ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ: ಇನ್ನೋರ್ವ ಮೃತ್ಯು

ಕಣ್ಣೂರು: ಪುದಿಯಂಗಾಡಿಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹತ್ತಿ  ಸುಟ್ಟು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಇನ್ನೋರ್ವ ಮೃತಪಟ್ಟಿದ್ದಾರೆ. ಒಡಿಶ್ಶಾ ನಿವಾಸಿ ಜಿತೇಂದ್ರ ಬಹ್ರ (31) ನಿನ್ನೆ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಇದರಿಂದ ಈ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ ನಾಲ್ಕಕ್ಕೇರಿದೆ.  ಒಡಿಶ್ಶಾ ನಿವಾಸಿಗಳಾದ ಶಿಬಾ ಬೆಹ್ರ (೩೪), ಸುಭಾಷ್ ಬೆಹ್ರ (53), ನಿಗಮ್ ಬೆಹ್ರ (38) ಎಂಬಿವರು ಇತ್ತೀಚೆಗೆ ಮೃತಪಟ್ಟಿದ್ದರು. ಪುದಿಯಂಗಾಡಿ ಫಿಶ್‌ಪ್ಲಾಂಟ್ ಸಮೀಪ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ಇತ್ತೀಚೆಗೆ ಬೆಳಿಗ್ಗೆ ೬ ಗಂಟೆಗೆ ದುರಂತ ಸಂಭವಿಸಿತ್ತು. ರಾತ್ರಿ …

116 ಕಿಲೋ ಗಾಂಜಾ ವಶ ಪ್ರಕರಣ: ಓರ್ವ ಆರೋಪಿ ಮೈಸೂರಿನಿಂದ ಸೆರೆ

ಮಂಜೇಶ್ವರ: ವರ್ಕಾಡಿ ಕೊಡ್ಲಮೊಗರು ಬಳಿಯ ಸುಳ್ಯಮೆಯಿಂದ 116 ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಓರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ ಮೈಸೂರು ತಾಲೂಕು ಕೇರಿಗಾಳಿ ಜಯಪುರ ಹೋಬಳಿ ನಿವಾಸಿ ಸಿದ್ಧೆ ಗೌಡ  ಎಂ. (25) ಎಂಬಾತ ಬಂಧಿತ ವ್ಯಕ್ತಿಯಾಗಿ ದ್ದಾನೆ. ಈತನನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ಆರೋಪಿಗೆ ರಿಮಾಂಡ್ ವಿಧಿಸಲಾಗಿದೆ.  ಸುಳ್ಯಮೆಯ ಮನೆಯೊಂದರ ಬಳಿ ಶೆಡ್‌ನಲ್ಲಿ ಬಚ್ಚಿಟ್ಟಿದ್ದ ಗಾಂಜಾವನ್ನು ಅಕ್ಟೋಬರ್ ೮ರಂದು ರಾತ್ರಿ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದರು. ಈ ವೇಳೆ ಶೆಡ್‌ನ ಸಮೀಪ ಮಿನಿ …

ನರ್ಸಿಂಗ್ ವಿದ್ಯಾರ್ಥಿನಿಯ ಸಾವು: ಪತ್ರ ಪತ್ತೆ

ಕಾಸರಗೋಡು: ಮನೆಯ ಬೆಡ್‌ರೂಮ್‌ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿ ಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ಬರೆದಿಟ್ಟ ಪತ್ರವೊಂ ದನ್ನು ಬೇಡಗಂ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ‘ನನ್ನ ಸಾವಿಗೆ ಬೇರೆ ಯಾರೂ ಹೊಣೆಗಾರರಲ್ಲ’ ಎಂದು ಪತ್ರದಲ್ಲಿ ಬರೆದಿಟ್ಟಿರು ವುದಾಗಿ ಹೇಳಲಾಗುತ್ತಿದೆ. ಕುಟ್ಟಿಕ್ಕೋಲ್ ಬೇತೂರುಪಾರದ ದಿ| ಬಾಬು ಎಂಬವರ ಪುತ್ರಿ ಮಹಿಮಾ (20) ಬುಧವಾರ ಬೆಳಿಗ್ಗೆ ಬೆಡ್‌ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಕೂಡಲೇ ಆಕೆಯನ್ನು   ಕಾರಿನಲ್ಲಿ ಚೆರ್ಕಳದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಮಧ್ಯೆ ಪಡಿಮರುದು ಎಂಬಲ್ಲಿಗೆ ತಲುಪಿದಾಗ ಕಾರು …

ಮಂಜೇಶ್ವರದಲ್ಲಿ ಪತ್ತೆಯಾದ ಕಾಳಧನ ನ್ಯಾಯಾಲಯಕ್ಕೆ ಹಾಜರು

ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡ ಕಾಳಧನವನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ನಿನ್ನೆ ಬೆಳಿಗ್ಗೆ ಹೈವೇ ಪಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸರು ಮಂಗಳೂರು ಭಾಗದಿಂದ ಬಂದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರಲ್ಲಿ 72,24,500 ರೂಪಾಯಿಗಳನ್ನು  ಪತ್ತೆಯಾಗಿತ್ತು. ಕಾರಿನಲ್ಲಿ ಕಾಞಂಗಾಡ್ ನಿವಾಸಿಗಳಾದ  ತುಕಾರಾಮ್, ಪತ್ನಿ ಸುನಿತ ಹಾಗೂ ಸಹಾಯಕ ಅಕ್ಷಯ್ ಎಂಬಿವರಿದ್ದರು. ಹಣದ ಮೂಲವೇನೆಂದು ಪ್ರಶ್ನಿಸಿದಾಗ ಕಾರಿನಲ್ಲಿದ್ದವರು ಯಾವುದೇ ಮಾಹಿತಿಯನ್ನೂ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಕಾರು  ಹಾಗೂ ಹಣವನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು.

ಕಾಸರಗೋಡು ನಗರಸಭೆಯ ಮೀಸಲಾತಿ ವಾರ್ಡ್‌ಗಳು

ಕಾಸರಗೋಡು: ಸ್ಥಳೀಯಾ ಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಗೆ ಪೂರ್ವಭಾವಿಯಾಗಿ ನಡೆದ ವಾರ್ಡ್ ಮೀಸಲಾತಿ ಕ್ರಮದಂತೆ ಕಾಸರಗೋಡು ನಗರಸಭೆಯ ವಾರ್ಡ್ಗಳ ಮೀಸಲಾತಿ ನಿರ್ಣಯ ಕ್ರಮವೂ ಪೂರ್ಣಗೊಂಡಿದೆ.ಕಾಸರಗೋಡು ನಗರಸಭೆಯ ಚಾಲಕುನ್ನು (ವಾರ್ಡ್ ನಂಬ್ರ 15) ಪರಿಶಿಷ್ಟ ಜಾತಿ ಮೀಸಲಾತಿ ವಾರ್ಡ್ ಆಗಿ ಆರಿಸಲಾಗಿದೆ. ಉಳಿದಂತೆ ಚೇರಂಗೈ ವೆಸ್ಟ್ (1), ಚೆರಂಗೈ ಈಸ್ಟ್ (2), ಕೋಟೆಕಣಿ (7), ನುಳ್ಳಿಪ್ಪಾಡಿ ನೋರ್ತ್ (8), ಅಣಂಗೂರು (10), ವಿದ್ಯಾನಗರ ನೋರ್ತ್ (11), ವಿದ್ಯಾನಗರ ಸೌತ್ (12), ಚಾಲ (14), ತುರ್ತಿ (16), ಕೊಲ್ಲಂಪಾಡಿ (17), …

ಸರ್ವೀಸ್ ರಸ್ತೆಯ ಫುಟ್‌ಪಾತ್‌ನಲ್ಲಿ ಟ್ರಾನ್ಸ್‌ಫಾರ್ಮರ್  ಸಹಿತ ಕಂಬಗಳು: ಕಾಲ್ನಡಿಗೆ ಜನರಿಗೆ ಸಮಸ್ಯೆ

ಉಪ್ಪಳ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ  ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆ ಬದಿ ಜನರ ಸಂಚಾರಕ್ಕೆ ಫುಟ್‌ಪಾತ್ ನಿರ್ಮಿಸಲಾಗಿದ್ದರೂ ಅಲ್ಲಲ್ಲಿ ಟ್ರಾನ್ಸ್ ಫಾರ್ಮರ್ ಸಹಿತ ವಿದ್ಯುತ್ ಕಂಬಗಳಿರುವುದರಿಂದಾಗಿ ಜನರ ಸಂಚಾರಕ್ಕೆ ಸಮಸ್ಯೆ ಉಂಟಾಗು ತ್ತಿರುವುದಾಗಿ ದೂರಲಾಗಿದೆ. ಕೋಟ್ಯಂತರ ಹಣ ವ್ಯಯಿಸಿ ಸ್ಥಳ ಖರೀದಿಸಿ ಹೆದ್ದಾರಿಯನ್ನು ಅಭಿವೃದ್ಧಿ ಗೊಳಿ ಸಲಾದರೂ ವಿದ್ಯುತ್‌ಕಂಬ ಸಹಿತ ಟ್ರಾನ್ಸ್ ಫಾರ್ಮರ್ ಹಾಗೂ ಕಾಲ್ನಡಿಗೆ ಮೇಲ್ಸೇತುವೆಯ ಕಂಬಗಳನ್ನು ಜನರು ನಡೆದಾಡುವ ಫುಟ್‌ಪಾತ್‌ನಲ್ಲಿಯೇ ನಿರ್ಮಾಣ ಗೊಳಿಸಿರುವುದು ಸಾರ್ವಜನಿಕರಿಗೆ ಸಂಕಷ್ಟವನ್ನುಂಟುಮಾಡಿದೆ. ಉಪ್ಪಳದಿಂದ ತಲಪಾಡಿ ಮಧ್ಯೆ ಎರಡೂ ಭಾಗದ ಸರ್ವೀಸ್ ರಸ್ತೆಯ …

ಕೆಎಸ್‌ಆರ್‌ಟಿಸಿ ಬಸ್‌ಗಳು ಪರಸ್ಪರ ಢಿಕ್ಕಿ: ಹಲವರಿಗೆ ಗಾಯ

ಹೊಸದುರ್ಗ: ಬೀಮನಡಿ ಪ್ಲಾಚಿಕರ ಎಂಬಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಪರಸ್ಪರ ಢಿಕ್ಕಿ ಹೊಡೆದು ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ನಿನ್ನೆ ಸಂಜೆ ೫ ಗಂಟೆ ವೇಳೆ ಅಪಘಾತವುಂಟಾಗಿದೆ. ಹೊಸ ದುರ್ಗಕ್ಕೆ ಬರುತ್ತಿದ್ದ ಸೂಪರ್‌ಫಾಸ್ಟ್ ಬಸ್ ಹಾಗೂ ಇರಿಟ್ಟಿಗೆ ತೆರಳುತ್ತಿದ್ದ  ಲಿಮಿಟೆಡ್ ಸ್ಟಾಪ್ ಬಸ್ ಢಿಕ್ಕಿ ಹೊಡೆ ದಿದೆ. ತಕ್ಷಣ ತಲುಪಿದ ನಾಗರಿಕರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಗೊಂಡವರನ್ನು ವೆಳ್ಳೆರಿಕುಂಡ್‌ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಯಿತು. ಓರ್ವ ಚಾಲಕ ಗಂಭೀರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಢಿಕ್ಕಿಯಿಂದ ಎರಡೂ ಬಸ್‌ಗಳ …

ಶಬರಿಮಲೆ ಕ್ಷೇತ್ರದ ಚಿನ್ನ ಕೊಳ್ಳೆ: ವೆಳ್ಳಾಪಳ್ಳಿ ನಟೇಶನ್‌ರ ಹೇಳಿಕೆ ಬ್ರಾಹ್ಮಣ ವಿರೋಧಿ- ಡಿ. ಜಯನಾರಾಯಣ

ಕಾಸರಗೋಡು: ಶಬರಿಮಲೆ ಕ್ಷೇತ್ರದ ಚಿನ್ನವನ್ನು ಕೊಳ್ಳೆಹೊಡೆದ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಎನ್‌ಡಿಪಿ ಮುಖಂಡ ವೆಳ್ಳಾಪಳ್ಳಿ ನಟೇಶನ್ ನೀಡಿರುವ ಹೇಳಿಕೆ ಬ್ರಾಹ್ಮಣ ವಿರೋಧಿ ಯಾಗಿದೆ ಎಂದು ಕಾಸರಗೋಡು ಬ್ರಾಹ್ಮಣ ಮಹಾಸಭಾದ ಸಂಚಾಲಕ ಡಿ. ಜಯನಾರಾಯಣ ತಾಯನ್ನೂರು ತಿಳಿಸಿದ್ದಾರೆ. ಕ್ಷೇತ್ರದ ಚಿನ್ನವನ್ನು ನಂಬೂದಿರಿಯವರು ಮತ್ತು ಪೋತಿಯವರು ಕೊಳ್ಳೆ ಹೊಡೆ ಯುತ್ತಿದ್ದಾರೆ ಎಂಬ ವೆಳ್ಳಾಪಳ್ಳಿಯವರ ಹೇಳಿಕೆ ದ್ವೇಷದಿಂದ ಕೂಡಿರುವುದಾಗಿದೆ. ಅವರ ಹೇಳಿಕೆಯು ತನ್ನ ಸ್ವಾರ್ಥಕ್ಕಾಗಿ ಜಾತಿಗಳೊಳಗೆ ಹಗೆತನ ಮತ್ತು ಜಗಳ ಉಂಟುಮಾಡಲು ಪ್ರಚೋ ದನೆಯಾದಂತಿದೆ.  ಅವರ ಹೇಳಿಕೆ ಅವಿವೇಕತನದ್ದಾಗಿದ್ದು, ಅತ್ಯಂತ ಬಾಲಿಷದಿಂದ ಕೂಡಿದೆ. …

ಕಿನ್ನಿಂಗಾರಿನ ವೆಂಕಪ್ಪ ಮಣಿಯವರಿಗೆ ಕೇಂದ್ರ ಬ್ಯಾಂಕ್ ಪ್ರಶಸ್ತಿ

ಬೆಳ್ಳೂರು: ಕೇರಳ ರಾಜ್ಯದ ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸಾಲಗಾರ ರೈತರಲ್ಲಿ ಅತ್ಯುತ್ತಮ ರೈತನಾಗಿ ಆಯ್ಕೆಯಾದ ಬೆಳ್ಳೂರು ಪಂ. ಕಿನ್ನಿಂಗಾರಿನ ಸಾಧಕ ರೈತ ವೆಂಕಪ್ಪಮಣಿ ಕೇಂದ್ರ ಬ್ಯಾಂಕ್ ನ 2024ರ ಕಾಸರಗೋಡು ಜಿಲ್ಲೆಯ ಅತ್ಯುತ್ತಮ ರೈತ ಪ್ರಶಸ್ತಿಗೆ ಭಾಜನರಾದರು. ತಿರುವನಂತಪುರದಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರಿಗಳಿಂದ ಅವರು ಪ್ರಶಸ್ತಿ ಸ್ವೀಕರಿಸಿದರು. 25 ಸಾವಿರ ರೂ., ಸ್ಮರಣಿಕೆ ಮತ್ತು ಪ್ರಮಾಣಪತ್ರವನ್ನು ಪ್ರಶಸ್ತಿ ಒಳಗೊಂಡಿದೆ.

ಕೇರಳದಲ್ಲಿ ಆಡಳಿತ ಬದಲಾವಣೆ ಅನಿವಾರ್ಯ- ಎಂ.ಎಲ್. ಅಶ್ವಿನಿ

ಮಂಜೇಶ್ವರ: ಕೇರಳ ಇದೀಗ ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆ ಹಾಗೂ ಅಭಿವೃದ್ಧಿ ಕುಂಠಿತಕ್ಕೆ ಪರಿಹಾರ ಕಾಣಲು  ಆಡಳಿತ ಬದಲಾವಣೆ ಅನಿವಾರ್ಯವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಬಿಜೆಪಿ ಮಂಜೇಶ್ವರ ಪಂಚಾಯತ್ ಚುನಾವಣಾ ಸಮಿತಿ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಅಧ್ಯಕ್ಷತೆ ವಹಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಕೆ. ಸತೀಶ್ಚಂದ್ರ ಭಂಡಾರಿ, ರಾಜ್ಯ ಕೌನ್ಸಿಲ್ ಸದಸ್ಯ ಹರಿಶ್ಚಂದ್ರ ನಾಯ್ಕ್, ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡ, …