ನಾಡಿನ ಸೌಹಾರ್ದತೆಗೆ ಓಣಂ ಹಬ್ಬ ದಾರಿದೀಪವಾಗಲಿ- ಸೋಮಶೇಖರ ಜೆ.ಎಸ್.

ನಲ್ಕ: ಕೇರಳದ ನಾಡಹಬ್ಬ ಓಣಂ ಆಚರಣೆ ಸಮಾಜದಲ್ಲಿ  ಸೌಹಾರ್ದತೆಯನ್ನು ಪೋಷಿಸುತ್ತದೆ. ಎಲ್ಲರೂ ಒಟ್ಟುಗೂಡಿ ಆಚರಿಸಿದಾಗ ಶಾಂತಿ ಸಂತೋಷದ ವಾತಾವರಣ ಪಸರಿಸುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ್ ಜೆ.ಎಸ್. ಅಭಿಪ್ರಾಯ ಪಟ್ಟರು. ನಲ್ಕದ ಭಗತ್ ಸಿಂಗ್ ಸಾರ್ವಜನಿಕ ಗ್ರಂಥಾ ಲಯ ಮತ್ತು ಊರವರ ಸಹಕಾರ ದಿಂದ ನಡೆದ ಓಣಂ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡು ತ್ತಿದ್ದರು. ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲಾ ಪ್ರಿನ್ಸಿಪಾಲ್ ಪದ್ಮನಾಭ ಶೆಟ್ಟಿ ಮುಖ್ಯ ಅತಿಥಿಗಯÁಗಿ ಭಾಗವಹಿಸಿದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ …

ಪೊಡಿಪಳ್ಳ ನಿವಾಸಿ ಯೋಗೀಶ್‌ರ ಮನೆಯ ಮಾಡು ಕುಸಿತ: ಅಪಾರ ನಷ್ಟ

ಮಾರ್ಪನಡ್ಕ: ಕುಂಬ್ಡಾಜೆ ಪಂಚಾಯತ್ ವ್ಯಾಪ್ತಿಯ ಪೊಡಿಪಳ್ಳ ನಿವಾಸಿ ಯೋಗೀಶ್ ಎಂಬವರ ಮನೆ ನಿನ್ನೆ ಕುಸಿದು ಬಿದ್ದಿದೆ. ಹೆಂಚು ಹಾಸಿದ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದಿದ್ದು, ಇಲ್ಲಿ ಯಾರೂ ಇಲ್ಲದ ಕಾರಣ ಅನಾಹುತ ತಪ್ಪಿಹೋಗಿದೆ. ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷೆ ಯಶೋಧ ಎನ್, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕ ಎ.ಸಿ, ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಕಾರ್ಯದರ್ಶಿ ಪ್ರಮೋದ್ ಭಂಡಾರಿ, ಸುರೇಶ್, ಭಾಸ್ಕರ ಪೊಡಿಪಳ್ಳ ಭೇಟಿ ನೀಡಿ ವಿಚಾರಿಸಿದರು. ಸಾವಿರಾರು ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಕುಂಬಳೆ ಪೊಲೀಸ್ ಠಾಣೆಯಲ್ಲಿ ಓಣಂ ಆಚರಣೆ

 ಕುಂಬಳೆ: ಕುಂಬಳೆ ಪೊಲೀಸ್ ಠಾಣೆಯಲ್ಲಿ ಓಣಂ ಹಬ್ಬವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಕಾಸರಗೋಡು ಎಎಸ್‌ಪಿ ಅಚ್ಯುತ್ ಅಶೋಕ್ ಉದ್ಘಾಟಿಸಿದರು. ಸ್ಟೇಶನ್ ಹೌಸ್ ಆಫೀಸರ್ ಎಸ್. ಅನೂಪ್ ಅಧ್ಯಕ್ಷತೆ ವಹಿಸಿದರು. ಸಿ.ಐ.ಆರ್.ಪಿ ಅನೂಪ್ ಕೃಷ್ಣ ಮುಖ್ಯ ಅತಿಥಿಯಾಗಿದ್ದರು. ಹಗ್ಗಜಗ್ಗಾಟ, ಸಂಗೀತ ಕುರ್ಚಿ, ಬಾಟ್ಲಿಗೆ ನೀರು ತುಂಬಿಸುವುದು ಮೊದಲಾದ ಸಭೆಗಳಲ್ಲಿ ನಡೆಸಲಾಯಿತು. ಓಣಂ ಭೋಜನ ಏರ್ಪಡಿಸಲಾಗಿತ್ತು.

ಉತ್ಸವಾಚರಣೆಗಳನ್ನು ಕೂಡಾ ಸಮಾಜವನ್ನು ವಿಭಜಿಸಲು ಉಪಯೋಗಿಸಲಾಗುತ್ತದೆ- ವಿ.ಕೆ. ಸಜೀವನ್

ಬದಿಯಡ್ಕ: ಓಣಂನಂತಹ ಐಕ್ಯತೆಯ, ಸೌಹಾರ್ದತೆಯ ಸಂದೇಶ ನೀಡುವ ರಾಷ್ಟ್ರೀಯ ಉತ್ಸವಗಳನ್ನು ಕೂಡಾ ಕೋಮುವಾದವಾಗಿ ಚಿತ್ರೀಕರಿಸಲು, ಸಮಾಜವನ್ನು ವಿಭಜಿಸಲು ಕೆಲವು ಕೋಮುಶಕ್ತಿಗಳು ನಡೆಸುವ ಯತ್ನ ಅಪಾಯಕರವೆಂದು ಬಿಜೆಪಿ ರಾಜ್ಯ ಸೆಲ್ ಕೋ-ಆರ್ಡಿನೇಟರ್ ವಿ.ಕೆ. ಸಜೀವನ್ ನುಡಿದರು. ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಹಾಗೂ ಬದಿಯಡ್ಕ ಪಂ. ಸಮಿತಿ ಜಂಟಿಯಾಗಿ ಆಯೋಜಿಸಿದ ಓಣಂ ಹಬ್ಬಾಚರಣೆಯನ್ನು ಬದಿಯಡ್ಕದ ಇರಾ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 1937ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಂದೇ ಮಾತರಂಅನ್ನು ವಿಭಜಿಸಿ ಸರಿಯಾಗಿ 1೦ ವರ್ಷಗಳ ಬಳಿಕ …

ಕಲ್ಲಗದ್ದೆ- ಸುದೆಂಬಳ ಸಡಕ್ ರಸ್ತೆ  ಶೋಚನೀಯ: ವಾಹನ ಸಂಚಾರಕ್ಕೆ ಸಂಕಷ್ಟ

ಬಾಯಾರು: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಕಲ್ಲಗದ್ದೆ-ನೀರ್ಚಾಲು- ದಳಿಕುಕ್ಕು- ಸುದೆಂಬಳ ವ್ಯಾಪ್ತಿಯ ಸಡಕ್ ರಸ್ತೆ ಹದಗೆಟ್ಟು ಶೋಚನೀಯÁವಸ್ಥೆಯಿಂದ ಕೂಡಿದ್ದು ಸಂಚಾರ ನರಕಯಾತನೆಯÁಗಿದೆ. ಸುಮಾರು ಐದು ಕಿಲೋ ಮೀಟರ್ ಉದ್ದದ ರಸ್ತೆ ಕಳೆದ ಮೂರು ವರ್ಷಗಳಿಂದ ಡಾಮರು ಎದ್ದು ಹೊಂಡ ಸೃಷ್ಟಿಯಾಗಿದೆ. ಬದಿಗಳಲ್ಲಿ ಪೊದೆಗಳು ಆವರಿಸಿ ವಾಹನಗಳ ಸಹಿತ ಸ್ಥಳೀಯರ ಸಂಚಾರÀಕ್ಕೆ ಸಮಸ್ಯೆ ಉಂಟಾಗುತ್ತಿದೆ. ಇಲ್ಲಿ ಸುಮಾರು ೨೦೦ ಮನೆಗಳಿದ್ದು, ಈ ರಸ್ತೆಯಲ್ಲಿ ದಿನನಿತ್ಯ ವಿವಿಧ ಶಾಲಾ ವಾಹನಗಳ ಸಹಿತ ಇತರ ನೂರಾರು ವಾಹನಗಳು ಸಂಚರಿಸುತ್ತಿವೆ. ರಸ್ತೆಯ ಶೋಚನೀಯÁವಸ್ಥೆ ಬಗ್ಗೆ …

ಮಹಮ್ಮೂದ್ ಬಳ್ಳೂರು ನಿಧನ

 ಕಾಸರಗೋಡು: ಮೊಗ್ರಾಲ್‌ನ ಹಿರಿಯ ಕೃಷಿಕ, ಉತ್ತಮ ಓದುಗನಾಗಿದ್ದ ಮೊಗ್ರಾಲ್ ರೆಹಮತ್‌ನಗರ ಬಳ್ಳೂರು ಹೌಸ್ ನಿವಾಸಿ ಮಹಮ್ಮೂದ್ ಬಳ್ಳೂರು (81) ನಿಧನ ಹೊಂದಿದರು. ಮೃತರು ಪತ್ನಿ ಸಲ್ಮ, ಮಕ್ಕಳಾದ ಇರ್ಷಾದ್, ಇರ್ಫಾನ್, ಇಕ್ತಿಯಾರ್, ಇಸ್ತಿಫ, ಇಫ್ರತ್, ಇಸ್ಮತ್, ಅಳಿಯ ಸಾಲಿಹ್, ಸೊಸೆಯಂದಿರಾದ ಜಾಸ್ಮಿನ್, ಖೈರುನ್ನೀಸ, ಸಹೋದರರಾದ ಅಬೂಬಕ್ಕರ್, ಅಬ್ಬಾಸ್ ಹಾಗೂ ಅಪಾರ ಬಂಧು-ಮಿತ್ರರನ್ನು

ಕೂಲಿ ಕಾರ್ಮಿಕ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಕೂಲಿ ಕಾರ್ಮಿಕ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂಲತ: ಶಿರಿಯ ನಿವಾಸಿ ಕುಬಣೂರು ಡಾ.ಬಿ.ಆರ್ ಅಂಬೇಡ್ಕರ್ ಕ್ಲಬ್ ಬಳಿಯಲ್ಲಿ ವಾಸವಾಗಿರುವ ವಸಂತ (೪೪) ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದ್ದÄ, ಬುಧವಾರ ಬೆಳಿಗ್ಗೆ ೮ಗಂಟೆ ವೇಳೆ ಮನೆಯವರು ಎದ್ದಾಗ ಹಿಂಭಾಗದಲ್ಲಿ ಕಿಟಿಕಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ತಲುಪಿದ ಸ್ಥಳೀಯರು ಅವರನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಸಾಗಿಸಿದ್ದಾರೆ. ಸಾವಿಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾಸರಗೋಡು ಜನರಲ್ …

ಕುಂಬಳೆ ಪಂ. ಓಣಂ ಆಚರಣೆ ಲೀಗ್ ಕಾರ್ಯಕರ್ತನ ಮನೆಯಲ್ಲಿ  ತೀವ್ರಗೊಂಡ ವಿವಾದ; ಬಿಜೆಪಿಯಲ್ಲೂ ಪ್ರತಿಭಟನೆ

ಕುಂಬಳೆ: ಕುಂಬಳೆ ಪಂಚಾಯತ್‌ನ ಓಣಂ ಆಚರಣೆ ವಿವಾದಕ್ಕೆಡೆಯಾಗಿದೆ. ಓಣಂ ಆಚರಣೆ 23ರಂದು ನಡೆಸುವುದಾಗಿ ಪೋಸ್ಟರ್ ಸಿದ್ಧಪಡಿಸಿದ್ದರೂ ಅದಕ್ಕೆ  ಸ್ಥಳ ಎಲ್ಲಿ ಎಂದು ತಿಳಿಸಿರಲಿಲ್ಲ. ಕಾರ್ಯಕ್ರಮ ನಡೆಯುವ ಸ್ಥಳವನ್ನು  ಕೊನೆಯವರೆಗೆ ಗೌಪ್ಯವಾಗಿರಿಸಿದ ಪಂಚಾಯತ್ ಅಧಿಕಾರಿಗಳು ಕೊನೆಗೆ ನಿನ್ನೆ ಬೆಳಿಗ್ಗೆ ಪಂಚಾಯತ್ ಸದಸ್ಯನೂ ಅಲ್ಲದ ಲೀಗ್ ಕಾರ್ಯಕರ್ತನ ಮನೆಯಲ್ಲಿ ಓಣಂ ಆಚರಣೆ ನಡೆಸಿರುವುದಾಗಿ ಲೀಗ್ ಕಾರ್ಯಕರ್ತರು ತಿಳಿಸಿದ್ದಾರೆ. ಪಂಚಾಯತ್ ಕಚೇರಿಯಲ್ಲಿ ವಿಶಾಲವಾದ ಸಭಾಂಗಣ ಸಹಿತ ಸೌಕರ್ಯವಿರುವಾಗ ಪಂಚಾಯತ್‌ಗೆ ಸಂಬಂಧಪಟ್ಟ ಹಲವು ವಿವಾದಗಳಲ್ಲಿ ಸಿಲುಕಿಕೊಂಡಿರುವ ಮರ್ಚೆಂಟ್ಸ್ ಅಸೋಸಿಯೇಶನ್ ಘಟಕ ಕಾರ್ಯದರ್ಶಿಯ  ಮನೆಯಲ್ಲಿ …

