ಬಂದಿದೆ. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಾಸರಗೋಡು ಭಾಗದಿಂದ ಮಂಗಳೂರಿನತ್ತ ತೆರಳುತ್ತಿದ್ದ ಮೀನು …

ವರದಕ್ಷಿಣೆಯಾಗಿ ನೀಡಿದ ಚಿನ್ನ ಕಡಿಮೆ: ಮೂರು ಬಾರಿ ತಲಾಖ್ ನುಡಿದು ವಿವಾಹ ವಿಚ್ಛೇಧನ; ಆದೂರಿನಲ್ಲಿ ಮತ್ತೊಂದು ಪ್ರಕರಣ ದಾಖಲು

ಮುಳ್ಳೇರಿಯ: ಹೆಚ್ಚುವರಿ ವರದಕ್ಷಿಣೆಗಾಗಿ ಒತ್ತಾಯಿಸಿರುವುದಲ್ಲದೆ ನೀಡಿರುವ ಚಿನ್ನ ಕಡಿಮೆಯಾಯಿತೆಂಬ ಹೆಸರಲ್ಲಿ ಮೂರು ಬಾರಿ ತಲಾಖ್ ನುಡಿದು ವಿವಾಹ ವಿಚ್ಛೇಧನ  ನಡೆಸಿರುವುದಾಗಿ ಆರೋಪವುಂಟಾಗಿದೆ. ಮಂಗಳೂರು ಪಂಪ್‌ವೆಲ್ ನಿವಾಸಿ ಎಂ. ಆಯಿಶತ್ ಮುಸೈನ   (25) ಎಂಬಾಕೆ ನೀಡಿದ ದೂರಿನಂತೆ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಯುವತಿಯ ಪತಿ ದೇಲಂಪಾಡಿ ಚಾಮತ್ತಡ್ಕದ ಸಿ. ಅಬ್ದುಲ್ ವಾಜಿದ್ (32),ಈತನ ತಾಯಿ ಮೈಮೂನ (50), ತಂದೆ ಸಿ.ಎ ಮುಹಮ್ಮದ್ ಕುಂಞಿ (50) ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. 2018 ನವಂಬರ್ 11ರಂದು ಅಬ್ದುಲ್ ವಾಜಿದ್ …

ಹಿರಿಯ ಹೋಟೆಲ್ ಮಾಲಕ ನಿಧನ

ಕಾಸರಗೋಡು: ನಗರದ ಹಳೆ ಬಸ್ ನಿಲ್ದಾಣ ಬಳಿ ಲಕ್ಷ್ಮೀ ನಿವಾಸದ ಕೆ. ಜಯನ್ (70) ಎಂಬವರು ನಿಧನ ಹೊಂದಿದರು. ಇವರು ಹಿರಿಯ ಹೋಟೆಲ್ ಮಾಲಕನಾಗಿದ್ದರು. ಮೃತರು ಪತ್ನಿ ಸಾವಿತ್ರಿ, ಮಕ್ಕಳಾದ ಅಭಿಜಿತ್, ಶೋಭಿತ್ (ಕುವೈತ್),  ಸ್ನೇಹ, ಅಳಿಯ- ಸೊಸೆಯಂದಿರಾದ ಸುಭಿತ್, ಮಂಜುಷ, ಮಾನಸ, ಸಹೋದರ ಮಾಧವ ತಲಪಾಡಿ, ಸಹೋದರಿ ಬೇಬಿ ದೇರಳಕಟ್ಟೆ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇತರ ಸಹೋ ದರರಾದ ನಾರಾಯಣ, ಗಂಗಾಧರ, ಸಹೋದರಿಯರಾದ ಲಲಿತ, ಸುಮತಿ ಎಂಬವರು ಈ ಹಿಂದೆ ನಿಧನ ಹೊಂದಿ ದ್ದಾರೆ. …

ಸಿಪಿಐ ರಾಜ್ಯ ಕಾರ್ಯದರ್ಶಿಯಾಗಿ ಬಿನೋಯ್ ವಿಶ್ವಂ ಪುನರಾಯ್ಕೆ

ಆಲಪ್ಪುಳ: ಆಲಪ್ಪುಳದಲ್ಲಿ ನಡೆದ ಸಿಪಿಐ ರಾಜ್ಯ ಸಮ್ಮೇಳನದಲ್ಲಿ ಹಿರಿಯ ನೇತಾರ ಬಿನೋಯ್ ವಿಶ್ವಂ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಅವಿರೋಧವಾಗಿ ಪುನರಾಯ್ಕೆ ಗೊಂಡಿದ್ದಾರೆ. ಈ ಹಿಂದೆ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿದ್ದ ಕಾನಂ ರಾಜೇಂದ್ರನ್ ನಿಧನರಾದ ಹಿನ್ನೆಲೆಯಲ್ಲಿ ಅವರು ವಹಿಸಿದ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ಬಿನೋಯ್ ವಿಶ್ವಂ (69)ರನ್ನು ನೇಮಿಸಲಾಗಿತ್ತು. ಆಲಪ್ಪುಳದಲ್ಲಿ ನಿನ್ನೆ ಸಮಾಪ್ತಿಗೊಂಡ ಸಿಪಿಐ ರಾಜ್ಯ ಸಮ್ಮೇಳನದಲ್ಲಿ ಅವರು ಮತ್ತೆ ಪಕ್ಷದ ರಾಜ್ಯ ಕಾರ್ಯದರ್ಶಿಯನ್ನಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಇದರ ಹೊರತಾಗಿ ಸಿಪಿಐ ರಾಜ್ಯ ಕೌನ್ಸಿಲ್ ಸದಸ್ಯರ ಬಲವನ್ನು 101ರಿಂದ …

ರಾತ್ರಿ ಕರ್ತವ್ಯದಲ್ಲಿದ್ದ ಮಹಿಳಾ ಅಧಿಕಾರಿಗೆಕಿರುಕುಳ ಯತ್ನ: ಅರಣ್ಯಾಧಿಕಾರಿ ವಿರುದ್ಧ ಕ್ರಮ

ಕಲ್ಪೆಟ್ಟ: ಮಹಿಳಾ ಅರಣ್ಯಾಧಿಕಾರಿಗೆ ಅದೇ ಇಲಾಖೆಯ ಅಧಿಕಾರಿ ಯೋರ್ವ ಕಿರುಕುಳ ನೀಡಲೆತ್ನಿಸಿದ ಘಟನೆ ನಡೆದಿದೆ. ಸುಗಂಧಗಿರಿ ಸೆಕ್ಷನ್ ಫಾರೆಸ್ಟ್ ಆಫೀಸ್‌ನ ಅಧೀನದಲ್ಲಿರುವ ಮಹಿಳಾ ಅಧಿಕಾರಿ ನೀಡಿದ ದೂರಿನಂತೆ  ವೈತ್ತಿರಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಿಗೂ ದೂರು ನೀಡಲಾಗಿದೆ. ಕಳೆದ ದಿನ ರಾತ್ರಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಮಹಿಳಾ ಅಧಿಕಾರಿ ರಾತ್ರಿ ಕರ್ತವ್ಯ ದಲ್ಲಿದ್ದ ವೇಳೆ ಸೆಕ್ಷನ್ ಫಾರೆಸ್ಟ್ ಆಫೀಸರ್ ರತೀಶ್ ಕುಮಾರ್ ಎಂಬಾತ ಕೊಠಡಿಗೆ ನುಗ್ಗಿ ಕಿರುಕುಳ ನೀಡಲೆತ್ನಿಸಿರುವುದಾಗಿ ದೂರಲಾಗಿದೆ. ಈ …

ವಿಧಾನಸಭಾ ಅಧಿವೇಶನ ಸೋಮವಾರದಿಂದ ರಾಹುಲ್ ಅಧಿವೇಶನದಲ್ಲಿ ಭಾಗವಹಿಸುವ ವಿಷಯದಲ್ಲಿ ಕಾಂಗ್ರೆಸ್‌ನಲ್ಲಿ ಅಪಸ್ವರ

ತಿರುವನಂತಪುರ: ರಾಜ್ಯ ವಿಧಾನಸಭಾ ಅಧಿವೇಶನ ಸೋಮವಾರ ಆರಂಭಗೊಳ್ಳಲಿರುವಂತೆಯೇ ಕಾಂಗ್ರೆಸ್‌ನಿಂದ ಅಮಾನತುಗೊಳಿಸಲ್ಪಟ್ಟ ಶಾಸಕ ರಾಹುಲ್ ಮಾಕೂಟತ್ತಿಲ್ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳುವ ವಿಷಯದಲ್ಲಿ ಕಾಂಗ್ರೆಸ್‌ನಲ್ಲಿ ತೀವ್ರ ಅಪಸ್ವರ ಭುಗಿಲೆದ್ದಿದೆ. ರಾಜಕೀಯ ವಿಷಯ ಅಡಗಿದ್ದರೂ ರಾಹುಲ್ ವಿರುದ್ಧ ಒಂದಕ್ಕಿಂತ ಹೆಚ್ಚು ಯುವತಿಯರು ದೂರು ನೀಡಿರುವ ಹಿನ್ನೆಲೆಯಲ್ಲಿ ರಾಹುಲ್ ವಿಧಾನಸಭೆಗೆ ಆಗಮಿಸಿದ್ದಲ್ಲಿ ಅದನ್ನು ಆಡಳಿತ ಪಕ್ಷದವರು ಒಂದು ಪ್ರಧಾನ ವಿಷಯವನ್ನಾಗಿ ರಾಹುಲ್‌ನ ವಿರುದ್ಧ ಮಾತ್ರವಲ್ಲ, ಕಾಂಗ್ರೆಸ್‌ನ ಮೇಲೂ ಮುಗಿಬೀಳುವ ಸಾಧ್ಯತೆಯಿದೆ. ಇದರಿಂದಾಗಿ ರಾಹುಲ್ ವಿಧಾನಸಭಾ ಅಧಿವೇಶನದಲ್ಲಿ  ಪಾಲ್ಗೊಳ್ಳುವುದು ಬೇಡ ಎಂಬ ನಿಲುವನ್ನು ವಿರೋಧ …