ಆಟೋರಿಕ್ಷಾಕ್ಕೆ ಕಾರು ಢಿಕ್ಕಿ ಹೊಡೆದು ಅಪಘಾತ: ಆಟೋಚಾಲಕ ಗುರುಸ್ವಾಮಿ ಮೃತ್ಯು

ಪೆರ್ಲ: ರೋಗಿಯನ್ನು ಆಸ್ಪತ್ರೆಗೆ  ಕರೆದುಕೊಂಡು ಹೋಗಿ ಹಿಂತಿರುಗುತ್ತಿದ್ದ ವೇಳೆ ರಿಕ್ಷಾಕ್ಕೆ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಪೆರ್ಲದಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಮಣಿಯಂಪಾರೆ ನಿವಾಸಿ ಆಟೋ ರಿಕ್ಷಾ ಚಾಲಕ ನಾರಾಯಣ ಮೂಲ್ಯ (67) ಮೃತಪಟ್ಟವರು. ಇವರು ನಿನ್ನೆ ರಾತ್ರಿ 8.30ರ ವೇಳೆ ಮನೆಯತ್ತ ತೆರಳುತ್ತಿದ್ದ ವೇಳೆ ಶೇಣಿ ಶಾಲೆ ಬಳಿ ಇವರ ರಿಕ್ಷಾಗೆ ಕಾರು ಢಿಕ್ಕಿ ಹೊಡೆದಿದೆ.  ರಿಕ್ಷಾ ಮಗುಚಿ ಬಿದ್ದು ಗಂಭೀರ ಗಾಯಗೊಂಡ ಚಾಲಕನನ್ನು ಕಾಸರಗೋಡು ಆಸ್ಪತ್ರೆಗೆ ತಲುಪಿಸುವ …

ನಿರ್ಮಾಣ ಹಂತದ ಕ್ವಾರ್ಟರ್ಸ್‌ನಿಂದ ವಿದ್ಯುತ್ ಉಪಕರಣ ಕಳವು

ಕುಂಬಳೆ:  ಪೆರ್ಮುದೆಯಲ್ಲಿ ನಿರ್ಮಾಣ ಹಂತದ ಕ್ವಾರ್ಟರ್ಸ್ ನಿಂದ  ವಿದ್ಯುತ್ ಉಪಕರಣ ಗಳನ್ನು ಕಳವುಗೈದ ಬಗ್ಗೆ ದೂರಲಾ ಗಿದೆ.   ಪೆರ್ಮುದೆ ಸಿಎಂ  ಮಸೀದಿ ಸಮೀಪದ ಕ್ವಾರ್ಟರ್ಸ್ ನಿಂದ ಸುಮಾರು 10 ಸಾವಿರ ರೂಪಾಯಿ ಗಳ ಉಪಕರಣಗಳು ಕಳವಿಗೀಡಾ ಗಿದೆಯೆಂದು ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಸ್ತುತ ಸುಳ್ಯದಲ್ಲಿ ವಾಸಿಸುವ ಉಪ್ಪಳದ ಅಫ್ರಾನ್ ಅಸೀಸ್ ಮೊಹಮ್ಮದ್ ಎಂಬವರು ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಪೆರ್ಮುದೆ ಯಲ್ಲಿ ಮನೆಯೊಂದರಿಂದ  30 ಸಾವಿರ ರೂ. …

ಹೆಬ್ಬಾವನ್ನು ಸೆರೆಹಿಡಿದು ಪದಾರ್ಥ ಮಾಡಿ ಸೇವಿಸಿದ ಇಬ್ಬರ ಬಂಧನ

ಹೊಸದುರ್ಗ: ಹೆಬ್ಬಾವನ್ನು ಹಿಡಿದು ಪದಾರ್ಥ ಮಾಡಿ ಸೇವಿಸಿದ ಇಬ್ಬರು ಯುವಕರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಪಯ್ಯನ್ನೂರು ಬಳಿಯ ಪಾಣಪ್ಪುಳ ಮುಂಡಪ್ಪುರಂ ಉರುಂಬಿಲ್ ಹೌಸ್‌ನ ಯು. ಪ್ರಮೋದ್ (40),  ಚಂದನಂಚೇರಿ ಹೌಸ್‌ನ ಸಿ. ಬಿನೀಶ್ (37) ಎಂಬಿವರನ್ನು ತಳಿಪರಂಬ ಫಾರೆಸ್ಟ್ ರೇಂಜ್ ಆಫೀಸರ್ ಪಿ.ಬಿ. ಸನೂಪ್ ಕುಮಾರ್ ನೇತೃತ್ವದ ತಂಡ ಸೆರೆಹಿಡಿದಿದೆ.  ಮಾತಮಂಗಲಂ ಕುಟ್ಟೂರು ಎಂಬಲ್ಲಿಂದ ಆರೋಪಿ ಗಳು ಹೆಬ್ಬಾವನ್ನು ಸೆರೆಹಿಡಿದಿದ್ದರು. ಬಳಿಕ ಅದನ್ನು ಮನೆಗೆ ತಲುಪಿಸಿ  ಮಾಂಸ ಮಾಡಿದ ಬಳಿಕ ಪದಾರ್ಥ ಮಾಡಿ ಸೇವಿಸಿದ್ದರೆಂದು ದೂರಲಾಗಿದೆ. ಈ ಮಧ್ಯೆ …

ಮದುವೆಯಾಗಿ ಆರು ತಿಂಗಳೊಳಗೆ ನೇಣಿಗೆ ಶರಣಾದ ಯುವತಿ: ಪತಿ, ಅತ್ತೆಯಿಂದ ಹೇಳಿಕೆ ದಾಖಲಿಸಿಕೊಂಡ ಪೊಲೀಸ್

ಕಾಸರಗೋಡು: ಆರು ತಿಂಗಳ ಹಿಂದೆ ಯುವಕನನ್ನು ಪ್ರೀತಿಸಿ ಮದುವೆಯಾದ  ಯುವತಿ ನೇಣು ಬಿಗಿದು ಸಾವಿಗೀಡಾಗಲು ಕಾರಣವೇನೆಂಬ ಬಗ್ಗೆ ಇನ್ನೂ ಸ್ಪಷ್ಟಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪೆರಿಯ ಆಯಂಬಾರ ವಿಲ್ಲಾರಂಪದಿ ಕೊಳ್ಳಿಕ್ಕಾಲ್‌ನ ನಂದನ (21) ಎಂಬಾಕೆಯ ಸಾವಿನ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯಂಗವಾಗಿ  ನಂದನಳ ಫೋನ್ ಸೈಬರ್ ಸೆಲ್‌ನ ಸಹಾಯದೊಂದಿಗೆ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ ನಂದಳ ಪತಿ ಬಾರ ಅರಮಂಗಾನ ಆಲಿಂಗಾಲ್ ತೊಟ್ಟಿಯಿಲ್‌ನ ರಂಜೇಶ್ ಹಾಗೂ ಆತನ ತಾಯಿಯನ್ನು ಮೇಲ್ಪರಂಬ ಪೊಲೀಸರು ತನಿಖೆಗೊಳಪಡಿಸಿದ್ದಾರೆ.  ನಂದನಳಿಗೆ …

ಕಳವು ಪ್ರಕರಣದ ಆರೋಪಿಯನ್ನು ಸೆರೆಹಿಡಿಯಲು ಬಂದ ಕರ್ನಾಟಕ ಪೊಲೀಸ್ ತಂಡದ ಮೇಲೆ ದಾಳಿ

ಕಾಸರಗೋಡು: ಕಳವು ಪ್ರಕರಣದ ಆರೋಪಿಯನ್ನು ಸೆರೆಹಿಡಿಯಲು ಬಂದ ಕರ್ನಾಟಕ ಪೊಲೀಸರನ್ನು ಆರೋಪಿ ಮತ್ತು ಆತನ ಸಂಗಡಿಗರು ಸೇರಿ ದಾಳಿ ನಡೆಸಿ ಅದರ ಪರಿಣಾಮ ಮೂವರು ಪೊಲೀಸರು ಗಾಯಗೊಂಡ ಘಟನೆ ನಡೆದಿದೆ. ಕರ್ನಾಟಕ ಮಲ್ಪೆ ಪೊಲೀಸ್ ಠಾಣೆ ಎಎಸ್‌ಐ ಹರೀಶ್ (35), ಹೆಡ್‌ಕಾನ್ ಸ್ಟೇಬಲ್  ಇ. ಲೋಕೇಶ್ (45) ಮತ್ತು ಅವರಿಗೆ ಸಹಾಯ ಮಾಡಲು ಅವರ ಜತೆಗೆ  ಬಂದಿದ್ದ ಬೇಕಲ ಪೊಲೀಸ್ ಠಾಣೆಯ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ವಿ.ಎಂ. ಪ್ರಸಾದ್ ಕುಮಾರ್ (42) ಎಂಬವರು ಈ ದಾಳಿಯಲ್ಲಿ …

ರಂಗನಟ ಉಪೇಂದ್ರ ಆಚಾರ್ಯ ನಿಧನ

ಬದಿಯಡ್ಕ: ಚಿನ್ನಾಭರಣ ತಯಾರಿಯಲ್ಲಿ ಚಾತುರ್ಯ ಹೊಂದಿದ್ದ ಪಡ್ರೆ ನಿವಾಸಿ ಉಪೇಂದ್ರ ಆಚಾರ್ಯ (71) ನಿಧನ ಹೊಂದಿದರು. ರಂಗನಟರಾಗಿರುವ ಇವರು ಹಲವಾರು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದರು. ಮೃತರು ಪತ್ನಿ ಕಲಾವತಿ, ಮಕ್ಕಳಾದ ಪ್ರಮೋದ್, ರಾಜೇಶ್, ಭುವ ನೇಶ್, ಶೋಭಾ, ಹೇಮಲತಾ, ಸೊಸೆಯಂದಿರಾದ ಭಾನುಶ್ರೀ, ದಿವ್ಯಶ್ರೀ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಆನ್‌ಲೈನ್ ಟ್ರೇಡಿಂಗ್ ಮೂಲಕ 23.72 ಲಕ್ಷ ರೂ. ಲಪಟಾವಣೆ

ಕಾಸರಗೋಡು: ಸಾಮಾಜಿಕ ಮಾಧ್ಯಮದ ಮೂಲಕ ಆನ್‌ಲೈನ್ ಟ್ರೇಡಿಂಗ್ ನಡೆಸಿದಲ್ಲಿ ಭಾರೀ ಲಾಭ ಲಭಿಸಲಿದೆಯೆಂಬ ಭರವಸೆ ನೀಡಿ ವ್ಯಕ್ತಿಯೋರ್ವರಿಂದ 23.72ಕೋಟಿ ರೂ. ಲಪಟಾಯಿಸಿದ ಬಗ್ಗೆ ಕಾಸರ ಗೋಡು ಸೈಬರ್ ಕ್ರೈಂ ಪೊಲೀ ಸ್ ಠಾಣೆಗೆ ದೂರು ನೀಡಲಾಗಿದೆ. ಬಂದಡ್ಕ ನಿವಾಸಿಯಾಗಿರುವ 35ರ ಹರೆಯದ ಯುವಕ ಈ ದೂರು ನೀಡಿದ್ದು, ಅದರಂತೆ ಸೈಬರ್ ಕ್ರೈಂ ಪೊಲೀಸರು ಪ್ರಕರಣ  ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಅಮಿತ ಲಾಭ ನೀಡುವುದಾಗಿ ನಂಬಿಸಿ ವಂಚನೆಗಾ ರರು ಮಾರ್ಚ್ 18 ಮತ್ತು ಜೂನ್ 12ರ …

ವಿಧವೆಯರ, ನಿರಾಶ್ರಿತರಾದ ಮಹಿಳೆಯರನ್ನು ವಿವಾಹ ಭರವಸೆ ನೀಡಿ ದೌರ್ಜನ್ಯ: ಆರೋಪಿ ಸೆರೆ

ಮಲಪ್ಪುರಂ: ವಿವಾಹ ಭರವಸೆ ನೀಡಿ ಮಹಿಳೆಯರನ್ನು ದೌರ್ಜನ್ಯಗೈದು ಅವರ ಚಿನ್ನಾಭರಣ, ಹಣವನ್ನು ಅಪಹರಿಸುವ ಕೃತ್ಯವನ್ನು ನಡೆಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಮಣವಾಳನ್ ರಿಯಾಸ್, ಮುಜೀಬ್ ಎಂಬೀ ಹೆಸರುಗಳಿಂದ ತಿಳಿಯಲ್ಪಡುತ್ತಿರುವ  ಮಲಪ್ಪುರಂ ಎಡಪ್ಪಟ್ಟ ನಿವಾಸಿ ಮುಹಮ್ಮದ್ ರಿಯಾಸ್‌ನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಮಲಪ್ಪುರಂ ನಿವಾಸಿಯಾದ ಮಹಿಳೆಯ ದೂರಿನಂತೆ ಈತ ಈಗ ಸೆರೆಯಾಗಿದ್ದಾನೆ. ವಿಧವೆಯರನ್ನು  ಹಾಗೂ ಆಶ್ರಿತರಿಲ್ಲದ ಮಹಿಳೆಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿವಾಹ ಭರವಸೆ ನೀಡಿ ಲೈಂಗಿಕವಾಗಿ ದೌರ್ಜನ್ಯಗೈದು ಬಳಿಕ ಅವರ ಚಿನ್ನಾಭರಣ ಹಾಗೂ ಹಣವನ್ನು ಅಪಹರಿಸುವುದು …

ಮಧ್ಯರಾತ್ರಿ ಹೊಯ್ಗೆ ಬೇಟೆ: ಕಾರ್ಯಾಚರಣೆ ವೇಳೆ ಹೊಳೆಯಲ್ಲಿ ತೇಲಿಹೋದ ದೋಣಿಯಿಂದ ಬಿದ್ದು ಪೊಲೀಸ್‌ಗೆ ಗಾಯ

ಕಾಸರಗೋಡು: ಮಧ್ಯರಾತ್ರಿ ವೇಳೆ ಹೊಯ್ಗೆ ಬೇಟೆಗೆ ತಲುಪಿದ ಪೊಲೀಸ್ ಹೊಳೆಯಲ್ಲಿ ದೋಣಿಯಿಂದ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಹೊಳೆ ನೀರಿನಲ್ಲಿ ನಿಲ್ಲಿಸಿದ್ದ ದೋಣಿ ಮೇಲೆ ಪೊಲೀಸ್ ಹತ್ತಿ ತಪಾಸಣೆ ನಡೆಸುತ್ತಿದ್ದ ವೇಳೆ ಅದು ಮುಂದೆ ಸಾಗಿದ್ದು, ಇದರಿಂದ ನೀರಿಗೆ ಜಿಗಿದು ಅಪಾಯದಿಂದ ಪಾರಾಗುತ್ತಿದ್ದಂತೆ ಅವರು  ಗಾಯ ಗೊಂಡಿದ್ದಾರೆ. ಕಾಸರಗೋಡು ನಗರ ಠಾಣೆ ವ್ಯಾಪ್ತಿಯಲ್ಲಿ  ಈ ಘಟನೆ ನಡೆದಿದೆ. ಚಂದ್ರಗಿರಿ ಹೊಳೆಯಿಂದ ಹೊಯ್ಗೆ ಸಂಗ್ರಹ ನಡೆಯುತ್ತಿದೆ ಯೆಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಓರ್ವ ಎಸ್.ಐ. ನೇತೃತ್ವದಲ್ಲಿ ಪೊಲೀಸರು ರಾತ್ರಿ …

ಉಪ್ಪಳ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನ ಅನಧಿಕೃತ ನಿಲುಗಡೆ: ಬಸ್‌ಗಳಿಗೆ, ವ್ಯಾಪಾರಿಗಳಿಗೆ ಸಮಸ್ಯೆ

ಉಪ್ಪಳ: ಉಪ್ಪಳ ಬಸ್ ನಿಲ್ದಾಣಕ್ಕೆ ಖಾಸಗಿ ವಾಹನಗಳು ಪ್ರವೇಶಿಸುತ್ತಿರುವುದು ವಿವಿಧ ಸಮಸ್ಯೆಗಳನ್ನು ಉಂಟು ಮಾಡುತ್ತಿರುವುದಾಗಿ ವ್ಯಾಪಾರಿಗಳು ಹಾಗೂ ಪ್ರಯಾಣಿಕರು ದೂರಿದ್ದಾರೆ. ಪಂಚಾಯತ್ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಉಂಟಾಗಿಲ್ಲವೆಂದು ದೂರಲಾಗಿದೆ. ಬಸ್ ನಿಲ್ದಾಣಕ್ಕೆ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಲಾಗಿದ್ದರೂ, ಅದನ್ನು ಉಲ್ಲಂಘಿಸಿ ನಿಲ್ದಾಣದಲ್ಲಿ ಖಾಸಗಿ ವಾಹನಗಳನ್ನು ನಿಲುಗಡೆಗೊಳಿಸಲಾಗುತ್ತಿದೆ. ವ್ಯಾಪಾರಕ್ಕಾಗಿ ಬರುವ ವ್ಯಕ್ತಿಗಳು ತಮ್ಮ ವಾಹನಗಳನ್ನು ಬಸ್ ನಿಲ್ದಾಣದೊಳಗೆ ಯದ್ವಾತದ್ವ ತಂದು ನಿಲ್ಲಿಸುವುದರಿಂದಾಗಿ ಬಸ್‌ಗಳಿಗೆ ನಿಲ್ದಾಣ ಪ್ರವೇಶಿಸಲು ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ …