16ರ ಹರೆಯದ ಬಾಲಕಿ ನಾಪತ್ತೆ

ಬದಿಯಡ್ಕ:  ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ 16ರ ಹರೆಯದ ಬಾಲಕಿ ನಾಪತ್ತೆಯಾದ ಬಗ್ಗೆ  ದೂರಲಾಗಿದೆ. ಈ ಬಗ್ಗೆ ಬಾಲಕಿಯ ತಾಯಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.  ಈ ತಿಂಗಳ 18ರಂದು  ರಾತ್ರಿಯಿಂದ ಬಾಲಕಿ ನಾಪತ್ತೆಯಾಗಿದ್ದಾಳೆನ್ನಲಾಗಿದೆ. ಇದೇ ವೇಳೆ ಬಾಲಕಿ ಸಂಬಂಧಿಕನಾದ ಯುವಕನೊಂದಿಗೆ ತೆರಳಿರುವುದಾಗಿ ಸಂಶಯಿಸಲಾಗುತ್ತಿದೆಯೆಂದು ಹೇಳಲಾಗಿದೆ.

ನೀರ್ಚಾಲು ಬಳಿ ಬೀದಿ ನಾಯಿಗಳ ದಾಳಿ: ಮಗು ಸಹಿತ 6 ಮಂದಿಗೆ ಗಾಯ

ನೀರ್ಚಾಲು: ನೀರ್ಚಾಲು ಪರಿಸರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಉಪಟಳ ತೀವ್ರಗೊಂಡಿ ದೆ. ನಿನ್ನೆ ಪುಟ್ಟ ಮಗು ಸಹಿತ ಆರು ಮಂದಿಗೆ ಬೀದಿ ನಾಯಿಗಳು ಕಡಿದು ಗಾಯಗೊಳಿಸಿವೆ. ನಿನ್ನೆ ಸಂಜೆ 5 ಗಂಟೆಗೆ ಏಣಿಯರ್ಪಿನಲ್ಲಿ ಬೀದಿ ನಾಯಿಗಳು ಜನರ ಮೇಲೆ  ದಾಳಿ ನಡೆಸಿವೆ. ಏಣಿಯರ್ಪು ನಿವಾಸಿ ಆಟೋ ಚಾಲಕ ಹರಿಹರನ್‌ರ ಪುತ್ರಿ ನವಣ್ಯ (3), ಬಿರ್ಮಿನಡ್ಕ ಅಂಗನವಾಡಿ ನೌಕರೆ ಜೋನ್ಸಿ ಯಾನೆ ಅಶ್ವತಿ (48) ಏಣಿಯರ್ಪು ಲೈಫ್ ವಿಲ್ಲಾದ ರಿಸ್ವಾನ (19), ಪುದುಕೋಳಿಯ ಶಾಂತಿ (10), ಚಂದ್ರನ್ (38), …

ಹೊಸಂಗಡಿ ಬಳಿ ಪತ್ತೆಯಾದ ರಕ್ತ ಮನುಷ್ಯರದ್ದಲ್ಲ

ಉಪ್ಪಳ: ಹೊಸಂಗಡಿ ಬಳಿಯ ಅಂಗಡಿಪದವು ದುರ್ಗಿಪಳ್ಳ ಪರಿಸರದಲ್ಲಿ ಇತ್ತೀಚೆಗೆ ಕಂಡುಬಂದ ರಕ್ತ ಮನುಷ್ಯರದ್ದಲ್ಲವೆಂದು ತಿಳಿದುಬಂದಿದೆ.  ಲ್ಯಾಬ್‌ನಲ್ಲಿ ನಡೆಸಿದ ತಪಾಸಣೆ ವೇಳೆ ಇದು  ಪ್ರಾಣಿಯದ್ದಾಗಿದೆಯೆಂದು ತಿಳಿಸಲಾಗಿದೆ.  ದುರ್ಗಿಪಳ್ಳ ಪರಿಸರದ ಎರಡು ಅಂಗಡಿಗಳ ಮುಂದೆ ಇತ್ತೀಚೆಗೆ ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 

ಸುಳ್ಯ ನಿವಾಸಿಗೆ ಒಲಿದ ಕಾರುಣ್ಯ ಲಾಟರಿ

ಕಾಸರಗೋಡು: ಕೇರಳ ರಾಜ್ಯ ಲಾಟರಿಯ ಪ್ರಥಮ ಬಹುಮಾನ ವಾದ ಒಂದು ಕೋಟಿ ರೂಪಾಯಿ ಒಲಿದಿರುವುದು  ಸುಳ್ಯ ತಾಲೂಕಿನ ಉಬರಡ್ಕ ನಿವಾಸಿಗಾಗಿದೆ. ಉಬರಡ್ಕದ ವಿನಯ್ ಕ್ಯಾಟರರ್ಸ್ ಮಾಲಕ ವಿನಯ್  ಯಾವಟೆ ಅವರಿಗೆ ಈ ಬಹುಮಾನ ಬಂದಿದೆ. ಇವರು ಕಳೆದ ಶನಿವಾರ ಡ್ರಾ ನಡೆದ ಕಾರುಣ್ಯ ಲಾಟರಿ ಟಿಕೆಟ್ ಪಡೆದಿದ್ದರು. ಕಾಸರಗೋಡು ಮಧು ಲಾಟರಿ ಏಜೆನ್ಸೀಸ್‌ನ ಲಾಟರಿ ಟಿಕೆಟ್‌ನ್ನು  ಇವರು ಪಂಜಿಕಲ್ಲಿನಿಂದ ಖರೀದಿಸಿದ್ದರು. ಕೇರಳ ಲಾಟರಿ ಬಹು ಮಾನ ಈ ಹಿಂದೆಯೂ ಕರ್ನಾಟಕದ ಹಲವರಿಗೆ ಲಭಿಸಿರುತ್ತದೆ. ಇದೀಗ  ಮತ್ತೊಬ್ಬರಿಗೆ ಪ್ರಥಮ …

ಹೋಟೆಲ್ ವ್ಯಾಪಾರಿ ನಿಧನ

ಉಪ್ಪಳ: ಕೊಂಡೆವೂರು ಮಠ ಬಳಿಯ ನಿವಾಸಿ ಕೇಶವ (70) ಸ್ವಗೃಹದಲ್ಲಿ ನಿಧನರಾದರು. ಇವರು ಹಲವು ವರ್ಷಗಳ ಕಾಲ ಮಂಗಲ್ಪಾಡಿ ಪಂಚಾಯತ್ ಕಚೇರಿ ಕಟ್ಟಡದಲ್ಲಿ ಹೋಟೆಲ್ ವ್ಯಾಪಾರಿಯಾಗಿದ್ದರು. ಕೊಂಡೆವೂರು ಶ್ರೀ ನಿತ್ಯಾನಂದ ಮಠದಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಶಾಂತ, ಮಕ್ಕಳಾದ ಪ್ರಶಾಂತ್, ಪ್ರಜಿತ, ಪವಿತ, ಸೊಸೆ ಮಮತಾ, ಅಳಿಯಂದಿರಾದ ಸುನಿಲ್ ಕಾಸರಗೋಡು, ಪ್ರಸನ್ನ ಕಾಞಂಗಾಡ್, ಸಹೋದರ ಭಾಸ್ಕರ ಪುಳಿಕುತ್ತಿ, ಸಹೋದರಿಯರಾದ ಸಾವಿತ್ರಿ, ನಳಿನಿ, ಶಾಂಭವಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಸಹೋದರ ನಾರಾಯಣ, ಸಹೋದರಿ ಲಕ್ಷಿ÷್ಮÃ …

