ಬಿಂದು ಜ್ಯುವೆಲ್ಲರಿಯ ನೂತನ ಶೋರೂಂ ಮಂಗಳೂರಿನಲ್ಲಿ ಕಾರ್ಯಾರಂಭ

ಮಂಗಳೂರು: ವಿಶ್ವಾಸ ಹಾಗೂ ಪರಂಪರೆಯೊಂದಿಗೆ ಜನರ ಹೃದಯದಲ್ಲಿ ಸ್ಥಾನ ಗಳಿಸಿದ ಬಿಂದು ಜ್ಯುವೆಲ್ಲರಿಯ ನೂತನ ಶೋರೂಂ ಮಂಗಳೂರು ಬೆಂದೂರ್‌ವೆಲ್‌ನಲ್ಲಿ ಕಾರ್ಯಾರಂಭ ಗೊಂಡಿದೆ. ನೂತನ ಜ್ಯುವೆಲ್ಲರಿ ಶೋರೂಂನ ಉದ್ಘಾಟನೆಯನ್ನು ಸಿನಿಮಾ ನಟಿ ಸ್ನೇಹಾ ಪ್ರಸನ್ನ ನಿರ್ವಹಿಸಿದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ಸಿಟಿ ಸೌತ್ ಶಾಸಕ ಡಿ. ವೇದವ್ಯಾಸ್ ಕಾಮತ್, ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ಕರ್ನಾಟಕ ಸ್ಟೇಟ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ. ಇಫ್ತಿಕಾರ್ ಫರೀದ್, ರೆವರೆಂಡ್ ಡಾ. ಪ್ರವೀಣ್ ಮಾರ್ಟೀಸ್ ಎಸ್.ಜೆ, …

ಚುನಾವಣೆ ಸಮೀಪಿಸುತ್ತಿದ್ದಂತೆ ಮುಸ್ಲಿಂ ಲೀಗ್‌ನಿಂದ ಕೋಮು ಗಲಭೆ ಪ್ರಚೋದನೆ ಯತ್ನ- ಒಬಿಸಿ ಮೋರ್ಚಾ

ಕುಂಬಳೆ: ಶಾಲಾ ವಿದ್ಯಾರ್ಥಿಗಳಲ್ಲಿ ಕೋಮು ದ್ವೇಷವನ್ನು ತುಂಬುವ ಮೂಲಕ ಮುಸ್ಲಿಂ ಲೀಗ್ ಮತ ಬ್ಯಾಂಕ್ ರಚಿಸಲು ಪ್ರಯತ್ನಿಸುತ್ತಿದೆ ಎಂದು ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಆರೋಪಿಸಿದರು. ಒಬಿಸಿ ಮೋರ್ಚಾ ಕುಂಬಳೆ ಮಂಡಲ ಸಮಿತಿಯ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪ್ಯಾಲೆಸ್ತಿನ್‌ಗೆ ಸಂಬAಧಿಸಿದ ವಿಷಯಗಳಲ್ಲಿ ಬೆಂಬಲ ಘೋಷಿಸಿದ ಮಂಜೇಶ್ವರ ಶಾಸಕರ ಹೇಳಿಕೆಗಳೇ ಇದಕ್ಕೆ ಸಾಕ್ಷಿ. ಹೆಸರಿಗೆ ಧಾರ್ಮಿಕ ಸಾಮರಸ್ಯ, ಕೋಮುವಾದವನ್ನು ಪ್ರಚೋದಿಸುವ ಮೂಲಕ ಮತಗಳನ್ನು ಗಳಿಸುವ ಗುರಿಯನ್ನು ಹೊಂದಿರುವ ಮುಸ್ಲಿಂ ಲೀಗ್‌ನ ಇಂತಹ ಕಾರ್ಯಗಳನ್ನು ನಿಲ್ಲಿಸಬೇಕು, ಇಲ್ಲದಿದ್ದರೆ …

ರಾಷ್ಟ್ರಪತಿ ಇಂದು ಕೇರಳಕ್ಕೆ ನಾಳೆ ಶಬರಿಮಲೆಗೆ

ತಿರುವನಂತಪುರ: ನಾಲ್ಕು ದಿನಗಳ ಸಂದರ್ಶನಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಸಂಜೆ  ನೌಕಾಪಡೆಯ ವಿಶೇಷ ವಿಮಾನದಲ್ಲಿ ತಿರುವನಂತಪುರಕ್ಕೆ ಆಗಮಿಸುವರು. ಇಂದು ರಾಜ್‌ಭವನದಲ್ಲಿ  ಉಳಿದುಕೊಳ್ಳುವ ಅವರು ಅಲ್ಲಿಂದ ನಾಳೆ ಬೆಳಿಗ್ಗೆ 9.35ಕ್ಕೆ ಹೆಲಿಕಾಫ್ಟರ್‌ನಲ್ಲಿ ನಿಲೈಕಲ್‌ಗೆ ಹೋಗುವರು.  ನಂತರ ಕಾರಿನಲ್ಲಿ ಪಂಪಾಗೆ ತಲುಪುವರು. ಅಲ್ಲಿಂದ ವಿಶೇಷ ವಾಹನದಲ್ಲಿ ಶಬರಿಮಲೆ ದೇಗುಲ ಸನ್ನಿಧಾನಕ್ಕೆ ಆಗಮಿಸಿ ದೇವರ ದರ್ಶನ ನಡೆಸುವರು. ರಾಷ್ಟ್ರಪತಿ ಸಂದರ್ಶನ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ವಿಶೇಷ ನಿಯಂತ್ರಣ ಹಾಗೂ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಶಬರಿಮಲೆ ದರ್ಶನದ ನಂತರ ತಿರುವನಂತಪುರಕ್ಕೆ ಹಿಂತಿರುಗಲಿರುವ ರಾಷ್ಟ್ರಪತಿ …

ಬಾವಿಗೆ ಬಿದ್ದು ಯುವಕ ಮೃತ್ಯು: ರಕ್ಷಿಸಲು ಹಾರಿದ ಸಹೋದರನಿಗೆ ಅಗ್ನಿಶಾಮಕ ದಳದಿಂದ ರಕ್ಷಣೆ

ಕುಂಬಳೆ: ಸರಕಾರಿ ನೌಕರನಾದ ಯುವಕ ಬಾವಿಗೆ ಬಿದ್ದು ಮೃತಪಟ್ಟರು. ರಕ್ಷಿಸಲೆಂದು ಇಳಿದ ಸಹೋದರನನ್ನು ಅಗ್ನಿಶಾಮಕ ದಳ ತಲುಪಿ ಮೇಲೆತ್ತಿದೆ. ಕುಂಬಳೆ ನಾರಾಯಣಮಂಗಲ ನಿವಾಸಿ ವಿವೇಕ್ ಶೆಟ್ಟಿ (28) ಮೃತಪಟ್ಟವರು. ನಿನ್ನೆ ರಾತ್ರಿ 9.30ರ ವೇಳೆ ಘಟನೆ ನಡೆದಿದೆ. ವಿವೇಕ್ ಬಾವಿಗೆ ಬೀಳುವುದನ್ನು ಕಂಡ ಸಹೋದರ ತೇಜಸ್ ಆಗಲೇ ಬಾವಿಗೆ ಹಾರಿದ್ದರು. ಆದರೆ ತೇಜಸ್ ಬಾವಿಯಲ್ಲಿ ಸಿಲುಕಿಕೊಂಡರು. ಸ್ಥಳೀಯರು ನೀಡಿದ ಮಾಹಿತಿಯಂತೆ ಉಪ್ಪಳದಿಂದ ಅಗ್ನಿಶಾಮಕ ದಳ ತಲುಪಿ ತೇಜಸ್‌ನನ್ನು ಮೊದಲಾಗಿ ಮೇಲೆತ್ತಿದರು.  ಬಳಿಕ ವಿವೇಕ್‌ನನ್ನು ಮೇಲಕ್ಕೆತ್ತಿ ಕುಂಬಳೆ ಸಹಕಾರಿ …

ಕಾರಿಗೆ ಅಡ್ಡಗಟ್ಟಿ ಕೋಳಿ ವ್ಯಾಪಾರಿಯ ಚಿನ್ನದ ಸರ ಅಪಹರಿಸಿದ ಪ್ರಕರಣ: ಆರೋಪಿ ಸೆರೆ: 4 ದಿನದ ಹಿಂದೆ ಜೈಲಿನಿಂದ ಬಿಡುಗಡೆಗೊಂಡಿದ್ದ ಆರೋಪಿ

ವರ್ಕಾಡಿ: ಆಮ್ನಿ ವ್ಯಾನ್ ತಡೆದು ನಿಲ್ಲಿಸಿ ಕೋಳಿ ವ್ಯಾಪಾರಿಯ ಕುತ್ತಿಗೆಗೆ ಕತ್ತಿ ಇರಿಸಿ ಬೆದರಿಸಿ ೩ ಲಕ್ಷ ರೂ. ಮೌಲ್ಯದ ಚಿನ್ನದ ಸರ ಅಪಹರಿಸಿದ ಪ್ರಕರಣದಲ್ಲಿ ಪ್ರಧಾನ ಆರೋಪಿ ಸೆರೆಯಾಗಿದ್ದಾನೆ. ಕುಂಬಳೆ, ಬಂದ್ಯೋಡು, ಅಡ್ಕ ವೀರನಗರ, ಕೋಟೆ ಹೌಸ್ ನಿವಾಸಿ ಅಬ್ದುಲ್ ಲತೀಫ್ ಯಾನೆ ತೋಕ್ ಲತೀಫ್ (29)ನನ್ನು ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಇ. ಅನೂಬ್ ಕುಮಾರ್ ಹಾಗೂ ತಂಡ ಸೆರೆ ಹಿಡಿದಿದೆ. ಮೊರತ್ತಣೆಯಲ್ಲಿ ಶನಿವಾರ ಮಧ್ಯಾಹ್ನ 12.30ರ ವೇಳೆ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ಅರಿಬೈಲ್ …

ಪರಿಚಯಗೊಂಡ 14ರ ಹರೆಯದ ಬಾಲಕಿಯನ್ನು ಕರೆದೊಯ್ದು ಲೈಂಗಿಕ ಕಿರುಕುಳ: ಮಲಪ್ಪುರಂ ನಿವಾಸಿ ಸೆರೆ

ಕಾಸರಗೋಡು: ಪರಿಚಯಗೊಂಡ ಬಾಲಕಿಯನ್ನು ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಿದ ಮಲಪ್ಪುರಂ ನಿವಾಸಿಯಾ ಗಿರುವ ಆರೋಪಿಯನ್ನು ಕಾಸರಗೋ ಡು ಪೊಲೀಸರು ಬಂಧಿಸಿದ್ದಾರೆ. ಮಲಪ್ಪುರಂ ನಿವಾಸಿ ಹಾಗೂ ಗಲ್ಪ್ ಉದ್ಯೋಗಿ ಇಜಾಸ್ ಅಹಮ್ಮದ್ (20) ಬಂಧಿತ ಆರೋಪಿ. ಈತ ಇತ್ತೀಚೆಗೆ  ಹೊಸದುರ್ಗಕ್ಕೆ ಬಂದಿದ್ದನು. ಅಲ್ಲಿ ಆತ ಕಾಸರಗೋಡು ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ 14ರ ಹರೆಯದ ಬಾಲಕಿಯೋರ್ವಳನ್ನು ಪರಿಚಯಗೊಂಡು ಆಕೆಯ ಮೊಬೈಲ್ ನಂಬ್ರವನ್ನು ಕೇಳಿ ಪಡೆದಿದ್ದನು. ನಂತರ ಆತ ನಿರಂತರವಾಗಿ ಬಾಲಕಿಯನ್ನು ಫೋನ್‌ನಲ್ಲಿ ಸಂಪರ್ಕಿಸಿ ಪರಿಚಯ ದಿಂದ ಆಕೆಯನ್ನು ಪುಸಲಾಯಿಸಿ …

ಶಬರಿಮಲೆ ಚಿನ್ನ ಕಳವು ತನಿಖೆ ಹೈದರಾಬಾದ್, ಬೆಂಗಳೂರು, ತಮಿಳುನಾಡಿಗೆ ವಿಸ್ತರಣೆ

ಪಂದಳಂ: ಶಬರಿಮಲೆ ದೇಗುಲದ ಚಿನ್ನ ಕಳವುಗೈದ ಪ್ರಕರಣದ ತನಿಖೆಯನ್ನು  ವಿಶೇಷ ತನಿಖಾ ತಂಡ ಹೈದರಾಬಾದ್, ಬೆಂಗಳೂರು ಮತ್ತು ತಮಿಳುನಾಡಿಗೂ ವಿಸ್ತರಿಸಿದೆ. ಶಬರಿಮಲೆ ದೇವಸ್ಥಾನ ದೊಂದಿಗೆ ವರ್ಷಗಳಿಂದ ನಂಟು ಹೊಂದಿರುವ ಹಾಗೂ ಈ ಪ್ರಕರಣದ ಪ್ರಮುಖ ಆರೋಪಿ ಉಣ್ಣಿ ಕೃಷ್ಣನ್ ಪೋತ್ತಿಯೊಂದಿಗೆ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಹಲವು ಗಣ್ಯರು ನಿಕಟ ಸಂಪರ್ಕ ಹೊಂದಿದ್ದು, ಇದು ಭಾರೀ ನಿಗೂಢತೆಗೂ ದಾರಿಮಾಡಿ ಕೊಟ್ಟಿದ್ದು ಅದನ್ನು ಬೇಧಿಸಲು ಈ ಪ್ರಕರಣದ ತನಿಖೆಯನ್ನು ಎಸ್‌ಎಟಿ ಈ ಮೂರು ರಾಜ್ಯಗಳಿಗೂ ವಿಸ್ತರಿಸಿದೆ. ಈ ಪ್ರಕರಣದ …

ಅಮಿತ ಪ್ರಮಾಣದಲ್ಲಿ ದಾಸ್ತಾನು ಇರಿಸಿದ್ದ 8893 ಕಿಲೋ ಸುಡುಮದ್ದು ವಶ

ಕಾಸರಗೋಡು: ದೀಪಾವಳಿ ಹಬ್ಬದ ಪ್ರಯುಕ್ತ ನಿಗದಿತ ಪ್ರಮಾ ಣಕ್ಕಿಂತಲೂ ಹೆಚ್ಚು ಸುಡುಮದ್ದು ಗಳನ್ನು ದಾಸ್ತಾನು ಇರಿಸುವ ಅಂಗಡಿಗಳನ್ನು ತಪಾಸಣೆಗೊಳ ಪಡಿಸುವ ಕ್ರಮವನ್ನು ಪೊಲೀಸರು ಇನ್ನೂ  ಮುಂದುವರಿಸಿದ್ದು, ಇದರಂತೆ ಕೇಳುಗುಡ್ಡೆಯಲ್ಲಿ ಕಾರ್ಯವೆಸಗುತ್ತಿದ್ದ ಪಟಾಕಿ  ಮಾರಾಟದಂಗಡಿಗೆ ಕಾಸರಗೋಡು ಪೊಲೀಸರು ನಡೆಸಿದ ತಪಾಸಣೆಯಲ್ಲಿ  ಅಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು ದಾಸ್ತಾನು ಇರಿಸಿದ್ದ 8893.745 ಕಿಲೋ ಸುಡುಮದ್ದನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಅ. ೧೯ರಂದು ಪೊಲೀಸ್ ಕಾರ್ಯಾಚರಣೆ ನಡೆದಿದೆ. ಇದಕ್ಕೆ ಸಂಬಂಧಿಸಿ ಪ್ರಸ್ತುತ  ಪಟಾಕಿ ಅಂಗಡಿ ಮಾಲಕ ಮೊಹಮ್ಮದ್ ಕುಂಞಿ  ಸಿ.ಎಚ್‌ರ ವಿರುದ್ಧ …

ಪಿಲಿಕುಂಜೆ ಶ್ರೀ ಜಗದಂಬಾ ದೇವಿ ಕ್ಷೇತ್ರದಿಂದ ಕಳವು

ಕಾಸರಗೋಡು: ಪಿಲಿಕುಂಜೆ ಶ್ರೀ ಜಗದಂಬಾ ದೇವಿ ಕ್ಷೇತ್ರದಿಂದ ಕಳವು ನಡೆದಿದೆ. ನಿನ್ನೆ ರಾತ್ರಿ ಕಳವು ನಡೆದಿರಬೇಕೆಂದು ಶಂಕಿಸಲಾಗಿದೆ. ಕ್ಷೇತ್ರದ ಸೇವಾ ಕೌಂಟರ್, ಆಫೀಸ್, ಸ್ಟೋರ್ ರೂಂ ಎಂಬಿವುಗಳ ಬೀಗ ಮುರಿದು ಸೇವಾ ಕೌಂಟರ್‌ನಿಂದ 1000 ರೂ. ಕಳವು ಗೈಯ್ಯಲಾಗಿದೆ. ಆಫೀಸ್‌ನಿಂದ ಸಿಸಿ ಟಿವಿಯ ಹಾರ್ಡ್‌ಡಿಸ್ಕ್ ಕಳವು ನಡೆಸಲಾಗಿದೆ. ಸ್ಟೋರ್ ರೂಂನಿಂದ ಮೈಕ್‌ಸೆಟ್‌ನ  ಆಂಪ್ಲಿಫಯರ್ ಕಳವು ನಡೆಸಿದ್ದರೂ ಅದನ್ನು ಉಪೇಕ್ಷಿಸಿರುವುದಾಗಿ ಪತ್ತೆ ಮಾಡಲಾಗಿದೆ. ಸಿಸಿಟಿವಿಯ ಹಾರ್ಡ್‌ಡಿಸ್ಕ್ ಕ್ಷೇತ್ರ ಆಡಳಿತ ಸಮಿತಿ ಸದಸ್ಯರು ನಡೆಸಿದ ಹುಡು ಕಾಟದಿಂದ ಬಾವಿಯಿಂದ ಪತ್ತೆ …

ಅನಂತಪುರ ಫ್ಲೈವುಡ್ ಕಾರ್ಖಾನೆಯಿಂದ ನಾಪತ್ತೆಯಾದ ಜೋಡಿ ಶೊರ್ನೂರಿನಲ್ಲಿ ಸೆರೆ

ಕುಂಬಳೆ: ಅನಂತಪುರ ಫ್ಲೈವುಡ್ ಕಾರ್ಖಾನೆಯಿಂದ ನಾಪತ್ತೆಯಾಗಿದ್ದ ಜೋಡಿಯನ್ನು ಶೊರ್ನೂರಿನಿಂದ ಅಲ್ಲಿನ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಅನಂತಪುರ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದ ಅಸ್ಸಾಂ ನಿವಾಸಿ ನೂರುಲ್ ಇಸ್ಲಾಂರ ಪತ್ನಿ ಅಜಿದ ಕಾಥೂನ್ (22) ನಾಪತ್ತೆಯಾದ ಯುವತಿಯಾಗಿದ್ದು, ಇದೇ ಕಾರ್ಖಾನೆಯಲ್ಲಿ ಕೆಲಸಕ್ಕಿದ್ದ ಅಸ್ಸಾಂ ನಿವಾಸಿಯ ಜೊತೆಯಲ್ಲಿ ಶೊರ್ನೂ ರಿನಿಂದ ಸೆರೆಹಿಡಿಯಲಾಗಿದೆ. ಪತಿ ನೂರುಲ್ ಇಸ್ಲಾಂ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿದ್ದರು. ಒಂದೂವರೆ ವರ್ಷದ ಮಗುವಿನ ಜೊತೆ ಪತ್ನಿ ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಹಲವು ಸಮಯದಿಂದ …