ನಮಾಜು ಕಳೆದು ಹಿಂತಿರುಗುತ್ತಿದ್ದ ವ್ಯಕ್ತಿಗೆ ಬೈಕ್ ಢಿಕ್ಕಿ: ಗಂಭೀರ ಗಾಯ

ಕುಂಬಳೆ: ಮಸೀದಿಯಲ್ಲಿ ನಮಾಜು  ಮಾಡಿ ಮನೆಗೆ ಹಿಂತಿರುಗುತ್ತಿದ್ದ ವ್ಯಕ್ತಿ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದಾರೆ. ಪೇರಾಲ್‌ಕಣ್ಣೂರಿನ ಅಬ್ದುಲ್ಲ (66) ಗಾಯಗೊಂಡವರು. ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಲಿಗೆ, ತಲೆಗೆ ಗಂಭೀರ ಗಾಯಗೊಂಡಿದ್ದು ಶಸ್ತ್ರ ಚಿಕಿತ್ಸೆ ನಡೆಸಲು ಡಾಕ್ಟರ್‌ಗಳು ಸೂಚಿಸಿದ್ದಾರೆ. ಗಾಯಗೊಂಡ ಬೈಕ್ ಸವಾರ ಪೇರಾಲ್‌ನ ತೇಜಸ್ (20)ನನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ 1 ಗಂಟೆ ವೇಳೆ ಪೇರಾಲ್ ನಾಟೆಕಲ್‌ನಲ್ಲಿ ಅಪಘಾತ ಸಂಭವಿಸಿದೆ. …

ಸಮಾನಾಂತರ ಲಾಟರಿ: ನಾಲ್ವರ ಸೆರೆ

ಕಾಸರಗೋಡು: ಸಮಾನಾಂತರ ಲಾಟರಿ ಟಿಕೆಟ್‌ಗಳ  ಮಾರಾಟ ಮಾಡುತ್ತಿದ್ದ ಆರೋಪದಂತೆ  ನಾಲ್ವರನ್ನು ಕಾಸರ ಗೋಡು ಪೊಲೀಸರು ಬಂಧಿಸಿದ್ದಾರೆ. ಶಿರಿಬಾಗಿಲು ಭಗವತೀ ನಗರದ ಜಿ.ಆರ್. ರಾಧಾಕೃಷ್ಣ (31), ಕೂ ಡ್ಲು  ರಾಮದಾಸನಗರದ ಅಭಿಷೇಕ್ ಕುಮಾರ್ (32), ರಾಮದಾಸನಗರ ಹೊಸಮನೆ ರಸ್ತೆ ಬಳಿಯ ಪವನ್‌ರಾಜ್ ಸಿ (25) ಮತ್ತು ಕಾಸರಗೋಡು ಕೋಟೆಕಣಿ ಕ್ರಾಸ್ ರಸ್ತೆ ಬಳಿಯ ರಾಜಾಪ್ರಸಾದ್ ಎಸ್ (36) ಎಂಬವರನ್ನು ಇದಕ್ಕೆ ಸಂಬಂಧಿಸಿ ಬಂಧಿಸಿ ಕೇಸು ದಾಖಲಿಸಲಾಗಿದೆ. ಬಂಧಿತರಿಂದ ೨೬,೪೯೦ರೂ. ನಗದು ವಶಪಡಿಸಲಾಗಿದೆ.  ಕೇರಳ ರಾಜ್ಯ ಲಾಟರಿ ಕಾನೂನಿನ ವಿರುದ್ಧ …

ಲಾರಿಯಿಂದ ಜಿಗಿದು ಪ್ರಾಣಭಯದಿಂದ ಓಟಕ್ಕಿತ್ತ ಕೋಣ ಹಾಯ್ದು ಬಾಲಕನಿಗೆ ಗಂಭೀರ

ಕಾಸರಗೋಡು: ಲಾರಿಯಲ್ಲಿ ತರಲಾಗುತ್ತಿದ್ದ ಮೂರು ಕೋಣಗಳ ಪೈಕಿ ಒಂದು ಕೋಣ ಲಾರಿಯಿಂದ ಜಿಗಿದು ಪ್ರಾಣಭಯದಿಂದ ಅತ್ತಿತ್ತ ಓಡುತ್ತಿದ್ದ ವೇಳೆ ಆಟವಾಡುತ್ತಿದ್ದ  ಬಾಲಕನ ಮೇಲೆ ಹಾಯ್ದು  ಆತ ಗಂಭೀರ ಗಾಯಗೊಂಡ ಘಟನೆ ಕೂಡ್ಲು ಕಾವುಗೋಳಿಯಲ್ಲಿ ನಡೆದಿದೆ. ಕಾವುಗೋಳಿ ಕಡಪ್ಪುರಂ ಕೃಷ್ಣ ನಿವಾಸದ  ರಾಜೇಶ್ ಎಂಬವರ ಪುತ್ರ ಆರನೇ ತರಗತಿ ವಿದ್ಯಾರ್ಥಿ ಅಧ್ವೈತ್ ಗಾಯಗೊಂಡ ಬಾಲಕ.  ಗಂಭೀರ ಗಾಯಗೊಂಡ ಆತನನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಲಾರಿಯಲ್ಲಿ   ಮೂರು ಕೋಣಗಳನ್ನು ತರುತ್ತಿದ್ದ ವೇಳೆ ನಿನ್ನೆ ರಾತ್ರಿ  ಸುಮಾರು 7.15 ರ …

17 ದಿನ ಹಿಂದೆ ಊರಿಗೆ ಬಂದು ಮರಳಿದ ತೂಮಿನಾಡು ನಿವಾಸಿ ಖತ್ತರ್‌ನಲ್ಲಿ ಆಂಬಲೆನ್ಸ್ ಢಿಕ್ಕಿ ಹೊಡೆದು ಮೃತ್ಯು

ಮಂಜೇಶ್ವರA: 17 ದಿನಗಳ ಹಿಂದೆ ಊರಿಗೆ ಬಂದು ಮರಳಿದ್ದ ಕುಂಜತ್ತೂರು ತೂಮಿನಾಡು ನಿವಾಸಿ ಖತ್ತಾರ್‌ನಲ್ಲಿ ಆಂಬುಲೆನ್ಸ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ತೂಮಿನಾಡು ಹಿಲ್ಟೋಪ್ ನಿವಾಸಿ ದಿ| ಅಬೂಬಕರ್ ಅವರ ಪುತ್ರ ಹಾರಿಸ್ (39) ಖತ್ತಾರ್‌ನಲ್ಲಿ ಆಂಬುಲೆನ್ಸ್ ಡಿಕ್ಕಿ ಹೊಡೆದು ಮೃತಪಟ್ಟವರು.ಖತ್ತಾರ್‌ನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿದ್ದರು. ವಾಹನ ಓಡಿಸುವಾಗ ಟೈರ್ ಪಂಕ್ಚರ್ ಆದ ಕಾರಣ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಟೈರ್ ಬದಲಾಯಿಸುತ್ತಿದ್ದಾಗ ಆ ದಾರಿಯಾಗಿ ಬಂದ ಆಂಬ್ಯುಲೆನ್ಸ್ ಇವರಿಗೆ ಡಿಕ್ಕಿ ಹೊಡೆದಿದೆ. ಮೃತರು ತಾಯಿ ಫಾತಿಮಾ, ಪತ್ನಿ …

ಕಾರಿನಲ್ಲಿ ಸಾಗಿಸುತ್ತಿದ್ದ 25,236 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನ ವಶ: ಓರ್ವ ಸೆರೆ

ಕಾಸರಗೋಡು: ಮೊಗ್ರಾಲ್ ಪುತ್ತೂರು ಕುನ್ನಿಲ್ ನೀರ್ಚಾಲ್‌ನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 25,236 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಕಾಸರಗೋಡು ಪೊಲೀ ಸರು ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಮಧೂರು ಹಿದಾಯತ್‌ನಗರ ಮುಟ್ಟತ್ತೋಡಿ ನಿವಾಸಿ ಅಬೂಬಕ್ಕರ್ ಸಿದ್ದಿಕ್ (34) ಎಂಬಾತನನ್ನು ಬಂಧಿಸಲಾಗಿದೆ. ಮಾಲು ಸಾಗಿಸುತ್ತಿದ್ದ ಕಾರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಕಾಸರಗೋಡು ಎಎಸ್‌ಪಿ ಡಾ. ನಂದಗೋಪಾಲ್ ಎಂ.ರ ಮೇಲ್ನೋಟದಲ್ಲಿ ಅನ್ಸಾರ್ ಎನ್.ರ ನೇತೃತ್ವದಲ್ಲಿ ಇತರ …

ಸಾಯಿರಾಂ ಕೃಷ್ಣಭಟ್‌ರನ್ನು ಭೇಟಿಯಾದ ಸಿ.ಕೆ. ಪದ್ಮನಾಭನ್

ಬದಿಯಡ್ಕ: ಶಬರಿಮಲೆಯ ಚಿನ್ನ ಕಳವು ವಿಚಾರದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರಕಾರದ ವಿರುದ್ಧ ಬಿಜೆಪಿ ರಾಜ್ಯದಾದ್ಯಂತ ನಡೆಸುತ್ತಿರುವ ಮನೆ ಮನೆ ಸಂಪರ್ಕ ಅಭಿಯಾನದಂಗವಾಗಿ ಬದಿಯಡ್ಕ ಪಂಚಾಯತ್ ಮಾಜಿ ಅಧ್ಯಕ್ಷ  ಸಾಯಿರಾಂ ಕೃಷ್ಣ ಭಟ್‌ರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಸಿ.ಕೆ. ಪದ್ಮನಾಭನ್ ಭೇಟಿಯಾದರು. ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್, ಸುನಿಲ್, ಜಿಲ್ಲಾ ಉಪಾಧ್ಯಕ್ಷ ಡಿ.ಶೇಖರ, ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ, ಬದಿಯಡ್ಕ ಪಶ್ಚಿಮ ವಲಯ ಅಧ್ಯಕ್ಷ ಮಹೇಶ್ …

ದೇವಸ್ವಂ ಆಡಳಿತವನ್ನು ಭಕ್ತರಿಗೆ ನೀಡಬೇಕೆಂಬ ಬಿಜೆಪಿ ಬೇಡಿಕೆ ನ್ಯಾಯಯುತ- ಸಿ.ಕೆ. ಪದ್ಮನಾಭನ್

ಕುಂಬ್ಡಾಜೆ: ಶಬರಿಮಲೆಯಿಂದ ಕೇಳಿ ಬರುತ್ತಿರುವ ಕೊಳ್ಳೆ ಹಾಗೂ ಅವ್ಯವಹಾರಗಳ ಬಗೆಗಿನ ಸುದ್ಧಿಗಳ ಹಿನ್ನೆಲೆಯಲ್ಲಿ ದೇವಸ್ವಂಬೋರ್ಡನ್ನು ಬರ್ಖಾಸ್ತುಗೊಳಿಸಿ ದೇವಸ್ಥಾನದ ಆಡಳಿತವನ್ನು ಭಕ್ತರಿಗೆ ವಹಿಸಿಕೊಡಬೇ ಕೆಂಬ ಬಿಜೆಪಿಯ ಬೇಡಿಕೆ ನ್ಯಾಯ ಯುತವಾಗಿದೆ ಎಂಬುದಕ್ಕೆ ಪುರಾವೆ ಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಸಿ.ಕೆ. ಪದ್ಮನಾಭನ್ ನುಡಿದರು. ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಆಯೋಜಿಸಿದ ಕಾರ್ಯಕರ್ತರ ಸಂಗಮ ಹಾಗೂ ಜನ ಪ್ರತಿನಿಧಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಶಬರಿಮಲೆಯ ದ್ವಾರಪಾಲಕ ಶಿಲ್ಪಗಳ ಚಿನ್ನದ ಕವಚಗಳು ಕಳವು ಹೋಗಿರುವುದು …

ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಎಸ್‌ಐಗಳಿಗೆ ವರ್ಗಾವಣೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗೆ ನಡೆಯಲಿರುವ ಚುನಾವಣೆಗೆ ಪೂರ್ವಭಾವಿಯಾಗಿ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳ ಎಸ್‌ಐಗಳನ್ನು   ವರ್ಗಾಯಿಸಲಾಗಿದೆ. ಇದರಂತೆ ಹೊಸದುರ್ಗ ಪೊಲೀಸ್  ಠಾಣೆಯ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ರನ್ನು ಮಂಜೇಶ್ವರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಅಂಬಲತ್ತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕೆ.ಪಿ. ಶೈನ್‌ರನ್ನು ವಿದ್ಯಾನಗರಕ್ಕೆ ವರ್ಗಾಯಿಸ ಲಾಗಿದೆ. ಎನ್.ಪಿ. ರಾಘವನ್‌ರನ್ನು ಮೇಲ್ಪರಂಬಕ್ಕೂ, ಚಿತ್ತಾರಿಕಲ್ ಇನ್ಸ್‌ಪೆಕ್ಟರ್ ರಂಜಿತ್ ರವೀಂದ್ರನ್‌ರನ್ನು ಅಂಬಲತ್ತರಕ್ಕೆ ವರ್ಗಾಯಿಸಲಾಗಿದೆ. ವಿದ್ಯಾನಗರ ಪೊಲೀಸ್ ಇನ್ಸ್‌ಪೆಕ್ಟರ್ ವಿಪಿನ್ ವಿ.ಪಿ.ರನ್ನು ಬೇಕಲಕ್ಕೆ ವರ್ಗಾ ಯಿಸಲಾಗಿದೆ. ಮಂಜೇಶ್ವರ ಇನ್ಸ್‌ಪೆಕ್ಟರ್ ಇ. ಅನೂಪ್‌ರನ್ನು …

ರಮೇಶ್ ಚೆನ್ನಿತ್ತಲರಿಗೆ ಮಾತೃವಿಯೋಗ

ತಿರುವನಂತಪುರ: ಮಾಜಿ ವಿಪಕ್ಷ ಮುಖಂಡ, ಕಾಂಗ್ರೆಸ್‌ನ ಹಿರಿಯ ನೇತಾರ ರಮೇಶ್ ಚೆನ್ನಿತ್ತಲರ ತಾಯಿ ಎನ್. ದೇವಕಿ ಅಮ್ಮ (91) ನಿಧನ ಹೊಂದಿದರು.  ತೃಪರುಂದರ ಕೋಟೂರು ನಿವಾಸಿ ದಿ| ವಿ. ರಾಮಕೃಷ್ಣನ್ ನಾಯರ್‌ರ ಪತ್ನಿಯಾಗಿದ್ದಾರೆ. ಮೃತರು ಇತರ ಮಕ್ಕಳಾದ ಕೆ.ಆರ್. ರಾಜನ್, ಕೆ.ಆರ್. ವಿಜಯಲಕ್ಷ್ಮಿ, ಕೆ.ಆರ್. ಪ್ರಸಾದ್, ಸೊಸೆಯಂದಿರಾದ ಅನಿತಾ ರಮೇಶ್, ಅಂಬಿಳಿ ಎಸ್. ಪ್ರಸಾದ್, ಶ್ರೀಜಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಅಳಿಯ ಸಿ.ಕೆ. ರಾಧಾಕೃಷ್ಣನ್ ಈ ಹಿಂದೆ ನಿಧನ ಹೊಂದಿದ್ದಾರೆ.

ಬಿಎಂಎಸ್ ಮೀಂಜ ಪಂಚಾಯತ್ ಸಮಿತಿ ಜಾಥಾ

ಮಂಜೇಶ್ವರ: ಬಿ.ಎಂ.ಎಸ್ ಮಿಂಜ ಪಂಚಾಯತ್ ಸಮಿತಿ ಆಶ್ರಯದಲ್ಲಿ  ಕೇರಳ ಸರಕಾರದ ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿಗೆದುರಾಗಿ  ಕಾಲ್ನಡೆ ಜಾಥಾ  ಹಮ್ಮಿಕೊಳ್ಳಲಾಯಿತು. ಮೊರತ್ತಣೆ ಯಿಂದ ಆರಂಭಗೊAಡ ಜಾಥಾ ವನ್ನು  ಬಿ.ಎಂ.ಎಸ್ ಜಿಲ್ಲಾ  ಕಾರ್ಯದರ್ಶಿ ಬಾಬು ಕೆ.ವಿ. ಉದ್ಘಾ ಟಿಸಿದರು. ಮೀಯಪದವುನಲ್ಲಿ ನಡೆದ ಸಮಾರೋಪ ಸಮಾರಂಭ ವನ್ನು  ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಉದ್ಘಾಟಿಸಿದರು. ಜಾಥಾ ಕ್ಯಾಪ್ಟನ್ ರಾಮಚಂದ್ರ ಬಟ್ಟಿಪದವು ನೇತೃತ್ವದಲ್ಲಿ ನಡೆದ ಕಾಲ್ನಡೆ ಜಾಥಾ ದಲ್ಲಿ   ಜಿಲ್ಲಾ ಜೊತೆಕಾರ್ಯದರ್ಶಿ ಯಶವಂತಿ ಬೆಜ್ಜ, ವಲಯ ಪದಾಧಿಕಾರಿಗಳಾದ ರವಿ …