ಲಾರಿಗಳು ಢಿಕ್ಕಿ ಹೊಡೆದು ಬೆಂಕಿಗಾಹುತಿ: ಹೊಸದುರ್ಗ ನಿವಾಸಿ ಸಹಿತ ಇಬ್ಬರು ಸಜೀವ ದಹನ

ಕಣ್ಣೂರು: ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಮಿಕ್ಸರ್ ಹೆವ್ವೀ  ಲಾರಿ ಢಿಕ್ಕಿ  ಹೊಡೆದು ಬೆಂಕಿ ಎದ್ದು ಇಬ್ಬರು ಸಜೀವ ದಹನಗೊಂಡ ಘಟನೆ ಕಣ್ಣೂರಿನಲ್ಲಿ ಇಂದು ಮುಂಜಾನೆ ನಡೆದಿದೆ.  ಹೊಸದುರ್ಗ ಮಾವುಂಗಾಲ್ ನಿವಾಸಿ  ಇಬಿನೈಸರ್ ಆಂಟೋ (24) ಮತ್ತು ಪಾಲಕ್ಕಾಡ್ ನಿವಾಸಿ ಮುಹಮ್ಮದ್ ಶೆಬಿನ್ (22) ಸಾವನ್ನಪ್ಪಿದ ದುರ್ದೈವಿಗಳು. ಕಣ್ಣೂರು ಪಿಲಾತ್ತರ ಮಂಡೂರು ರಾಜ್ಯ ಹೆದ್ದಾರಿಯ ಮಂಡೂರು ಮಸೀದಿ ಬಳಿ ಇಂದು ಮುಂಜಾನೆ 3.25ಕ್ಕೆ ದುರ್ಘಟನೆ ನಡೆದಿದೆ. ಪಳಯಂಗಾಡಿಯಿಂದ ಬರುತ್ತಿದ್ದ ಲಾರಿಯ ಕ್ಲಚ್ ಕೆಟ್ಟುಹೋದ ಪರಿಣಾಮ ಅದನ್ನು ನಿನ್ನೆ …

ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಐದು ಹುಂಜಗಳ ವಶ, ಐವರ ಸೆರೆ

ಕುಂಬಳೆ: ಇಚ್ಲಂಗೋಡು ದೇವ ಸ್ಥಾನಕ್ಕೆ ಸಮೀಪ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಕುಂಬಳೆ ಠಾಣೆ ಎಸ್‌ಐ ಗಣೇಶನ್ ಕೆ.ಪಿ ನೇತೃತ್ವದ ಪೊಲೀಸರು ನಿನ್ನೆ ದಾಳಿ ನಡೆಸಿ ಐದು ಮಂದಿಯನ್ನು ಸೆರೆಹಿಡಿದು, ಐದು ಹುಂಜ ಕೋಳಿಗಳನ್ನು  ವಶಕ್ಕೆ ತೆಗೆದುಕೊಂಡಿದ್ದಾರೆ. ಮೀಯಪದವು ಬೇರಿಕೆ ನಿವಾಸಿ  ದೀಕ್ಷಿತ್ (25), ಮೊಗ್ರಾಲ್ ಪುತ್ತೂರು ಎಡಚ್ಚೇರಿಯ ಮಹೇಶ್ ಕೆ (40), ಜೋಡುಕಲ್ಲಿನ ಪ್ರಕಾಶ್ ಶೆಟ್ಟಿ (60), ಮೀಯಪದವು ಅಡ್ಕತ್ತಗುರಿಯ ಗಂಗಾಧರ ಮೂಲ್ಯ (63) ಮತ್ತು ಪೈವಳಿಕೆ ನಗರ ಮರಿಕದ ಐತ್ತಪ್ಪ (40) ಎಂಬವರನ್ನು ಪೊಲೀಸರು …