ಕೂಡ್ಲು: ರಜತರಂಗ ಉದ್ಘಾಟನೆ 20ರಂದು

ಕೂಡ್ಲು : ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ 25 ನೇ ವರ್ಷಕ್ಕೆ ಕಾಲಿರಿಸಿದ್ದು, 25 ನೇ ವಾರ್ಷಿಕೋತ್ಸವವನ್ನು ವೈವಿಧ್ಯಮಯವಾಗಿ ವರ್ಷಪೂರ್ತಿ ಆಚರಿಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಎಡನೀರು ಶ್ರೀಗಳು, ಕೊಂಡೆವೂರು ಶ್ರೀಗಳು ಮತ್ತು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರು ಗೌರವಾಧ್ಯಕ್ಷರಾಗಿರುವ ರಜತ ಮಹೋತ್ಸವ ಸಮಿತಿ ರಚಿಸಲಾಗಿದೆ. ರಜತರಂಗದ ಉದ್ಘಾಟನಾ ಕಾರ್ಯಕ್ರಮ ಈ ತಿಂಗಳ 20 ರಂದು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಜರಗಲಿದೆ. ಮಧೂರು ಕ್ಷೇತ್ರದ ನಿವೃತ್ತ ಪ್ರಧಾನ ಅರ್ಚಕ ಶ್ರಿ ಕೃಷ್ಣ …

ದುಬಾಯಿಯಲ್ಲಿ ಆತ್ಮಹತ್ಯೆಗೈದ ಯುವಕನ ಮೃತದೇಹ ಊರಿಗೆ

ಕಾಸರಗೋಡು: ದುಬಾಯಿ ಯಲ್ಲಿ ಮೃತಪಟ್ಟ ಮುನ್ನಾಡ್ ಪೆರಿಂಗಾನ ನಿವಾಸಿಯ ಮೃತದೇಹ ವನ್ನು ಊರಿಗೆ ತಲುಪಿಸಲಾಯಿತು. ಕೆ. ಮೋಹನನ್-ಕೆ.ತಂಗಮಣಿ ದಂಪತಿ ಪುತ್ರ ಕೆ. ಸುಧೀಶ್ (30) ದುಬಾಯಿಯಲ್ಲಿ ವಾಸ ಸ್ಥಳದಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದರು. ಕಳೆದ ಒಂದು ವರ್ಷದಿಂದ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರ. ಮೃತ ಯುವಕ ತಂದೆ, ತಾಯಿ, ಸಹೋದರರಾದ ವಿನೀತ್, ವಿನಯನ್ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶಾಶ್ವತ ಪೂಜಾ ಅಭಿಯಾನ

ಮಾನ್ಯ: ಜನ್ಮದಿನವನ್ನು ಐಷಾರಾಮಿಯಾಗಿ ಆಚರಿಸುವ ಬದಲು ಊರಿನ ದೇವಸ್ಥಾನ, ಭಜನಾಮಂದಿರಗಳಲ್ಲಿ ಆ ದಿನದಂದು ಶಾಶ್ವತ ಪೂಜೆಯ ಸಂಕಲ್ಪವನ್ನು ತೊಟ್ಟುಕೊಂಡು ಆಚರಿಸಬೇಕು, ಇದು ನಮ್ಮ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗುವುದರೊಂದಿಗೆ ಮುಂದಿನ ಪೀಳಿಗೆಯು ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಮುಂದುವರಿಸಿಕೊಂಡು ಹೋಗಲು ಕಾರಣವಾಗುತ್ತದೆ ಎಂದು ನಿವೃತ್ತ ಬ್ಯಾಂಕ್ ಪ್ರಬಂಧಕ ಕಾಟಿಪಳ್ಳ ಸುಬ್ರಹ್ಮಣ್ಯ ಹೇಳಿದರು. ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶಾಶ್ವತ ಪೂಜಾ ಅಭಿಯಾನದ ಅಂಗವಾಗಿ ಪುದುಕೋಳಿ ಶ್ರೀಕೃಷ್ಣ ಭಟ್ಟರಿಗೆ ರಶೀದಿ ಹಸ್ತಾಂತರಿಸಿ ಅವರು ಮಾತನಾಡಿದರು. ಸೇವಾ ಸಮಿತಿ ಅಧ್ಯಕ್ಷ ನರಸಿಂಹ …

ಮಾನಿಷಾದ ಅಂದರೂ ಹೋಗೇ ಬಿಟ್ಟರುಅಮ್ಮಣ್ಣಾಯರು

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಮೇಳವೊಂದು ಕಾಸರಗೋಡು ಜಿಲ್ಲೆಯಲ್ಲಿ ಪ್ರದರ್ಶನ ಆರಂಭಿಸಿದರೆ ಸುತ್ತಮುತ್ತಲ ಪ್ರದೇಶಗಳಲ್ಲೇ ವಾರಾನುಗಟ್ಟಲೆ ಪ್ರದರ್ಶನ ನೀಡುತ್ತಿದ್ದ ಕಾಲವೂ ಇತ್ತು. ಆದರೆ ಅದು ಈಗ ನೆನಪು ಮಾತ್ರ. ಜಿಲ್ಲೆಯಲ್ಲಿ ಯಕ್ಷಗಾನ ಟೆಂಟ್ ಮೇಳಗಳ ಪ್ರದರ್ಶನ ಕಡಿಮೆಯಾಗುತ್ತಾ ಬಂದಿದೆ. ಇದ್ಯಾಕೆ ಈಗ ನೆನಪಾಯಿತೆಂದರೆ ಪ್ರಸಿದ್ಧ ಭಾಗವತರಾದ …

ಒಂದು ಲಕ್ಷಕ್ಕೇರುವ ಹಾದಿಯಲ್ಲಿ ಚಿನ್ನ: ಇಂದು ಗ್ರಾಂಗೆ 305 ರೂ. ದಾಖಲೆ ಏರಿಕೆ

ಕೊಚ್ಚಿ: ದಾಖಲೆಗಳನ್ನು ಸೃಷ್ಟಿಸಿ ಮುಂದುವರಿಯುತ್ತಿರು ಚಿನ್ನದ ದರ ಇಂದು ಏರಿಕೆಯಲ್ಲಿ ದಾಖಲೆ ಸೃಷ್ಟಿಸಿದೆ. ಒಂದೇ ದಿನ 305 ರೂ. ಗ್ರಾಂನಲ್ಲಿ ಏರಿಕೆಯಾಗಿದೆ. ಇದರಿಂದಾಗಿ ಪವನ್ಗೆ 97360 ರೂ. ಆಗಿ ಹೆಚ್ಚಳವಾಗಿದ್ದು, ಒಂದು ಲಕ್ಷಕ್ಕೆ ಇನ್ನು ಕಿರು ಬೆರಳಿನ ದೂರವಷ್ಟೇ ಉಳಿದಿದೆ. ಇಂದು ಪವನ್ಗೆ 2,440 ರೂ. ಹೆಚ್ಚಳವಾಗಿದೆ ಒಂದು ಗ್ರಾಂಗೆ 12,170 ರೂನಂತೆ ವಹಿವಾಟು ನಡೆಯುತ್ತಿದೆ. ಇದರೊಂದಿಗೆ ಎರಡು ವಾರದಲ್ಲಿ ಒಂದು ಪವನ್ ಚಿನ್ನದ ಬೆಲೆಯಲ್ಲಿ 10,800 ರೂ. ಹೆಚ್ಚಾಗಿದೆ.ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಾಖಲೆ ಸೃಷ್ಟಿಸಿ …

ಮೊಗ್ರಾಲ್‌ನಲ್ಲಿ ಶಾಲಾ ಕಲೋತ್ಸವ ಮಧ್ಯೆ ತಂಡಗಳೊಳಗೆ ಹೊಡೆದಾಟ

ಕುಂಬಳೆ: ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ ಸಮೀಪ ಪರಸ್ಪರ ಹೊಡೆದಾಡಿಕೊಂಡ ತಂಡಗಳನ್ನು ಪೊಲೀಸರು ಲಾಠಿ ಬೀಸಿ ಚದುರಿಸಿದರು. ಘಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ೫೦ ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ 7.30ರ ವೇಳೆ ಘಟನೆ ನಡೆದಿದೆ. ಕಲೋತ್ಸವ ಮಧ್ಯೆ ವಿದ್ಯಾರ್ಥಿಗಳೊಳಗೆ ಉಂಟಾದ ತರ್ಕವೇ ಘರ್ಷಣೆಯಲ್ಲಿ ಕೊನೆಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲಾ ಪರಿಸರದಿಂದ ಆರಂಭಗೊಂಡ ಘರ್ಷಣೆ ರಾಷ್ಟ್ರೀಯ ಹೆದ್ದಾರಿವರೆಗೆ ತಲುಪಿದೆ. ಈ  ವಿಷಯ ತಿಳಿದು ತಲುಪಿದ ಕುಂಬಳೆ ಎಸ್‌ಐ ಕೆ. ಶ್ರೀಜೇಶ್ …

ಶಬರಿಮಲೆ ಚಿನ್ನ ಕಳವು:ಮುಖ್ಯ ಆರೋಪಿ ಉಣ್ಣಿಕೃಷ್ಣನ್ ಪೋತ್ತಿ ಬಂಧನ: ಇಂದು ನ್ಯಾಯಾಲಯಕ್ಕೆ

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕದ್ದ ಪ್ರಕರಣದ ಪ್ರಧಾನ ಸೂತ್ರಧಾರ ಹಾಗೂ ಒಂದನೇ ಆರೋ ಪಿಯಾಗಿರುವ ಪ್ರಾಯೋಜಕ ಉಣ್ಣಿಕೃಷ್ಣನ್ ಪೋತ್ತಿಯನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಶಬರಿಮಲೆ ದೇಗುಲದ  ಗರ್ಭಗುಡಿ  ದ್ವಾರ ಮತ್ತು ದ್ವಾರಪಾಲಕ ಮೂರ್ತಿಗಳ ಚಿನ್ನ ಕದ್ದ ಆರೋಪದಂತೆ ಈತನನ್ನು  ಬಂಧಿಸಲಾಗಿದೆ. ನಂತರ ಈತನನ್ನು ವೈದ್ಯಕೀಯ ತಪಾಸಣೆಗಾಗಿ ಇಂದು ಬೆಳಿಗ್ಗೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬಳಿಕ ಮಧ್ಯಾಹ್ನ ಆತನನ್ನು ಪತ್ತನಂತಿಟ್ಟದ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಪೋತ್ತಿ ವಿರುದ್ದ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ವಿಶೇಷ ತನಿಖಾ …

ಜಪಾನ್‌ನ ಭಾರತೀಯ ರಾಯಭಾರಿಯಾಗಿ ಕಾಸರಗೋಡಿನ ನಗ್ಮಾ ಮೊಹಮ್ಮದ್ ಮಾಲಿಕ್

ಕಾಸರಗೋಡು: ಜಪಾನಿನ ಭಾರತೀಯ ರಾಯಭಾರಿಯಾಗಿ ಕಾಸರಗೋಡು ನಿವಾಸಿ ನಗ್ಮಾ ಮೊಹಮ್ಮದ್ ಮಾಲೀಕ್‌ರನ್ನು ಕೇಂದ್ರ ಸರಕಾರ ನೇಮಿಸಿದೆ. ಇವರು ಕಾಸರಗೋಡು ಕೋಟೆ ರಸ್ತೆಯ ಮೊಹಮ್ಮದ್ ಹಬೀಬುಲ್ಲಾ-ಸುಲುಭಾನು ದಂಪತಿ ಪುತ್ರಿಯಾಗಿದ್ದಾರೆ. ತಂದೆ ಮೊಹಮ್ಮದ್ ಹಬೀಬುಲ್ಲಾರಿಗೆ ಕೇಂದ್ರ ಸರಕಾರದ ಓವರ್‌ಸೀಸ್ ಕಮ್ಯೂನಿಕೇಶನ್ ಇಲಾಖೆಯಲ್ಲಿ ಉದ್ಯೋಗ ಲಭಿಸಿದ ಹಿನ್ನೆಲೆಯಲ್ಲಿ ಅವರು ವರ್ಷಗಳ ಹಿಂದೆ ತಮ್ಮ ಕುಟಂಬದ ಸಹಿತ ದಿಲ್ಲಿಯಲ್ಲಿ ವಾಸವಾಗಿದ್ದರು. ದಿಲ್ಲಿಯಲ್ಲೇ ಜನಿಸಿದ ನಗ್ಮಾ ಮೊಹಮ್ಮದ್ ಮಾಲೀಕ್ ದಿಲ್ಲಿಯ ಸೈಂಟ್ ಸ್ಟೀಫನ್ ಕಾಲೇಜು ಮತ್ತು ಡೆಲ್ಲಿ ಸ್ಕೂಲ್ ಆಫ್ ಇಕಾನೋಮಿಕ್ಸ್‌ನಲ್ಲಿ ಶಿಕ್ಷಣ ಪಡೆದರು. …

ಜಿಲ್ಲೆಯಾದ್ಯಂತ ಪಟಾಕಿ ಅಂಗಡಿಗಳಿಗೆ ಪೊಲೀಸ್ ದಾಳಿ: ಹೆಚ್ಚುವರಿಯಾಗಿ ದಾಸ್ತಾನಿರಿಸಿದ್ದ ಪಟಾಕಿ ಅನಂತಪುರದಿಂದ ವಶ

ಕಾಸರಗೋಡು: ದೀಪಾವಳಿ ಹಬ್ಬದ ಪ್ರಯುಕ್ತ ಜಿಲ್ಲೆಯಾದ್ಯಂತ ಪೊಲೀಸರು ಎಲ್ಲಾ ಪಟಾಕಿ ಅಂಗಡಿಗಳಿಗೆ ದಾಳಿ ಆರಂಭಿಸಿದ್ದಾರೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ವರಿಯಾಗಿ  ದಾಸ್ತಾನಿರಿಸಲಾಗಿರುವ ಸುಡುಮದ್ದುಗಳ ಪತ್ತೆಗಾಗಿ ಪೊಲೀಸರು ಇಂತಹ ದಾಳಿ ಆರಂಭಿಸಿದ್ದಾರೆ. ಇದರಂತೆ  ಅನಂತಪುರ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿರುವ ಪಟಾಕಿ ಅಂಗಡಿಯೊಂದಕ್ಕೆ ಕುಂಬಳೆ ಪೊಲೀಸರು ದಾಳಿ ನಡೆಸಿ ಅಲ್ಲಿ ಲೈಸನ್ಸ್ ಪ್ರಕಾರ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ದಾಸ್ತಾನಿರಿಸಲಾಗಿದ್ದ 4058.4 ಕಿಲೋ ಗ್ರಾಂ ಪಟಾಕಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಆ ಸಂಸ್ಥೆಯ ಮಾಲಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇದೇ …

3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿ ಸೆರೆ

ಕಾಸರಗೋಡು: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದು, ಬಳಿಕ ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚೆರ್ಕಳ ಬೇರ್ಕ ಹೌಸ್‌ನ ಕುಂಞಿ ಮಾಹಿನ್ ಅಶ್ರಫ್ ಕೆ.ಕೆ. (30) ಬಂಧಿತ ಆರೋಪಿ. ಈತನ ವಿರುದ್ಧ ೨೦೨೨ರಲ್ಲಿ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು. ಆ ಬಳಿಕ ಆತ ತಲೆಮರೆಸಿಕೊಂಡಿದ್ದನು. ಆತನ ಬಂಧನಕ್ಕಾಗಿ ಎಲ್.ಪಿ. ವಾರೆಂಟ್ ಹೊರಡಿಸಲಾಗಿತ್ತು. ಅದಾದ ಮೂರು ವರ್ಷಗಳ ಬಳಿಕ ಚೆರ್ಕಳದಿಂದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ …