ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಮುಖಮಂಟಪ ಲೋಕಾರ್ಪಣೆ, ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ನಾಳೆ

ಬದಿಯಡ್ಕ: ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ನೂತನ ಮುಖಮಂಟಪ ಲೋಕಾರ್ಪಣೆ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ನಾಳೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸರ್ಧೆಗಳು ಜರಗಲಿವೆ. ನಾಳೆ ಬೆಳಿಗ್ಗೆ 7ರಿಂದ ಸಂಗೀತಾರ್ಚನೆ, 8 ಗಂಟೆಗೆ ದ್ವಾದಶ ನಾಳೀಕೇರ ಶ್ರೀ ಮಹಾಗಣಪತಿ ಹೋಮ, ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಅವರಿಂದ ದೀಪಪ್ರಜ್ವಲನೆ, 8.30ಕ್ಕೆ ಪೂಜೆ, 8.35ರಿಂದ ಚಪ್ಪರ ಮದುವೆ, 8.40ರಿಂದ ತುಳಸಿಹಾರ ನೇಯುವ ಸ್ಪರ್ಧೆ ಮಹಿಳೆಯರಿಗೆ, …

ವಿವಿಧ ಶಾಲೆಗಳಲ್ಲಿ ಸಂದರ್ಶನ

ಅಂಗಡಿಮೊಗರು: ಇಲ್ಲಿನ ಜಿಎಚ್ಎಸ್ಎಸ್ನ ಎಚ್ಎಸ್ಟಿ ಪೊಲಿಟಿಕಲ್ ಸಯನ್ಸ್ (ಜ್ಯೂನಿಯರ್) ವಿಭಾಗದಲ್ಲಿ ಅಧ್ಯಾಪಕ ನೇಮಕಾತಿ ನಡೆಸುವುದಕ್ಕೆ ಸಂದರ್ಶನ ಈ ತಿಂಗಳ 17ರಂದು ಬೆಳಿಗ್ಗೆ 11 ಗಂಟೆಗೆ ಹೈಯರ್ ಸೆಕೆಂಡರಿ ಕಚೇರಿಯಲ್ಲಿ ನಡೆಯಲಿದೆ. 9446461450ರಿಂದ ಹೆಚ್ಚಿನ ಮಾಹಿತಿ ಲಭಿಸುವುದು.ಮೂಡಂಬೈಲು: ಜಿಎಚ್ಎಸ್ ಮೂಡಂಬೈಲುನಲ್ಲಿ ಖಾಲಿ ಇರುವ ಎಲ್ಪಿಎಸ್ಟಿ ಕನ್ನಡ ಹುದ್ದೆ ಭರ್ತಿಗೊಳಿಸಲು ಈ ತಿಂಗಳ 15ರಂದು ಬೆಳಿಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.ಮುಳ್ಳೇರಿಯ: ಆದೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಖಾಲಿ ಇರುವ ಯುಪಿಎಸ್ಟಿ ಮಲೆಯಾಳ, ಜಿಲ್ಲಾ ಪಂಚಾಯತ್ ಪ್ರತ್ಯೇಕ …

ಪತ್ನಿಗೆ ಇರಿದು ಗಾಯಗೊಳಿಸಿ ಪತಿ ನೇಣುಬಿಗಿದು ಆತ್ಮಹತ್ಯೆ

ಕಾಸರಗೋಡು: ಪತ್ನಿಗೆ ಇರಿದು ಗಾಯಗೊಳಿಸಿದ ಬಳಿಕ ಪತಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕುತ್ತಿಕ್ಕೋಲು ಸಮೀಪ ಇಂದು ಬೆಳಿಗ್ಗೆ ನಡೆದಿದೆ. ಕುತ್ತಿಕ್ಕೋ ಲು ಪಯಂದಗಾನಂ ನಿವಾಸಿಯೂ ಕುತ್ತಿಕ್ಕೋಲ್‌ನಲ್ಲಿ ಆಟೋ ಚಾಲಕನಾಗಿರುವ ಸುರೇಶ್ (51) ಆತ್ಮಹತ್ಯೆಗೈದ ವ್ಯಕ್ತಿಯಾಗಿದ್ದಾರೆ.  ಇಂದು ಬೆಳಿಗ್ಗೆ 8.15ರ ವೇಳ ಈ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಸುರೇಶ್ ಪತ್ನಿ ಸಿನಿ (41)ಗೆ ಇರಿದು ಗಾಯಗೊಳಿಸಿದ ಬಳಿಕ ಮನೆಯ ಸ್ಟೇರ್ ಕೇಸ್‌ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಷಯ ತಿಳಿದು  ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.

ಮನೆಯಿಂದ ನಗ-ನಗದು ಕಳವುಗೈದ ಆರೋಪಿ ಸೆರೆ

ಕಾಸರಗೋಡು: ಮನೆಯಿಂದ ನಗ-ನಗದು ಕಳವುಗೈದ ಪ್ರಕರಣದ ಆರೋಪಿಯನ್ನು ವಿದ್ಯಾನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಯು.ಪಿ. ವಿಪಿನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ಕುಂಡುಕೊಳಕೆ ಸಫ್ರೀನಾ ಮಂಜಿಲ್‌ನ ಮೊಹಮ್ಮದ್ ಶಿಹಾಬ್ (32) ಬಂಧಿತ ಆರೋಪಿ.  ಕಳೆದ ಅಗೋಸ್ತ್ ೬ರಂದು ರಾತ್ರಿ ಚೆಂಗಳ ನಾಲ್ಕನೇ ಮೈಲು ರಿಸ್ವಾನ್ ಮಂಜಿಲ್‌ನ ಸತ್ತಾರ್ ಕೆ.ಎ ಎಂಬವರ  ಮನೆಯ ಬೀಗ ಮುರಿದು ಒಳಗೆ ನುಗ್ಗಿ ಕಪಾಟಿನಲ್ಲಿದ್ದ ೧೫ ಪವನ್ ಚಿನ್ನದೊಡವೆ ಮತ್ತು ೫೦ ಸಾವಿರ ರೂ. ನಗದು ಕಳವುಗೈದ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿದೆ.  ಈ …

ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿದೀಪ ಅಳವಡಿಸುತ್ತಿದ್ದ ವೇಳೆ ಕ್ರೇನ್‌ನ ಬಕೆಟ್ ತುಂಡಾಗಿ ಬಿದ್ದು ಇಬ್ಬರು ಕಾರ್ಮಿಕರ ಸಾವು: 8 ತಿಂಗಳಲ್ಲಿ ಜಿಲ್ಲೆಯಲ್ಲಿ  ಪ್ರಾಣ ಕಳೆದುಕೊಂಡದ್ದು 25 ಕಾರ್ಮಿಕರು

ಕಾಸರಗೋಡು:  ನವೀಕರಿಸಿದ ರಾಷ್ಟ್ರೀಯ ಹೆದ್ದಾರಿ-೬೬ರಲ್ಲಿ ದಾರಿದೀಪ ಅಳವಡಿಸುತ್ತಿದ್ದ ವೇಳೆ ಕ್ರೇನ್‌ನ ಬಕೆಟ್ ತುಂಡಾಗಿಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ದಾರುಣ ಘಟನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.  ಊರಾಳುಂಗಲ್ ಲೇಬರ್ ಕಾಂಟ್ರಾಕ್ಟ್ ಕೋ ಆಪರೇಟಿವ್ ಸೊಸೈಟಿಯ ವಿದ್ಯುತ್ ವಿಭಾಗದ ಕಾರ್ಮಿಕರಾದ ವಡಗರೆ ಮಣಿಯೂರು ನಿವಾಸಿ ಅಶ್ವಿನ್ (27) ಮತ್ತು ಮಾಡಾಪಳ್ಳಿಯ ಅಕ್ಷಯ್ (25) ಎಂಬವರು  ಸಾವನ್ನಪ್ಪಿದ ದುರ್ದೈವಿಗಳು.  ನಿನ್ನೆ ಮಧ್ಯಾಹ್ನ 12.30ರ ವೇಳೆ ಈ ದುರ್ಘಟನೆ ನಡೆದಿದೆ. ತಲಪ್ಪಾಡಿಯಿಂದ ಚೆಂಗಳ ತನಕದ ಪ್ರಥಮ ರೀಚ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ  ದಾರಿದೀಪ ಅಳವಡಿಕೆ …

ಅಯ್ಯಪ್ಪ ಸಂಗಮದ ಬೆನ್ನಲ್ಲೇ ಅಲ್ಪಸಂಖ್ಯಾತ ಸಂಗಮ: ವಿರೋಧ ವ್ಯಕ್ತಪಡಿಸಿ ರಂಗಕ್ಕಿಳಿದ ಮುಸ್ಲಿಂ ಲೀಗ್;  ಚುನಾವಣೆ ವೇಳೆಯಲ್ಲೇ ಸರಕಾರದಿಂದ ಓಲೈಕೆ ಯತ್ನದ ಆರೋಪ

ತಿರುವನಂತಪುರ:  ಪಂಪಾದಲ್ಲಿ ಜಾಗತಿಕ ಅಯ್ಯಪ್ಪ ಸಂಗಮ ನಡೆಸಲು ತೀರ್ಮಾನಿಸಿರುವ ಬೆನ್ನಲ್ಲೇ ಅಲ್ಪಸಂ ಖ್ಯಾತ ಸಂಗಮ ಕಾರ್ಯಕ್ರಮ ನಡೆಸುವ ತೀರ್ಮಾನವನ್ನು ರಾಜ್ಯ ಸರಕಾರ ಕೈಗೊಂಡಿದೆ. ಇದರ ದಿನಾಂಕವನ್ನು ನಿಗದಿಪಡಿಸಲಾಗದಿದ್ದರೂ ಅದನ್ನು ಕೊಚ್ಚಿಯಲ್ಲಿ ನಡೆಸಲು ಸರಕಾರ ಉದ್ದೇಶಿಸಿದೆ. ಅಲ್ಪಸಂಖ್ಯಾತ ಸಂಗಮ ನಡೆಸುವ ಸರಕಾರದ ತೀರ್ಮಾನವನ್ನು ವಿರೋಧಿಸಿ ಮುಸ್ಲಿಂ ಲೀಗ್ ರಂಗಕ್ಕಿಳಿದಿದೆ. ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯನ್ನು ಗುರಿಯಾಗಿಸಿಕೊಂಡು ರಾಜಕೀಯ ಲಾಭಕ್ಕಾಗಿ ಸರಕಾರ ನಡೆಸುವ ಕೇವಲ ಒಂದು ಗಿಮಿಕ್ ಮಾತ್ರವೇ ಆಗಿದೆ ಇದು. ಆದ್ದರಿಂದ ಅದನ್ನು ವಿರೋಧಿಸುವ ನಿಲುವನ್ನು ಮುಸ್ಲಿಂ ಲೀಗ್ …

18 ಗ್ರಾಂ ಎಂಡಿಎಂಎ ವಶ ಪ್ರಕರಣ : ಮತ್ತಿಬ್ಬರು ಆರೋಪಿಗಳು ಸೆರೆ

ಕುಂಬಳೆ: 18.240 ಗ್ರಾಂ ಎಂಡಿಎಂಎ ಸಹಿತ ಸೆ. 2ರಂದು ಕುಂಬಳೆ ಪೊಲೀಸರು ಬಂಧಿಸಿದ ಕೊಡ್ಯಮ್ಮೆ ಪೂಕಟ್ಟೆಯ ಅಬ್ದುಲ್ ಅಸೀಸ್ ಎಂಬಾತನಿಗೆ ಮಾದಕವಸ್ತು ತಲುಪಿಸಿದ ಇಬ್ಬರನ್ನು ಕುಂಬಳೆ ಪೊಲೀಸರು ಸೆರೆ ಹಿಡಿದಿದ್ದಾರೆ. ಮಲಪ್ಪುರಂ ಮಾರಾಂಜೇರಿ ನಿವಾಸಿ ವಿಷ್ಣು ಹಾಗೂ ತೃಶೂರು ನಿವಾಸಿಯೂ ಕರ್ನಾಟಕದ ಸುರತ್ಕಲ್‌ನ ಕೂಲ್ ಬಾರ್‌ನಲ್ಲಿ ಕೆಲಸ ನಿರ್ವಹಿಸುವ ಹಬಿ (24)ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಸೆ. ೨ರಂದು ಸೆರೆಗೀಡಾದ ಅಬ್ದುಲ್ ಅಸೀಸ್‌ನ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಫೋನ್ ಪರಿಶೀಲಿಸಿದಾಗ ದ್ವಿತೀಯ ಆರೋಪಿಯಾದ ವಿಷ್ಣುವಿನ ಕುರಿತು ಮಾಹಿತಿ …

ಕೆಂಪುಮಣ್ಣು ಸಾಗಾಟ: 3 ಲಾರಿಗಳ ವಶ; ಚಾಲಕರು ಕಸ್ಟಡಿಗೆ

ಕುಂಬಳೆ: ಅನಧಿಕೃತವಾಗಿ ಕೆಂಪು ಮಣ್ಣು ಸಾಗಿಸುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ಕುಂಬಳೆ ಎಸ್‌ಐ ಪ್ರದೀಪ್ ಕುಮಾರ್ ನೇತೃತ್ವದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೂರು ಲಾರಿಗಳ ಚಾಲಕರನ್ನು ಕಸ್ಟಡಿಗೆ ತೆಗೆಯಲಾಗಿದೆ. ಕುಂಟಂಗೇರಡ್ಕ ನಿವಾಸಿ ಪಸಲ್ (36), ಬಂಬ್ರಾಣದ ತಸ್ರೀಫ್ (25), ಕಳತ್ತೂರಿನ ಅಬ್ದುಲ್ಲ (23) ಎಂಬಿವರು ಕಸ್ಟಡಿಯಲ್ಲಿರುವ ಲಾರಿ ಚಾಲಕರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.ನಿನ್ನೆ ರಾತ್ರಿ ಪೇರಾಲ್ ಕಣ್ಣೂರಿನಿಂದ ಕೆಂಪು ಮಣ್ಣು ಸಾಗಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಐ ನೇತೃತ್ವದಲ್ಲಿ ಪೊಲೀಸರು ತಕ್ಷಣ ನಡೆಸಿದ ಕಾರ್ಯಾಚರಣೆಯಲ್ಲಿ ಕೆಂಪು …

ಕುಂಬಳೆ ರಾಷ್ಟ್ರೀಯ ಹೆದ್ದಾರಿ ಟೋಲ್ ಬೂತ್‌ನ ಮರೆಯಲ್ಲಿ ಕೋಮು ಧ್ರುವೀಕರಣ, ಗಲಭೆಗೆ ಯತ್ನ- ಆರೋಪ

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಕುಂಬಳೆಯಲ್ಲಿ ಸ್ಥಾಪಿಸುವ ಟೋಲ್ ಬೂತ್‌ನ ವಿರುದ್ಧ ನಡೆಯುವ  ಚಳವಳಿಯ ಮರೆಯಲ್ಲಿ ಕೋಮು ದ್ವೇಷ ಹುಟ್ಟಿಸಲು ಹಾಗೂ ಹಿಂದೂ ಸಮಾಜವನ್ನು ಅವಹೇಳನಗೈಯ್ಯಲು ಕೆಲವರು ಗೂಢ ಪ್ರಯತ್ನ ಆರಂಭಿಸಿ ರುವುದಾಗಿ ಆರೋಪಿಸಿ  ಕುಂಬಳೆಯ ಸಾಮಾಜಿಕ  ಕಾರ್ಯಕರ್ತ ಹಾಗೂ ಉದ್ಯಮಿಯಾಗಿರುವ ವಿಕ್ರಂ ಪೈ ಯವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ  ದೂರು ಸಲ್ಲಿಸಿದ್ದಾರೆ.  ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಶೀಘ್ರ ಕೈಗೊಳ್ಳಬೇ ಕೆಂದು ಅವರು ಒತ್ತಾಯಿಸಿದ್ದಾರೆ.  ಟೋಲ್ ಬೂತ್ ವಿರುದ್ಧದ ಚಳವಳಿ ಯಂಗವಾಗಿ  ಹಿಂದೂ ಗಳನ್ನು ಕೊಳ್ಳೆ ಹೊಡೆಯುವವರಾಗಿ …

ನಾಪತ್ತೆಯಾಗಿದ್ದ ವೃದ್ಧ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ನಾಪತ್ತೆಯಾದ ವೃದ್ದ ನೇಣು ಬಿಗಿದು ಮೃತಪಟ್ಟ ಸ್ಥಿತಿ ಯಲ್ಲಿ ಮೃತದೇಹ ಪತ್ತೆಯಾಗಿದೆ. ಬೇಡಡ್ಕ ಕೊಳತ್ತೂರು ನಿವಾಸಿ ಕೃಷಿಕ ಇ. ಕುಮಾರನ್ ನಾಯರ್ (83) ಮೃತಪಟ್ಟವರು. ಇವರ ಮೃತದೇಹ ಮನೆಯ ಸಮೀಪ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಂಗಳವಾರ ದಿಂದ ಇವರು ನಾಪತ್ತೆಯಾಗಿದ್ದರು. ನಿನ್ನೆ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ. ಮೃತರು ಪತ್ನಿ ಜಾನಕಿ, ಮಕ್ಕಳಾದ ಸತಿ, ಸುಜಾತ, ಸುನಿಲ್, ಅಳಿಯಂದಿರಾದ ಅರವಿಂದಾಕ್ಷನ್, ಚಂದ್ರನ್, ಸೊಸೆ ಪ್ರಮೀಳ,  ಸಹೋದರಿಯರಾದ ಪೊನ್ನಮ್ಮ, ಚೋಯಿಚ್ಚಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.