ಚಿಕಿತ್ಸಾ ಸಹಾಯಕ್ಕಾಗಿ ಕಾದು ನಿಲ್ಲದೆ ಬಿಂದು ನಿಧನ

ಕಾಸರಗೋಡು: ಕೂಡ್ಲು ಜಗನ್ನಾಥ ಶೆಟ್ಟಿ ನಗರ ಸೂರ್ಲು ಹೌಸ್‌ನ ಸುಬ್ರಹ್ಮಣ್ಯ ಮಲ್ಯರ ಪತ್ನಿ ಬಿಂದುರಾಣಿ ಬಿ.ಎಂ. (42) ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಲಿಪ್ ಟೋಸ್ಪಿರೋಸಿಸ್ ರೋಗದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಭಾರೀ ವೆಚ್ಚ ತಗಲುವ ಚಿಕಿತ್ಸೆಗಾಗಿ ಮೊತ್ತ ಸಂಗ್ರಹಿಸುವುದಕ್ಕೆ ಕುಟುಂಬ ಸದಸ್ಯರು ಯತ್ನ ಮುಂದುವರಿಸುತ್ತಿದ್ದ ಮಧ್ಯೆ ನಿಧನ ಸಂಭವಿಸಿದೆ. ಕಾಸರಗೋಡು ಹಳೆ ಬಸ್ ನಿಲ್ದಾಣದ ಶ್ರೀಲಕ್ಷ್ಮಿ ಟೈಲರಿಂಗ್ ಶಾಪ್ ನೌಕರೆಯಾಗಿ ದ್ದರು. ಮೃತರು ತಾಯಿ ನಿರ್ಮಲಾ ನಾಯಕ್, ಪುತ್ರ ಶ್ರೀನಿವಾಸ ಮಲ್ಯ, ಸಹೋದರಿ ಸಂಗೀತ ಶೆಣೈ ಹಾಗೂ …

ಮಾದಕವಸ್ತು ಸಹಿತ ಸೆರೆ

ಕಾಸರಗೋಡು: ಎಂಡಿಎಂಎ ಹಾಗೂ ಗಾಂಜಾ ಸಹಿತ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಾಣತ್ತೂರು ನೆಲ್ಲಿಕುನ್ನು ಪನ್ನಿಕುನ್ನು ನಿವಾಸಿ ಸಜಲ್‌ಶಾಜಿ (23) ಎಂಬಾತ ಬಂಧಿತ ಆರೋಪಿ. ಈತನನ್ನು ರಾಜಪುರಂ ಎಸ್‌ಐ ಕೆ. ಲತೀಶ್, ಬೇಕಲ ಡಿವೈಎಸ್‌ಪಿ ವಿ.ವಿ. ಮನೋಜ್‌ರ ಸ್ಕ್ವಾಡ್ ಸೆರೆ ಹಿಡಿದಿದೆ. ನಿನ್ನೆ ಸಂಜೆ ಪಾಣತ್ತೂರು ಬಸ್ ನಿಲ್ದಾಣದಿಂದ ಈತನನ್ನು ಸೆರೆ ಹಿಡಿಯಲಾಗಿದೆ. ಈತನ ಕೈಯಿಂದ 0.790 ಗ್ರಾಂ ಎಂಡಿಎಂಎ ಹಾಗೂ 6.740 ಗ್ರಾಂ ಗಾಂಜಾ ವಶಪಡಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.

ಕುಂಬಳೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದ ಮರಗಳ ರೆಂಬೆ ಕಡಿದು ತೆರವು: ಮರದಲ್ಲಿದ್ದ ಹಕ್ಕಿಗಳು ವಾಸಸ್ಥಳವಿಲ್ಲದೆ ಕಂಗಾಲು

ಕುಂಬಳೆ: ಕುಂಬಳೆ ಪೇಟೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗಿ ಕಾಡುತ್ತಿದ್ದ ಮರಗಳ ರೆಂಬೆಗಳನ್ನು ಕೆಎಸ್‌ಇಬಿ ಅಧಿಕಾರಿಗಳು ಕಡಿದು ತೆಗೆದಿದ್ದಾರೆ. ಕುಂಬಳೆ ಪೇಟೆಯಲ್ಲಿ ಬದಿಯಡ್ಕ ಭಾಗಕ್ಕೆ ತೆರಳುವ ರಸ್ತೆ ಬದಿ ಆಟೋ ರಿಕ್ಷಾ ನಿಲ್ದಾಣ  ಸಮೀಪವಿದ್ದ ಮರಗಳ ರೆಂಬೆಗಳನ್ನು ಕಡಿದು ತೆಗೆಯಲಾಯಿತು. ಈ ಮರಗಳು ಎತ್ತರಕ್ಕೆ ಬೆಳೆದು ಅದರ ರೆಂಬೆಗಳು ವಿದ್ಯುತ್ ತಂತಿಗಳಿಗೆ ಸ್ಪರ್ಶಿಸುತ್ತಿದ್ದವು. ಈ ಮರದಡಿಯಲ್ಲಿ ಕಾಲುದಾರಿಯಲ್ಲೇ ಶಾಲಾ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ನಡೆದು ಹೋಗುತ್ತಿದ್ದರು. ಮರದ ರೆಂಬೆಗಳು  ವಿದ್ಯುತ್ ತಂತಿಗೆ ಸ್ಪರ್ಶಿಸುವ  ವೇಳೆ ಅದರ ಕೆಳಗೆ ನಡೆದು ಹೋಗುವವರಿಗೆ …

ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಪ್ರಮಾಣವಚನ ಸ್ವೀಕಾರ

ನವದೆಹಲಿ: ಭಾರತದ 15ನೇ ಉಪರಾಷ್ಟ್ರಪತಿಯಾಗಿ ಚಂದ್ರಾಪುರಂ ಪೊನ್ನು ಸ್ವಾಮಿ ರಾಧಾಕೃಷ್ಣನ್ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸರಳ ಸಮಾರಂ ಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಸಿ.ಪಿ. ರಾಧಾಕೃಷ್ಣನ್‌ರಿಗೆ ಪ್ರಮಾಣವಚನ ಬೋಧಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಸೇರಿದಂತೆ ಹಲವು ಕೇಂದ್ರ ಸಚಿವರು ಗಳು, ಒಡಿಸಾದ ಮುಖ್ಯಮಂತ್ರಿ ಮೋಹನ್ ಚರಣ್ ಮಾಜಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ವಿವಿಧ ರಾಜ್ಯಗಳ ರಾಜ್ಯಪಾಲರು, ಎನ್‌ಡಿಎ ಘಟಕ …

ಐಲದಲ್ಲಿ ತೀವ್ರಗೊಂಡ ಕಡಲ್ಕೊರೆತ : ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಭೇಟಿ

ಉಪ್ಪಳ: ಐಲ ಸಮುದ್ರತೀರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಬೆಸ್ತರ ಮನೆಗಳು, ತೆಂಗಿನಮರಗಳು ನಾಶವಾಗುತ್ತಿವೆ. ಜನಪ್ರತಿನಿಧಿಗಳಿಗೆ, ಸ್ಥಳೀಯ ಸರಕಾರಿ ಕಚೇರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪರಿಹಾರ ಉಂಟಾಗಿಲ್ಲವೆಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್.ರಲ್ಲಿ ಮೀನು ಕಾರ್ಮಿಕರು ತಮ್ಮ ನೋವನ್ನು ತೋಡಿಕೊಂಡರು. ಸ್ಥಳೀಯರ ಭಯವನ್ನು ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಲು  ಜಿಲ್ಲಾಧಿಕಾರಿಯವರ ಗಮನಕ್ಕೆ ಈ ವಿಷಯವನ್ನು ತರುವುದಾಗಿ ಅಶ್ವಿನಿ ಭರವಸೆ ನೀಡಿದರು. ಗೋಪಾಲ ಎಸ್.ಐಲ್, ಪದ್ಮಾವತಿ ಟೀಚರ್, ನಿಶಾ ರೇಖಾ ಐಲ, ದುರ್ಗಾಪರಮೇಶ್ವರಿ …

ಇಸ್ರೇಲ್ ಆಕ್ರಮಣ: ಡಿಫಿಯಿಂದ ಪ್ರತಿಭಟನೆ

ಮಂಜೇಶ್ವರ: ಖತ್ತರ್ ದೇಶದ ಮೇಲೆ ಇಸ್ರೇಲ್ ನಡೆಸಿದ ಆಕ್ರಮಣವನ್ನು ಖಂಡಿಸಿ ಡಿವೈಎಫ್‌ಐ ನೇತೃತ್ವದಲ್ಲಿ ಹೊಸಂಗಡಿ ಯಲ್ಲಿ ಪ್ರತಿಭಟನೆ ನಡೆಸಲಾಯಿತು. ಡಿಫಿ ಜಿಲ್ಲಾ ಜೊತೆ ಕಾರ್ಯದರ್ಶಿ ಸಾದಿಕ್ ಚೆರುಗೋಳಿ ಉದ್ಘಾಟಿಸಿದರು. ಆಕಾಶ್ ಪೈವಳಿಕೆ ಅಧ್ಯಕ್ಷತೆ ವಹಿಸಿದರು. ಸಿಐಟಿಯು ಮುಖಂಡ ಪ್ರಶಾಂತ್ ಕನಿಲ, ರೈತಸಂಘದ ಮುಖಂಡ ಕರುಣಾಕರ ಶೆಟ್ಟಿ ಮಾತನಾಡಿದರು. ವಿನಯಕುಮಾರ್ ಬಾಯಾರು ಸ್ವಾಗತಿಸಿದರು.

ಕುಟುಂಬಶ್ರೀ ಸಿಡಿಎಸ್ ಸದಸ್ಯೆ ನಿಧನ

ಪೆರ್ಲ: ಎಣ್ಮಕಜೆ ಪಂಚಾಯತ್ ಕುಟುಂಬಶ್ರೀ ಸಿಡಿಎಸ್ ಸದಸ್ಯೆ, ಹಸಿರು ಕ್ರಿಯಾಸೇನೆ ಕಾರ್ಯಕರ್ತೆ ಮುಂಡಿತ್ತಡ್ಕ ನೂಜಿಲ ನಿವಾಸಿ ಸಿಸಿಲಿಯಾ ಡಿಸೋಜಾ (58) ನಿಧನ ಹೊಂದಿದರು. ಮನೆಯಲ್ಲಿ ಎದೆನೋವು ಕಂಡು ಬಂದ ಹಿನ್ನೆಲೆಯಲ್ಲಿ ಕುಂಬಳೆಯ  ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿ ತಾದರೂ ಪ್ರಾಣ ರಕ್ಷಿಸಲು ಸಾಧ್ಯ ವಾಗಲಿಲ್ಲ. ಕಳೆದ ಪಂ. ಚುನಾವಣೆಯಲ್ಲಿ ಸಿಪಿಎಂನಿಂದ ಸ್ಪರ್ಧಿಸಿದ್ದರು. ಬಳಿಕ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತಿ ಫಿಲಿಪ್ಸ್ ಡಿಸೋಜಾ, ಮಕ್ಕಳಾದ ಲವಿಟಾ (ದುಬೈ), ಅಕ್ಷತ್ ಮೆಲ್ವಿನ್, ಅಕ್ಷತ್ ಸಂದೀಪ್, ಅಳಿಯ ಕಿರಣ್ …

ವರ್ಕಾಡಿಯಲ್ಲಿ ವಿನೋಬಾ ಭಾವೆಯವರ 130ನೇ ಜನ್ಮ ದಿನಾಚರಣೆ

ಮಂಜೇಶ್ವರ: ವರ್ಕಾಡಿಯಲ್ಲಿ ಆಚಾರ್ಯ ವಿನೋಭಾ ಭಾವೆಯವರ 130ನೇ ಜನ್ಮದಿನಾಚರಣೆ ಕಾರ್ಯಕ್ರಮ ಜರಗಿತು. ಹಿರಿಯ ಕಾಂಗ್ರೆಸ್ ಮುಖಂಡ ಪಿ. ಸೋಮಪ್ಪ ಉದ್ಘಾಟಿಸಿ, ಮಾತನಾಡಿ, ವಿನೋಬಾ ಭಾವೆಯವರ ಭೂದಾನ ಚಳವಳಿಯಿಂದ ಪ್ರೇರಿತರಾಗಿ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿ ಭೂ ಮಸೂದೆ ಕಾಯ್ದೆಯನ್ನು ಜ್ಯಾರಿಗೆ ತಂದಿರುವುದಾಗಿ ಅವರು ನುಡಿದರು. ವಿನೋಬಾ ವೆಂಕಟೇಶ ರಾವ್  ಶಾಂತಿ ಸೇನಾ ಫೌಂಡೇಶನ್ ಪ್ರಧಾನ ಸಂಚಾಲಕ ಹರ್ಷಾದ್ ವರ್ಕಾಡಿ ಅಧ್ಯಕ್ಷತೆ ವಹಿಸಿದರು. ದಾಮೋದರ, ಪುರುಷೋತ್ತಮ ಅರಿಬೈಲು, ಹಮೀದ್ ಕಣಿಯೂರು, ಮಹಮ್ಮದ್ ಮಜಾಲು, ವಿನೋದ್ ಕುಮಾರ್ ಪಾವೂರು, ಅಜೀಜ್ ಕಲ್ಲೂರು, …

ಎಡನೀರು ಮಠದಲ್ಲಿ ಬ್ರಹ್ಮೈಕ್ಯಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ವಾರ್ಷಿಕ ಆರಾಧನೆ

ಎಡನೀರು: ಎಡನೀರು ಮಠದಲ್ಲಿ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಪಂಚಮ ವಾರ್ಷಿಕ ಆರಾಧನೆ ನಿನ್ನೆ ನಡೆಯಿತು. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಧ್ವಜಾರೋಹಣಗೈದರು. ಅಖಿಲ ಭಾರತೀಯ ಕುಟುಂಬ ಪ್ರಭೋದಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿದರು. ವಿದ್ವಾನ್ ಎಂ.ಕೆ. ಪ್ರಾಣೇಶ್‌ರಿಂದ ವೇಣುವಾದನ ನಡೆಯಿತು. ಮಧ್ಯಾಹ್ನ ಮಹಾಪೂಜೆ, ವೃಂದಾವನ ಪೂಜೆ, ಸಂಜೆ ಜನ್ಸಾಲೆ ಪ್ರತಿಷ್ಠಾನ ಸಿದ್ಧಾಪುರ ಇವರಿಂದ ಬಡಗುತಿಟ್ಟು ಯಕ್ಷಗಾನ ಬಯಲಾಟ, ಖ್ಯಾತ ಕಲಾವಿದರಿಂದ ತೆಂಕುತಿಟ್ಟು ಯಕ್ಷಗಾನ ಬಯಲಾಟ ಜರಗಿತು.

ಸಿಪಿಐ ರಾಜ್ಯ ಸಮ್ಮೇಳನ: ರಾಜ್ಯಪಾಲರ ಹುದ್ದೆ ಅಗತ್ಯವಿಲ್ಲ-ಠರಾವು

ಆಲಪ್ಪುಳ: ಆಡಳಿತ ನಿರ್ವಹಣೆಗೆ ಅಡ್ಡಿಯಾಗಿರುವ ಹಾಗೂ ವಿಧಾನಸಭೆಗಳ ಅಧಿಕಾರ ವನ್ನು ಕಸಿಯಲೆತ್ನಿಸುವ ರಾಜ್ಯಪಾಲರ ಹುದ್ದೆ ಅಗತ್ಯವಿಲ್ಲವೆಂದು ಸಿಪಿಐ ರಾಜ್ಯ ಸಮ್ಮೇಳನ ಅಭಿಪ್ರಾಯಪಟ್ಟಿದೆ. ಮಾತ್ರವಲ್ಲ ಸಂವಿಧಾನದಲ್ಲಿ ತಿದ್ದುಪಡಿ ನಡೆಸಿ ತುರ್ತಾಗಿ ರಾಜ್ಯಪಾ ಲರನ್ನು ತೆರವುಗೊಳಿಸಬೇ ಕೆಂದೂ ಸಮ್ಮೇಳನ ಒತ್ತಾಯಿಸಿದೆ. ಸಂಘ ಪರಿವಾರ ಹಾಗೂ ಕೇಂದ್ರ ಸರಕಾರದ ಇಚ್ಛೆಗನುಸಾರವಾಗಿ ರಾಜ್ಯಪಾಲರು ವರ್ತಿಸುತ್ತಾರೆ. ಈ ಮೂಲಕ ಫೆಡರಲ್ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವದ  ಹಕ್ಕುಗಳನ್ನು ಕಸಿಯಲು ರಾಜ್ಯಪಾ ಲರು ಪ್ರಯತ್ನಿಸುತ್ತಾರೆಂದೂ ಸಿಪಿಐ ಸಮ್ಮೇಳನ ಆರೋಪಿಸಿದೆ. ಸಿಪಿಐ 25ನೇ ಪಾರ್ಟಿ ಕಾಂಗ್ರೆಸ್‌ನ ಪೂರ್ವಭಾವಿಯಾಗಿ ಸೆ.೮ರಿಂದ …