ನಿವೃತ್ತ ಬ್ಯಾಂಕ್ ಉದ್ಯೋಗಿ ನಿಧನ

ಕುಂಬಳೆ: ಬಂಬ್ರಾಣ ನಿವಾಸಿ ಬಿ. ಬಾಲಕೃಷ್ಣ ಶೆಟ್ಟಿ (56) ಎಂಬವರು ನಿಧನಹೊಂದಿದರು. ಇವರು ಕೇರಳ ಬ್ಯಾಂಕ್‌ನ ನಿವೃತ್ತ ಉದ್ಯೋಗಿಯಾಗಿ ದ್ದಾರೆ. ಕಿಡ್ನಿ ಸಂಬಂಧ ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದರು. ನಿನ್ನೆ ಇವರಿಗೆ ಹೃದಯಾಘಾತವುಂಟಾಗಿದ್ದು, ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಪತ್ನಿ ಶಶಿಕಲಾ, ಮಕ್ಕಳಾದ ಚಿತ್ರ, ಶ್ರುತಿ, ಧನ್ಯಶ್ರೀ, ಅಳಿಯ ನವೀನ್‌ಚಂದ್ರ ಆಳ್ವ, ಸಹೋದರ-ಸಹೋದರಿಯರಾದ ಗಂಗಾಧರ ಶೆಟ್ಟಿ, ಶಿವರಾಮ ಶೆಟ್ಟಿ, ಸದಾನಂದ ಶೆಟ್ಟಿ, ಪ್ರಭಾಕರ ಶೆಟ್ಟಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ …

ಯುವಕನಿಗೆ ಇರಿತ

ಕುಂಬಳೆ: ಯುವಕನೋರ್ವ ನಿಗೆ ಇರಿದು ಗಾಯಗೊಳಿಸಿದ ಘಟನೆ ನಡೆ ದಿದೆ.    ಆರಿಕ್ಕಾಡಿ ಓಲ್ಡ್ ರೋಡ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ  ಅಬೂಬಕ್ಕರ್ ಸಿದ್ದಿಕ್ (33)  ಇರಿತದಿಂದ ಗಾಯಗೊಂ ಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ  ಆರಿಕ್ಕಾಡಿ ಕುನ್ನಿಲ್ ಎಂಬಲ್ಲಿನ ಅಂಗಡಿಯ ಮುಂದೆ  ಅಂಗಡಿ ಮಾಲಕ ಮುನೀರ್ ಎಂಬಾತ ಇರಿದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ಕೂಡಲೇ ಅಬೂಬಕರ್ ಸಿದ್ದಿಕ್‌ರನ್ನು ಕುಂಬಳೆ ಜಿಲ್ಲಾ  ಸಹಕಾರಿ ಆಸ್ಪತ್ರೆಗೆ ತಲುಪಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. 

ರಾಷ್ಟ್ರೀಯ ಹೆದ್ದಾರಿ: ಹೊಸಂಗಡಿ ಚೆಕ್‌ಪೋಸ್ಟ್ ನಿವಾಸಿಗಳಿಗೆ ಸಂಚಾರ ಸಮಸ್ಯೆ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು ಇದೇ ವೇಳೆ ಹೆದ್ದಾರಿ ಅಧಿಕಾರಿಗಳ ಅವೈಜ್ಞಾನಿಕ ಕ್ರಮದಿಂ ದಾಗಿ ಮಂಜೇಶ್ವರ, ಹೊಸಂಗಡಿ ಚೆಕ್‌ಪೋಸ್ಟ್ ನಿವಾಸಿಗಳು ಸಂಚಾರ ಸಮಸ್ಯೆ ಎದುರಿಸಬೇಕಾಗಿ ಬಂದಿದೆ ಯೆಂದು ನಾಗರಿಕರು ಆರೋಪಿಸುತ್ತಿ ದ್ದಾರೆ. ಈ ಕಡೆ ೫೦೦ಕ್ಕೂ ಹೆಚ್ಚು ಮನೆಗಳಿದ್ದು, ಕಾಸರಗೋಡು, ಕುಂಬಳೆ, ಉಪ್ಪಳದಿಂದ ಚೆಕ್ ಪೋಸ್ಟ್‌ಗೆ ಬರುವವರು ಹೊಸಂಗಡಿ ಅಂಗಡಿಪದವು ಆಗಿ ನಾಲ್ಕು ಕಿಲೋ ಮೀಟರ್ ಸುತ್ತಿ ಸಂಚರಿಸಿ ತಮ್ಮ ಮನೆಗಳಿಗೆ ಬರುವ ಸ್ಥಿತಿ ಉಂಟಾಗಿದೆ. ತಲಪಾಡಿಯಿಂದ ಮಂಜೇ ಶ್ವರದವರೆಗೆ ೪ ಕಡೆ …

ನಗರದ ಮಾರ್ಕೆಟ್ ರಸ್ತೆಯಲ್ಲಿ ಕಡಿದು ಬಿದ್ದ ವಿದ್ಯುತ್ ತಂತಿ: ತಪ್ಪಿದ ಅನಾಹುತ

ಕಾಸರಗೋಡು: ನಗರದ ಹಳೇ ಬಸ್ ನಿಲ್ದಾಣ ಪರಿಸರದಲ್ಲಿರುವ ಮಾರ್ಕೆಟ್ ರಸ್ತೆಗೆ ವಿದ್ಯುತ್ ತಂತಿ ಕಡಿದು ರಸ್ತೆಗೆ ಬಿದ್ದು ಸಂಭಾವ್ಯ ಬಾರಿ ದೊಡ್ಡ ಅನಾಹುತ ತಪ್ಪಿಹೋಗಿದೆ. ಪಾರ್ಸೆಲ್ ಲಾರಿಯೊಂದು ಈ ರಸ್ತೆ ಮೂಲಕ ಹಾದು ಹೋಗುತ್ತಿದ್ದ ವೇಳೆ ಅದರ ಮೇಲ್ಭಾಗ ರಸ್ತೆ ಮೇಲ್ಗಡೆ ಬಾಗಿದ ಸ್ಥಿತಿಯಲ್ಲಿದ್ದ ವಿದ್ಯುತ್  ಸರ್ವಿಸ್ ತಂತಿ ತಗಲಿ ಅದು ತುಂಡಾಗಿ ರಸ್ತೆಗೆ ಬಿದ್ದಿದೆ. ಬೆಳಗ್ಗಿನ ಸಮಯವಾದುದರಿಂದಾಗಿ ಹೆಚ್ಚಿನ ಅನಾಹುತ ಅದೃಷ್ಟವಶಾತ್ ತಪ್ಪಿಹೋಗಿದೆ. ತಕ್ಷಣ ವಿದ್ಯುತ್ ಇಲಾಖೆಯವರನ್ನು ಕರೆದು ಮಾಹಿತಿ ನೀಡಲಾಯಿತಾದರೂ, ಅವರು ಸಕಾಲದಲ್ಲಿ ಆಗಮಿಸದೇ …

ಹವಾಮಾನ ವೈಪರೀತ್ಯದಿಂದ ಉತ್ಪಾದನೆ ಕುಂಠಿತ : ಬೆಲೆ ಕಡಿಮೆಯಾಗದ ಹಣ್ಣು ಹಂಪಲು

ಕುಂಬಳೆ: ಹಣ್ಣು ಹಂಪಲುಗಳ ಬೆಲೆಯಲ್ಲಿ ಕಳೆದ ಹಲವು ತಿಂಗಳುಗಳಿAದ ಯಾವುದೇ ಕಡಿಮೆಯಾಗದೆ ಅದೇ ರೀತಿ ಮುಂದುವರಿಯುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಹಣ್ಣು ಹಂಪಲುಗಳ ಉತ್ಪಾದನೆ ಕುಂಠಿತಗೊAಡಿರುವುದಾಗಿ ರಖಂ ವ್ಯಾಪಾರಿಗಳು ತಿಳಿಸುತ್ತಿದ್ದಾರೆ. ನಾಡಿನಲ್ಲಿ ಮಾವಿನಹಣ್ಣು ಸೀಸನ್ ಕೊನೆಗೊಂಡೊಡನೆ ಇತರ ಹಣ್ಣು ಹಂಪಲುಗಳು ಭಾರೀ ಪ್ರಮಾಣದಲ್ಲಿ ಮಾರುಕಟ್ಟೆಗೆ ತಲುಪತೊಡಗಿದೆ. ಆದರೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.ಪ್ರತೀ ಹಣ್ಣುಗಳಿಗೆ ಅದರ ಗುಣಮಟ್ಟಕ್ಕೆ ಅನುಸರಿಸಿ ಬೆಲೆ ನಿಗದಿಪಡಿಸಲಾಗುತ್ತಿದೆ. ಆಪಲ್ನ್ನೇ ಮೂರು ವಿಧವಾಗಿ ವಿಭಜಿಸಲಾಗಿದೆ. ಇದಕ್ಕೆ 120ರಿಂದ 200 ರೂ. ವರೆಗೆ ಬೆಲೆಯಿದೆ. ಹವಾಮಾನ ವೈಪರೀ ತ್ಯದಿಂದ …

ಶೋಚನೀಯಾವಸ್ಥೆಯಲ್ಲಿರುವ ಸಾಯಿಮಂದಿರ ಮುಗು ರಸ್ತೆ: ಸಂಚಾರ ಸಂಕಷ್ಟ

ಬದಿಯಡ್ಕ: ನೀರ್ಚಾಲು ಸಾಯಿ ಮಂದಿರದಿಂದ ಮುಗು ರಸ್ತೆ, ಪಾಡ್ಲಡ್ಕ – ಬೇಳ ರಸ್ತೆ ಶೋಚನೀಯ ಸ್ಥಿತಿಯಲ್ಲಿದ್ದು, ಸಂಚಾರಕ್ಕೆ ಸಂಚಕಾರ ಉಂಟಾಗುತ್ತಿದೆ. ೧೭ ವರ್ಷಗಳ ಹಿಂದೆ ಈ ರಸ್ತೆಯನ್ನು ಪಂಚಾಯತ್  ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿತ್ತು. ಆ ಬಳಿಕ ಯಾವುದೇ ದುರಸ್ತಿ ಕಾರ್ಯ ನಡೆಯದಿರುವುದೇ ಈಗಿನ ದುಸ್ಥಿತಿಗೆ ಕಾರಣವೆಂದು ಹೇಳಲಾಗುತ್ತಿದೆ. ಎರಡು ವರ್ಷದ ಹಿಂದೆ ತೇಪೆ ಹಚ್ಚಲಾಗಿದ್ದರೂ ಯಾವುದೇ ಪ್ರಯೋಜನ ಉಂಟಾಗಲಿಲ್ಲವೆನ್ನಲಾಗಿದೆ. ಅಲ್ಲಲ್ಲಿ ಡಾಮರು ಎದ್ದುಹೋಗಿ ಹೊಂಡ ಸೃಷ್ಟಿಯಾಗಿದೆ. ದಿನನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಕಿಳಿಂಗಾರು ಶಾಲೆ, …

ಗಲ್ಫ್ ಉದ್ಯೋಗಿ ಮನೆಯಿಂದ ಕಳವಿಗೆತ್ನ: ಕರ್ನಾಟಕದ ಇಬ್ಬರ ಸೆರೆ

ಕಾಸರಗೋಡು: ಪುಲ್ಲೂರು ನಿವಾಸಿ ಹಾಗೂ ಗಲ್ಫ್ ಉದ್ಯೋಗಿ ಯಾಗಿರುವ ಪದ್ಮರಾಜನ್ ಎಂಬವರ ಮನೆಯಲ್ಲಿ ಅಗೋಸ್ತ್ ೨೫ರಂದು ರಾತ್ರಿ ಕಳವಿಗೆತ್ನಿಸಿದ ಪ್ರಕರಣದ ಇಬ್ಬರನ್ನು ಕಾಸರಗೋಡು ಎಎಸ್‌ಪಿ ನಂದಗೋಪನ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಹಲವು ಕಳವು ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಕರ್ನಾಟಕ ಗಡಿಯ ಮುರತ್ತಣೆ ನಿವಾಸಿ ಶಿಹಾಬ್ (38) ಮತ್ತು ದೇರಳಕಟ್ಟೆಯ ಅಬ್ದುಲ್ ಮುದಾಸೀರ್ (28) ಬಂಧಿತ ಆರೋಪಿಗಳು. ಪದ್ಮನಾಭನ್‌ರ ಮನೆಗೆ ರಾತ್ರಿ ಈ ಇಬ್ಬರು ಆರೋಪಿಗಳು ನುಗ್ಗಿ   ಬಾಗಿಲನ್ನು ಒಡೆಯುತ್ತಿದ್ದ ವೇಳೆ ಸದ್ದುಕೇಳಿ ಪದ್ಮನಾಭನ್‌ರ ಪತ್ನಿ ಸೌದಾಮಿನಿ ಎಚ್ಚೆತ್ತು …

ಬೆಳ್ಳೂರು ಪಂ. ಮತದಾರರ ಪಟ್ಟಿಯಲ್ಲಿ ವಂಚನೆಎಂಬ ಸಿಪಿಎಂನ ಆರೋಪ ಸುಳ್ಳು- ಬಿಜೆಪಿ

ಬೆಳ್ಳೂರು: ಸ್ಥಳೀಯಾಡಳಿತ ಚುನಾವಣೆಗೆ ಸಂಬಂಧಿಸಿ ಪ್ರಕಟಿಸಲಾದ ಬೆಳ್ಳೂರು ಗ್ರಾಮ ಪಂಚಾಯತ್‌ನ ಮತದಾರರ ಪಟ್ಟಿಯಲ್ಲಿ ವಂಚನೆ ನಡೆದಿದೆ ಎಂಬ ಸಿಪಿಎಂನ ಆರೋಪ ಸುಳ್ಳು ಎಂಬುದಾಗಿ ಬಿಜೆಪಿ ಬೆಳ್ಳೂರು ಪಂಚಾಯತ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಚುನಾವಣೆಯಲ್ಲಿ ಎದುರಿಸಬೇಕಾದ ಸೋಲನ್ನು ಮುಂಗಡವಾಗಿ ತಿಳಿದುಕೊಂಡ ಸಿಪಿಎಂ ಇಂತಹ ಆರೋಪ ಹೊರಿಸುತ್ತಿದೆಯೆಂದೂ ಬಿಜೆಪಿ ತಿಳಿಸಿದೆ. ಕಳೆದ ಐದು ವರ್ಷಗಳಿಂದ ಪಂಚಾಯತ್‌ನಲ್ಲಿ ಸಮಗ್ರ ಅಭಿವೃದ್ಧಿ ನಡೆಸಿ ಮುಂದೆ ಸಾಗುತ್ತಿರುವ ಬಿಜೆಪಿ ನೇತೃತ್ವದ ಆಡಳಿತ ಸಮಿತಿ ಜನರಿಂದ ಮೆಚ್ಚುಗೆಗಳಿಸಿದೆ. ಹೀಗಿರುವಾಗ ಇರುವ ಸೀಟು ಕೂಡಾ ನಷ್ಟಗೊಳ್ಳಬಹುದೆಂಬ ಭಯದಿಂದ …

ಪ್ಲಾಸ್ಟಿಕ್ ನಿಷೇಧ ಜ್ಯಾರಿಗೊಳಿಸುವ ಹೊಣೆಗಾರಿಕೆ ರಾಜ್ಯ ಸರಕಾರಕ್ಕೂ ಇದೆ- ಹೈಕೋರ್ಟ್

ಕೊಚ್ಚಿ: ಏಕಬಾರಿ ಉಪಯೋಗಿಸುವ ಪ್ಲಾಸ್ಟಿಕ್  ಸಾಮಗ್ರಿಗಳ ಮೇಲೆ ಹೇರಲಾಗಿರುವ ನಿಷೇಧವನ್ನು ಜ್ಯಾರಿಗೊಳಿಸುವ ಹೊಣೆಗಾರಿಕೆ ರಾಜ್ಯ ಸರಕಾರವೂ ಹೊಂದಿದೆ ಎಂದು ರಾಜ್ಯ ಹೈಕೋರ್ಟ್ ಹೇಳಿದೆ. ಏಕಬಾರಿ ಉಪಯೋಗದ ಪ್ಲಾಸ್ಟಿಕ್ ಸಾಮಗ್ರಿಗಳ ಬಳಕೆಯ ಮೇಲೆ 2019 ನವೆಂಬರ್ 27ರಂದು ರಾಜ್ಯ ಸರಕಾರ ನಿಷೇಧ ಹೇರಿ ಆದೇಶ ಜ್ಯಾರಿಗೊಳಿಸಿತ್ತು. ಅದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ವಿಜು ಎಬ್ರಹಾಂ ವಜಾಗೈದಿದ್ದಾರೆ. ಇನ್ನೊಂದೆಡೆ ಸರಕಾರ ಹೊರಡಿಸಿದ ಆದೇಶವನ್ನು ಜ್ಯಾರಿಗೊಳಿಸುವಂತೆ ಆಗ್ರಹಿಸಿ ಹಲವು ಅರ್ಜಿಗಳು ಹೈಕೋರ್ಟ್‌ಗೆ ಸಲ್ಲಿಸಲಾಗಿತ್ತು. ಇದನ್ನೆಲ್ಲಾ ಪರಿಶೀಲಿಸಿದ ನ್ಯಾಯಾಲಯ ಏಕಬಾರಿ …

ವರ್ಕಾಡಿ ಪಂಚಾಯತ್ನಲ್ಲಿ ರೇಬಿಸ್ ಪ್ರತಿರೋಧ ಚುಚ್ಚುಮದ್ದು ಶಿಬಿರ 15ರಿಂದ

ವರ್ಕಾಡಿ: ಪಂಚಾಯತ್, ಸರಕಾರಿ ಮೃಗಾಸ್ಪತ್ರೆ ಇದರ ಆಶ್ರಯದಲ್ಲಿ ರೇಬಿಸ್ ಪ್ರತಿರೋಧ ಚುಚ್ಚುಮದ್ದು ಶಿಬಿರ ಈ ತಿಂಗಳ 15ರಿಂದ 24ರ ತನಕ ವಿವಿಧ ಕಡೆಗಳಲ್ಲಿ ನಡೆಯಲಿದೆ. 15ರಂದು ಬೆಳಿಗ್ಗೆ 9.30ರಿಂದ ಬೋಳಕಡ, 10.30ರಿಂದ ಪಾವೂರು, 11ರಿಂದ ಪಾವೂರುಕೋಡಿ, 11.45ರಿಂದ ಮುಡಿಮಾರ್, 12.30 ರಿಂದ ಎಂಜಿಎಲ್ಸಿ ಕೆದುಂಬಾಡಿ, 1.15ರಿಂದ ಬೋಳದಪದವು, 2ರಿಂದ ಕೆದುಂಬಾಡಿ ಎಬಿಸಿ ಕ್ಲಬ್, 16ರಂದು ಬೆಳಿಗ್ಗೆ 9.30ರಿಂದ ಕಾಪ್ರಿ ಅಂಗನವಾಡಿ, 10.30ರಿಂದ ತೌಡುಗೋಳಿ ಶಾಲೆ, 11.30ರಿಂದ ಬಟ್ಯಡ್ಕ, 12.30ರಿಂದ ಪಾವಳ, 1.30ರಿಂದ ಬಜಿಲಕರೆ, 17ರಂದು ಬೆಳಿಗ್ಗೆ 9.30ರಿಂದ …