ಚೆಂಗಳ ಪಂ. ಕೃಷಿಕರ ದಿನಾಚರಣೆ ಪ್ರಹಸನ- ಬಿಜೆಪಿ ಆರೋಪ

ಚೆರ್ಕಳ: ಚೆಂಗಳ ಪಂಚಾಯತ್‌ನ ಕೃಷಿಕರ ದಿನಾಚರಣೆ ಆಡಳಿತ ಪಕ್ಷದ ಕಾರ್ಯಕ್ರಮವಾಗಿ ಬದಲಾಗಿದೆ ಎಂದು ಪಂಚಾಯತ್ ಬಿಜೆಪಿ ಅಧ್ಯಕ್ಷ ಪ್ರಭಾಕರ ಎಡನೀರು ಆರೋಪಿಸಿದ್ದಾರೆ. ಕೃಷಿಕರ ದಿನಾಚರಣೆ ಪಂಚಾಯತ್ ನೇತೃತ್ವದಲ್ಲಿ ನಡೆಯಬೇಕಾಗಿದ್ದು, ಆ ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷದವರನ್ನು ಆಹ್ವಾನಿಸಬೇಕಾಗಿತ್ತು. ಆದರೆ ಬಿಜೆಪಿ ಪ್ರತಿನಿಧಿಗಳಿಗೆ ಯಾವುದೇ ಆಹ್ವಾನ ನೀಡಿಲ್ಲ. ಪಂಚಾಯತ್‌ನ ಆಡಳಿತ ಮಂಡಳಿಯ ಈ ಕ್ರಮ ಖಂಡನೀಯವಾಗಿದೆ ಎಂದು ಪ್ರಭಾಕರ ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವನ್ನು ಸ್ವಂತ ಪಕ್ಷದ್ದೆಂಬ ರೀತಿಯಲ್ಲಿ ನಡೆಸುವ ಮುಸ್ಲೀಂಲೀಗ್ ಆಡಳಿತ ಸಮಿತಿಯ ನಿಲುವು ಅಪಹಾಸ್ಯಕರವಾಗಿದೆ. ಇಂತಹ ನೀತಿಯನ್ನು ಆಡಳಿತ …

ಕನ್ನಡ-ಮಲಯಾಳ ನಿಘಂಟು ಪ್ರಕಾಶನ

ಕಾಸರಗೋಡು: ಬಿ.ಟಿ. ಜಯರಾಮ್ ರಚಿಸಿ ಕೇರಳ ಭಾಷಾ ಇನ್‌ಸ್ಟಿಟ್ಯೂಟ್ ಪ್ರಕಟಿಸಿದ ಕನ್ನಡ-ಮಲಯಾಳ ನಿಘಂಟನ್ನು ನಿನ್ನೆ ಕಾಸರಗೋಡು ಮುನಿಸಿಪಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕ್ಕಾಡ್  ಪ್ರಕಾಶನಗೈದು ಉದ್ಘಾಟನೆ ನೆರವೇರಿಸಿದರು. ಸರಕಾರದ ವಿವಿಧ ಇಲಾಖೆಗಳಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿರುವ ಬಿ,ಟಿ. ಜಯರಾಮ್ ಈ ನಿಘಂಟು ರಚನೆಗಾಗಿ ಸತತ ಆರು ವರ್ಷ ಕಠಿಣ ಪರಿಶ್ರಮ ನಡೆಸಿದ್ದಾರೆ. ಕನ್ನಡ ಪದಗಳ ಉಚ್ಛರಣೆಯನ್ನು ಹೇಗೆ ನಡೆಸಬೇ ಕೆನ್ನುವುದನ್ನು ಮಲೆಯಾಳ ಲಿಪಿಯಲ್ಲೇ ಈ ನಿಘಂಟಿನಲ್ಲಿ …

ಮೊಗ್ರಾಲ್ ಪುತ್ತೂರು ಹೆದ್ದಾರಿ ಬದಿ ಬೀದಿ ದೀಪಗಳಿಲ್ಲ : ಸಮಸ್ಯೆ ಬಗ್ಗೆ ಸಿಪಿಎಂ ಅಧಿಕಾರಿಗಳಿಗೆ ಮನವಿ

ಮೊಗ್ರಾಲ್ ಪುತ್ತೂರು: ಪಂಚಾಯತ್ ವ್ಯಾಪ್ತಿಯ ಸಿಪಿಸಿಆರ್‌ಐ ಪ್ರಧಾನ ಕವಾಟದಿಂದ  ಚಂದ್ರಗಿರಿ ರೆಸ್ಟ್ ಹೌಸ್‌ವರೆಗಿರುವ ಸ್ಥಳಗಳಲ್ಲಿ ಹೆದ್ದಾರಿ ಅಭಿವೃದ್ಧಿಯ ಬಳಿಕ ಬೀದಿ ದೀಪಗಳನ್ನು ಸ್ಥಾಪಿಸದಿರುವುದು ಸಮಸ್ಯೆಗೀಡಾಗಿದ್ದು, ಇಲ್ಲಿ ಕೂಡಲೇ ಬೀದಿ ದೀಪ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಿಪಿಎಂ ಮೊಗ್ರಾಲ್ ಪುತ್ತೂರು ಲೋಕಲ್ ಸಮಿತಿ ಪ್ರೊಜೆಕ್ಟ್ ಡೈರೆಕ್ಟರ್‌ಗೆ ಮನವಿ ನೀಡಿದೆ. ಸುಮಾರು ಒಂದೂವರೆ ಕಿಲೋ ಮೀಟರ್‌ನಷ್ಟು ಸ್ಥಳದಲ್ಲಿ ಬೀದಿ ದೀಪಗಳನ್ನು ಸ್ಥಾಪಿಸಲಾಗಿಲ್ಲ. ಈ ಪ್ರದೇಶದಲ್ಲಿ ಪಂಚಾಯತ್ ಕಚೇರಿ, ಇತರ ಕಚೇರಿಗಳು, ಪೇಟೆ ಒಳಗೊಂಡಿದ್ದು, ದಿನನಿತ್ಯ ತಲುಪುವ ಮಂದಿಗೆ ರಾತ್ರಿ …

ಎಕೆಪಿಎಯಿಂದ ಕೃಷಿಕರ ದಿನಾಚರಣೆ, ಸನ್ಮಾನ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಈಸ್ಟ್ ಘಟಕ ವತಿಯಿಂದ ಕೃಷಿರಂಗದಲ್ಲಿ ಉತ್ತಮ ಸಾಧನೆಗೈದ ಹಮೀದ್ ಮಣಿಯನ್ನು ಗೌರವಿಸಲಾಯಿತು. ಸಾಮಾಜಿಕ, ಸಾಂಸ್ಕೃತಿಕ ಶಿಕ್ಷಣ ವಲಯಗಳಲ್ಲಿ ಸಕ್ರಿಯರಾಗಿದ್ದ ಇವರು ಯುವ ಕೃಷಿಕ ಪ್ರತಿಭೆಯಾಗಿದ್ದಾರೆ. ೨೦೨೫ರಲ್ಲಿ ಉತ್ತಮ ಸಂಯೋಜಿತ ಮೀನು ಕೃಷಿಗಿರುವ ಬ್ಲೋಕ್ ಮಟ್ಟದ ಪ್ರಶಸ್ತಿ ಇವರಿಗೆ ಲಭಿಸಿದೆ. ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಈಸ್ಟ್ ಘಟಕ ಅಧ್ಯಕ್ಷ ಅಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧ್ಯಕ್ಷ ರಾಜೇಂದ್ರನ್ ಅಭಿನಂದಿಸಿದರು. ಕಾರ್ಯದರ್ಶಿ ಸುಜಿತ್ ಸ್ವಾಗತಿಸಿ, …

ರಸ್ತೆ ದಾಟುತ್ತಿದ್ದ ಮಹಿಳೆ ಬಸ್ ಢಿಕ್ಕಿ ಹೊಡೆದು ಮೃತ್ಯು

ಕಾಸರಗೋಡು: ರಸ್ತೆ ದಾಟುತ್ತಿದ್ದ ವೇಳೆ ಬಸ್ ಢಿಕ್ಕಿ ಹೊಡೆದು ಮಹಿಳೆ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕಣ್ಣೂರು ವಾಣಿಯಂಬಾರೆ ನಿವಾಸಿ ಸರಸ್ವತಿ (75) ಸಾವನ್ನಪ್ಪಿದ ಮಹಿಳೆ. ಇವರು ನಿನ್ನೆ ಪಾಲಕುನ್ನು ಬಳಿ ರಸ್ತೆ ದಾಟುತ್ತಿದ್ದ ವೇಳೆ ಆ ದಾರಿಯಾಗಿ ಕಾಸರಗೋಡು ಭಾಗದಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆದು ಬಸ್‌ನ ಚಕ್ರದಡಿ ಸಿಲುಕಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಬೇಕಲ …